ದೇಶದ ಕೀರ್ತಿ ದಶ ದಿಕ್ಕುಗಳಿಗೆ ಹರಡಿಸುವವನೇ ಸುಪುತ್ರ: ಮಾಜಿ ಸಚಿವ ಸಿ.ಹೆಚ್.ವಿಜಯ್‍ಶಂಕರ್
ಮೈಸೂರು

ದೇಶದ ಕೀರ್ತಿ ದಶ ದಿಕ್ಕುಗಳಿಗೆ ಹರಡಿಸುವವನೇ ಸುಪುತ್ರ: ಮಾಜಿ ಸಚಿವ ಸಿ.ಹೆಚ್.ವಿಜಯ್‍ಶಂಕರ್

September 10, 2018

ಮೈಸೂರು:  ದೇಶದ ಕೀರ್ತಿಯನ್ನು ದಶ ದಿಕ್ಕುಗಳಿಗೂ ಹರಡಿಸುವವನೇ ಸುಪುತ್ರ. ಅಪ್ಪ ಮಾಡಿದ ಆಸ್ತಿಯಲ್ಲಿ ಪಾಲು ಕೇಳುವವನು ಬರೀ ಪುತ್ರ ಎಂದು ಮಾಜಿ ಸಚಿವÀ ಸಿ.ಎಚ್. ವಿಜಯಶಂಕರ್ ಹೇಳಿದರು.

ಹಿಮಾಲಯ ಫೌಂಡೇಶನ್ ವತಿ ಯಿಂದ ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರಿಗೆ ಆಚಾರ್ಯ ಶ್ರೀ ವಿದ್ಯಾರಣ್ಯ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಸನ್ಮಾನದ ಹಿಂದೆ ಸಾಧನೆಯಿದ್ದು, ಸಾಧನೆಯನ್ನು ಸಮಾಜ ಗೌರವಿಸುತ್ತದೆ. ಸಾಧಕರು ನಮ್ಮ ದೇಶದ ಹೆಮ್ಮೆಯ ಸುಪುತ್ರರಿದ್ದಂತೆ, ಸನ್ಮಾನಿತರು ಕೇವಲ ಕುಟುಂಬದ ಆಸ್ತಿಯಲ್ಲ. ಅವರು, ದೇಶದ ಆಸ್ತಿಯಾಗಿದ್ದಾರೆ. ವಿವಿಧ ಸಂಘಟನೆಗಳು ಇಂತಹ ಸಾಧಕರನ್ನು ಗುರುತಿಸಿ ಗೌರವಿಸಿ ದಾಗ, ಸಾಧಕರು ಮತ್ತಷ್ಟು ತಮ್ಮ ಕೆಲಸ ಕಾರ್ಯ ಮತ್ತು ಸೇವೆಯನ್ನು ವಿಸ್ತರಿಸು ತ್ತಾರೆ. ಸಮಾಜದ ಅಭಿವೃದ್ಧಿಗೆ ಇಂತಹ ಸಾಧಕರು ಅತೀ ಅಗತ್ಯ. ಹಾಗೆಯೇ ಸಾಧಕರನ್ನು ಗುರುತಿಸುವುದು ಸಮಾಜದ ಕರ್ತವ್ಯವಾಗಿದೆ ಎಂದರು.

ಕರ್ನಾಟಕ ಪೆÇಲೀಸ್ ಅಕಾಡೆಮಿ ಪ್ರಾಂಶು ಪಾಲೆ ಡಾ.ಧರಣಿದೇವಿ ಮಾಲಗತ್ತಿ ಮಾತ ನಾಡಿ, ನಮ್ಮ ಸಂಪ್ರದಾಯದಲ್ಲಿ ಒಳಿತು ಎನ್ನುವಂತಹ ಅಂಶವನ್ನು ಪರಿಪಾಲಿಸುವು ದರಲ್ಲಿ ಯಾವುದೇ ದೋಷವಿಲ್ಲ. ಆದರೆ ಮೂಢನಂಬಿಕೆಗಳನ್ನು ಆಚರಿಸಬಾರದು ಹಾಗೂ ಬೆಳೆಸಬಾರದು. ನಂಬಿಕೆ ಮತ್ತು ಮೂಢನಂಬಿಕೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ನಂಬಿಕೆಗೆ ಸಂಬಂಧಿ ಸಿದಂತೆ ನಾಸ್ತಿಕರು, ಆಸ್ತಿಕರು ಮತ್ತು ಅರೆನಾಸ್ತಿಕರಿದ್ದಾರೆ ಎಂದರು.

ಪ್ರಶಸ್ತಿ ಪ್ರದಾನ: ಹಿಮಾಲಯ ಫೌಂಡೇ ಷನ್ ಕಳೆದ 9 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಆಚಾರ್ಯ ಶ್ರೀ ವಿದ್ಯಾರಣ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಬಾರಿ ಧಾರ್ಮಿಕ ಕ್ಷೇತ್ರದಲ್ಲಿ ಡಾ.ಎನ್.ಶಶಿ ಶೇಖರ ದೀಕ್ಷಿತ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಹೆಚ್.ಬಿ.ರಾಜಶೇಖರ್, ಕನ್ನಡ ಸೇವೆಯಲ್ಲಿ ನಿ. ಗಿರಿಗೌಡ, ಆಧ್ಯಾತ್ಮ ಕ್ಷೇತ್ರ ದಲ್ಲಿ ಡಾ.ಗುರುರಾಜ್ ಪೋಶೆಟ್ಟಿಹಳ್ಳಿ, ಆಯುರ್ವೇದ ಕ್ಷೇತ್ರದಲ್ಲಿ ಡಾ.ಬಿ.ಮನು ಮೆನನ್, ಕೊಳಲು ವಾದಕ ವಿನಾಯಕ ಹೊನ್ನಾವರ ಮತ್ತು ಶಬ್ದಯೋಗದಲ್ಲಿ ಎನ್.ಆರ್.ಸಂದೀಪ್ ಅವರಿಗೆ ಆಚಾರ್ಯ ಶ್ರೀ ವಿದ್ಯಾರಣ್ಯ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಮಾಜ ಸೇವಕ ಡಾ.ಕೆ.ಎಸ್.ರಘುರಾಂ ವಾಜಪೇಯಿ, ದಾಸ್ತಿ ಪ್ಯಾರಮೆಡಿಕಲ್ ಸಂಸ್ಥಾಪಕ ಡಾ.ಡಿ. ತಿಮ್ಮಯ್ಯ, ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ. ಎಸ್.ಪಿ ಯೋಗಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀ ಕೆರೆ ಗೋಪಾಲ್ ಮತ್ತಿತರರು ಇದ್ದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಎನ್.ಶಶಿಶೇಖರ ದೀಕ್ಷಿತ್, ಡಾ.ಹೆಚ್.ಬಿ.ರಾಜಶೇಖರ್, ನಿ. ಗಿರಿಗೌಡ, ಡಾ.ಗುರುರಾಜ್ ಪೋಶೆಟ್ಟಿಹಳ್ಳಿ, ಡಾ.ಬಿ.ಮನು ಮೆನನ್, ವಿನಾಯಕ ಹೊನ್ನಾವರ ಮತ್ತು ಎನ್.ಆರ್.ಸಂದೀಪ್ ಅವರಿಗೆ ಆಚಾರ್ಯ ಶ್ರೀ ವಿದ್ಯಾರಣ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Translate »