ಮೈಸೂರು

ಗಾಂಧಿ ಜಯಂತಿ ಪ್ರಯುಕ್ತ ಬೃಹತ್ ಉದ್ಯೋಗ ಮೇಳ
ಮೈಸೂರು

ಗಾಂಧಿ ಜಯಂತಿ ಪ್ರಯುಕ್ತ ಬೃಹತ್ ಉದ್ಯೋಗ ಮೇಳ

September 9, 2018

ನಂಜನಗೂಡು: ಅಕ್ಟೋಬರ್ 6ರಂದು ಗಾಂಧಿ ಜಯಂತಿ ಅಂಗವಾಗಿ ನಗರದ ವಿದ್ಯಾವರ್ಧಕ ಶಾಲಾ ಮೈದಾನದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳ ಲಾಗಿದೆ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ತಿಳಿಸಿದರು. ಅವರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಅಂದು ಬೆಳಿಗ್ಗೆ 11 ಗಂಟೆಯಿಂದ ಉದ್ಯೋಗ ಮೇಳ ಪ್ರಾರಂಭವಾಗಲಿದ್ದು ಉದ್ಘಾಟನೆ ಯನ್ನು ಸಂಸದ ಆರ್.ಧ್ರುವನಾರಾಯಣ್ ನೆರವೇರಿಸುವರು ಮುಖ್ಯ ಅಥಿತಿಗಳಾಗಿ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ವಿವಿಧ ಜನಪ್ರತಿ ನಿಧಿಗಳು ಭಾಗವಹಿಸುವರು ಎಂದರು….

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ
ಮೈಸೂರು

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

September 9, 2018

ಹುಣಸೂರು: ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿರುವ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಸ್ಥಳೀಯ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಕಲ್ಪತರು ವೃತ್ತದಲ್ಲಿ ಸಮಾ ವೇಶಗೊಂಡ ಸಿಪಿಐ(ಎಂ) ಕಾರ್ಯರ್ಕತರು ಮೋದಿ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ನಂತರ ಭಾರತ ಕಮ್ಯನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ)ದ ಸ್ಥಳೀಯ ಸಮಿತಿ ಕಾರ್ಯದರ್ಶಿ ಜಗದೀಶ್ ಸೂರ್ಯ ಪ್ರತಿಭಟನಾಕಾ ರರನ್ನು ಉದ್ದೇಶಿಸಿ ಮಾತನಾಡಿ, ಅಚ್ಚೆ ದಿನ್ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ದೇಶ ಭಕ್ತಿ…

ಪುರಸಭಾ ಸದಸ್ಯರೊಂದಿಗೆ ಚರ್ಚಿಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಮೈಸೂರು

ಪುರಸಭಾ ಸದಸ್ಯರೊಂದಿಗೆ ಚರ್ಚಿಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

September 9, 2018

ತಿ.ನರಸೀಪುರ: ವರುಣಾ ಶಾಸಕ ಡಾ.ಎಸ್.ಯತೀಂದ್ರ ಸೇರಿದಂತೆ ಪುರಸಭೆಯ ನೂತನ ಸದಸ್ಯರೊಂದಿಗೆ ಚರ್ಚೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಲಾಗುವುದು ಎಂದು ವಸತಿ ಯೋಜನೆ ಜಾಗೃತಿ ಉಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಸುನೀಲ್ ಬೋಸ್ ಹೇಳಿದರು. ಪಟ್ಟಣದ ಪುರಸಭಾ ಚುನಾವಣೆಯಲ್ಲಿ ನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಯಲ್ಲಿ ಆಯ್ಕೆಗೊಂಡ ನೂತನ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ. ಡಾ.ಎಸ್.ಯತೀಂದ್ರ ವಿದೇಶ ಪ್ರವಾಸದಿಂದ ಬಂದ ಕೂಡಲೇ…

ಮೈಸೂರು ಪಾಲಿಕೆ ಅಧಿಕಾರ ಜೆಡಿಎಸ್‍ಗೆ ನೀಡುವಂತೆ ಸಿಎಂ ಕುಮಾರಸ್ವಾಮಿ ಪಟ್ಟು
ಮೈಸೂರು

ಮೈಸೂರು ಪಾಲಿಕೆ ಅಧಿಕಾರ ಜೆಡಿಎಸ್‍ಗೆ ನೀಡುವಂತೆ ಸಿಎಂ ಕುಮಾರಸ್ವಾಮಿ ಪಟ್ಟು

September 8, 2018

ಬೆಂಗಳೂರು: ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಮತ್ತೆ ಅತಂತ್ರ ಸ್ಥಿತಿ ತಲುಪಿರುವ ಮೈಸೂರು ಮತ್ತು ತುಮಕೂರು ಮಹಾನಗರ ಪಾಲಿಕೆಗಳ ಅಧಿಕಾರ ಚುಕ್ಕಾಣಿಯನ್ನು ಜಾತ್ಯತೀತ ಜನತಾದಳಕ್ಕೆ ಬಿಟ್ಟು ಕೊಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ. ಮೈಸೂರು, ತುಮಕೂರು ಎರಡು ಮಹಾ ನಗರ ಪಾಲಿಕೆಗಳು ಸೇರಿದಂತೆ ರಾಜ್ಯದ 30ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೇ ಅತಂತ್ರ ಸ್ಥಿತಿಯಲ್ಲಿವೆ. ಈ ಎರಡು ನಗರ ಪಾಲಿಕೆ ಸೇರಿದಂತೆ 24 ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾ…

ದಸರಾ ಗಜಪಡೆ ತಾಲೀಮು
ಮೈಸೂರು

ದಸರಾ ಗಜಪಡೆ ತಾಲೀಮು

September 8, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದು, ಅರಮನೆಯ ಅಂಗಳದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ ಗಜಪಡೆ ಶುಕ್ರವಾರದಿಂದ ಜಂಬೂಸವಾರಿ ಮಾರ್ಗದಲ್ಲಿ ತಾಲೀಮು ಆರಂಭಿಸಿದೆ. ವಿವಿಧ ಆನೆ ಶಿಬಿರಗಳಿಂದ ಮೊದಲ ತಂಡದಲ್ಲಿ ಸೆ.2ರಂದು ಮೈಸೂರಿನ ಅಶೋಕಪುರಂನ ಅರಣ್ಯ ಭವನಕ್ಕೆ ಆಗಮಿಸಿದ್ದ ಅರ್ಜುನ ನೇತೃತ್ವದ ಆರು ಆನೆಗಳು ಸೆ.5ರಂದು ಅರ ಮನೆ ಅಂಗಳ ಪ್ರವೇಶಿಸಿದ್ದವು. ನಾಡಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆನೆಗಳಿಗೆ ಜಂಬೂಸವಾರಿ ಮಾರ್ಗದಲ್ಲಿ ತಾಲೀಮು ನಡೆಸಿ, ತರಬೇತಿ ನೀಡುವ ಅಗತ್ಯವಿರುವುದರಿಂದ ಇಂದು ಬೆಳಿಗ್ಗೆ ತಾಲೀಮು ನಡೆಸಲಾಯಿತು. ಬೆಳಿಗ್ಗೆ 7.15ಕ್ಕೆ…

ದಸರೆ ಒಳಗೆ ಹಿನಕಲ್ ಬಳಿಯ ಫ್ಲೈ ಓವರ್ ಸಂಚಾರಕ್ಕೆ ಮುಕ್ತ ಸಾಧ್ಯತೆ
ಮೈಸೂರು

ದಸರೆ ಒಳಗೆ ಹಿನಕಲ್ ಬಳಿಯ ಫ್ಲೈ ಓವರ್ ಸಂಚಾರಕ್ಕೆ ಮುಕ್ತ ಸಾಧ್ಯತೆ

September 8, 2018

ಮೈಸೂರು: ಸಂಚಾರ ದಟ್ಟಣೆ ತಪ್ಪಿಸಲೆಂದು ಮೈಸೂರಿನ ಹಿನಕಲ್ ರಿಂಗ್ ರೋಡ್ ಜಂಕ್ಷನ್‍ನಲ್ಲಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಫ್ಲೈ ಓವರ್ ಕಾಮಗಾರಿ ದಸರೆಯೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮೈಸೂರು-ಕೊಡಗು-ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹಿನಕಲ್ ಬಳಿಯ ಹೊರ ವರ್ತುಲ ರಸ್ತೆ ಜಂಕ್ಷನ್‍ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಸುಗಮ ಸಂಚಾರಕ್ಕೆ ತೊಂದರೆ ಯಾಗುತ್ತಿದ್ದರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ (ಮುಡಾ)ಗ್ರೇಡ್ ಸೆಪರೇಟರ್ (ಮೇಲ್ಸೇತುವೆ) ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ನರ್ಮ್ ಯೋಜನೆಯಡಿ ಕೇಂದ್ರ ಸರ್ಕಾರದ ಶೇ.60, ರಾಜ್ಯ ಸರ್ಕಾರದ…

ರೈತರು, ಕೃಷಿ ಕಾರ್ಮಿಕರಿಗೂ ಮೊಬೈಲ್ ಬ್ಯಾಂಕಿಂಗ್ ವಿಸ್ತರಣೆ
ಮೈಸೂರು

ರೈತರು, ಕೃಷಿ ಕಾರ್ಮಿಕರಿಗೂ ಮೊಬೈಲ್ ಬ್ಯಾಂಕಿಂಗ್ ವಿಸ್ತರಣೆ

September 8, 2018

ಬೆಂಗಳೂರು: ಸಣ್ಣ ವ್ಯಾಪಾರಿಗಳಿಗಷ್ಟೇ ಅಲ್ಲದೆ, ಮೊಬೈಲ್ ಬ್ಯಾಂಕಿಂಗ್ ಸೇವೆ ಯನ್ನು ರೈತರು ಹಾಗೂ ಕೃಷಿ ಕಾರ್ಮಿಕರಿಗೂ ನೀಡಲು ಸರ್ಕಾರ ಮುಂದಾಗಿದೆ. ಗಣೇಶ ಚತುರ್ಥಿಗೆ ರಾಜ್ಯದ ಜನತೆಗೆ ಈ ಉಡುಗೊರೆ ದೊರೆಯಲಿದ್ದು, ಮೊದಲ ಹಂತದಲ್ಲಿ 150 ಕೇಂದ್ರಗಳಲ್ಲಿ ಸಣ್ಣ ವ್ಯಾಪಾರಿಗಳು, ರೈತರು ಮತ್ತು ಕೃಷಿ ಕಾರ್ಮಿಕರು ಇದರ ಸೇವೆ ಪಡೆದುಕೊಳ್ಳಬಹುದು. ಇದಕ್ಕಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 50 ಕೋಟಿ ರೂ. ಮೀಸಲಿರಿಸಿದ್ದು, ಪ್ರಾರಂಭದಲ್ಲಿ 1000 ದಿಂದ 5000 ರೂ. ವರೆಗೆ ಸಣ್ಣ ಪ್ರಮಾಣದಲ್ಲಿ ಸಾಲ ಸೌಲಭ್ಯ ದೊರೆಯಲಿದೆ. ಖಾಸಗಿ…

ಲಕ್ಷ್ಮೀ ಹೆಬ್ಬಾಳ್ಕರ್, ಜಾರಕಿ ಹೊಳಿ ಸಹೋದರರ ಕದನ ವಿರಾಮ
ಮೈಸೂರು

ಲಕ್ಷ್ಮೀ ಹೆಬ್ಬಾಳ್ಕರ್, ಜಾರಕಿ ಹೊಳಿ ಸಹೋದರರ ಕದನ ವಿರಾಮ

September 8, 2018

ಬೆಂಗಳೂರು: ರಾಜಕೀಯ ವಲಯದಲ್ಲಿ ಅದರಲ್ಲೂ ಮುಖ್ಯವಾಗಿ ಬೆಳಗಾವಿ ಕಾಂಗ್ರೆಸ್ ಪಾಳೆ ಯದಲ್ಲಿ ತೀವ್ರ ಕುತೂಹಲ ಕೆರಳಿಸಿ ರುವ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡು ವಿನ ಕದನ ಮತ್ತಷ್ಟು ಬಿಗಡಾಯಿಸಿದೆ. ಬೆಳಗಾವಿ ಗ್ರಾಮೀಣ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಚಾರ ದಲ್ಲಿ ಪಕ್ಷದ ಎರಡು ಬಣಗಳ ನಡುವೆ ಉಂಟಾಗಿದ್ದ ಭಿನ್ನಮತ ಲಕ್ಷ್ಮೀ ಹೆಬ್ಬಾಳ್ಕರ್ ಬಣದ ಮಹದೇವ್ ಪಾಟೀಲ್ ಅಧ್ಯಕ್ಷ ರಾಗಿ, ಬಾಪು ಸಾಹೇಬ್ ಜಮಾ ದಾರ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುವ ಮೂಲಕ ಸದ್ಯಕ್ಕೆ ಕದನ…

ಮೈಸೂರಲ್ಲಿ ಮಾವುತರು, ಕಾವಾಡಿಗಳಿಗೆ ಕಾರ್ಯಾಗಾರ
ಮೈಸೂರು

ಮೈಸೂರಲ್ಲಿ ಮಾವುತರು, ಕಾವಾಡಿಗಳಿಗೆ ಕಾರ್ಯಾಗಾರ

September 8, 2018

ಮೈಸೂರು:  ಸಾಕಾನೆ ಗಳ ಮಾವುತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಸಾಮರಸ್ಯ ಮೂಡಿಸುವ ಸಲುವಾಗಿ ಮೈಸೂರಿನಲ್ಲಿ ನಡೆದ ಎರಡು ದಿನಗಳ ಮಾವುತರ ತರಬೇತಿ ಕಾರ್ಯಾ ಗಾರದಲ್ಲಿ ರಾಜ್ಯದ ವಿವಿಧ ಆನೆ ಶಿಬಿರಗಳ 40ಕ್ಕೂ ಅಧಿಕ ಮಾವುತರು ಪಾಲ್ಗೊಂಡು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂ ದಿಗೆ ಮುಖಾಮುಖಿಯಾಗಿ ಸಮಸ್ಯೆಗಳ ತೋಡಿಕೊಂಡಿದ್ದಾರೆ. ಮೈಸೂರಿನ ಕೆಎಸ್‍ಟಿಡಿಸಿ ಹೊಟೇಲ್ ಸಭಾಂಗಣದಲ್ಲಿ ಏಷ್ಯನ್ ಎಲಿಫೆಂಟ್ ಸಪೋರ್ಟ್ ಸಂಸ್ಥೆ, ಕರ್ನಾಟಕದ ಅರಣ್ಯ ಇಲಾಖೆ ಹಾಗೂ ಡಿ ಪಾಲ್ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮೈಸೂರಿ…

ಅಂಗವಿಕಲತೆಯಿಂದ ಪಾರಾಗಿ ಎಲ್ಲರಂತೆ ಸಹಜವಾಗಿ ನಡೆದಾಡುತ್ತಿರುವ ಯುವಕ ಪವನ್‍ಕುಮಾರ್
ಮೈಸೂರು

ಅಂಗವಿಕಲತೆಯಿಂದ ಪಾರಾಗಿ ಎಲ್ಲರಂತೆ ಸಹಜವಾಗಿ ನಡೆದಾಡುತ್ತಿರುವ ಯುವಕ ಪವನ್‍ಕುಮಾರ್

September 8, 2018

ಮೈಸೂರು:  12 ವರ್ಷಗಳ ಹಿಂದೆ ಬಿದ್ದು ಬಲಗಾಲಿನ ತೊಡೆಯ ಮೂಳೆ ಮುರಿತದಿಂದ ಕಂಗಾಲಾಗಿದ್ದ ಯುವಕನೊಬ್ಬನಿಗೆ ಶಸ್ತ್ರಚಿಕಿತ್ಸೆ ಮೂಲಕ ಆತ ಸಹಜವಾಗಿ ನಡೆದಾಡುವಂತೆ ಮಾಡುವಲ್ಲಿ ಮೈಸೂರಿನ ಕೀಲು ಮತ್ತು ಮೂಳೆ ತಜ್ಞ ಡಾ.ಟಿ.ಮಂಜುನಾಥ್ ಯಶಸ್ವಿಯಾಗಿದ್ದಾರೆ. ಕೃಷ್ಣರಾಜಸಾಗರದ ಪವನ್‍ಕುಮಾರ್ (17) 5 ವರ್ಷದ ಬಾಲಕನಾಗಿದ್ದಾಗ ಬಿದ್ದು ತೊಡೆಗೆ ಪೆಟ್ಟಾಗಿತ್ತು. ಮೂಳೆ ಮುರಿದಿತ್ತು. 3 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ ಸರಿಯಾಗಿ ಮೂಳೆಗಳು ಬೆಳವಣಿಗೆಯಾಗದೆ 20 ಸೆಂಟಿಮೀಟರ್‍ನಷ್ಟು ಕಾಲು ಬೆಳೆಯದೇ ಅಂಗವೈಕಲ್ಯತೆಗೆ ಒಳಗಾಗಿದ್ದ. ಪೇಯಿಂಟಿಂಗ್ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದ ಆತನ ತಂದೆ…

1 1,401 1,402 1,403 1,404 1,405 1,611
Translate »