ವಿದ್ಯಾರ್ಥಿಗಳು ಜೀವನದಲ್ಲಿ ಶ್ರದ್ಧೆ, ನಿಷ್ಠೆ ಅಳವಡಿಸಿಕೊಳ್ಳಬೇಕು: ಎಲ್. ನಾಗೇಂದ್ರ ಸಲಹೆ
ಮೈಸೂರು

ವಿದ್ಯಾರ್ಥಿಗಳು ಜೀವನದಲ್ಲಿ ಶ್ರದ್ಧೆ, ನಿಷ್ಠೆ ಅಳವಡಿಸಿಕೊಳ್ಳಬೇಕು: ಎಲ್. ನಾಗೇಂದ್ರ ಸಲಹೆ

September 10, 2018

ಮೈಸೂರು: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿ ಕೊಳ್ಳಬೇಕು ಎಂದು ಶಾಸಕ ಎಲ್.ನಾಗೇಂದ್ರ ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು.

ಮೈಸೂರಿನ ಕಲಾಮಂದಿರದಲ್ಲಿ ವಿಶ್ವಮಾನವ ವಿದ್ಯಾರ್ಥಿ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಅಂತರ ಕಾಲೇಜು ಸಾಂಸ್ಕøತಿಕ ಮೇಳದಲ್ಲಿ ವಿಜೇತರ ವಿದ್ಯಾರ್ಥಿ ತಂಡಗಳಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು. ಮೈಸೂರು ಸಾಂಸ್ಕøತಿಕ ನಗರವಾಗಿದ್ದು, ವಿದ್ಯಾರ್ಥಿ ಗಳು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಅವರ ವ್ಯಾಸಂಗದಲ್ಲಿ ಉನ್ನತ ಸಾಧನೆಗೆ ಪೂರಕ ವಾತಾವರಣ ನಿರ್ಮಾಣ ಆಗಲಿದೆ. ಕುವೆಂಪು ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. `ಮೊದಲು ಮಾನವನಾಗು’ ಎಂಬ ಅವರ ಸಂದೇಶ ಸಮಾಜಕ್ಕೆ ಅಗತ್ಯವಾಗಿದೆ. ವಿದ್ಯಾರ್ಥಿ ಗಳು ಈ ಸಂದೇಶದ ಮಹತ್ವ ಅರಿಯಬೇಕು ಎಂದು ತಿಳಿ ಹೇಳಿದರು.

ಈ ಸಾಂಸ್ಕøತಿಕ ಮೇಳದಲ್ಲಿ ಉತ್ತಮ ಪ್ರದರ್ಶನ ನೀಡಿದ ಮೂರು ತಂಡ ಗಳಿಗೆ ನನ್ನ ಕಡೆಯಿಂದ ವಿಶೇಷ ಬಹುಮಾನ ನೀಡಲಾಗುವುದು. ಮುಂದಿನ ವರ್ಷದ ಈ ಕಾರ್ಯಕ್ರಮಕ್ಕೆ ನನ್ನ ಕಡೆಯಿಂದ ಅಗತ್ಯ ಸಹಕಾರ ನೀಡಲಾಗು ವುದು ಎಂದು ಪ್ರಕಟಿಸಿದ ಅವರು, ಮೇಳದಲ್ಲಿ ಸೋಲು ಕಂಡವರು ನಿರಾಸೆ ಯಾಗಬಾರದು. ಸೋಲೆ ಗೆಲುವಿನ ಮಟ್ಟಿಲು ಎಂಬುದರಲ್ಲಿ ನಂಬಿಕೆ ಇಟ್ಟು ಪ್ರಯತ್ನ ಮುಂದುವರೆಸಬೇಕು ಎಂದು ಸಲಹೆ ನೀಡಿದರು.

ಹುಟ್ಟುಹಬ್ಬ ಸರಳವಾಗಿ ಆಚರಿಸಿಕೊಳ್ಳುತ್ತೇನೆ: ಕೊಡಗು ಮತ್ತು ಕೇರಳದಲ್ಲಿ ನೆರೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನನ್ನ ಜನ್ಮದಿನಾಚರಣೆಗೆ ವೆಚ್ಚ ಮಾಡುವ ಹಣವನ್ನು ಈ ಸಂತ್ರಸ್ಥರಿಗೆ ನೀಡಲು ಅಭಿಮಾನಿಗಳಲ್ಲಿ ಈಗಾಗಲೇ ಮನವಿ ಮಾಡಿದ್ದೇನೆ ಎಂದು ಇದೇ ವೇಳೆ ನಾಗೇಂದ್ರ ತಿಳಿಸಿದರು.

ಸೆ.7ರಂದು ಮೇಳ ಆರಂಭಗೊಂಡಿತು. ಮೇಳದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನಾನಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುವೆಂಪು ಗೀತೆಗಳ ಸಮೂಹ ಗಾಯನ, ನೃತ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ನಾಟಕಗಳ ಪ್ರದರ್ಶನ, ಜನಪದ ಗೀತೆಗಳ ಗಾಯನ ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು ನಡೆಸಲಾಯಿತು. ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ರುದ್ರಯ್ಯ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಂ.ಜೆ.ಸುರೇಶ್‍ಗೌಡ, ರಾಜ್ಯಾಧ್ಯಕ್ಷೆ ಪೂರ್ಣಿಮ ಪಂಡಿತ್, ಪತ್ರಕರ್ತ ಸದಾಶಿವ ಡಿ.ಹುಲ್ಲಾಗೂರು ಮತ್ತಿತರರು ಹಾಜರಿದ್ದರು.

Translate »