ಮುಂದಿನ ವಾರದಿಂದ ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣ ದರ ಶೇ.28ರಷ್ಟು ದುಬಾರಿ
ಮೈಸೂರು

ಮುಂದಿನ ವಾರದಿಂದ ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣ ದರ ಶೇ.28ರಷ್ಟು ದುಬಾರಿ

September 10, 2018

ಮಂಡ್ಯ: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬಿಸಿ ಅನುಭವಿಸುತ್ತಿರುವ ನಾಗರಿಕರು ಈಗ ದುಬಾರಿ ದರದ ಬಸ್ ಪ್ರಯಾಣ ದರವನ್ನು ಹೊರಬೇಕಾಗಿದೆ.

ಮುಂದಿನ ವಾರದಿಂದ ಶೇ.28ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡಲು ರಾಜ್ಯಸರ್ಕಾರ ಮುಂದಾಗಿದೆ. ಜಿಲ್ಲೆಯ ಮಾದನಾಯಕನಹಳ್ಳಿಯಲ್ಲಿ ಬಸ್ ಪ್ರಯಾಣ ದರದ ಏರಿಕೆಯ ಮುನ್ಸೂಚನೆ ನೀಡಿರುವ ಸಾರಿಗೆ ಸಚಿವ ಡಿ. ಸಿ. ತಮ್ಮಣ್ಣ ಮುಂದಿನ ವಾರದಿಂದಲೇ ಬಸ್ ಪ್ರಯಾಣ ದರ ಏರಿಕೆ ಅನ್ವಯವಾಗಲಿದೆ ಎಂದು ತಿಳಿಸಿದರು. ಪೆಟ್ರೋಲ್, ಡೀಸೆಲ್ ದರ ಪದೇ ಪದೇ ಏರಿಕೆಯಾಗುತ್ತಿರುವುದರಿಂದ ಸಾರಿಗೆ ಸಂಸ್ಥೆ ನಷ್ಟ ಅನುಭವಿಸುತ್ತಿದೆ.

ಹಾಗಾಗೀ ಬಸ್ ಪ್ರಯಾಣ ದರ ಅನಿವಾರ್ಯ ಎಂದು ಅವರು ಸಮರ್ಥಿಸಿಕೊಂಡರು ನಷ್ಟದಿಂದ ರಾಜ್ಯ ಸಾರಿಗೆ ಸಂಸ್ಥೆಯನ್ನು ಪಾರು ಮಾಡಲು ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ವಿಭಾಗಗಳಲ್ಲೂ ದರ ಏರಿಕೆ ಅನಿವಾರ್ಯ ವಾಗಿದ್ದು, ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ದರ ಏರಿಕೆ ಮಾಡಲಾಗುವುದು ಎಂದು ಡಿ.ಸಿ.ತಮ್ಮಣ್ಣ ತಿಳಿಸಿದರು.

Translate »