ಬೈಲಕುಪ್ಪೆಯಲ್ಲಿ ಕಾವೇರಿ ಮಾತೆಗೆ ಹುಣ್ಣಿಮೆ ಪೂಜೆ
ಮೈಸೂರು

ಬೈಲಕುಪ್ಪೆಯಲ್ಲಿ ಕಾವೇರಿ ಮಾತೆಗೆ ಹುಣ್ಣಿಮೆ ಪೂಜೆ

August 28, 2018

ಬೈಲಕುಪ್ಪೆ:  ಕಾವೇರಿ ಮಾತೆಗೆ ಹುಣ್ಣಿಮೆ ವಿಶೇಷ ಪೂಜೆಯನ್ನು ಭಾನುವಾರ ರಾತ್ರಿ ನೆರವೇರಿಸಲಾಯಿತು.
ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದ ಕಾವೇರಿ ನದಿ ದಡದಲ್ಲಿ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಕಾವೇರಮ್ಮನ ಪ್ರತಿಮೆಗೆ ಹುಣ್ಣಿಮೆಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿ ಪ್ರಸಾದ ವಿನಿಯೋಗಿಸಲಾಯಿತುಸಂಘದ ಅಧ್ಯಕ್ಷ ಬಭೀಂದ್ರಪ್ರಸಾದ್ ಸಮ್ಮುಖದಲ್ಲಿ 65ನೇ ಹುಣ್ಣಿಮೆಯ ವಿಶೇಷ ಪೂಜೆಯಲ್ಲಿ ತೊಡಗಿದ್ದ ಅರ್ಚಕ ರಾದ ಪ್ರಸನ್ನಭಟ್ ಮತ್ತು ಪರಮೇ ಶ್ವರ್‍ಭಟ್‍ರವರು ಕಾವೇರಮ್ಮನ ಪ್ರತಿಮೆ ಯನ್ನು ಸ್ವಚ್ಛಗೊಳಿಸಿ ಹಾಲು, ತುಪ್ಪ, ಜೇನು, ಎಳನೀರಿನಿಂದ ಅಭಿಷೇಕ ಮಾಡಿದರು. ನಂತರ ಹೊಸಸೀರೆ, ಕುಪ್ಪಸ ಒಡವೆ ಗಳನ್ನು ಧರಿಸಿ ಬಣ್ಣಬಣ್ಣದ ಹೂಗಳಿಂದ ಅಲಂಕರಿಸಿ ವಿವಿಧ ಹೋಮಗಳನ್ನು ಮಾಡಿ ಮಹಾಮಂಗಳಾರತಿ ನೆರವೇರಿಸಿದರು. ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸಿದರು. ಕಾವೇರಮ್ಮನ ವಿಶೇಷ ಪೂಜೆಗೆ ಆಗಮಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಹುಣಸೂರಿನ ಶಾಸಕ ಎ.ಹೆಚ್.ವಿಶ್ವನಾಥ್ ಮಾತನಾಡಿ, ನಾನು ಕೊಡಗು ಜಲಪ್ರವಾಹಕ್ಕೆ ಸಿಲುಕಿ ನಲುಗಿದ ಸಂತ್ರಸ್ತರನ್ನು ನೋಡಲು ಸಂಬಂಧಪಟ್ಟ ಅಧಿಕಾರಿಗಳ ತಂಡದವ ರೊಂದಿಗೆ ಚರ್ಚಿಸಿ ಬಂದಿದ್ದೇನೆ, ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೊಡಗಿಗೆ ಬಂದಿದ್ದು, ವಿವಿಧ ಇಲಾಖೆ ಅಧಿಕಾರಿಗಳ ತಂಡದವರು ಕೊಡಗಿ ನಲ್ಲಿಯೇ ಬೀಡುಬಿಟ್ಟು ತುರ್ತು ಕೆಲಸ ಬಿರುಸಿನಿಂದ ನಡೆಯುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿ ಕಾರಿಗಳಾದ ರವೀಂದ್ರಪ್ರಸಾದ್, ವಿಜೇಂದ್ರ ಪ್ರಸಾದ್, ಜೆಡಿಎಸ್ ಮುಖಂಡ ಗುಡ್ಡೆಹೊಸೂರು ಚಂದ್ರಶೇಖರ, ಕಾಂಗ್ರೆಸ್ ಮುಖಂಡ ರಾಜೇಗೌಡ, ಗ್ರಾಮಸ್ಥರಾದ ಮಂಜು, ಚಂದ್ರು, ಪರಮೇಶ್ವರ್, ಕುಶಾಲನಗರದ ರುದ್ರೇಶ ಸೇರಿದಂತೆ ಇನ್ನಿತರ ಭಕ್ತಾದಿಗಳು ಹಾಜರಿದ್ದರು.

Translate »