ಸಂಪ್ರದಾಯಕ್ಕೆ ಕೊರತೆಯಾಗದಂತೆ ದಸರಾ ಆಚರಣೆ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ
ಮೈಸೂರು

ಸಂಪ್ರದಾಯಕ್ಕೆ ಕೊರತೆಯಾಗದಂತೆ ದಸರಾ ಆಚರಣೆ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ

September 3, 2018

ಹುಣಸೂರು: ವಿಶ್ವ ವಿಖ್ಯಾತ ಜಂಬುಸವಾರಿ ಮೈಸೂರು ದಸರಾಕ್ಕೆ ಕಾಡಂಚಿನ ವೀರನಹೊಸಳ್ಳಿ ಗ್ರಾಮದ ಅರಣ್ಯ ಮುಖ್ಯ ದ್ವಾರದಲ್ಲಿ ಇಂದು ಗಜ ಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಅನೆಗಳನ್ನು ಕರೆದೊಯ್ಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.

ತಾಲೂಕಿನ ನಾಗರಹೊಳೆ ಅರಣ್ಯದ ವೀರನಹೊಸಳ್ಳಿ ಮುಖ್ಯ ದ್ವಾರದಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅನೆಗಳ ಮೊದಲ ತಂಡಕ್ಕೆ ಚಾಲನೆ ನೀಡಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1995ರಲ್ಲಿ ಅರಣ್ಯ ಮಂತ್ರಿ ಹಾಗೂ ಉಸ್ತುವಾರಿ ಮಂತ್ರಿ ಯಾಗಿದ್ದ ಹೆಚ್.ವಿಶ್ವನಾಥ್ ಅವರು ಅರಮನೆಯ ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಅರಣ್ಯಕ್ಕೆ ಬಂದು ಅನೆಗಳನ್ನು ಕರೆದೊಯ್ಯುವ `ಗಜ ಪಯಣ’ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಅವರು ಇಂದಿನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿರುವುದು ವಿಶೇಷವಾಗಿದೆ ಎಂದರು.

ದಸರಾ ಹೈಪವರ್ ಕಮಿಟಿ: ಈ ನಾಡಿನ ದೊರೆ ಕುಮಾರಸ್ವಾಮಿ ಮೈಸೂರಿಗೆ ಬಂದು ವಿಶೇಷವಾಗಿ ದಸರಾ ಹೈಪವರ್ ಕಮಿಟಿ ಸಭೆ ನಡೆಸಿರುವುದು ಇದೇ ಮೊದಲು. ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಅದ್ಧೂರಿಯಾಗಿ ಅಚರಿಸಿ. ನಮಗೆ ದುಡ್ಡಿನ ಕೊರತೆ ಇಲ್ಲ. ಹಣ ಕೋಡುತ್ತೇನೆ. ಅದರೆ ಆಚರಣೆಯಲ್ಲಿ ಸಂಪ್ರದಾಯಕ್ಕೆ ಕೊರತೆಯಾಗ ಬಾರದು ಎಂದರು. ಅದರಂತೆ ಇಂದು ನಡೆದ ಗಜ ಪಯಣ ಕಾರ್ಯಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರು ಪಕ್ಷಗಳು ಸೇರಿ ಪಕ್ಷಾತೀತವಾಗಿ ನಾಡ ಹಬ್ಬವಾಗಿ ಅಚರಿಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ ಎಂದರು.

ರಾಜ-ಮಹಾರಾಜರು ಹಿಂದಿನಿಂದ ನಡೆಸಿಕೊಂಡು ಬಂದ ಸಂಪ್ರಾದಾಯಿಕ ರೀತಿಯಲ್ಲೇ ವಿಶೇಷವಾಗಿ ಅಚರಿಸುವ ದಸರಾ ಕಾರ್ಯಕ್ರಮದಲ್ಲಿ ಹಿರಿಯರು, ಸ್ವಾತಂತ್ರ್ಯ ಹೊರಾಟಗಾರರು, ಸಾಹಿತಿಗಳು, ಕ್ರೀಡಾಪಟುಗಳನ್ನು ತಾಲೂಕು ಮಟ್ಟದಲ್ಲಿ ಕರೆದು ಸನ್ಮಾನಿಸಲಾಗುವುದು ಎಂದರು.

ಅದಿವಾಸಿಗಳಿಂದ ಚಾಲನೆ: ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಚಿತ್ರನಟಿ ಜಯಮಾಲ ಮಾತನಾಡಿ, ಸಮಿಶ್ರ ಸರ್ಕಾರದ ದೊರೆ ಕುಮಾರಣ್ಣನ ಅಡಳಿತ ದಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ಮೈಸೂರು ದಸರಾ ಗಜ ಪಯಣ ಕಾರ್ಯಕ್ರಮಕ್ಕೆ ಅದಿವಾಸಿ ಗಿರಿಜನ ತಾಯಮ್ಮ ಪುಟ್ಟಪ್ಪ ಅವರಿಂದ ಚಾಲನೆ ನೀಡಿರುವುದು ತುಂಬಾ ಶ್ಲಾಘನೀಯ ಎಂದರು.

ನಮ್ಮ ಕಣ್ಮುಂದೆಯೇ ಜಾರಿ ಹೋದ ಕೊಡಗು: ನಾವೆಲ್ಲ ನೋಡಿ ಕುಣಿದು ಬೆಳೆದ ಸುಂದರ ಕೊಡಗು ನಮ್ಮ ಕಣ್ಮುಂದೆಯೇ ಜಾರಿ ಹೋಗಿದೆ. ಅದರ ಸುಂದರ ಸಂಸ್ಕೃತಿ ಪುನರ್ ನಿರ್ಮಿಸಲು ನಾವೆಲ್ಲಾ ಮುಂದಾಗೋಣ. ಇದಕ್ಕಾಗಿ ಎಲ್ಲರೂ ಕೈಜೋಡಿಸಿ ಎಂದರು. ಅನೆಗಳ ರಕ್ಷಣೆ ಮತ್ತು ಪೋಷಣೆ ಜವಾಬ್ದಾರಿ ಹೊತ್ತಿ ರುವ ಮಾವುತರ ಬದುಕು ತೀರಾ ಭಿನ್ನವಾಗಿದ್ದು, ಮಾವುತರ ಬಗ್ಗೆ ಹೆಚ್ಚಿನ ಗಮನ ಹರಿಸಿ, ಅದ್ಯತೆ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಉಸ್ತುವಾರಿ ಮಂತ್ರಿ ಗಳು ಗಮನ ಹರಿಸಬೇಕು ಎಂದರು.

ಗಜ ಪಯಣಕ್ಕೆ ಐಜಿ ಆಗಮನ: ಪ್ರವಾಸೋ ದ್ಯಮ ಮತ್ತು ರೇಷ್ಮೆ ಖಾತೆ ಸಚಿವ ಸಾ.ರಾ. ಮಹೇಶ್ ಮಾತನಾಡಿ, ರಾಜ-ಮಹಾ ರಾಜರ ಕಾಲದಿಂದಲೂ ಅಚರಿ ಸುವ ಜಂಬೂ ಸವಾರಿಗೆ ಅನೆಗಳನ್ನು ಕರೆತರುವುದು ವಾಡಿಕೆ ಇತ್ತು. ಅದರೆ 1995ರಲ್ಲಿ ವಿಜೃಂಭಣೆಯಿಂದ ಅನೆಗಳನ್ನು ಕರೆ ತಂದಿದ್ದು ವಿಶ್ವನಾಥ್ ಮೊದಲಿಗರು. ನಾಡ ದೊರೆ ಕುಮಾರಣ್ಣನ ಅಶಯದಂತೆ ಹಗಲಿರುಳು ದುಡಿದು ವಿಶ್ವ ವಿಖ್ಯಾತ ಜಂಬೂ ಸವಾರಿ ಮೈಸೂರು ದಸರಾಕ್ಕೆ ಕಾಡಂಚಿನ ವೀರನಹೊಸಳ್ಳಿ ಗ್ರಾಮದ ಅರಣ್ಯ ಮುಖ್ಯ ದ್ವಾರದಿಂದ ಅನೆಗಳನ್ನು ಕರೆತರಲು ಈ ಬಾರಿ ರಾಜ್ಯದ ಐಜಿಯವರೇ ಬಂದಿರುವುದು ವಿಶೇಷವಾಗಿದೆ ಎಂದರು.

ರಾಜ್ಯದಾದ್ಯಂತ ವಸ್ತುಪ್ರದರ್ಶನ: ವಸ್ತು ಪ್ರದರ್ಶನವನ್ನು ಉನ್ನತೀಕರಿಸಲು 2003 ರಲ್ಲಿ ಮೈಸೂರು ದಸರಾದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಅದರೆ ಈಗ ವಸ್ತುಪ್ರದರ್ಶನವನ್ನು ಅಭಿವೃದ್ಧಿ ಮತ್ತು ಉನ್ನತೀಕರಿಸಲು ಮೈಸೂರು ದಸರಾದಲ್ಲಿ ಮಾತ್ರವಲ್ಲದೆ ಇಡೀ ರಾಜ್ಯದೆಲ್ಲೆಡೆ ಅವ ಕಾಶ ಕಲ್ಪಿಸಿ ಪ್ರೋತ್ಸಾಹಿಸಿದ್ದಾರೆ ಎಂದರು.

ಭೂ ಮಾಲೀಕರಾದ ಆದಿವಾಸಿಗಳು: ಶಾಸಕ ಹೆಚ್.ವಿಶ್ವನಾಥ್ ಮಾತನಾಡಿ, ದಿವಂಗತ ಅರಸರ ಅಶಯದಂತೆ ಅಭದ್ರತೆಯ ಬದುಕಿನಲ್ಲಿದ್ದ ಅದಿವಾಸಿಗಳಿಗೆ ಬದುಕಿನ ಭದ್ರತೆಯನ್ನು ಒದಗಿಸಿ ಭೂಮಿಯ ಹಕ್ಕು ಪತ್ರ ನೀಡಿ ಭೂಮಾಲಿಕರನ್ನಾಗಿ ಮಾಡಿದ ಹೆಚ್.ಡಿ.ಕುಮಾರಸ್ವಾಮಿಯ ಸಮ್ಮಿಶ್ರ ಸರ್ಕಾರ ಅದಿವಾಸಿಗಳಲ್ಲಿ ಸಂತಸವನ್ನು ತರುವ ಮೂಲಕ ಯಾವುದೇ ಪ್ರತಿಭಟನೆ ಹೋರಾಟ ಗಲಾಟೆ ಗಳಿಲ್ಲದೆ ಸಂತಸದ ಅದ್ಧೂರಿ ಗಜ ಪಯಣ ವನ್ನು ಆಚರಿಸಲಾಗುತ್ತಿದೆ ಎಂದರು.

ಅಧಿಕಾರಿಗಳ ಪರಿಶ್ರಮ: ಉಪ ವಿಭಾಗದ ಸಹಾಯಕ ಅಯುಕ್ತ ಕೆ.ನೀತಿಶ್, ತಹಶೀಲ್ದಾರ್ ಮೋಹನ್ ಕುಮಾರ್, ಸಹಾಯಕ ಭೂ ದಾಖಲೆಗಳ ಅಧಿಕಾರಿ ಮಂಜುನಾಥ್ ಅವರುಗಳ ಹಗಲಿರುಳು ಪರಿಶ್ರಮದಿಂದ ತಾಲೂಕಿನ ಅದಿವಾಸಿ ಗಳಿಗೆ ಬದುಕಿನಲ್ಲಿ ಭದ್ರತೆಯನ್ನು ಒದಗಿಸಲು ಅನುಕೂಲವಾಗಲೆಂದು 741 ಹೆಕ್ಟೇರ್ ಸರ್ಕಾರಿ ಭೂ ಪ್ರದೇಶವನ್ನು 268 ಆದಿವಾಸಿಗಳಿಗೆ ಹಕ್ಕುಪತ್ರ ನೀಡಿ ಸಮಸ್ಯೆಯನ್ನು ತೊಡೆದು ಹಾಕಿದ್ದಾರೆ. ಇದ ರಿಂದ ಈ ಬಾರಿ ಯಾವುದೇ ಗೊಂದಲ, ಗಲಾಟೆಗಳಿಲ್ಲದೆ ಸಂತಸದಿಂದ ಗಜ ಪಯಣವನ್ನು ಅಚರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಶ್ರೀಮತಿ ಅರ್ಪಿತ, ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್, ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಪಿರಿಯಾಪಟ್ಟಣದ ಶಾಸಕ ಕೆ.ಮಹದೇವ್, ಟಿ.ನರಸಿಪುರದ ಶಾಸಕ ಅಶ್ವೀನ್ ಕುಮಾರ್, ನಂಜನಗೂಡು ಶಾಸಕ ಬಿ.ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಮ್, ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮ್‍ಕುಮಾರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪ್ರಭು, ಜಿಪಂ ಸದಸ್ಯ ಎಂ.ಬಿ. ಸುರೇಂದ್ರ, ಕಾಟನಾಯಕ, ನಗರಸಭಾ ಅಧ್ಯಕ್ಷ ಎಂ.ಶಿವಕುಮಾರ್, ಪೌರಾಯುಕ್ತ ಶಿವಪ್ಪನಾಯಕ, ತಾಪಂ ಸದಸ್ಯೆ ಮಂಜುಳಾ ರಾಜೇಗೌಡ, ಪುಷ್ಪಲತಾ ಗಣಪತಿ, ಲತಾ ಶಿವಶೇಖರ್, ಟಿ.ಅರ್.ಶ್ರೀನಿವಾಸ್, ಗ್ರಾಪಂ ಅಧ್ಯಕ್ಷರಾದ ಮಹದೇವಿ, ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಗತ್‍ರಾಮ್, ಸಿಸಿಎಫ್ ಪ್ರಭಾರ ವೆಂಕಟೇಶನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಕಪುರೆ, ಎಪಿಎಂಸಿ ಸದಸ್ಯ ಸುಹಾಸ್, ಡಿವೈ ಎಸ್‍ಪಿ ಸಿ.ಪಿ.ಐ. ಪೂವಯ್ಯ, ತಹಸೀ ಲ್ದಾರ್ ಮೋಹನ್ ಕುಮಾರ್ ತಾಪಂ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಕುಮಾರ್, ಇನ್ನು ಅನೇಕ ಗಣ್ಯರು ಉಪಸ್ಥಿತರಿದ್ದರು.

Translate »