ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಮೈಸೂರು ನಗರ ಪುರ ಪ್ರವೇಶ
ಮೈಸೂರು

ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಮೈಸೂರು ನಗರ ಪುರ ಪ್ರವೇಶ

August 2, 2018

ಮೈಸೂರು:  ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತ್ರಿಧಾಮ ಕ್ಷೇತ್ರ ಶ್ರೀ ಮಹಾಕಾಳಿ ಚಕ್ರೇಶ್ವರಿ ಪೀಠದ ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಅವರು ಬುಧವಾರ ಸಂಜೆ ಮೈಸೂರು ನಗರ ಪುರ ಪ್ರವೇಶ ಮಾಡಿದರು.

ಆ.1ರಿಂದ ನ.24ರವರೆಗೆ ಸುಮಾರು 65 ದಿನ ಗಳ ಕಾಲ ನಡೆಯುವ ಚಾತುರ್ಮಾಸ್ಯದಲ್ಲಿ ಭಾಗ ವಹಿಸಲು ಬುಧವಾರ ಸಂಜೆ ಮೈಸೂರಿಗೆ ಆಗಮಿಸಿದ ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಅವರನ್ನು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ಇತರೆ ವಿಪ್ರ ಮುಖಂಡರು ಪೂರ್ಣ ಕುಂಭದೊಂದಿಗೆ ಸ್ವಾಗತ ಕೋರಿದರು. ಇವರ ಜೊತೆಯಲ್ಲಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಉಪಸ್ಥಿತರಿದ್ದರು.

ನಂತರ ಬೆಳ್ಳಿ ರಥದಲ್ಲಿ ಶ್ರೀಗಳು ಪೀಠ ಅಲಂಕರಿ ಸಿದ ನಂತರ, ಡೊಳ್ಳು, ನಗಾರಿ ಹಾಗೂ ಜಾನಪದ ಕಲಾತಂಡಗಳೊಂದಿಗೆ ರಾಮಸ್ವಾಮಿ ವೃತ್ತ ದಿಂದ ಮೆರವಣಿಗೆ ಹೊರಟು ಆರ್‍ಟಿಓ ಸರ್ಕಲ್, ಬಲ್ಲಾಳ್ ವೃತ್ತದ ಮೂಲಕ ಕೃಷ್ಣಮೂರ್ತಿ ಪುರಂನಲ್ಲಿರುವ ಶ್ರೀರಾಮಮಂದಿರ ತಲುಪಿತು. ಈ ಮೆರವಣಿಗೆಯಲ್ಲಿ ನೂರಾರು ಭಕ್ತರು ಉಪಸ್ಥಿತರಿದ್ದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ವೈದ್ಯಕೀಯ ಶಿಕ್ಷಣ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಧರ್ಮದಲ್ಲಿ ನಂಬಿಕೆಯಿಟ್ಟ ವ್ಯಕ್ತಿಗೆ, ಧರ್ಮ ಕೈಬಿಡುವುದಿಲ್ಲ. ಯಾವುದೇ ಕೆಲಸ ಮಾಡಬೇಕಾದರೂ ಆ ಕೆಲಸ ದಲ್ಲಿ ಮೊದಲು ನಂಬಿಕೆ ಮುಖ್ಯ. ಅದರಂತೆ, ಇಂದಿನಿಂದ ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಅವರು ನಡೆಸಿಕೊಡುವ ಚಾತುರ್ಮಾಸ್ಯ ಕಾರ್ಯ ಕ್ರಮದಲ್ಲಿ ಬಡವರ ಸಂಕಷ್ಟಗಳಿಗೆ ಪರಿಹಾರ ನೀಡ ಲಿದ್ದಾರೆ. ಧರ್ಮದಲ್ಲಿ ನಂಬಿಕೆಯಿಟ್ಟವರಿಗೆ ಅವರ ದೈವಬಲ ಅರ್ಥವಾಗುತ್ತದೆ ಎಂದರು.

ನಂತರ ವಿಪ್ರ ಮುಖಂಡ ಶ್ರೀಷ ಭಟ್ ಮಾತ ನಾಡಿ, ಇಂದಿನಿಂದ (ಆ.1) ಸೆ.24ರವರೆಗೆ ನಡೆಯುವ ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ನಿತ್ಯ ಪೂಜೆ, ಮಹಿಳೆಯರಿಂದ ಭಜನೆ, 10.30ಕ್ಕೆ ಶ್ರೀಗಳಿಂದ ಸಂಸ್ಥಾನ ಪೂಜೆ, 11 ಗಂಟೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ, ಲಲಿತ ಸಹಸ್ರ ನಾಮ ಪಾರಾಯಣ, ಪಾದಪೂಜೆ, ಭಿಕ್ಷಾವಂದನೆ, ಮಹಾ ಮಂಗಳಾ ರತಿ, ಶ್ರೀಗಳಿಂದ ಪ್ರವಚನ ಹಾಗೂ ಸಂಜೆ 5 ಗಂಟೆಗೆ ಸಾಮೂಹಿಕ ಸೌಂದರ್ಯ ಲಹರಿ ಹಾಗೂ ಹನುಮಾನ್ ಚಾಲೀಸ ಪಾರಾಯಣ, ತೊಟ್ಟಿಲು ಪೂಜೆ ನಂತರ ದೇವರಿಗೆ ಮಹಾ ಮಂಗಳಾರತಿ ನಡೆಯಲಿದೆ ಎಂದರು.

ಈ ವೇಳೆ ಚಾತುರ್ಮಾಸ್ಯ ಸೇವಾ ಸಮಿತಿ-2018ರ ಗೌರವಾಧ್ಯಕ್ಷ ಶಂಕರ ನಾರಾಯಣ ಶಾಸ್ತ್ರಿ, ಬ್ರಾಹ್ಮಣ ಧರ್ಮ ಸಹಾಯ ಸಭಾದ ಅಧ್ಯಕ್ಷ ಶ್ರೀನಿವಾಸ, ಇತರೆ ಮುಖಂಡ ರಾದ ರಾಜೇಶ್ ಬೋರೆ, ಮಾಧುರಾವ್, ಬ್ರಹ್ಮಣ್ಯ ತೀರ್ಥ, ಎಂ.ಎಸ್.ಸತ್ಯಾನಂದ ಇತರರಿದ್ದರು.

Translate »