ಮೈಸೂರು

`ಕೊಡಗಿಗೆ ನಮ್ಮ ಕೊಡುಗೆ’ ಪಾದಯಾತ್ರೆ
ಮೈಸೂರು

`ಕೊಡಗಿಗೆ ನಮ್ಮ ಕೊಡುಗೆ’ ಪಾದಯಾತ್ರೆ

September 3, 2018

ಬೆಂಗಳೂರು: ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕಾಗಿ ಶ್ರೀ ಆದಿಚುಂಚನಗಿರಿ ಮಠ ಶ್ರೀಕ್ಷೇತ್ರದ ನೇತೃತ್ವದಲ್ಲಿ ದೇಣಿಗೆ ಸಂಗ್ರಹಿಸಲು ಇಂದು ನಗರದಲ್ಲಿ `ಕೊಡಗಿಗೆ ನಮ್ಮ ಕೊಡುಗೆ’ ಪಾದಯಾತ್ರೆ ನಡೆಸಲಾಯಿತು. ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಶಾಸಕರಾದ ವಿ.ಸೋಮಣ್ಣ, ಎಂ.ಕೃಷ್ಣಪ್ಪ, ಕೆ.ಗೋಪಾಲಯ್ಯ, ಮಾಜಿ ಶಾಸಕ ಶಿವರಾಮಗೌಡ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು. ವಿಜಯನಗರದಲ್ಲಿರುವ ಶ್ರೀಕ್ಷೇತ್ರದ ಆವರಣದಿಂದ ಆರಂಭಗೊಂಡ ಪಾದಯಾತ್ರೆ ಶನಿಮಹಾತ್ಮ ದೇವಸ್ಥಾನದಲ್ಲಿ ದೇವರ ದರ್ಶನ…

ಕೂದಲು ಉದುರುವಿಕೆಯಿಂದ ಕಂಗಾಲಾದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
ಮೈಸೂರು

ಕೂದಲು ಉದುರುವಿಕೆಯಿಂದ ಕಂಗಾಲಾದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

September 3, 2018

ಮೈಸೂರು: ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡ ಬೆನ್ನಲ್ಲೆ ಕೂದಲು ಉದು ರಿದಕ್ಕೆ ಕಂಗಾಲಾದ ವಿದ್ಯಾರ್ಥಿಯೋರ್ವಳು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನಲ್ಲಿ ಕಾಣೆಯಾಗಿದ್ದ ಕೊಡಗಿನ ವಿದ್ಯಾರ್ಥಿನಿ ಜಿ.ನೇಹಾ ಗಂಗಮ್ಮ(19) ಕೊಡಗಿನ ಗೋಣಿಕೊಪ್ಪ ಸಮೀಪದ ನಿಟ್ಟೂರು ಲಕ್ಷ್ಮಣ ತೀರ್ಥ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತ ಯುವತಿ ನಿಟ್ಟೂರು ಗ್ರಾಮದ ಪ್ರಭಾ, ಶೈಲಾ ದಂಪತಿಯ ಪುತ್ರಿ. ಶವ ಹೊರ ತೆಗೆದಿರುವ ಪೊನ್ನಂಪೇಟೆ ಪೊಲೀಸರು ಶವವನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಿದ್ದಾರೆ. ಶನಿವಾರ ಸಂಜೆ ಹೊಳೆಯಲ್ಲಿ…

ಸಂಪ್ರದಾಯಕ್ಕೆ ಕೊರತೆಯಾಗದಂತೆ ದಸರಾ ಆಚರಣೆ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ
ಮೈಸೂರು

ಸಂಪ್ರದಾಯಕ್ಕೆ ಕೊರತೆಯಾಗದಂತೆ ದಸರಾ ಆಚರಣೆ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ

September 3, 2018

ಹುಣಸೂರು: ವಿಶ್ವ ವಿಖ್ಯಾತ ಜಂಬುಸವಾರಿ ಮೈಸೂರು ದಸರಾಕ್ಕೆ ಕಾಡಂಚಿನ ವೀರನಹೊಸಳ್ಳಿ ಗ್ರಾಮದ ಅರಣ್ಯ ಮುಖ್ಯ ದ್ವಾರದಲ್ಲಿ ಇಂದು ಗಜ ಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಅನೆಗಳನ್ನು ಕರೆದೊಯ್ಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು. ತಾಲೂಕಿನ ನಾಗರಹೊಳೆ ಅರಣ್ಯದ ವೀರನಹೊಸಳ್ಳಿ ಮುಖ್ಯ ದ್ವಾರದಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅನೆಗಳ ಮೊದಲ ತಂಡಕ್ಕೆ ಚಾಲನೆ ನೀಡಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1995ರಲ್ಲಿ ಅರಣ್ಯ ಮಂತ್ರಿ ಹಾಗೂ…

ಮೊದಲ ತಂಡದ ಗಜಪಡೆಯ ವಿವರ
ಮೈಸೂರು

ಮೊದಲ ತಂಡದ ಗಜಪಡೆಯ ವಿವರ

September 3, 2018

ಮೈಸೂರು: ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಅರ್ಜುನ ನೇತೃತ್ವದ 6 ಆನೆಗಳ ತಂಡ ಮೈಸೂರಿಗೆ ಆಗಮಿಸಿವೆ. ಇವುಗಳ ನೇತೃತ್ವ ವಹಿಸಿರುವ 58 ವರ್ಷದ ಗಂಡಾನೆ ಅರ್ಜುನ(5870 ಕೆಜಿ) ನನ್ನು 1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಈ ಆನೆ ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಇದನ್ನು ಬಳ್ಳೆ ಆನೆ ಶಿಬಿರದಿಂದ ಮೈಸೂರಿಗೆ ಕರೆ ತರಲಾಗಿದೆ. 2012ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಅರ್ಜುನನನ್ನು ಮಾವುತ ವಿನು ಮತ್ತು…

ಕೆಪಿಎಲ್: ಬಿಜಾಪುರ ಬುಲ್ಸ್, ಬೆಂಗಳೂರು ಬ್ಲಾಸ್ಟರ್ಸ್‍ಗೆ ಭರ್ಜರಿ ಗೆಲುವು
ಮೈಸೂರು

ಕೆಪಿಎಲ್: ಬಿಜಾಪುರ ಬುಲ್ಸ್, ಬೆಂಗಳೂರು ಬ್ಲಾಸ್ಟರ್ಸ್‍ಗೆ ಭರ್ಜರಿ ಗೆಲುವು

September 3, 2018

ಮೈಸೂರು: ಇಲ್ಲಿನ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಬಿಜಾಪುರ ಬುಲ್ಸ್ ಹಾಗೂ ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ಭರ್ಜರಿ ಜಯ ಸಾಧಿಸಿದೆ. ಬಿಜಾಪುರ ಬುಲ್ಸ್‍ಗೆ ಜಯ: ಕೆ.ಪಿ. ಅಪ್ಪಣ್ಣ ಮಾರಕ ಬೌಲಿಂಗ್ ದಾಳಿ ಹಾಗೂ ಎಂ.ಕೌನಾಯನ್ ಅಬ್ಬಾಸ್ ಅವರ ಅರ್ಧ ಶತಕದ ನೆರವಿನಿಂದ ಶಿವಮೊಗ್ಗ ಲಯನ್ಸ್ ವಿರುದ್ಧ ಬಿಜಾಪುರ ಬುಲ್ಸ್ ತಂಡ 2 ವಿಕೆಟ್‍ಗಳ ಜಯ ಸಾಧಿಸಿದೆ. ಶಿವಮೊಗ್ಗ…

ನ್ಯಾಯಾಧೀಶರುಗಳಿಗೆ ಪುನಶ್ಚೇತನ ತರಬೇತಿ: ಮಧ್ಯಸ್ಥಿಕೆ ವಿಧಾನದಿಂದ ಸಿವಿಲ್ ಮೊಕದ್ದಮೆ ಒತ್ತಡ ನಿವಾರಣೆ ಜಿಲ್ಲಾ ಪ್ರಧಾನ ನ್ಯಾಯಾಧೀಶ ಎಸ್.ಕೆ. ವೆಂಟಿಗೋಡಿ
ಮೈಸೂರು

ನ್ಯಾಯಾಧೀಶರುಗಳಿಗೆ ಪುನಶ್ಚೇತನ ತರಬೇತಿ: ಮಧ್ಯಸ್ಥಿಕೆ ವಿಧಾನದಿಂದ ಸಿವಿಲ್ ಮೊಕದ್ದಮೆ ಒತ್ತಡ ನಿವಾರಣೆ ಜಿಲ್ಲಾ ಪ್ರಧಾನ ನ್ಯಾಯಾಧೀಶ ಎಸ್.ಕೆ. ವೆಂಟಿಗೋಡಿ

September 3, 2018

ಮೈಸೂರು:  ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆಗಳ ಒತ್ತಡ ನಿವಾರಿಸಲು ಹಾಗೂ ತ್ವರಿತ ನ್ಯಾಯ ಒದಗಿಸಲು `ಮಧ್ಯಸ್ಥಿಕೆ ವಿಧಾನ’ ಪ್ರಮುಖ ಪಾತ್ರ ವಹಿಸಲಿದ್ದು, ಹೀಗಾಗಿ ನ್ಯಾಯಾಧೀಶರು ಈ ವಿಧಾನದ ಬಗ್ಗೆ ವಿಸ್ತøತ ಜ್ಞಾನ ಸಂಪಾದನೆಗೆ ಒತ್ತು ನೀಡುವ ಅಗತ್ಯವಿದೆ ಎಂದು ಮೈಸೂರು ಜಿಲ್ಲೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಅಭಿಪ್ರಾಯಪಟ್ಟರು. ಕರ್ನಾಟಕ ಹೈಕೋರ್ಟ್‍ನ ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ವತಿಯಿಂದ ಮೈಸೂರಿನ ಜಿಪಂ ಕಚೇರಿ ಸಭಾಂಗಣದಲ್ಲಿ `ಸಿವಿಲ್ ಪ್ರಕರಣದಲ್ಲಿ ಮಧ್ಯಸ್ಥಿಕಾ ವಿಧಾನ’ ಕುರಿತಂತೆ ಮೈಸೂರು ಮತ್ತು ಕೊಡಗು ಜಿಲ್ಲೆಯ…

ನಾವು ಸ್ವಲ್ಪ ಎಚ್ಚರದಿಂದಿದ್ದರೆ ಮೋದಿ ಅಧಿಕಾರಕ್ಕೆ ಬರಲು ಸಾಧ್ಯವಿತ್ತೆ?
ಮೈಸೂರು

ನಾವು ಸ್ವಲ್ಪ ಎಚ್ಚರದಿಂದಿದ್ದರೆ ಮೋದಿ ಅಧಿಕಾರಕ್ಕೆ ಬರಲು ಸಾಧ್ಯವಿತ್ತೆ?

September 3, 2018

ಮೈಸೂರು: ನಮ್ಮ ಮೂರ್ಖತನದಿಂದಾಗಿ 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವಂತಾಯಿತು. ಅಂದು ನಾವು ಸ್ವಲ್ಪ ಎಚ್ಚರವಾಗಿದ್ದರೆ, ಜಾಗೃತರಾಗಿದ್ದರೆ, ಸಂಘಟಿತರಾಗಿದ್ದರೆ ಮೋದಿ ಅಧಿಕಾರಕ್ಕೆ ಬರುತ್ತಿದ್ದರೇ? ಮೋದಿಯವರ ಗೆಲುವಿನ ಹಿಂದೆ ನಮ್ಮ ಅಸಹಾಯಕತೆ, ನಮ್ಮ ವಿಘಟನೆ ಇದೆ ಎಂದು ವಿಚಾರವಾದಿ ಪ್ರೊ.ಬಿ.ಪಿ.ಮಹೇಶ್‍ ಚಂದ್ರಗುರು ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಕಾಯಕಯೋಗಿ ವಿಕಾಸ ವೇದಿಕೆ ಭಾನುವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೆ ಸಂದರ್ಭದಲ್ಲಿ `ಪ್ರಸ್ತುತ ರಾಜಕಾರಣದಲ್ಲಿ ಸಮಾಜ ಮತ್ತು ಯುವಶಕ್ತಿಯ ಪಾತ್ರ’ ಕುರಿತ ವಿಚಾರ ಸಂಕಿರಣದಲ್ಲಿ `ಪ್ರಸ್ತುತ…

ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಜಿಲ್ಲಾ ಪ್ರವಾಸ
ಮೈಸೂರು

ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಜಿಲ್ಲಾ ಪ್ರವಾಸ

September 3, 2018

ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಡಾ.ಜಯಮಾಲಾ ಸೆಪ್ಟೆಂಬರ್ 3 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಚಿವರು ಸೆಪ್ಟೆಂಬರ್ 3 ರಂದು ಬೆಳಗ್ಗೆ 10 ಗಂಟೆಗೆ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತ ಪ್ರದೇಶಗಳಿಗೆ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಡಾ.ಬಿ.ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಡಾ.ಬಾಬು ಜಗಜೀವನ ರಾಂ ಪ್ರತಿಮೆ ಧ್ವಂಸ: ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗ ಖಂಡನೆ
ಮೈಸೂರು

ಡಾ.ಬಾಬು ಜಗಜೀವನ ರಾಂ ಪ್ರತಿಮೆ ಧ್ವಂಸ: ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗ ಖಂಡನೆ

September 3, 2018

ಮೈಸೂರು: ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ ಪ್ರತಿಮೆ ಧ್ವಂಸಗೊಳಿಸಿ ರುವುದನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಬಿ.ಪ್ರಸಾದ್ ಖಂಡಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರು ದಲಿತ ಸಮು ದಾಯದ ಎರಡು ಕಣ್ಣುಗಳಿದ್ದಂತೆ. ಇಂತಹ ಮಹಾನ್ ವ್ಯಕ್ತಿಗಳ ಭಾವಚಿತ್ರಗಳಿಗೆ ಅಪಮಾನ ಮಾಡುವುದು ಹಾಗೂ…

ನಾಳೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ
ಮೈಸೂರು

ನಾಳೆ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ

September 2, 2018

ಮೈಸೂರು: ಶುಕ್ರವಾರ ನಡೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕಾ ಕಾರ್ಯವು ಮೈಸೂರಿನ ಪಡುವಾರಹಳ್ಳಿ ಬಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಹೊಸ ಕಟ್ಟಡದಲ್ಲಿ ಸೆಪ್ಟೆಂಬರ್ 3 ರಂದು ನಡೆಯಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿಗಳು, ಚುನಾವಣಾ ವೀಕ್ಷಕರು ಮತ್ತು ಎಲ್ಲಾ 13 ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂಗಳ ಸೀಲು ತೆಗೆದು ಇವಿಎಂಗಳನ್ನು ಹೊರಗೆ ತೆಗೆಯುವರು. ಪ್ರತೀ ಚುನಾವಣಾಧಿಕಾರಿಗಳ ವ್ಯಾಪ್ತಿಗೆ 5ರಂತೆ ಒಟ್ಟು 65 ಟೇಬಲ್‍ಗೆ ವ್ಯವಸ್ಥೆ ಮಾಡಿದ್ದು, ಪ್ರತೀ ಟೇಬಲ್‍ಗೆ ಮೂವರು…

1 1,410 1,411 1,412 1,413 1,414 1,611
Translate »