ಮೈಸೂರು: ಎಂ.ಕರುಣಾನಿಧಿ ಅವರ ನಿಧನದ ಹಿನ್ನೆಲೆ ಮೈಸೂರಿಂದ ತಮಿಳುನಾಡಿಗೆ ತೆರಳುತ್ತಿದ್ದ ಸುಮಾರು 70 ಬಸ್‍ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ಅಧಿಕಾರಿ ಎಂ.ವಾಸು ತಿಳಿಸಿದ್ದಾರೆ. ತಮಿಳುನಾಡು ಸಾರಿಗೆ ಇಲಾಖೆ ಮಾಹಿತಿ ಮೇರೆಗೆ ಇಂದು ಸಂಜೆ 6.30 ರಿಂದಲೇ ಬಸ್ ಸಂಚಾರ ಬಂದ್ ಮಾಡಲಾಗಿದ್ದು, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಸಂಚಾರವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಕರ್ನಾಟಕದ ವಿವಿಧ ಭಾಗಗಳಿಂದ ತಮಿಳುನಾಡಿಗೆ ಸಂಚರಿಸುವ ಎಲ್ಲಾ ಕೆಎಸ್ಆರ್‌ಟಿಸಿ ಬಸ್‍ಗಳ ಸಂಚಾರವನ್ನು ಇಂದು ಸಂಜೆಯಿಂದ ರದ್ದುಗೊಳಿಸ ಲಾಗಿದೆ….
ಮಂಕಾದ ಮುಂಗಾರು: 87 ತಾಲೂಕಲ್ಲಿ ಬರ ಭೀತಿ
August 8, 2018ಇನ್ನೆರಡು ವಾರದಲ್ಲಿ ಮಳೆ ಬಾರದಿದ್ದರೆ ಬಿತ್ತನೆ ಬೆಳೆ ಹಾಳು ಕಡಿಮೆ ನೀರು ಬೇಕಾಗುವ ಬೆಳೆ ಮೊರೆ ಹೋಗಲು ಸೂಚನೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳೊಂದಿಗೆ ಸಭೆ, ಚರ್ಚೆ ಬೆಂಗಳೂರು: ಮುಂಗಾರು ಮಳೆಯ ಆರ್ಭಟಕ್ಕೆ ರಾಜ್ಯದ ಎಲ್ಲಾ ಜಲಾಶಯ ಗಳು ಭರ್ತಿಯಾಗಿವೆ. ಆದರೆ, ಜಲಾನಯನ ಹೊರತುಪಡಿಸಿ, ಉಳಿದ ಭಾಗ ಬರದ ಸುಳಿಗೆ ಸಿಲುಕುವ ಆತಂಕವಿದೆ. ಇನ್ನೆರಡು ವಾರಗಳಲ್ಲಿ ಮಳೆ ಬೀಳದಿದ್ದರೆ, ಲಕ್ಷಾಂತರ ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಲಾಗಿರುವ ಬೆಳೆ ನಾಶವಾಗುವು ದಲ್ಲದೆ, 13 ಜಿಲ್ಲೆಗಳ 87 ತಾಲೂಕು ತೀವ್ರ…
ದಸರಾಗೆ ಅಧಿಕ ಪ್ರವಾಸಿಗರ ಸೆಳೆಯಲು ಈ ಬಾರಿ ಆಕರ್ಷಕ ಕಾರ್ಯಕ್ರಮ ಆಯೋಜನೆ
August 8, 2018ಮೈಸೂರು: ಈ ಭಾರಿ ಅಧಿಕ ಪ್ರವಾಸಿಗರನ್ನು ಸೆಳೆಯಲು ಹೆಚ್ಚು ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇಂದು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಈ ಬಾರಿ ಏರ್‌ಷೋನಲ್ಲಿ ಮಿಲಿಟರಿ ಹಾಗೂ ವಾಯುದಳದ ಹೆಚ್ಚು ವಿಮಾನಗಳ ಪ್ರದರ್ಶನಕ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಶೀಘ್ರದಲ್ಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದಸರಾ ಉನ್ನತ ಮಟ್ಟದ ಸಮಿತಿಯ ಸಭೆ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಯಾವ ಯಾವ ಕಾರ್ಯಕ್ರಮ ಆಯೋಜಿಸಬಹುದೆಂಬುದರ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ….
ಕೆಆರ್‌ಎಸ್ ಜಲಾಶಯದಿಂದ ಅಧಿಕ ನೀರು ಬಿಡುಗಡೆ ರಂಗನತಿಟ್ಟು ಪಕ್ಷಿಧಾಮ ಧ್ವಂಸ
August 8, 2018ಮೈಸೂರು: ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಭಾರೀ ಪ್ರಮಾಣದ ನೀರನ್ನು ಹೊರಗೆ ಬಿಟ್ಟ ಪರಿಣಾಮ ಕಾವೇರಿ ನದಿಯಲ್ಲಿ ಉಂಟಾದ ಪ್ರವಾಹ ದಿಂದ ಶ್ರೀರಂಗಪಟ್ಟಣ ಬಳಿಯ ವಿಶ್ವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಅಪಾರ ಹಾನಿ ಉಂಟಾಗಿದೆ. ಕೊಡಗು ಭಾಗದಲ್ಲಿ ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ ಒಳಹರಿವು ಅಧಿಕವಾಗಿದ್ದರಿಂದ ಕಳೆದ 20 ದಿನಗಳಿಂದ ಕೆಆರ್‌ಎಸ್ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಕ್ರಸ್ಟ್‍ಗೇಟ್‍ಗಳ ಮೂಲಕ ಹೊರ ಬಿಡಲಾಗುತ್ತಿದ್ದು, ಇದರಿಂದ ಪಕ್ಷಿಧಾಮ ತತ್ತರಿಸಿದೆ. ದೇಶದಲ್ಲೇ ಖ್ಯಾತ ಪ್ರವಾಸಿ ಕೇಂದ್ರವೂ ಆಗಿರುವ ರಂಗನತಿಟ್ಟು…
ಸಾರಿಗೆ ಮುಷ್ಕರಕ್ಕೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ
August 8, 2018ಬೆಂಗಳೂರು: ಕೇಂದ್ರದ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ, ಇಂದು ಕರೆಯಲಾಗಿದ್ದ ಸಾರಿಗೆ ಮುಷ್ಕರಕ್ಕೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಕೆಲವು ಸಂಘಟನೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ, ಪ್ರತಿಭಟನೆ ವ್ಯಕ್ತಪಡಿಸಿದರು. ಆದರೆ ಈ ಪ್ರತಿಭಟನೆ ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ. ರಾಜ್ಯದ ಎಲ್ಲೆಡೆ ಸಾರಿಗೆ ಸಂಚಾರ ಎಂದಿನಂತೆ ಇತ್ತು. ರಾಜಧಾನಿ ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‍ಗಳು ಬೆಳಿಗ್ಗೆ ಯಿಂದಲೇ ಸಂಚರಿಸಿದವು. ಆಟೋ, ಟ್ಯಾಕ್ಸಿಗಳು ಮಾಮೂಲಿಯಂತೆ ಗ್ರಾಹಕ ರಿಗೆ…
ಸಾಗರಕಟ್ಟೆಯಿಂದ ಕೆ.ಆರ್.ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣಕ್ಕೆ ಸಚಿವ ಸಾರಾ ಚಾಲನೆ
August 8, 2018ಚುಂಚನಕಟ್ಟೆ: ಸರ್ಕಾರದ ಅನುದಾನದಿಂದ ನಡೆಯುವ ಕಾಮಗಾರಿ ಗಳು ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ಅಭಿವೃದ್ದಿ ಕೆಲಸ ಎಂದು ಅರಿತು ಸರಿಯಾದ ರೀತಿ ಸದ್ಬಳಕೆ ಮಾಡಿದಾಗ ಸರ್ಕಾರದ ಯೋಜನೆಗಳು ಸಮರ್ಪವಾಗಿ ಅನುಷ್ಠಾನಗೊಳ್ಳಲು ಸಾಧ್ಯ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದರು. ತಾಲೂಕಿನ ಲಾಳಂದೇವನಹಳ್ಳಿ ಗ್ರಾಮದ ಬಳಿ ಮೈಸೂರು ತಾಲೂಕು ಇಲವಾಲದ ಸಾಗರಕಟ್ಟೆಯಿಂದ ಕೆ.ಆರ್.ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿ ಮಾತನಾಡಿದ ಅವರು 5 ಕೋಟಿ ರೂ. ಗಳಲ್ಲಿ ಕೆಆರ್‌ಡಿಸಿಎಲ್ ವತಿಯಿಂದ ಈ ರಸ್ತೆ ಡಾಂಬರೀಕರಣ…
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ
August 8, 2018ತಿ.ನರಸೀಪುರ: ಪಟ್ಟಣದ ಪುರಸಭೆ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ಹಿಡಿಯುವ ನಿಟ್ಟಿನಲ್ಲಿ ಕಾರ್ಯಕರ್ತರು ಅಧಿಕೃತ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಜಿಪಂ ಮಾಜಿ ಅಧ್ಯಕ್ಷ ಹಾಗೂ ಮೈಮುಲ್ ರಾಜ್ಯ ನಿರ್ದೇಶಕ ಕೆ.ಸಿ.ಬಲರಾಂ ಹೇಳಿದರು. ಪಟ್ಟಣದ ಮಹದೇಶ್ವರ(ವಜ್ರೇಗೌಡ) ಕಲ್ಯಾಣ ಮಂಟಪದಲ್ಲಿ ಪುರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿ ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಆರ್.ಧ್ರುವನಾರಾಯಣ್‍ರವರ ಪರಿಶ್ರಮದಿಂದಾಗಿ ಇದೇ ಮೊದಲ ಬಾರಿಗೆ ಬೈರಾಪುರ, ಆಲಗೂಡು ಸೇರಿ ಪುರಸಭೆಯಾಗಿ ಪರಿವರ್ತಿತಗೊಂಡಿದ್ದು, ಈ ಬಾರಿ…
ಮಕ್ಕಳು ವ್ಯಸನಮುಕ್ತರಾಗಬೇಕಿದ್ದರೆ ಸಜ್ಜನರ ಸಹವಾಸದಿಂದ ಸಾಧ್ಯ
August 8, 2018ಹೆಚ್.ಡಿ.ಕೋಟೆ: ಮಾದಕ ವ್ಯಸನಗಳನ್ನು ಬಿಡಿಸಬೇಕಾದರೆ ಕುಟುಂಬ ದಲ್ಲಿ ಒಳ್ಳೆ ವಾತಾವರಣವಿರಬೇಕು. ಸಜ್ಜನರ ಸಹವಾಸದಿಂದ ಮಾತ್ರ ಇದು ಸಾಧ್ಯ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಘಟಕ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಹಾಗೂ ತಾಲೂಕಿನ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಂಗಳ ವಾರ ಪಟ್ಟಣದಲ್ಲಿ ನಡೆದ ಮಾದಕ ವಸ್ತು ವಿರೋಧಿ ಜನ ಜಾಗೃತಿ ಜಾಥಾ ಕಾರ್ಯ ಕ್ರಮದಲ್ಲಿ ಅಶಿರ್ವಚನ ನೀಡಿದರು. ಶಿಕ್ಷಿತರೇ ಇಂದಿನ ದಿನಮಾನಗಳಲ್ಲಿ ಹೆಚ್ಚಾಗಿ ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದು…
ಬಿಜೆಪಿ ಕಡೆ ತಿರುಗಿಯೂ ನೋಡಲ್ಲ, ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ
August 8, 2018ನಂಜನಗೂಡು: ಭಾರತೀಯ ಜನತಾ ಪಕ್ಷಕ್ಕೆ ಸೇರುತ್ತಾರೆಂಬ ಸುದ್ದಿ ಕೇವಲ ಉಹಾಪೋಹ. ಕಾಂಗ್ರೆಸ್ ತೊರೆಯುವುದಿಲ್ಲ. ಬಿಜೆಪಿ ಕಡೆ ಮುಖ ಸಹ ಹಾಕುವುದಿಲ್ಲ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ನಂಜನಗೂಡಿನ ಹೌಸಿಂಗ್ ಬೋರ್ಡ್‍ನಲ್ಲಿರುವ ತಮ್ಮ ನಿವಾಸಕ್ಕೆ ಮೊದಲ ಬಾರಿಗೆ ಇಂದು ಭೇಟಿ ನೀಡಿದ ವೇಳೆ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡುತ್ತ, ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯ ದಲ್ಲಿ ಸಾಕಷ್ಟು ಅಭಿವೃಧಿ ಕೆಲಸಗಳು ಆಗಿವೆ. ಅನೇಕ ಭಾಗ್ಯಗಳನ್ನು ನೀಡಿ, ರಸ್ತೆ,…
ಆ. 13ಕ್ಕೆ ಸಂಪುಟ ವಿಸ್ತರಣೆ
August 7, 2018ಕಾಂಗ್ರೆಸ್ ವರಿಷ್ಠರ ಸಲಹೆಯಂತೆ ಸಿಎಂ ಕುಮಾರಸ್ವಾಮಿ ನಿರ್ಧಾರ ಕಾಂಗ್ರೆಸ್‍ನ ಐದು, ಜೆಡಿಎಸ್‍ನ ಒಂದು ಸ್ಥಾನ ಭರ್ತಿಗೆ ತೀರ್ಮಾನ ಇದೇ ವೇಳೆ 30 ನಿಗಮ-ಮಂಡಳಿಗೂ ನೇಮಕ ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ವಿಸ್ತರಿಸಲಿದ್ದಾರೆ. ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ಮೇರೆಗೆ ಆಗಸ್ಟ್ 13 ರಂದು ಮಂತ್ರಿಮಂಡಲ ವಿಸ್ತರಣೆ ಜರುಗಲಿದೆ. ಮಂತ್ರಿಮಂಡಲ ವಿಸ್ತರಣೆಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂಬ ರಾಜ್ಯ…










