ಮೈಸೂರು

ಶಿಕ್ಷಣದ ಜೊತೆಗೆ ಕ್ರೀಡೆ, ಯೋಗ ರೂಢಿಸಿಕೊಳ್ಳಿ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ
ಮೈಸೂರು

ಶಿಕ್ಷಣದ ಜೊತೆಗೆ ಕ್ರೀಡೆ, ಯೋಗ ರೂಢಿಸಿಕೊಳ್ಳಿ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

September 5, 2018

ಹುಣಸೂರು: ಯುವ ಜನರು ತಮ್ಮ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಕ್ರೀಡೆ ಮತ್ತು ಯೋಗವನ್ನು ಕಡ್ಡಾಯವಾಗಿ ರೂಡಿಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೆಗೌಡರು ತಿಳಿಸಿದರು. ತಾಲೂಕಿನ ಮರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಲಾಸಲೇಟ್ ವಿದ್ಯಾಸಂಸ್ಥೆಯಲ್ಲಿ ಪಿಯು ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾಭ್ಯಾಸದ ಜೊತೆಗೆ ನಾಟಕ, ಕ್ರೀಡೆ, ಯೋಗ ಅಭ್ಯಾಸಗಳನ್ನು ಮೈಗೂಡಿಸಿ ಕೊಂಡರೆ ಉತ್ತಮ ಆರೋಗ್ಯ ಲಭಿಸುವುದು ಎಂದರು. ಪ್ರಸ್ತುತ ದಿನಗಳಲ್ಲಿ ಶೆ.80ರಷ್ಟು ನೀರುದ್ಯೋಗಿಗಳಿದ್ದು ಯುವ ಶಕ್ತಿಗೆ…

ಪಕ್ಷೇತರರ ಸಹಕಾರದಿಂದ ಕಾಂಗ್ರೆಸ್‍ಗೆ ಅಧಿಕಾರ: ತಿ.ನರಸೀಪುರದಲ್ಲಿ ಸಂಸದ ಧ್ರುವನಾರಾಯಣ್ ವಿಶ್ವಾಸ
ಮೈಸೂರು

ಪಕ್ಷೇತರರ ಸಹಕಾರದಿಂದ ಕಾಂಗ್ರೆಸ್‍ಗೆ ಅಧಿಕಾರ: ತಿ.ನರಸೀಪುರದಲ್ಲಿ ಸಂಸದ ಧ್ರುವನಾರಾಯಣ್ ವಿಶ್ವಾಸ

September 5, 2018

ತಿ.ನರಸೀಪುರ: ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಅಲ್ಪಮಟ್ಟದ ಹಿನ್ನೆಡೆಯಾಗಿರುವುದರಿಂದ ಪಕ್ಷೇತರರ ಬೆಂಬಲ ಪಡೆದು ಪುರಸಭೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡುವುದಾಗಿ ಸಂಸದ ಆರ್.ಧ್ರುವನಾರಾಯಣ ಹೇಳಿದರು. ಪಟ್ಟಣದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಪುರಸಭಾ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಪರಿವರ್ತಿತ ಪುರಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿಯನ್ನು ನಿರೀಕ್ಷಿಸಿರಲಿಲ್ಲ. 23 ವಾರ್ಡುಗಳಲ್ಲಿ 10ರಲ್ಲಿ ಕಾಂಗ್ರೆಸ್ ಗೆದ್ದಿದ್ದು, ಅಧಿಕಾರ ಹಿಡಿಯಲು ಮೂವರು ಸದಸ್ಯರ ಬೆಂಬಲ ಬೇಕಿರುವುದರಿಂದ ಪಕ್ಷೇತರರ ಸಹಕಾರ ಪಡೆದುಕೊಳ್ಳಲಾಗುವುದು ಎಂದರು. ಹಿಂದಿನ ಸರ್ಕಾರದ ಅವಧಿಯಲ್ಲಿ…

ಸಾಹಿತಿ, ಚಿಂತಕರನ್ನು ಬಂಧಿಸಿ ದೇಶ ದ್ರೋಹಿಗಳಂತೆ ಕಾಣುತ್ತಿರುವುದು ಸರಿಯಲ್ಲ-ವಿಶ್ವನಾಥ್
ಮೈಸೂರು

ಸಾಹಿತಿ, ಚಿಂತಕರನ್ನು ಬಂಧಿಸಿ ದೇಶ ದ್ರೋಹಿಗಳಂತೆ ಕಾಣುತ್ತಿರುವುದು ಸರಿಯಲ್ಲ-ವಿಶ್ವನಾಥ್

September 5, 2018

ಹುಣಸೂರು: ಸಾಹಿತಿಗಳನ್ನು ಚಿಂತಕರನ್ನು ಬಂಧಿಸಿ ದೇಶದ್ರೋಹಿಗಳಂತೆ ನಡೆಸಿಕೊಳ್ಳುತ್ತಿರುವುದು ಕೇಂದ್ರ ಸರ್ಕಾರಕ್ಕೆ ಶೋಭಾಯಮಾನವಲ್ಲ ಒಬ್ಬ ಸಾಹಿತಿಯಾಗಿ ಮತ್ತು ಬರಹಗಾರನಾಗಿ ಕೇಂದ್ರದ ಕ್ರಮವನ್ನು ಖಂಡಿಸುತ್ತೇನೆ ಎಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದರು. ಇಂದು ಸಂಜೆ ಪ್ರೆಸ್‍ಕ್ಲಬ್‍ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತಿಗಳು ಬರಹಗಾರರು, ಚಿಂತಕರು, ಮಾಧ್ಯಮಗಳಲ್ಲಿ ಬರೆಯುವವರನ್ನು ಪಟ್ಟಿ ಮಾಡುತ್ತಿದ್ದೀರಿ. ಈ ಬೆಳವಣಿಗೆಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಇಣುಕಿ ನೋಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ಆತಂಕ ವ್ಯಕ್ತಪಡಿಸಿದರು.ಈ ಪ್ರಸ್ತುತ ವ್ಯವಸ್ಥೆಯ ವಿರುದ್ಧ ಹೋರಾಡಲು ಸಾಹಿತ್ಯ ಕ್ಷೇತ್ರದ ಸಾಹಿತಿಗಳು, ಚಿಂತಕರು, ಬರಹಗಾರರು,…

ಮೈಸೂರು ನಗರ ಪಾಲಿಕೆ ಮತ್ತೆ `ಅತಂತ್ರ’
ಮೈಸೂರು

ಮೈಸೂರು ನಗರ ಪಾಲಿಕೆ ಮತ್ತೆ `ಅತಂತ್ರ’

September 4, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮತ್ತೆ ಅತಂತ್ರ ಪರಿಸ್ಥಿತಿಗೆ ಗುರಿಯಾಗಿದೆ. ಪಾಲಿಕೆಯ 65 ವಾರ್ಡ್‌ಗಳ ಪೈಕಿ ಬಿಜೆಪಿ 22 ಸ್ಥಾನ ಗಳಿಸಿದೆಯಾದರೂ, ಮೈಸೂರು ಪಾಲಿಕೆ ಅಧಿಕಾರ ಹಿಡಿಯಲಾಗದ ಪರಿಸ್ಥಿತಿ ಉಂಟಾಗಿದ್ದು, ಮೈತ್ರಿ ಮುಂದು ವರೆಯಬೇಕಾದ ಅನಿವಾರ್ಯತೆ ಇದೆ. 22 ವಾರ್ಡ್‍ಗಳಲ್ಲಿ ಬಿಜೆಪಿ, 19ರಲ್ಲಿ ಕಾಂಗ್ರೆಸ್, 18ರಲ್ಲಿ ಜೆಡಿಎಸ್ ಅಭ್ಯರ್ಥಿ ಗಳು ಜಯಭೇರಿ ಬಾರಿಸಿದ್ದಾರೆ. ಉಳಿದಂತೆ ಐವರು ಪಕ್ಷೇತರರು ಹಾಗೂ ಓರ್ವ ಬಿಎಸ್‍ಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಾಗಾಗಿ ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ಇಲ್ಲ. ಮೈತ್ರಿ ಆಡಳಿತ…

ಐಎಎಸ್ ಕನಸು ಕಂಡಿದ್ದ ಯುವಕ ಈಗ ಅತೀ ಕಿರಿಯ ಕಾರ್ಪೊರೇಟರ್!
ಮೈಸೂರು

ಐಎಎಸ್ ಕನಸು ಕಂಡಿದ್ದ ಯುವಕ ಈಗ ಅತೀ ಕಿರಿಯ ಕಾರ್ಪೊರೇಟರ್!

September 4, 2018

ಮೈಸೂರು: ಐಎಎಸ್ ಅಧಿಕಾರಿಯಾಗಿ ಜನರ ಸೇವೆ ಮಾಡಬೇಕೆಂದು ಕನಸು ಕಂಡಿದ್ದ ಈ ಯುವಕ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ, ಪ್ರಥಮ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದಲ್ಲದೆ, ಮೈಸೂರು ನಗರಪಾಲಿಕೆ ಇತಿಹಾಸದಲ್ಲೇ ಅತೀ ಕಿರಿಯ ವಯಸ್ಸಿನ ಕಾರ್ಪೊರೇಟರ್ ದಾಖಲೆಯನ್ನು ನಿರ್ಮಿಸಿದ್ದಾರೆ. ನಗರಪಾಲಿಕೆಯ ಸಾತಗಳ್ಳಿ ಬಡಾವಣೆ ಒಂದನೇ ಹಂತದ 35ನೇ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಸಾತ್ವಿಕ್ ಸಂದೇಶ್‍ಸ್ವಾಮಿ ಗೆಲುವಿನ ನಗೆ ಬೀರಿದ್ದಾರೆ. ಎಸ್.ಸಾತ್ವಿಕ್ ನಗರಪಾಲಿಕೆಯ ಅತೀ ಕಿರಿಯ ಕಾರ್ಪೊರೇಟರ್.ಇವರ ದೊಡ್ಡಪ್ಪ ಸಂದೇಶ್ ನಾಗರಾಜ್ ವಿಧಾನಪರಿಷತ್ ಸದಸ್ಯರು. ಇನ್ನು ತಂದೆ…

ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಭಾರೀ ದರೋಡೆ
ಮೈಸೂರು

ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಭಾರೀ ದರೋಡೆ

September 4, 2018

ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗೇಟ್‍ನಲ್ಲಿರುವ ಕಾವೇರಿ ಗ್ರಾಮೀಣ ಕಲ್ಪತರು ಬ್ಯಾಂಕ್ ಕ್ಯಾತನಹಳ್ಳಿ ಶಾಖೆಯ ಕಿಟಕಿ ಸರಳು ತುಂಡರಿಸಿ, ಸುಮಾರು 12 ಕೆಜಿ ಚಿನ್ನಾಭರಣ ಹಾಗೂ 6 ಲಕ್ಷ ರೂ. ನಗದನ್ನು ದೋಚಲಾಗಿದೆ. ಶನಿವಾರ ಅಥವಾ ಭಾನುವಾರ ತಡರಾತ್ರಿ ಸ್ಟೇರ್ ಕೇಸ್ ಕೆಳಭಾಗದಲ್ಲಿರುವ ಕಿಟಕಿಯ ಸರಳನ್ನು ಕತ್ತರಿಸಿ, ಒಳನುಗ್ಗಿರುವ ಖದೀಮರು, ಗ್ಯಾಸ್ ಕಟರ್ ಮೂಲಕ ಲಾಕರ್ ಮುರಿದು, ಅದರಲ್ಲಿದ್ದ 12 ಕೆಜಿ ಚಿನ್ನಾಭರಣ ಹಾಗೂ 6 ಲಕ್ಷ ರೂ. ನಗದನ್ನು ದೋಚಿ, ಪರಾರಿಯಾಗಿದ್ದಾರೆ. ಸೋಮವಾರ ಬ್ಯಾಂಕ್ ಬಾಗಿಲು…

ಎನ್.ಆರ್.ಕ್ಷೇತ್ರದ 23 ವಾರ್ಡ್ ಪೈಕಿ 13ರಲ್ಲಿ ಕಾಂಗ್ರೆಸ್ ಜಯಭೇರಿ
ಮೈಸೂರು

ಎನ್.ಆರ್.ಕ್ಷೇತ್ರದ 23 ವಾರ್ಡ್ ಪೈಕಿ 13ರಲ್ಲಿ ಕಾಂಗ್ರೆಸ್ ಜಯಭೇರಿ

September 4, 2018

ಮೈಸೂರು: ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪ್ರತಿನಿಧಿಸುವ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‍ಗಳ ಪೈಕಿ ಕಾಂಗ್ರೆಸ್ 13 ಸ್ಥಾನ ಗಳನ್ನು ಪಡೆಯುವ ಮೂಲಕ ಈ ಕ್ಷೇತ್ರ ದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಾಂಗ್ರೆಸ್ 13 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದರೆ, 6 ವಾರ್ಡ್‍ಗಳಲ್ಲಿ ಜಾತ್ಯತೀತ ಜನತಾದಳ, 3ರಲ್ಲಿ ಬಿಜೆಪಿ ಹಾಗೂ ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಗೆಲುವು ದಾಖಲಿಸಿದ ವಾರ್ಡ್‍ಗಳೆಂದರೆ, 8ನೇ ವಾರ್ಡ್ (ಬನ್ನಿ ಮಂಟಪ ಹುಡ್ಕೋ…

ಮೈಸೂರು ಮೇಯರ್ ಸಾಮಾನ್ಯ ಮಹಿಳೆ, ಉಪಮೇಯರ್ ಬಿಸಿಎಗೆ ಮೀಸಲು
ಮೈಸೂರು

ಮೈಸೂರು ಮೇಯರ್ ಸಾಮಾನ್ಯ ಮಹಿಳೆ, ಉಪಮೇಯರ್ ಬಿಸಿಎಗೆ ಮೀಸಲು

September 4, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ‘ಎ’ ವರ್ಗಕ್ಕೆ ಮೀಸಲಾತಿ ನಿಗದಿ ಪಡಿಸಿ ಸರ್ಕಾರ ಇಂದು ಆದೇಶ ಹೊರಡಿಸಿದೆ. ಅತಂತ್ರ ಫಲಿತಾಂಶ ಹೊಂದಿರುವ ಮೈಸೂರು ನಗರಪಾಲಿಕೆ ಗದ್ದುಗೆ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ 7 ಹಾಗೂ ಜೆಡಿಎಸ್‍ನಲ್ಲಿ 11 ಮಹಿಳೆಯರು ಅರ್ಹರಾಗಿದ್ದು, ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಓರ್ವ ಮಹಿಳೆ ಸೇರಿ 6 ಮಂದಿ ಹಾಗೂ ಜೆಡಿಎಸ್‍ನಲ್ಲಿ ಇಬ್ಬರು…

3522 ಮತದಾರರಿಗೆ ಯಾವ ಅಭ್ಯರ್ಥಿಯೂ ಇಷ್ಟವಾಗಿಲ್ಲವಂತೆ!
ಮೈಸೂರು

3522 ಮತದಾರರಿಗೆ ಯಾವ ಅಭ್ಯರ್ಥಿಯೂ ಇಷ್ಟವಾಗಿಲ್ಲವಂತೆ!

September 4, 2018

ಮೈಸೂರು: ಮೈಸೂರು ಮಹಾನಗರಪಾಲಿಕೆಯ 65 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದ 393 ಅಭ್ಯರ್ಥಿಗಳಲ್ಲಿ 3522 ಮತದಾರರಿಗೆ ಯಾವ ಅಭ್ಯರ್ಥಿಯೂ ಇಷ್ಟವಾಗಿಲ್ಲವಂತೆ. ಹೌದು, ಪಾಲಿಕೆ ಚುನಾವಣೆಯಲ್ಲಿ ಶೇ.0.89ರಷ್ಟು ಮತದಾರರು ತಮಗೆ ಯಾರೂ ಇಷ್ಟವಾಗಿಲ್ಲ ಎಂದು ನೋಟಾ ದಾಖಲಿಸಿದ್ದಾರೆ. 65 ವಾರ್ಡ್‍ಗಳಲ್ಲಿ ಚಲಾಯಿತ 3,99,428 ಮತಗಳ ಪೈಕಿ 3522 ಮಂದಿ ಮತದಾರರು ಚುನಾವಣೆಯಲ್ಲಿ ಸ್ಪರ್ಧಿಸಿದ್ದ 393 ಅಭ್ಯರ್ಥಿಗಳ ಪೈಕಿ ನಮಗೆ ಯಾರೊಬ್ಬರೂ ಇಷ್ಟವಾಗಿಲ್ಲ ಎಂದು ನೋಟಾ ಮೂಲಕ ತಿರಸ್ಕರಿಸಿದ್ದಾರೆ.

ಚಾಮುಂಡೇಶ್ವರಿಯ 3ರಲ್ಲಿ ಬಿಜೆಪಿಗೆ 2, ಜೆಡಿಎಸ್ 1ರಲ್ಲಿ ಗೆಲುವು
ಮೈಸೂರು

ಚಾಮುಂಡೇಶ್ವರಿಯ 3ರಲ್ಲಿ ಬಿಜೆಪಿಗೆ 2, ಜೆಡಿಎಸ್ 1ರಲ್ಲಿ ಗೆಲುವು

September 4, 2018

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ಮಹಾನಗರ ಪಾಲಿಕೆಯ ಮೂರು ವಾರ್ಡ್‍ಗಳಲ್ಲಿ ಬಿಜೆಪಿ 2 ಹಾಗೂ ಜೆಡಿಎಸ್ 1ರಲ್ಲಿ ಗೆಲುವು ಸಾಧಿಸಿದ್ದರೆ, ಇಲ್ಲಿ ಕಾಂಗ್ರೆಸ್ ಖಾತೆಯನ್ನೇ ತೆರೆದಿಲ್ಲ. ವಾರ್ಡ್ 44ರಲ್ಲಿ (ಜನತಾನಗರ) ಜೆಡಿಎಸ್‍ನ ಸವಿತಾ ಸುರೇಶ್ ಜಯ ಗಳಿಸಿದ್ದರೆ, ವಾರ್ಡ್ 46ರಲ್ಲಿ (ದಟ್ಟಗಳ್ಳಿ) ಬಿಜೆಪಿಯ ಎಂ.ಲಕ್ಷ್ಮಿ ಹಾಗೂ ವಾರ್ಡ್ 58ರಲ್ಲಿ (ರಾಮಕೃಷ್ಣನಗರ) ಬಿಜೆಪಿಯ ಆರ್.ಕೆ.ಶರತ್‍ಕುಮಾರ್ ಗೆಲುವು ಸಾಧಿಸಿದ್ದಾರೆ. ವಾರ್ಡ್ 44ರಲ್ಲಿ 2701 ಮತಗಳನ್ನು ಪಡೆದ ಜೆಡಿಎಸ್‍ನ ಸವಿತಾ ಸುರೇಶ್ 115 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ….

1 1,408 1,409 1,410 1,411 1,412 1,611
Translate »