ದೇಶದ ಕಾನೂನು ಗೌರವಿಸಿ, ಸ್ಥಳೀಯರೊಂದಿಗೆ ಸೌಹಾರ್ದತೆಯಿಂದಿರಿ
ಮೈಸೂರು

ದೇಶದ ಕಾನೂನು ಗೌರವಿಸಿ, ಸ್ಥಳೀಯರೊಂದಿಗೆ ಸೌಹಾರ್ದತೆಯಿಂದಿರಿ

September 9, 2018

ಮೈಸೂರು:  ಮೈಸೂ ರಿನ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ನಮ್ಮ ಕಾನೂನನ್ನು ಗೌರವಿಸುವುದರೊಂದಿಗೆ ಸ್ಥಳೀಯರೊಂದಿಗೆ ಸೌಹಾರ್ದಯುತ ವಾಗಿ ನಡೆದುಕೊಳ್ಳುವಂತೆ ಎಸಿಬಿ ಎಸ್ಪಿ ಡಾ.ಹೆಚ್.ಟಿ.ಶೇಖರ್ ಸಲಹೆ ನೀಡಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಶನಿವಾರ ಮೈಸೂರು ವಿವಿಯ ಅಂತರರಾಷ್ಟ್ರೀಯ ಕೇಂದ್ರವು ಆಯೋಜಿ ಸಿದ್ದ ವಿದೇಶಿ ವಿದ್ಯಾರ್ಥಿಗಳ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ವಿದೇಶಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಭಾರತ, ಅದರಲ್ಲಿಯೂ ಕರ್ನಾಟಕದ ಮೈಸೂರು ಜಿಲ್ಲೆ ಸುರಕ್ಷಿತವಾಗಿದೆ. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ವಿದೇಶಿ ವಿದ್ಯಾರ್ಥಿ ಗಳಿಗೆ ಭಾರತದಲ್ಲಿ ಉತ್ತಮವಾದ ವಾತಾ ವರಣವಿದೆ. ಅದರಲ್ಲಿಯೂ ಕರ್ನಾಟಕ ರಾಜ್ಯ ವಿದೇಶಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ಹಿನ್ನೆಲೆ ಯಲ್ಲಿ ಮೈಸೂರಿನ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಗಳು ನಮ್ಮ ಕಾನೂನನ್ನು ಗೌರವಿಸಬೇಕು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ವಿದೇಶಿ ವಿದ್ಯಾರ್ಥಿಗಳ ಉಪಟಳದಂತಹ ಪ್ರಕರಣ ಗಳು ಹೆಚ್ಚಾಗುತ್ತಿವೆ. ಅಂತಹ ಪ್ರಕರಣ ಗಳು ಮೈಸೂರಿನಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.

ವಿವಿಧ ದೇಶಗಳಿಂದ ವಿದ್ಯಾಭ್ಯಾಸಕ್ಕೆ ಬಂದಿರುವ ನೀವು ಕೇವಲ ವಿದ್ಯಾರ್ಥಿಯಾಗಿ ರದೆ ನಿಮ್ಮ ದೇಶದ ರಾಯಭಾರಿಯಾಗಿ ದ್ದೀರಿ. ಈ ಹಿನ್ನೆಲೆಯಲ್ಲಿ ವಿದ್ಯಾಭ್ಯಾಸ ಮಾಡು ವುದರೊಂದಿಗೆ ನಿಮ್ಮ ದೇಶದ ಘನತೆಯನ್ನು ಎತ್ತಿ ಹಿಡಿಯುವ ವರ್ತನೆ ನಿಮ್ಮಿಂದ ನಿರೀ ಕ್ಷಿಸುತ್ತೇವೆ. ಕಾನೂನು ಸುವ್ಯವಸ್ಥೆ ಹದಗೆಡಿ ಸುವ ವರ್ತನೆ ನಿಮ್ಮಿಂದಾಗಬಾರದು. ಮೈಸೂ ರಿನ ಜನರು ಮೃದು ಹಾಗೂ ಸೌಮ್ಯ ಸ್ವಭಾವಿ ಗಳಾಗಿದ್ದಾರೆ. ಇದನ್ನು ವಿದ್ಯಾಭ್ಯಾಸಕ್ಕೆ ಸದುಪ ಯೋಗ ಪಡಿಸಿಕೊಳ್ಳಬೇಕು. ನಿಮ್ಮ ಗುರಿ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡುವತ್ತ ಮಾತ್ರ ಕೇಂದ್ರಿಕರಿಸಬೇಕು. ಕಾನೂನು ಸುವ್ಯವಸ್ಥೆ ಯನ್ನು ಹದಗೆಡಿಸುವವರ ವಿರುದ್ದ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳ ಲಿದೆ ಎಂದು ಎಚ್ಚರಿಸಿದರು. ಕಾರ್ಯ ಕ್ರಮದಲ್ಲಿ ಮೈಸೂರು ವಿವಿಯ ಪ್ರಭಾರ ಕುಲಪತಿ ಪ್ರೊ.ಟಿ.ಕೆ.ಉಮೇಶ್, ಮೈಸೂರು ವಿವಿಯ ಚೈನೀಸ್ ಪ್ರೋಗ್ರಾಮ್ ಸಂಯೋ ಜಕ ಪ್ರೊ.ಜಿ.ಹೇಮಂತ್‍ಕುಮಾರ್, ಐಸಿ ಸಿಆರ್ ಪ್ರಾದೇಶಿಕ ನಿರ್ದೇಶಕ ಪಿ.ವೇಣು ಗೋಪಾಲ್, ಅಂತರಾಷ್ಟ್ರೀಯ ಕೇಂದ್ರದ ನಿರ್ದೇಶಕ ಪ್ರೊ.ಜಿ.ಆರ್.ಜನಾರ್ಧನ್ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ವಿವಿಧ ಕಾಲೇಜಿನ 250ಕ್ಕೂ ವಿದೇಶಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »