ಇಂದು ಸಿಎಂ ಕುಮಾರಸ್ವಾಮಿ ನಿಯೋಗ ಪ್ರಧಾನಿ ಮೋದಿ ಭೇಟಿ
ಮೈಸೂರು

ಇಂದು ಸಿಎಂ ಕುಮಾರಸ್ವಾಮಿ ನಿಯೋಗ ಪ್ರಧಾನಿ ಮೋದಿ ಭೇಟಿ

September 10, 2018

ಬೆಂಗಳೂರು: ಮುಖ್ಯಮಂತ್ರಿ, ಸಂಸದರು, ಶಾಸಕರು, ವಿರೋಧ ಪಕ್ಷದ ನಾಯಕರನ್ನೊಳಗೊಂಡ ನಿಯೋಗ ನಾಳೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದೆ. ಪ್ರಧಾನಿ ಮೋದಿ ಭೇಟಿ ಮಾಡಿ ಅತೀವೃಷ್ಠಿಗೆ ಸಂಭಂದಿಸಿದಂತೆ ಪರಿಹಾರಕ್ಕೆ ರಾಜ್ಯದ ನಿಯೊಗ ಮನವಿ ಸಲ್ಲಿಸಲಿದೆ. ನೆನ್ನೆ ಸಂಜೆಯೆ ದೆಹಲಿಯತ್ತ ಪಯಣ ಬೆಳೆಸಿರುವ ಸಂಸದರು, ಶಾಸಕರು ಮತ್ತು ವಿರೋಧ ಪಕ್ಷದ ನಾಯ ಕರು ಮೋದಿ ಭೇಟಿ ನೀಡಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲಿದ್ದಾರೆ. ನಿಯೋಗದಲ್ಲಿ ಮಾಜಿ ಪ್ರಧಾನಿ ಹಾಗೂ ಹಾಸನ ಸಂಸದ ಎಚ್.ಡಿ. ದೇವೇಗೌಡ, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕಂದಾಯ ಸಚಿವ ಆರ್.ವಿ. ದೇಶ ಪಾಂಡೆ, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳೊಂದಿಗೆ ತೆರಳಿ ಪ್ರಧಾನಿಯವರಿಗೆ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯ ಕುರಿತು ಮನವರಿಕೆ ಮಾಡಿಕೊಡಲಿದ್ದಾರೆ.

Translate »