ಚಿಕ್ಕನೇರಳೆ ಪಿಎಸಿಸಿಗೆ ಆಯ್ಕೆ
ಮೈಸೂರು

ಚಿಕ್ಕನೇರಳೆ ಪಿಎಸಿಸಿಗೆ ಆಯ್ಕೆ

August 28, 2018

ಬೆಟ್ಟದಪುರ:  ಬೆಟ್ಟದಪುರ ಸಮೀಪದ ಚಿಕ್ಕನೇರಳೆ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ 12 ಸ್ಥಾನಗಳಿಗೆ ಚುನಾವಣೆ ನಡೆಯಿತು.

ಸಾಮಾನ್ಯ ವರ್ಗಕ್ಕೆ ವೆಂಕಟೇಶ್ ಸಿ.ವಿ.ಪುಟ್ಟರಾಜು ನಿಲವಾಡಿ, ಮಂಜುನಾಥ್.ವಿ, ಪುಟ್ಟರಾಜು, ಹಸುವಿನಕಾವಲು ಬಸವರಾಜು, ಗುರುಮಲ್ಲೇಶ್, ಡಿ.ಕೆ.ಕೃಷ್ಣೇಗೌಡ, ನಾಗನಾಯ್ಕ, ಹಿಂದುಳಿದ ವರ್ಗಕ್ಕೆ ಅಲಿಜಾನ್, ಇಲಿಯಾಸ್ ಪಾಷಾ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಮಣಿ, ಸೀತಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗಿರೀಶ್ ಘೋಷಿಸಿದರು.

ಈ ಚುನಾವಣೆಯಲ್ಲಿ ನೇರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಗಳಿಗೆ ಪೈಪೋಟಿ ಇದ್ದು, ಚುನಾವಣಾ ಕಣ ಕಾವೇರಿತ್ತು. ಈ ಸಂದರ್ಭದಲ್ಲಿ ಆಡಳಿತಾ ರೂಢ ಪಕ್ಷವಾದ ಜೆಡಿಎಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, 8 ಸ್ಥಾನವನ್ನು ಪಡೆದಿವೆ. ಈ ಮೂಲಕ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಮಂಜುನಾಥ್, ಗ್ರಾ.ಪಂ ಮಾಜಿ ಅಧ್ಯಕ್ಷ ಮೈಲಾರಪ್ಪ, ಮಾಜಿ ಅಧ್ಯಕ್ಷ ಎನ್.ಆರ್ ಗಣೇಶ್, ಜೆಡಿಎಸ್ ಮುಖಂಡ ಪುಟ್ಟಸ್ವಾಮಿ, ನಿಲವಾಡಿ ರಾಮಚಂದ್ರ, ಗ್ರಾ.ಪಂ ಅಧ್ಯಕ್ಷ ಲೋಕೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Translate »