ಬೆಂಗಳೂರು: ‘ಲೋಕ ಸಭಾ ಚುನಾವಣೆಗೆ ಸ್ಪರ್ಧಿಸಿದರೆ ಜನರು ನನ್ನನ್ನು ಗೆಲ್ಲಿಸುತ್ತಾರೇನ್ರೀ’. ಈ ಮಾತನ್ನು ಬೇರ್ಯಾರೂ ಅಲ್ಲ, ಈ ರಾಜ್ಯವನ್ನು ಐದು ವರ್ಷಗಳ ಕಾಲ ಮುನ್ನಡೆಸಿ, ತಮ್ಮ ಆಡಳಿತಾವಧಿಯಲ್ಲಿ ಕೆಲವು ಭಾಗ್ಯಗಳನ್ನು ನೀಡಿದ, ಹಾಲಿ ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿ ಸಿದಂತೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಸಿದ್ಧತೆಗೆ ಕರೆದಿದ್ದ ಮುಖಂಡರ ಸಭೆಯಲ್ಲೇ ಈ ಅನುಮಾನ ವ್ಯಕ್ತ ಪಡಿಸಿದ್ದಾರೆ. ರಾಜ್ಯ ಉಸ್ತುವಾರಿ, ಎಐಸಿಸಿ…
ರಾಜೀವ್‍ಗಾಂಧಿ ವಸತಿ ಯೋಜನೆಯಡಿ 69 ಸಾವಿರ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಸೆ.25ರವರೆಗೆ ಅವಕಾಶ
September 2, 2018ಬೆಂಗಳೂರು: ವಿವಿಧ ತಾಂತ್ರಿಕ ಕಾರಣಗಳಿಗಾಗಿ ಸೌಲಭ್ಯ ವಂಚಿತ 69,000 ಫಲಾನುಭವಿಗಳಿಗೆ ರಾಜೀವ್‍ಗಾಂಧಿ ವಸತಿ ಯೋಜನೆಯಡಿ ಮತ್ತೊಮ್ಮೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತಿದೆ ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಇಂದಿಲ್ಲಿ ತಿಳಿಸಿದರು. ರಾಜೀವ್‍ಗಾಂಧಿ ವಸತಿ ನಿಗಮದ ಸ್ಪಂದನಾ ಸಹಾಯವಾಣಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮಂಜೂರಾಗಿದ್ದ ಮನೆಗಳ ಪೈಕಿ ಕೆಲವಕ್ಕೆ ಮೊದಲ ಕಂತಿನ ಅನುದಾನ ಬಿಡುಗಡೆಯಾಗಿತ್ತು. ಕೆಲವರು ಮನೆ ನಿರ್ಮಾಣಕ್ಕೆ ತಳಪಾಯ ಹಾಕಿದ ನಂತರ ವಿವಿಧ ತಾಂತ್ರಿಕ ಕಾರಣಗಳಿಂದ ಮಂಜೂರಾಗಿದ್ದ ಮನೆಗಳು…
ಇಂದು ದಸರಾ ಗಜಪಡೆ ಮೊದಲ ತಂಡದ ಪಯಣ
September 2, 2018ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಮುನ್ನುಡಿಯಾಗಿರುವ ಗಜ ಪಯಣಕ್ಕೆ ನಾಳೆ(ಸೆ.2) ಚಾಲನೆ ಸಿಗಲಿದೆ. ಹುಣಸೂರು ತಾಲೂಕಿನ ವೀರನಹೊಸ ಹಳ್ಳಿಯಲ್ಲಿ ಬೆಳಿಗ್ಗೆ 10ಕ್ಕೆ, ಅರ್ಜುನನ ನೇತೃತ್ವದಲ್ಲಿ ಆಗಮಿಸುತ್ತಿರುವ 6 ಆನೆಗಳ ಮೊದಲ ತಂಡಕ್ಕೆ ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇ ಗೌಡರು ಪೂಜೆ ಸಲ್ಲಿಸುವ ಮೂಲಕ ಗಜ ಪಯಣಕ್ಕೆ ಸಾಂಪ್ರದಾಯಿಕ ಚಾಲನೆ ನೀಡಲಿದ್ದಾರೆ. ಈ ಬಾರಿಯ ಗಜ ಪಯಣ ತಡವಾಗಿರುವ ಹಿನ್ನೆಲೆಯಲ್ಲಿ ಆನೆಗಳನ್ನು ವೀರನಹೊಸಹಳ್ಳಿಯಿಂದ ನೇರವಾಗಿ ಮೈಸೂರಿನ ಅರಣ್ಯ ಭವನದ ಆವರಣಕ್ಕೆ ಕರೆತಂದು, ಮರುದಿನ ಅಂದರೆ ಸೆ.3ರಂದು ಅರಮನೆ…
ಪ್ರವಾಸಿಗರಿಗೆ ಸೆ.9ರವರೆಗೆ ಕೊಡಗು ಪ್ರವೇಶ ನಿಷಿದ್ಧ
September 2, 2018ಮಡಿಕೇರಿ: ಸುರಕ್ಷತೆಯ ದೃಷ್ಟಿಯಿಂದ ಆಗಸ್ಟ್ 31ರವರೆಗೆ ಕೊಡಗಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಹೇರ ಲಾಗಿದ್ದ ನಿಷೇಧವನ್ನು ಸೆಪ್ಟೆಂಬರ್ 9 ರವರೆಗೆ ಮುಂದುವರಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಾಗೂ ನೆರೆ ಪರಿಸ್ಥಿತಿಯಿಂದ 32 ಗ್ರಾಮಗಳು ಭೂ ಕುಸಿತದಿಂದ ನೆಲಸಮವಾಗಿದ್ದವು. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಹಲವು ಗ್ರಾಮಗಳು ಇದೀಗ ಮರಣ ಕೂಪಗಳಾಗಿ ಮಾರ್ಪಟ್ಟಿವೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದ್ದರೂ ಅಲ್ಲಲ್ಲಿ ಇನ್ನೂ ಮಳೆಯಾಗುತ್ತಿದೆ. ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದ್ದ ಕೊಡಗು ಜಿಲ್ಲೆಗೆ ಆದ ಹಾನಿಯನ್ನು ವೀಕ್ಷಿಸಲು ಪ್ರವಾಸಿಗರು ತಂಡೋಪ…
ಎಂಸಿಡಿಸಿಸಿ ಬ್ಯಾಂಕ್ ಹುಣಸೂರು ಶಾಖೆ ಮ್ಯಾನೇಜರ್‍ರಿಂದ 27.79 ಕೋಟಿ ದುರುಪಯೋಗ
September 2, 2018ಹುಣಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ(ಎಂಸಿಡಿಸಿಸಿ) ಬ್ಯಾಂಕ್‍ನ ಹುಣಸೂರು ಶಾಖೆಯ ಮ್ಯಾನೇಜರ್ 27,79,60,719 ರೂ.ಗಳನ್ನು ದುರುಪಯೋಗಪಡಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ಅವರನ್ನು ಇಂದು ಸೇವೆಯಿಂದ ಬಿಡುಗಡೆ ಮಾಡಿದ್ದು, ನೋಟೀಸ್ ನೀಡಲು ಸಿದ್ಧತೆಗಳು ನಡೆದಿವೆ. ಎಂಸಿಡಿಸಿಸಿ ಬ್ಯಾಂಕ್‍ನ ಹುಣಸೂರು ಶಾಖೆಯ ಮ್ಯಾನೇಜರ್ ರಾಮಪ್ಪ ಪೂಜಾರ್, ರೈತರಿಗೆ ನೀಡಬೇಕಾದ ಸಾಲದ ಮೊತ್ತ ಕೋಟ್ಯಾಂತರ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪವನ್ನು ಎದುರಿಸುತ್ತಿರುವವರು. ಇವರು ರೈತರಿಗೆ ಸಾಲ ನೀಡುವ ಸಲುವಾಗಿ ಹುಣಸೂರು ತಾಲೂಕಿನ ವಿವಿಧ ಸಹಕಾರ ಸಂಘಗಳಿಗೆ ಪೂರೈಸಲು ಕೇಂದ್ರ…
ಸಮುದಾಯಗಳ ನಡುವೆ ದ್ವೇಷಾಸೂಯೆ ಉಂಟು ಮಾಡಿ ರಾಜಕೀಯ ಲಾಭ ಗಳಿಸುವ ಯತ್ನ
September 2, 2018ಮೈಸೂರು ನಗರಪಾಲಿಕೆ ವಾರ್ಡ್ ನಂ.35ರಲ್ಲಿ ಅಹಿತಕರ ಘಟನೆ ಮೈಸೂರು: ಮೈಸೂರು ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 35 ಸಾತಗಳ್ಳಿ ಮೊದಲ ಹಂತಕ್ಕೆ ಸಂಬಂಧಿಸಿದಂತೆ ಕಲ್ಯಾಣ ಗಿರಿಯ ಸರ್ಕಾರಿ ಉರ್ದು ಶಾಲೆಯ ಮತಗಟ್ಟೆ ಬಳಿ ಶುಕ್ರ ವಾರ ಸಂಜೆ ನಡೆದ ಅಹಿತಕರ ಘಟನೆ ಹಿಂದೆ ಸಮುದಾಯಗಳ ನಡುವೆ ಕಂದಕ ಸೃಷ್ಟಿಸಿ ರಾಜ ಕೀಯ ಲಾಭ ಪಡೆಯುವ ದುರುದ್ದೇಶವಿದೆ ಎಂದು ಬಿಜೆಪಿ ಮುಖಂಡರೂ ಆದ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆರೋಪಿಸಿದರು. ಮೈಸೂರಿನ ತ್ರಿವೇಣಿ ವೃತ್ತದಲ್ಲಿರುವ ತಮ್ಮ ಕಚೇರಿಯಲ್ಲಿ ಶನಿವಾರ…
ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ಬ್ರಾಹ್ಮಣರ ಪಾತ್ರ ಹಿರಿದು
September 2, 2018ಮೈಸೂರು: ಬ್ರಾಹ್ಮಣ ಸಮುದಾಯ ಹಣ, ಆಸ್ತಿ, ಸಂಪತ್ತಿಗಿಂತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಸಂಸ್ಕಾರ ಬೆಳೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿಯೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಪ್ರಶಂಸಿಸಿದರು. ಮೈಸೂರಿನ ಶಾರದವಿಲಾಸ ಕಾಲೇಜು, ಶತಮಾನೋತ್ಸವ ಭವನದಲ್ಲಿ ಸಂಧ್ಯಾ ಸುರಕ್ಷಾ ಟ್ರಸ್ಟ್ ಹಾಗೂ ಜಿಲ್ಲಾ ಬ್ರಾಹ್ಮಣ ಮಹಾಸಭಾ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಗಣ್ಯರಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಜಾಹಗೀರ್‍ದಾರರು, ಶ್ಯಾನುಬೋಗರು, ಜಮೀನ್ದಾರರು ಬ್ರಾಹ್ಮಣರೇ ಆಗಿದ್ದರು. ಅನೇಕರಿಗೆ…
ಶಿಕ್ಷಣದ ಎರಡು ಹಂತದಲ್ಲಿ ಸಂಗೀತ ಕಡ್ಡಾಯಗೊಳಿಸುವುದು ಅಗತ್ಯ: ನಾಡೋಜ ಪಂಡಿತ್ ರಾಜೀವ್ ತಾರಾನಾಥ್ ಅಭಿಮತ
September 2, 2018ಮೈಸೂರು: ಸಾಮಾನ್ಯ ಶಿಕ್ಷಣ ಪದ್ದತಿಯಲ್ಲಿ ಸಂಗೀತ ಶಿಕ್ಷಣ ಕಡ್ಡಾಯಗೊಳಿಸಲು ಮುಂದಾಗದೆ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದಾದರು ಎರಡು ಹಂತದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣಕ್ಕೆ ಕ್ರಮ ಕೈಗೊಳ್ಳುವಂತೆ ಹೆಸರಾಂತ ಸರೋದ್ ವಾದಕ, ನಾಡೋಜ ಪಂ. ರಾಜೀವ್ ತಾರಾನಾಥ್ ಒತ್ತಾಯಿಸಿದ್ದಾರೆ. ಮೈಸೂರಿನ ಗಂಗೋತ್ರಿ ಬಡಾವಣೆಯಲ್ಲಿರುವ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ನಡೆದ ಸಂಸ್ಥೆಯ 58ನೇ ಎನ್‍ಸಿಇಆರ್‍ಟಿ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಸುವುದಕ್ಕಾಗಿ ಸಂಗೀತ ಶಿಕ್ಷಣವನ್ನು ಕಡ್ಡಾಯಗೊಳಿಸಲು…
ಕೆಪಿಎಲ್: ಬಿಜಾಪುರ ಬುಲ್ಸ್‍ಗೆ ರೋಚಕ ಗೆಲುವು
September 2, 2018ಮೈಸೂರು: ತೀವ್ರ ಕುತೂ ಹಲ ಕೆರಳಿಸಿದ್ದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಬಿಜಾಪುರ ಬುಲ್ಸ್ 2 ರನ್‍ಗಳ ರೋಚಕ ಜಯ ಸಾಧಿಸಿದೆ. ಇಲ್ಲಿನ ಮಾನಸ ಗಂಗೋತ್ರಿಯ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ದಲ್ಲಿ ಶನಿವಾರÀ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಿಜಾಪುರ ಬುಲ್ಸ್ ನಾಯಕ ಭರತ್ ಚಿಪ್ಲಿ ಅವರ ಅರ್ಧ ಶತಕದ ನೆರವಿನಿಂದ ನಿಗ ದಿತ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದು ಕೊಂಡು 167 ರನ್ ಗಳಿಸಿತು. ಇನಿಂಗ್ಸ್‍ನ…
ಕೆ.ಆರ್.ನಗರ ಪೊಲೀಸ್ ಠಾಣೆ ಮುಂದೆ ಗ್ರಾಮಸ್ಥರ ಪ್ರತಿಭಟನೆ
September 2, 2018ಕೆ.ಆರ್.ನಗರ: ಸುದೀರ್ಘ 18 ವರ್ಷ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ನಂತರ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದ ಮಾಜಿ ಸೈನಿಕನಿಗೆ ಸರ್ಕಲ್ ಇನ್ಸ್‍ಪೆಕ್ಟರ್ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮ ಸ್ಥರು ಕೆ.ಆರ್.ನಗರ ಪೊಲೀಸ್ ಠಾಣೆ ಮುಂದೆ ಇಂದು ಪ್ರತಿಭಟನೆ ನಡೆಸಿದರು. ಸೇನೆಯಿಂದ ನಿವೃತ್ತಿ ಹೊಂದಿ ಸ್ವಗ್ರಾಮ ತಾಲೂಕಿನ ಚಿಕ್ಕವಡ್ಡರಗುಡಿಗೆ ಹಿಂತಿರುಗುತ್ತಿದ್ದ ಮಾಜಿ ಸೈನಿಕ ಸಿ.ಎಂ.ಶ್ರೀಧರ್ ಅವ ರನ್ನು ಗ್ರಾಮಸ್ಥರು ಕೆ.ಆರ್.ನಗರ ಪಟ್ಟಣದಲ್ಲಿ ಬರಮಾಡಿಕೊಂಡು ಮೆರವಣಿಗೆ ಮೂಲಕ ಕರೆದೊಯ್ಯುತ್ತಿದ್ದರು. ಈ ವೇಳೆ ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಕೆ. ರಘು,…