ರಾಸಾಯನಿಕ ರಹಿತ ಗಣೇಶ ಮೂರ್ತಿ ತಯಾರಕ ಕಲಾವಿದರಿಗೆ ಸನ್ಮಾನ
ಮೈಸೂರು

ರಾಸಾಯನಿಕ ರಹಿತ ಗಣೇಶ ಮೂರ್ತಿ ತಯಾರಕ ಕಲಾವಿದರಿಗೆ ಸನ್ಮಾನ

September 10, 2018

ಮೈಸೂರು: ರಾಸಾಯನಿಕ ರಹಿತ ಗಣೇಶ ಮೂರ್ತಿಗಳನ್ನು ತಯಾರಿಸಲು ಒತ್ತು ನೀಡುತ್ತಿರುವ ಹಲವು ಕಲಾವಿದರರನ್ನು ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರಿನ ಕುಂಬಾರಗೇರಿಯ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.

ಇಂದಿನ ಯಾಂತ್ರಿಕ ಯುಗದಲ್ಲಿ ಕೈಯಿಂದ ಮೂರ್ತಿ ತಯಾರಿಸುವ ಕಲಾವಿದರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಕಲಾವಿದರ ಪ್ರೋತ್ಸಾಹಕ್ಕೆ ಸರ್ಕಾರ ಯಾವುದೇ ಯೋಜನೆ ರೂಪಿಸಿಲ್ಲ. ಹೀಗಾಗಿ ನಮ್ಮ ಸಂಸ್ಥೆ ಗಣೇಶ ಮೂರ್ತಿ ತಯಾರಕ ಕಲಾವಿದರಾದ ರೇವಣ್ಣ, ಸುಬ್ಬಮ್ಮ, ನಿಂಗಮ್ಮ, ಸಿದ್ದಪ್ಪ, ಸಾಕಮ್ಮ ಅವರನ್ನು sಆತ್ಮೀಯವಾಗಿ ಸನ್ಮಾನಿಸಲಾಯಿತು.

ಸಂಸದರ ಪತ್ನಿ ಅರ್ಪಿತಾ ಪ್ರತಾಪ್‍ಸಿಂಹ, ನಗರಪಾಲಿಕೆ ಸದಸ್ಯ ಎಂ.ಡಿ.ನಾಗರಾಜ್, ಪ್ರಶಾಂತ್‍ಗೌಡ ಕಲಾವಿದರಿಗೆ ಗೌರವಿಸಿ, ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಪ್ರತಾಪ್‍ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ, ರಾಸಾಯನಿಕ ಬಣ್ಣ ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸುವ ಗಣೇಶ ಮೂರ್ತಿಗಳನ್ನು ನದಿ, ಕೊಳಗಳಲ್ಲಿ ವಿಸರ್ಜಿಸುವುದರಿಂದ ನೀರು ಕಲುಷಿತವಾಗುವ ಜೊತೆಗೆ ಜಲಚರಗಳಿಗೂ ಹಾನಿಯಾಗುತ್ತವೆ. ಅಲ್ಲದೆ, ಪಿಓಪಿ ನೀರಿನಲ್ಲಿ ಕರಗುವುದಿಲ್ಲ. ಹೀಗಾಗಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನೇ ಕಲಾವಿದರು ತಯಾರಿಸಬೇಕು. ಜನರು ಸಹ ಮಣ್ಣಿನ ಗಣೇಶ ಮೂರ್ತಿಗಳನ್ನೇ ಖರೀದಿಸಿ, ಪರಿಸರ ರಕ್ಷಣೆಗೆ ಸಹಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ವಿಕ್ರಮ್ ಐಯ್ಯಂಗಾರ್, ರಾಕೇಶ್ ಭಟ್, ಕಾಂಗ್ರೆಸ್ ಮುಖಂಡ ಎಸ್.ಆರ್.ರವಿಕುಮಾರ್, ಬಿಜೆಪಿ ಮುಖಂಡರಾದ ಟಿ.ಎಸ್.ಅರುಣ್, ಅನೂಜ್ ಸಾರಸ್ವತ್, ಜೋಗಿ ಮಂಜು ಇನ್ನಿತರರು ಉಪಸ್ಥಿತರಿದ್ದರು.

Translate »