ಸತತ 9 ಗಂಟೆಗಳ ಕಾಲ ಹೆಬ್ಬಾಳ್ಕರ್‍ಗೆ ಇಡಿ ಡ್ರಿಲ್
ಮೈಸೂರು

ಸತತ 9 ಗಂಟೆಗಳ ಕಾಲ ಹೆಬ್ಬಾಳ್ಕರ್‍ಗೆ ಇಡಿ ಡ್ರಿಲ್

September 20, 2019

ನವದೆಹಲಿ, ಸೆ.19- ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ಅವ ರಿಗೆ ಜಾರಿ ನಿರ್ದೇಶನಾ ಲಯದ ಅಧಿಕಾರಿಗಳು ಸತತ 9 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಇಂದು ಡಿ.ಕೆ. ಶಿವ ಕುಮಾರ್ ತಿಹಾರ್ ಜೈಲು ಸೇರುವ ಹೊತ್ತಲ್ಲೇ, ಇತ್ತ ದೆಹಲಿಯ ಇಡಿ ಕಚೇರಿಯಲ್ಲಿ ಡಿಕೆಶಿ ಆಪ್ತೆ ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರಣೆ ಆರಂಭವಾಯಿತು. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರಣೆ ನಡೆಯಿತು. ನಿಮಗೂ ಡಿಕೆಶಿಗೂ ಇರುವ ವ್ಯವಹಾರಿಕ ಸಂಬಂಧ ಏನು? ನಿಮ್ಮ ಹೆಸರಲ್ಲಿ ಡಿಕೆಶಿ ಆಸ್ತಿ ಮಾಡಿದ್ದಾರಾ? ಹೂಡಿಕೆ ಮಾಡಿದ್ದಾರಾ ಎಂಬಿತ್ಯಾದಿ ಪ್ರಶ್ನೆಗಳನ್ನು ನಿರಂತರವಾಗಿ ಕೇಳಿದ್ದಾರೆ ಎನ್ನಲಾಗುತ್ತಿದೆ.

ಡಿಕೆಶಿ ಖಾತೆಯಿಂದ ವರ್ಗಾವಣೆ ಆಗಿದೆ ಎನ್ನಲಾದ 50 ಕೋಟಿ ರೂಪಾಯಿ, ಹರ್ಷ ಶುಗರ್ ಫ್ಯಾಕ್ಟರಿಯಲ್ಲಿ ಹೂಡಿಕೆ ಸಂಬಂಧ ಇಡಿ ಅಧಿಕಾರಿಗಳು ಮಾಹಿತಿ ಸಂಗ್ರ ಹಿಸಿದರು. ನಾಳೆಯೂ ವಿಚಾರಣೆಗೆ ಹಾಜರಾಗುವಂತೆ ಲಕ್ಷ್ಮಿ ಹೆಬ್ಬಾಳ್ಕರ್‍ಗೆ ಸಮನ್ಸ್ ಜಾರಿ ಮಾಡಲಾಗಿದೆ. ಜೊತೆಗೆ ಕೆಲವು ದಾಖಲೆಗಳನ್ನು ತರುವಂತೆ ಸೂಚನೆ ನೀಡಿದ್ದಾರೆ. ಇಡಿ ಕಚೇರಿಯಿಂದ ಹೊರ ಬಂದು ಮಾಧ್ಯಮ ಗಳಿಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್, ಕೆಲವು ವಿಚಾ ರಗಳನ್ನು ಕೇಳಿದ್ದಾರೆ. ವಿಚಾರಣೆ ನಡೆಯುತ್ತಿದೆ. ನಾನು ಕೂಡ ಸಮಂಜಸ ಉತ್ತರ ನೀಡಿದ್ದೇನೆ. ಇಡಿ ಅಧಿಕಾರಿಗಳು ಕೆಲವು ದಾಖಲೆಗಳನ್ನು ಕೇಳಿದ್ದಾರೆ. ಅವುಗಳನ್ನು ಒದಗಿ ಸುವುದಾಗಿ ತಿಳಿಸಿದ್ದೇನೆ ಎಂದರು. ಮತ್ತೆ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಯಾಗಿದ್ಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಆ ಬಗ್ಗೆ ಮಾಹಿತಿ ಇಲ್ಲ, ಆಮೇಲೆ ತಿಳಿಯುತ್ತೆ. ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸದ್ಯಕ್ಕೆ ಅಧಿಕಾರಿಗಳು ಏನನ್ನೂ ಹೇಳಿಲ್ಲ ಎಂದು ಕಾರಿನ ಬಳಿಗೆ ತೆರಳಿದರು. ಈ ವೇಳೆ ಕಾರಿನಲ್ಲಿ ಕುಳಿತ ಅವರನ್ನು ಮತ್ತೆ ವಿಚಾರಣೆ ವಿಚಾರವಾಗಿ ಪ್ರಶ್ನಿಸಿದಾಗ, ಶುಕ್ರವಾರ ಬರುವಂತೆ ಸೂಚಿಸಿದ್ದಾರೆ ಎಂದು ನಗುತ್ತಲೇ ಉತ್ತರಿಸಿ ಇಡಿ ಕಚೇರಿಯಿಂದ ತೆರಳಿದರು.

Translate »