ಲಕ್ಷ್ಮೀ ಹೆಬ್ಬಾಳ್ಕರ್, ಜಾರಕಿ ಹೊಳಿ ಸಹೋದರರ ಕದನ ವಿರಾಮ
ಮೈಸೂರು

ಲಕ್ಷ್ಮೀ ಹೆಬ್ಬಾಳ್ಕರ್, ಜಾರಕಿ ಹೊಳಿ ಸಹೋದರರ ಕದನ ವಿರಾಮ

September 8, 2018

ಬೆಂಗಳೂರು: ರಾಜಕೀಯ ವಲಯದಲ್ಲಿ ಅದರಲ್ಲೂ ಮುಖ್ಯವಾಗಿ ಬೆಳಗಾವಿ ಕಾಂಗ್ರೆಸ್ ಪಾಳೆ ಯದಲ್ಲಿ ತೀವ್ರ ಕುತೂಹಲ ಕೆರಳಿಸಿ ರುವ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡು ವಿನ ಕದನ ಮತ್ತಷ್ಟು ಬಿಗಡಾಯಿಸಿದೆ.

ಬೆಳಗಾವಿ ಗ್ರಾಮೀಣ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಚಾರ ದಲ್ಲಿ ಪಕ್ಷದ ಎರಡು ಬಣಗಳ ನಡುವೆ ಉಂಟಾಗಿದ್ದ ಭಿನ್ನಮತ ಲಕ್ಷ್ಮೀ ಹೆಬ್ಬಾಳ್ಕರ್ ಬಣದ ಮಹದೇವ್ ಪಾಟೀಲ್ ಅಧ್ಯಕ್ಷ ರಾಗಿ, ಬಾಪು ಸಾಹೇಬ್ ಜಮಾ ದಾರ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗುವ ಮೂಲಕ ಸದ್ಯಕ್ಕೆ ಕದನ ವಿರಾಮ ಏರ್ಪಟ್ಟಿದೆ.

ಕಳೆದ 18 ವರ್ಷಗಳಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಾರಕಿ ಹೊಳಿ ಸಹೋದರರದ್ದೇ ಪಾರುಪತ್ಯ. ಆದರೆ, ಈ ಬಾರಿ ಲಕ್ಷ್ಮೀ ಹೆಬ್ಬಾಳ್ಕರ್ ಬ್ರೇಕ್ ಹಾಕಿದ್ದು, ಒಂದು ಕುಟುಂಬದ ಆಡಳಿತಶಾಹಿ ಕೊನೆಗೊಂಡಂತಾಗಿದೆ.

ಸಂಧಾನಕಾರರಾಗಿ ಕೆಪಿಸಿಸಿ ಕಾರ್ಯಾ ಧ್ಯಕ್ಷ ಈಶ್ವರಖಂಡ್ರೆ ಅವರನ್ನು ಬೆಳ ಗಾವಿಗೆ ಕಳುಹಿಸಿ, ಎರಡು ಬಣಗಳ ನಡುವೆ ಕದನ ವಿರಾಮ ಮೂಡಿಸು ವಲ್ಲಿ ಪಕ್ಷ ಯಶಸ್ವಿಯಾಗಿದೆ. ನಂತರ ಪತ್ರಿಕಾ ಗೋಷ್ಠಿ ನಡೆಸಿದ ಈಶ್ವರಖಂಡ್ರೆ, ಬೆಳಗಾವಿ ಕಾಂಗ್ರೆಸ್‍ನಲ್ಲಿ ಅಭಿಪ್ರಾಯ ಭೇದ ಹಾಗೂ ಸಂವಹನ ಕೊರತೆಯಿಂದ ಕೆಲವು ಸಮಸ್ಯೆಗಳು ಉಂಟಾಗಿದ್ದು, ಎಲ್ಲವೂ ಬಗೆಹರಿದಿದೆ ಎಂದರು.

Translate »