ಮೈಸೂರು ಅರಮನೆ ಅಂದ ಸವಿದ ರಾಜ್ಯಪಾಲ ವಜುಭಾಯ್ ರೂಢಾವಾಲಾ
ಮೈಸೂರು

ಮೈಸೂರು ಅರಮನೆ ಅಂದ ಸವಿದ ರಾಜ್ಯಪಾಲ ವಜುಭಾಯ್ ರೂಢಾವಾಲಾ

September 6, 2018

ಮೈಸೂರು: ಎರಡು ದಿನದಿಂದ ಮೈಸೂರು ಪ್ರವಾಸದಲ್ಲಿರುವ ರಾಜ್ಯಪಾಲ ವಿ.ಆರ್.ವಾಲಾ ಅವರು, ಇಂದು ಮಗ-ಸೊಸೆ ಸಮೇತ ಮೈಸೂರು ಅರಮನೆಗೆ ಭೇಟಿ ನೀಡಿ, ವೀಕ್ಷಿಸಿದರು.

ಮಂಗಳವಾರವಷ್ಟೇ ಬಂಡೀಪುರ, ನಾಗರಹೊಳೆ ಪ್ರವಾಸ ಕೈಗೊಂಡಿದ್ದ ರಾಜ್ಯಪಾಲರು, ಇಂದು ಮೈಸೂರು ಅರಮನೆಗೆ ಭೇಟಿ ನೀಡಿ, ಇಲ್ಲಿನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಅಲ್ಲದೆ, ವೀಕ್ಷಕರ ಗ್ಯಾಲರಿಯಲ್ಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಕಂಡು ಪುಳಕಿತರಾಗಿದ್ದಾರೆ.

ಈ ಬಗ್ಗೆ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರಿಂದ ಮಾಹಿತಿ ಪಡೆದ ಅವರು, ಅರಮನೆ ನಿರ್ವಹಣೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಾರಿ ದಸರಾ ವೇಳೆ ಸಿಂಹಾಸನ ನೋಡಲು ಮೊದಲೇ ಮೈಸೂರಿಗೆ ಬರುತ್ತೇನೆ. ಸಮಯ ಸಿಕ್ಕರೆ ಜಂಬೂ ಸವಾರಿಯಲ್ಲೂ ಭಾಗಿಯಾಗುತ್ತೇನೆ ಎಂದು ತಿಳಿಸಿದ್ದಾರೆನ್ನಲಾಗಿದೆ.

ದೇಶದ ನಾನಾ ಭಾಗಗಳಲ್ಲಿರುವ ಅರಮನೆಗಳಿಗಿಂತ ಈ ಅರಮನೆ ಅತ್ಯಂತ ಸುಂದರವಾಗಿದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರಂತೆ

Translate »