ಮೈಸೂರಲ್ಲಿ ರಾಷ್ಟ್ರಮಟ್ಟದ ಬ್ರಿಡ್ಜ್ ಚಾಂಪಿಯನ್‍ಷಿಪ್ ಪಂದ್ಯಾವಳಿ ಆರಂಭ
ಮೈಸೂರು

ಮೈಸೂರಲ್ಲಿ ರಾಷ್ಟ್ರಮಟ್ಟದ ಬ್ರಿಡ್ಜ್ ಚಾಂಪಿಯನ್‍ಷಿಪ್ ಪಂದ್ಯಾವಳಿ ಆರಂಭ

September 6, 2018

ಮೈಸೂರು:  ಚತುರತೆ ಹಾಗೂ ಕ್ಷೀಪ್ರ ಗತಿಯ ವಿಶ್ಲೇಷಣಾ ಮನೋಭಾವ ಆಪೇಕ್ಷಿಸುವ ಆಟವೆಂದೇ ಹೆಸರಾಗಿರುವ `ಬ್ರಿಡ್ಜ್ ಗೇಮ್’ನ ‘ರಾಷ್ಟ್ರ ಮಟ್ಟದ ಅಂತರ ರಾಜ್ಯ ಬ್ರಿಡ್ಜ್ ಚಾಂಪಿಯನ್ ಷಿಪ್’ ಪಂದ್ಯಾವಳಿ ಮೈಸೂರಿನಲ್ಲಿ ಇಂದಿನಿಂದ ಆರಂಭವಾಗಿದೆ.

ಇದೇ ಮೊಟ್ಟ ಮೊದಲ ಬಾರಿ ಮೈಸೂರಿನಲ್ಲಿ ಏರ್ಪಡಿಸಿರುವ ಮೆಗಾ ಪಂದ್ಯಾವಳಿ ಇದಾಗಿದೆ. ದೇಶದ ವಿವಿಧ ರಾಜ್ಯಗಳ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಬ್ರಿಡ್ಜ್ ಗೇಮ್ ಪಟುಗಳು ಸೇರಿದಂತೆ 200ಕ್ಕೂ ಹೆಚ್ಚು ಬ್ರಿಡ್ಜ್ ಆಟಗಾರರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್‍ನಲ್ಲಿ (ಜೆಡಬ್ಲ್ಯೂಜಿಸಿ) ಪಂದ್ಯಾವಳಿ ಸೆ.9ರವರೆಗೆ ನಡೆಯಲಿದೆ.

ಬ್ರಿಡ್ಜ್ ಫೆಡರೇಷನ್ ಆಫ್ ಇಂಡಿಯಾ (ಬಿಎಫ್‍ಐ), ಕರ್ನಾಟಕ ಬ್ರಿಡ್ಜ್ ಅಸೋಸಿ ಯೇಷನ್ (ಕೆಎಸ್‍ಬಿಎ) ಹಾಗೂ ಮೈಸೂರು ಜಿಲ್ಲಾ ಬ್ರಿಡ್ಜ್ ಅಸೋಸಿ ಯೇಷನ್‍ನ (ಎಂಡಿಬಿಎ) ಸಂಯುಕ್ತಾಶ್ರಯ ದಲ್ಲಿ ಮಂಗಳವಾರ ಸಂಜೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಗಾಲ್ಫ್ ಕ್ಲಬ್‍ನ ಅಧ್ಯಕ್ಷ ಸಿ.ಎಸ್.ರವಿಶಂಕರ್ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ವೇಳೆ ಕೆಎಸ್ ಬಿಎ ಅಧ್ಯಕ್ಷ ಅಶೋಕ್ ಫರ್ನಾಂಡೀಸ್, ಎಂಡಿಬಿಎ ಅಧ್ಯಕ್ಷ ಹೆಚ್.ಎನ್.ಜಯ ಪಾಲ್ ಮತ್ತಿತರರು ಹಾಜರಿದ್ದರು. ಕಿರಿಯ ಮತ್ತು ಅತಿ ಕಿರಿಯ ತಂಡ, ಅಂತರ ರಾಜ್ಯ ತಂಡ, ಜೋಡಿ ಸ್ಪರ್ಧೆ, ಕಿರಿಯ ಮತ್ತು ಅತಿ ಕಿರಿಯ ಜೋಡಿ ಸ್ಪರ್ಧೆ, ಮಹಿಳಾ ಜೋಡಿ ಸ್ಪರ್ಧೆ, ಮಿಶ್ರ ಜೋಡಿ ಸ್ಪರ್ಧೆ ವಿಭಾಗಗಳಲ್ಲಿ ಪಂದ್ಯಾ ವಳಿ ನಡೆಯಲಿದೆ.

ವಿಜೇತರಾದವರು 2019ರಲ್ಲಿ ನಡೆಯುವ `ಬರ್ಮುಡಾ ಬೌಲ್’ ಮತ್ತು ಇನ್ನಿ ತರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಲು ನಡೆಯುವ ಆಯ್ಕೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹ ರಾಗಲಿದ್ದಾರೆ. ಮೊದಲ ದಿನವಾದ ಇಂದು ಬೆಳಿಗ್ಗೆ ಅಂತರ ರಾಜ್ಯ ತಂಡ ಸ್ಪರ್ಧೆಗಳು ಆರಂಭಗೊಂಡಿದ್ದು, ಹಿರಿಯ ಹಾಗೂ ಕಿರಿಯ ವಿಭಾಗಗಳು ಒಳಗೊಂಡಂತೆ 26 ತಂಡಗಳು ವಿವಿಧ ರಾಜ್ಯಗಳನ್ನು ಪ್ರತಿನಿಧಿಸಿ ಆಟವಾಡಲಿದ್ದಾರೆ. ಇಂದು ಮತ್ತು ನಾಳೆ ಪ್ರತಿ ತಂಡಗಳು ಆರು ಸುತ್ತುಗಳನ್ನು ಎದುರಿಸಲಿದ್ದು, ಶುಕ್ರವಾರ ಕ್ವಾಟರ್ ಫೈನಲ್ ನೊಂದಿಗೆ ಸೆಮಿ-ಫೈನಲ್ ಹಾಗೂ ಫೈನಲ್ ಪಂದ್ಯಗಳು ಈ ವಿಭಾಗದಲ್ಲಿ ನಡೆಯಲಿವೆ.

ದೆಹಲಿ, ಪಶ್ಚಿಮ ಬಂಗಾಲ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಬಿಹಾರ್, ಅಸ್ಸಾಂ, ರಾಜಾಸ್ತಾನ, ಉತ್ತರಖಂಡ ಸೇರಿದಂತೆ ವಿವಿಧ ರಾಜ್ಯ ಗಳಿಂದ ಬ್ರಿಡ್ಜ್ ಆಟಗಾರರ ಆಗಮಿ ಸಿದ್ದಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟವಾಡಿರುವ ಹಿರಿಯ ಆಟ ಗಾರರಾದ ಗುಜರಾತಿನ ಸುನಿತ್ ಚೌಕ್ಷಿ, ಕೀಝಾದ್ ಅಂಕಲೆಸರಿಯಾ, ಪಶ್ಚಿಮ ಬಂಗಾಲದ ಪ್ರತೀಶ್ ಕುಶಾರಿ, ಹೇಮಂತ್ ಜಾಲನ್, ಮಹಾರಾಷ್ಟ್ರದ ಆನಂದ್ ಸಮಂತ್ ಹಾಗೂ ಕಿರಿಯ ಆಟಗಾರ ರಾದ ಮಧ್ಯಪ್ರದೇಶದ ಅನ್ಸುಲ್ ಭಟ್, ವಿನಯ್ ಪಾಟೀಲ್, ಕುನಾಲ್ ಪಾಟೀಲ್ ಸೇರಿದಂತೆ ಮತ್ತಿತರರು ಪಂದ್ಯಾವಳಿ ಯಲ್ಲಿ ಪಾಲ್ಗೊಂಡಿದ್ದಾರೆ.

ಅಂತಾರಾಷ್ಟ್ರೀಯ ಬ್ರಿಡ್ಜ್ ಆಟಗಾರರು

ಅಂತಾರಾಷ್ಟ್ರೀಯ ಮಟ್ಟದ ಬ್ರಿಡ್ಜ್ ಪಟುಗಳಾದ ಗುಜರಾತಿನ ಸುನಿತ್ ಚೌಕ್ಷಿ, ಕೀಝಾದ್ ಅಂಕಲೆಸರಿಯಾ ಮೈಸೂರಿನ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. 2016ರಲ್ಲಿ ಪೊಲ್ಯಾಂಡ್‍ನಲ್ಲಿ ನಡೆದ ವಿಶ್ವ ಬ್ರಿಡ್ಜ್ ಚಾಂಪಿಯನ್‍ಶಿಪ್‍ನಲ್ಲಿ ಈ ಜೋಡಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಪಡೆದಿದ್ದರು. 2018ರಲ್ಲಿ ಆಸ್ಟ್ರೆ ಲಿಯಾದಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಈ ಇಬ್ಬರು ಇದ್ದ ತಂಡ ಚಿನ್ನ ಗೆದ್ದು ಬಂದಿತ್ತು. ಜೊತೆಗೆ 2018ರಲ್ಲಿ ಗೋವಾದಲ್ಲಿ ನಡೆದ ಏಷ್ಯಾ ಕಪ್‍ನಲ್ಲಿ ಕಂಚಿನ ಪದಕ ಗೆದ್ದ ಶ್ರೇಯಸ್ಸು ಈ ಇಬ್ಬರಿಗೆ ಸಲ್ಲುತ್ತದೆ. ಪತ್ರಿಕೆಯೊಂದಿಗೆ ಮಾತನಾಡಿದ ಕೀಝಾದ್ ಅಂಕಲೆಸರಿಯಾ, ಬ್ರಿಡ್ಜ್ ಗೇಮ್ ಯುರೋಪ್ ದೇಶಗಳಲ್ಲಿ ಹೆಚ್ಚು ಗೌರಯುತ ವಾದ ಆಟವಾಗಿದೆ. ಆದರೆ ನಮ್ಮ ದೇಶದಲ್ಲಿ ಅಂತಹ ಪ್ರಾಮುಖ್ಯತೆ ಇಲ್ಲವಾಗಿದೆ. ಕಾರಣ ಆಟದಲ್ಲಿ ಇಸ್ಪೀಟ್ ಕಾರ್ಡ್ ಬಳಕೆ ಮಾಡುವುದರಿಂದ ಜೂಜಾಟ ಎಂಬ ತಪ್ಪು ಕಲ್ಪನೆ ಸಹಜವಾಗಿ ಮೂಡುತ್ತದೆ. ಆದರೆ ಇದು ಚೆಸ್ ಮಾದರಿಯ ಮಿದುಳು ಚುರುಕು ಗೊಳಿಸುವ ಆಟವಾಗಿದೆ. ಜರ್ಕಾತದಲ್ಲಿ ನಡೆದ ಏಷ್ಯನ್ ಗೇಮ್ಸ್‍ನಲ್ಲಿ ಪಶ್ಚಿಮ ಬಂಗಾಲದ ಪ್ರಣಬ್ ಬಿರ್ಧನ್ ಮತ್ತು ಶಿಬ್ನಾತ್ ದೈಶೇಖರ್ ಜೋಡಿ ಚಿನ್ನದ ಪದಕ ತಂದಿರುವುದು ದೇಶಕ್ಕೆ ಹೆಮ್ಮೆಯ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.

ಹಳ್ಳಿ ಹೈಕ್ಳ ಸಾಧನೆ…

ಕುಗ್ರಾಮದ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದ ಬ್ರಿಡ್ಜ್ ಗೇಮ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಇಬ್ಬರು ಪಟುಗಳು ಮೈಸೂರಿನಲ್ಲಿ ನಡೆಯುತ್ತಿರುವ ಬ್ರಿಡ್ಜ್ ಚಾಂಪಿ ಯನ್‍ಷಿಪ್‍ನಲ್ಲಿ ಪಾಲ್ಗೊಂಡಿದ್ದಾರೆ. ಮಧ್ಯಪ್ರದೇಶದ ರೈಬಿದ್‍ಪುರ ಗ್ರಾಮದ ವಿನಯ್ ಪಾಟೀಲ್ ಹಾಗೂ ಕುನಾಲ್ ಪಾಟೀಲ್ 2017ರಲ್ಲಿ ಫ್ರಾನ್ಸ್‍ನಲ್ಲಿ ನಡೆದ ವಿಶ್ವ ಬ್ರಿಡ್ಜ್ ಯೂತ್ ಚಾಂಪಿಯನ್‍ಶಿಪ್‍ನಲ್ಲಿ 16 ವರ್ಷದೊಳಗಿನ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿ ಸೈ ಎನ್ನಿಸಿಕೊಂಡಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಎಂಡಿಬಿಎ ಉಪಾಧ್ಯಕ್ಷ ಎಸ್.ಹಿರಣ್ಣಯ್ಯ, ಮಧ್ಯ ಪ್ರದೇಶದ ರೈಬಿದ್‍ಪುರ ಗ್ರಾಮದಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದೆ.

1965ರ ವೇಳೆಯಲ್ಲಿ ಗ್ರಾಮಕ್ಕೆ ಬಂದ ವೈದ್ಯರೊಬ್ಬರು ಬ್ರಿಡ್ಜ್ ಗೇಮ್ ಪಟು ಆಗಿದ್ದರು. ಅವರಿಂದ ಗ್ರಾಮದ ಹಿರಿಯರು ಆಟವನ್ನು ಕಲಿತರು. ಆಗಿನಿಂದ ಗ್ರಾಮದಲ್ಲಿ ಈ ಗೇಮ್ ಚಿರಪರಿಚಿತವಾಯಿತು. ಪ್ರಸ್ತುತ ಅಲ್ಲಿ 300ಕ್ಕೂ ಹೆಚ್ಚು ಹಿರಿಯ ಹಾಗೂ ಕಿರಿಯ ಬ್ರಿಡ್ಜ್ ಆಟಗಾರರು ಇದ್ದಾರೆ ಎಂದು ವಿವರಿಸಿದರು.

ದೇಶದಲ್ಲೇ ಅತ್ಯಂತ ಕಿರಿಯ ಬ್ರಿಡ್ಜ್ ಆಟಗಾರ 9 ವರ್ಷದ ಈ ಪೋರ…

ದೇಶದಲ್ಲೇ ಅತ್ಯಂತ ಕಿರಿಯ ಬ್ರಿಡ್ಜ್ ಆಟಗಾರ ಎಂಬ ಖ್ಯಾತಿಗೆ ಭಾಜನ ವಾಗಿರುವ ಮಧ್ಯಪ್ರದೇಶದ ಅನ್ಸುಲ್ ಭಟ್ ಕೂಡ ಮೈಸೂರಿನಲ್ಲಿ ನಡೆಯು ತ್ತಿರುವ ಬ್ರಿಡ್ಜ್ ಗೇಮ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಈತ ದೇಶದಲ್ಲೇ ಅತೀ ಕಿರಿಯ ಬ್ರಿಡ್ಜ್ ಪಟು ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಈ ಪೋರ 2017ರಲ್ಲಿ ಫ್ರಾನ್ಸ್‍ನಲ್ಲಿ ನಡೆದ ವಿಶ್ವ ಬ್ರಿಡ್ಜ್ ಯೂತ್ ಚಾಂಪಿಯನ್‍ಶಿಪ್‍ನಲ್ಲಿ 16 ವರ್ಷದೊಳಗಿನ ವಿಭಾಗದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾನೆ.

Translate »