ಮೈಸೂರು

ದಸರಾ ಗಜಪಡೆ ಮೊದಲ ತಂಡ ಅರಮನೆ ಆವರಣ ಪ್ರವೇಶ
ಮೈಸೂರು

ದಸರಾ ಗಜಪಡೆ ಮೊದಲ ತಂಡ ಅರಮನೆ ಆವರಣ ಪ್ರವೇಶ

September 6, 2018

ಮೈಸೂರು: ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಅರ್ಜುನ ನೇತೃತ್ವದ ಗಜಪಡೆಯ ಮೊದಲ ತಂಡವನ್ನು ಅರಮನೆ ಆವರಣದಲ್ಲಿ ಸಾಂಪ್ರದಾಯಿಕವಾಗಿ ಬುಧವಾರ ಸ್ವಾಗತಿಸಲಾಯಿತು. ಸೆಪ್ಟೆಂಬರ್ 2ರಂದು ವೀರನಹೊಸಹಳ್ಳಿಯಿಂದ ಬಂದು ಅಶೋಕಪುರಂನ ಅರಣ್ಯ ಭವನದಲ್ಲಿ ತಂಗಿದ್ದ ಗಜಪಡೆಯನ್ನು ಅರಮನೆ ಜಯಮಾರ್ತಾಂಡ ದ್ವಾರದ ಬಳಿ ಮೈಸೂರು ಜಿಲ್ಲಾ ಉಸ್ತುವಾರಿ ಜಿ.ಟಿ. ದೇವೇಗೌಡ, ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು. ಈ ವೇಳೆ ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ಜೆಡಿಎಸ್ ರಾಜ್ಯಾದ್ಯಕ್ಷ ಅಡಗೂರು…

ಮೈತ್ರಿ ಸರ್ಕಾರ ಉಳಿಸಲು ಜಾರಕಿಹೊಳಿ ಕುಟುಂಬದೊಂದಿಗೆ ಡಿಕೆಶಿ ರಾಜೀಯತ್ನ
ಮೈಸೂರು

ಮೈತ್ರಿ ಸರ್ಕಾರ ಉಳಿಸಲು ಜಾರಕಿಹೊಳಿ ಕುಟುಂಬದೊಂದಿಗೆ ಡಿಕೆಶಿ ರಾಜೀಯತ್ನ

September 6, 2018

ಬೆಂಗಳೂರು:  ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉಳಿಸುವ ಉದ್ದೇಶದಿಂದ ಸಚಿವ ಡಿ.ಕೆ. ಶಿವಕುಮಾರ್, ಜಾರಕಿಹೊಳಿ ಕುಟುಂಬದೊಟ್ಟಿಗಿದ್ದ ಮನಸ್ತಾಪ ಬಗೆಹರಿಸಿ ಕೊಳ್ಳಲು ಮುಂದಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಶಿವಕುಮಾರ್ ಹಸ್ತ ಕ್ಷೇಪ ಮಾಡುತ್ತಿದ್ದಾರೆ ಎಂಬ ಏಕೈಕ ಉದ್ದೇಶ ದಿಂದ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿ ಹೊಳಿ ಮತ್ತು ಅವರ ಸಹೋದರರು ಬಿಜೆಪಿ ಜೊತೆ ಕೈಜೋಡಿಸಿ ಕುಮಾರಸ್ವಾಮಿ ಸರ್ಕಾರವನ್ನೇ ಉರುಳಿಸಲು ಕಾರ್ಯತಂತ್ರ ರೂಪಿಸಿದ್ದರು. ಎಷ್ಟರ ಮಟ್ಟಿಗೆ ಎಂದರೆ ತಮ್ಮ ಬೇಡ ಸಮುದಾಯದಿಂದ ಪಕ್ಷದಲ್ಲೇ ಆಯ್ಕೆಗೊಂಡಿರುವ ಎಲ್ಲಾ…

ಮೈಸೂರು ಮೇಯರ್ ಸ್ಥಾನ ಜೆಡಿಎಸ್‍ಗೆ ದಕ್ಕುವ ಸಾಧ್ಯತೆ: ಕಾಂಗ್ರೆಸ್‍ಗೆ ಬೆಂಗಳೂರು, ತುಮಕೂರು ಪಾಲಿಕೆ ಬಿಟ್ಟು ಮೈಸೂರು ಉಳಿಸಿಕೊಳ್ಳಲು ಜೆಡಿಎಸ್ ತಂತ್ರಗಾರಿಕೆ
ಮೈಸೂರು

ಮೈಸೂರು ಮೇಯರ್ ಸ್ಥಾನ ಜೆಡಿಎಸ್‍ಗೆ ದಕ್ಕುವ ಸಾಧ್ಯತೆ: ಕಾಂಗ್ರೆಸ್‍ಗೆ ಬೆಂಗಳೂರು, ತುಮಕೂರು ಪಾಲಿಕೆ ಬಿಟ್ಟು ಮೈಸೂರು ಉಳಿಸಿಕೊಳ್ಳಲು ಜೆಡಿಎಸ್ ತಂತ್ರಗಾರಿಕೆ

September 6, 2018

ಮೈಸೂರು: ಅತಂತ್ರ ಸ್ಥಿತಿಯನ್ನೇ ದಾಳವಾಗಿರಿಸಿಕೊಂಡಿರುವ ಜಾತ್ಯಾತೀತ ಜನತಾದಳ ಹೇಗಾದರೂ ಮಾಡಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮತ್ತೆ ಮೇಯರ್ ಸ್ಥಾನ ಗಿಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಚುನಾವಣಾ ಫಲಿತಾಂಶ ಹೊರ ಬೀಳುತ್ತಿ ದ್ದಂತೆಯೇ ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಾಬಲ್ಯ ಹೊಂದಿರುವ ಜೆಡಿಎಸ್ ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ನೊಂದಿಗೆ ಕೈಜೋಡಿಸುವುದು ಅನಿವಾರ್ಯ ಎಂಬುದು ಖಚಿತವಾಗುತ್ತಿದ್ದಂತೆಯೇ ಮೇಯರ್ ಸ್ಥಾನ ಕೈ ತಪ್ಪದಂತೆ ಎಚ್ಚರ ವಹಿಸಿ ರಣತಂತ್ರ ರೂಪಿಸುತ್ತಿದೆ. ಅತಂತ್ರವಾಗಿರುವ ತುಮಕೂರು ಮಹಾನಗರ ಪಾಲಿಕೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಮುಂದಾಗಿದ್ದು, ಬಿಜೆಪಿಯನ್ನು ಅಧಿಕಾರದಿಂದ ದೂರ…

ಶಿಕ್ಷಕರ ದಿನಾಚರಣೆ: ಮೈಸೂರು ಜಿಲ್ಲೆ 26 ಪ್ರತಿಭಾನ್ವಿತ ಶಿಕ್ಷಕರಿಗೆ `ಉತ್ತಮ ಶಿಕ್ಷಕ’ ಪ್ರಶಸ್ತಿ
ಮೈಸೂರು

ಶಿಕ್ಷಕರ ದಿನಾಚರಣೆ: ಮೈಸೂರು ಜಿಲ್ಲೆ 26 ಪ್ರತಿಭಾನ್ವಿತ ಶಿಕ್ಷಕರಿಗೆ `ಉತ್ತಮ ಶಿಕ್ಷಕ’ ಪ್ರಶಸ್ತಿ

September 6, 2018

ಮೈಸೂರು: ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಕಿರಿಯ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ 26 ಪ್ರತಿಭಾವಂತ ಶಿಕ್ಷಕರಿಗೆ ಜಿಲ್ಲಾ ಮಟ್ಟದ `ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಪ್ರದಾನ ಮಾಡಿದರು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಕರ ಮತ್ತು ಮಕ್ಕಳ ಕಲ್ಯಾಣ ನಿಧಿ ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಡಾ. ಎಸ್.ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗ ವಾಗಿ 26…

ವಿಜಯಶ್ರೀಪುರ ನಿವಾಸಿಗಳಿಗೆ ಮತ್ತೆ ಸಂಕಷ್ಟ
ಮೈಸೂರು

ವಿಜಯಶ್ರೀಪುರ ನಿವಾಸಿಗಳಿಗೆ ಮತ್ತೆ ಸಂಕಷ್ಟ

September 6, 2018

ಮೈಸೂರು: ಮೈಸೂರಿನ ವಿವಾದಿತ ವಿಜಯಶ್ರೀಪುರ ಬಡಾವಣೆಯಲ್ಲಿ ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸಬೇಕೆಂಬ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಬೇಕೆಂದು ಅಲ್ಲಿನ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯನ್ನು ಇಂದು ಹೈಕೋರ್ಟ್ ವಜಾ ಮಾಡಿದ್ದು, ವಿಜಯಶ್ರೀಪುರ ಬಡಾವಣೆ ನಿವಾಸಿಗಳಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಹಿನ್ನೆಲೆ: ರಾಜ್ಯ ಸರ್ಕಾರವು 1988 ರಲ್ಲಿ ರಾಜ ವಂಶಸ್ಥರಿಗೆ ಸೇರಿದ 94.28 ಎಕರೆ ಭೂಮಿಯನ್ನು ವಶಪಡಿಸಿ ಕೊಂಡಿತ್ತು. ಅದರಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠಕ್ಕೆ ಭೂಮಿ ಮಂಜೂರು ಮಾಡಲಾಗಿದೆ. ಅದೇ ವೇಳೆ 23 ಎಕರೆ ಪ್ರದೇಶದಲ್ಲಿ ವಿಜಯಶ್ರೀಪುರ ಬಡಾವಣೆ ತಲೆ ಎತ್ತಿ, ಅಲ್ಲಿ ನೂರಾರು…

ಮೈಸೂರಲ್ಲಿ ರಾಷ್ಟ್ರಮಟ್ಟದ ಬ್ರಿಡ್ಜ್ ಚಾಂಪಿಯನ್‍ಷಿಪ್ ಪಂದ್ಯಾವಳಿ ಆರಂಭ
ಮೈಸೂರು

ಮೈಸೂರಲ್ಲಿ ರಾಷ್ಟ್ರಮಟ್ಟದ ಬ್ರಿಡ್ಜ್ ಚಾಂಪಿಯನ್‍ಷಿಪ್ ಪಂದ್ಯಾವಳಿ ಆರಂಭ

September 6, 2018

ಮೈಸೂರು:  ಚತುರತೆ ಹಾಗೂ ಕ್ಷೀಪ್ರ ಗತಿಯ ವಿಶ್ಲೇಷಣಾ ಮನೋಭಾವ ಆಪೇಕ್ಷಿಸುವ ಆಟವೆಂದೇ ಹೆಸರಾಗಿರುವ `ಬ್ರಿಡ್ಜ್ ಗೇಮ್’ನ ‘ರಾಷ್ಟ್ರ ಮಟ್ಟದ ಅಂತರ ರಾಜ್ಯ ಬ್ರಿಡ್ಜ್ ಚಾಂಪಿಯನ್ ಷಿಪ್’ ಪಂದ್ಯಾವಳಿ ಮೈಸೂರಿನಲ್ಲಿ ಇಂದಿನಿಂದ ಆರಂಭವಾಗಿದೆ. ಇದೇ ಮೊಟ್ಟ ಮೊದಲ ಬಾರಿ ಮೈಸೂರಿನಲ್ಲಿ ಏರ್ಪಡಿಸಿರುವ ಮೆಗಾ ಪಂದ್ಯಾವಳಿ ಇದಾಗಿದೆ. ದೇಶದ ವಿವಿಧ ರಾಜ್ಯಗಳ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಬ್ರಿಡ್ಜ್ ಗೇಮ್ ಪಟುಗಳು ಸೇರಿದಂತೆ 200ಕ್ಕೂ ಹೆಚ್ಚು ಬ್ರಿಡ್ಜ್ ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್‍ನಲ್ಲಿ (ಜೆಡಬ್ಲ್ಯೂಜಿಸಿ)…

ಮೈಸೂರು ಅರಮನೆ ಅಂದ ಸವಿದ ರಾಜ್ಯಪಾಲ ವಜುಭಾಯ್ ರೂಢಾವಾಲಾ
ಮೈಸೂರು

ಮೈಸೂರು ಅರಮನೆ ಅಂದ ಸವಿದ ರಾಜ್ಯಪಾಲ ವಜುಭಾಯ್ ರೂಢಾವಾಲಾ

September 6, 2018

ಮೈಸೂರು: ಎರಡು ದಿನದಿಂದ ಮೈಸೂರು ಪ್ರವಾಸದಲ್ಲಿರುವ ರಾಜ್ಯಪಾಲ ವಿ.ಆರ್.ವಾಲಾ ಅವರು, ಇಂದು ಮಗ-ಸೊಸೆ ಸಮೇತ ಮೈಸೂರು ಅರಮನೆಗೆ ಭೇಟಿ ನೀಡಿ, ವೀಕ್ಷಿಸಿದರು. ಮಂಗಳವಾರವಷ್ಟೇ ಬಂಡೀಪುರ, ನಾಗರಹೊಳೆ ಪ್ರವಾಸ ಕೈಗೊಂಡಿದ್ದ ರಾಜ್ಯಪಾಲರು, ಇಂದು ಮೈಸೂರು ಅರಮನೆಗೆ ಭೇಟಿ ನೀಡಿ, ಇಲ್ಲಿನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಅಲ್ಲದೆ, ವೀಕ್ಷಕರ ಗ್ಯಾಲರಿಯಲ್ಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಕಂಡು ಪುಳಕಿತರಾಗಿದ್ದಾರೆ. ಈ ಬಗ್ಗೆ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರಿಂದ ಮಾಹಿತಿ ಪಡೆದ ಅವರು, ಅರಮನೆ ನಿರ್ವಹಣೆ ಬಗ್ಗೆ…

ಆಯುಷ್ಮಾನ್ ಭಾರತ ಸಂಬಂಧ ಸಚಿವ ಸಂಪುಟದಲ್ಲಿ ನಿರ್ಧಾರ
ಮೈಸೂರು

ಆಯುಷ್ಮಾನ್ ಭಾರತ ಸಂಬಂಧ ಸಚಿವ ಸಂಪುಟದಲ್ಲಿ ನಿರ್ಧಾರ

September 6, 2018

ಬೆಂಗಳೂರು: ಕೇಂದ್ರ ಸರ್ಕಾರ ಪ್ರಕಟಿಸಿರುವ ‘ಆಯುಷ್ಮಾನ್ ಭಾರತ ‘ ಕಾರ್ಯ ಕ್ರಮ ಹಾಗೂ ರಾಜ್ಯ ಸರ್ಕಾರದ ‘ಆರೋಗ್ಯ ಕರ್ನಾಟಕ’ ಯೋಜನೆ ಯನ್ನು ವಿಲೀನಗೊಳಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ‘ಆಯುಷ್ಮಾನ್ ಭಾರತ’ ಯೋಜನೆಯ ಹಲವಾರು ಲೋಪದೋಷಗಳ ಬಗ್ಗೆ ರಾಜ್ಯ ಸರ್ಕಾರ ಕೋರಿದ ಮಾಹಿತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ರಾಜ್ಯ ಸರ್ಕಾರದ ವಿವಿಧ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವೈದ್ಯಕೀಯ ಸಂಘಟನೆಗಳ ಮುಖ್ಯಸ್ಥರೊಂದಿಗೆ ಇಂದು ಚರ್ಚಿಸಿ ಅವರ…

ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕರ ಅಹೋರಾತ್ರಿ ಧರಣಿ ಮುಂದುವರಿಕೆ
ಮೈಸೂರು

ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕರ ಅಹೋರಾತ್ರಿ ಧರಣಿ ಮುಂದುವರಿಕೆ

September 6, 2018

ಮೈಸೂರು: ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕರು ತಮ್ಮ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿ ಭಟನೆಯನ್ನು ಮುಂದುವರೆಸಿದ್ದಾರೆ. ಕನಿಷ್ಠ ಕೂಲಿ, ಇಪಿಎಫ್ ಹಾಗೂ ಆರೋಗ್ಯ ವಿಮಾ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಿಶ್ವವಿದ್ಯಾನಿಲಯಗಳ ಸ್ವಚ್ಛತಾ ಕಾರ್ಯ ನೌಕರರ ಸಂಘದ (ರಾಜ್ಯ ಸಮಿತಿ) ಆಶ್ರಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಿಳಾ ಪೌರಕಾರ್ಮಿಕರು ಮೈಸೂರು ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಬಳಿಯ ಮುಖ್ಯದ್ವಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ 10.30ರ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮೈಸೂರು ವಿವಿ ಪ್ರಭಾರ ಕುಲಪತಿ…

ಜನತಾ ದರ್ಶನದಲ್ಲಿ ಅಹವಾಲು ಸಲ್ಲಿಸಿದ್ದ ಮಹಿಳೆ: ಕೂಡಲೇ ಮನೆ ಒತ್ತುವರಿ ತೆರವು
ಮೈಸೂರು

ಜನತಾ ದರ್ಶನದಲ್ಲಿ ಅಹವಾಲು ಸಲ್ಲಿಸಿದ್ದ ಮಹಿಳೆ: ಕೂಡಲೇ ಮನೆ ಒತ್ತುವರಿ ತೆರವು

September 6, 2018

ಬೆಂಗಳೂರು: ಜನತಾ ದರ್ಶನದಲ್ಲಿ ಮನೆ ಕಳೆದುಕೊಂಡು ದುಗುಡದಿಂದ ಬಂದಿದ್ದ ಗಿರಿನಗರದ ಕನ್ನಿಯಮ್ಮ ಇಂದು ಮಂದಹಾಸ ಬೀರುತ್ತಿದ್ದರು. ಪತಿ ಮಾಡಿದ ಕೈಸಾಲ ಪ್ರಾಮಾಣಿಕವಾಗಿ ತೀರಿಸುತ್ತಾ ಬಂದಿದ್ದರೂ ಊರಲ್ಲಿ ಇಲ್ಲದ ಸಂದರ್ಭದಲ್ಲಿ ಸಾಲ ಕೊಟ್ಟ ವ್ಯಕ್ತಿ ಆಕೆಯ ಮನೆಯ ಬೀಗ ಒಡೆದು ಮನೆಯನ್ನು ಸ್ವಾಧೀನ ಪಡಿಸಿಕೊಂಡು, ಅಕ್ರಮವಾಗಿ ಮತ್ತೊಬ್ಬರಿಗೆ ಬಾಡಿಗೆ ಕೊಟ್ಟಿದ್ದರು. ಸೆಪ್ಟೆಂಬರ್1 ರಂದು ನಡೆದ ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳ ಬಳಿ ಮನೆ ವಾಪಸ್ ಕೊಡಿಸುವಂತೆ ಕನ್ನಿಯಮ್ಮ ಅಹವಾಲು ಸಲ್ಲಿಸಿದ್ದರು. ಕೂಡಲೇ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ಕರೆ ಮಾಡಿ…

1 1,406 1,407 1,408 1,409 1,410 1,611
Translate »