ಮೈಸೂರು

ನೀರು ಸಂಗ್ರಹ ಸಾಮಥ್ರ್ಯ ವೃದ್ಧಿಗೆ 527 ಕೆರೆ ಹೂಳೆತ್ತಲು ಸಿಎಂ ಕುಮಾರಸ್ವಾಮಿ ಸೂಚನೆ
ಮೈಸೂರು

ನೀರು ಸಂಗ್ರಹ ಸಾಮಥ್ರ್ಯ ವೃದ್ಧಿಗೆ 527 ಕೆರೆ ಹೂಳೆತ್ತಲು ಸಿಎಂ ಕುಮಾರಸ್ವಾಮಿ ಸೂಚನೆ

August 7, 2018

ಬೆಂಗಳೂರು:  ಎತ್ತಿನಹೊಳೆ ಯೋಜನೆಯಡಿ 5 ಜಿಲ್ಲೆಗಳ ವ್ಯಾಪ್ತಿಯಲ್ಲಿನ 527 ಕೆರೆಗಳ ನೀರು ಸಂಗ್ರಹಣಾ ಸಾಮಥ್ರ್ಯ ಹೆಚ್ಚಿಸಲು ಈ ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದರು. ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಪಶ್ಚಿಮ ಘಟ್ಟಗಳಲ್ಲಿ ಹರಿದು ಅರಬ್ಬಿ ಸಮುದ್ರ ಸೇರುವ ಎತ್ತಿನಹೊಳೆ ಮತ್ತು ಅದರ ಉಪನದಿಗಳ ನೀರನ್ನು ಪೂರ್ವಾಭಿಮುಖವಾಗಿ ಹರಿಸಿ, ಬರ ಪೀಡಿತ ಜಿಲ್ಲೆಗಳಾದ ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು…

ಮುಖ್ಯಮಂತ್ರಿ ವಸತಿ ಯೋಜನೆಯಡಿ ರಾಜ್ಯಾದ್ಯಂತ ಲಕ್ಷ ಮನೆ ನಿರ್ಮಾಣ
ಮೈಸೂರು

ಮುಖ್ಯಮಂತ್ರಿ ವಸತಿ ಯೋಜನೆಯಡಿ ರಾಜ್ಯಾದ್ಯಂತ ಲಕ್ಷ ಮನೆ ನಿರ್ಮಾಣ

August 7, 2018

ಬೆಂಗಳೂರು: ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ವಸತಿ ಸಚಿವ ಯು.ಟಿ.ಖಾದರ್, ಪುರಸಭೆಗಳ ವ್ಯಾಪ್ತಿಯಲ್ಲಿ 60,000 ಹಾಗೂ ಬೆಂಗಳೂರು ನಗರದಲ್ಲಿ 45,000 ಮನೆಗಳನ್ನು ನಿರ್ಮಿಸಲಾಗುವುದು ಎಂದರು. ಯೋಜನೆಗೆ ಈ ತಿಂಗಳ 12 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. 60,000 ಮನೆಗಳ ಪೈಕಿ ಉತ್ತರ ಕರ್ನಾಟಕಕ್ಕೆ 22,000 ಮನೆಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಮನೆಗಳ ನಿರ್ಮಾಣ 9 ತಿಂಗಳಲ್ಲಿ ಪೂರ್ಣಗೊಳಿಸಿ ವಸತಿ…

ಜನತಾ ಪರಿವಾರ ತೊರೆದವರ ಮತ್ತೆ ಒಗ್ಗೂಡಿಸಲು ಪ್ರಯತ್ನ: ನೂತನ ಜೆಡಿಎಸ್ ಸಾರಥಿ ಅಡಗೂರು ಹೆಚ್. ವಿಶ್ವನಾಥ್ ವಿಶ್ವಾಸ
ಮೈಸೂರು

ಜನತಾ ಪರಿವಾರ ತೊರೆದವರ ಮತ್ತೆ ಒಗ್ಗೂಡಿಸಲು ಪ್ರಯತ್ನ: ನೂತನ ಜೆಡಿಎಸ್ ಸಾರಥಿ ಅಡಗೂರು ಹೆಚ್. ವಿಶ್ವನಾಥ್ ವಿಶ್ವಾಸ

August 7, 2018

ಬೆಂಗಳೂರು:  ಜನತಾ ಪರಿವಾರದಿಂದ ದೂರವಾಗಿರುವ ನಾಯಕರನ್ನು ಮತ್ತೆ ಒಗ್ಗೂಡಿಸಲು ಪ್ರಯತ್ನಿಸಲಾಗುವುದು ಎಂದು ಜೆಡಿಎಸ್‍ನ ನೂತನ ರಾಜ್ಯಾಧ್ಯಕ್ಷ ಅಡಗೂರು ಹೆಚ್. ವಿಶ್ವನಾಥ್ ತಿಳಿಸಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರಕ್ಕೆ ಮುನ್ನ ದೇವಾಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಬಲಪಡಿಸಬೇಕಿದೆ ಎಂದರು. ನಂತರ ಪಕ್ಷದ ಕಚೇರಿಯಲ್ಲಿ ಮಾತನಾಡಿ, ಪಕ್ಷ ಸಂಘಟನೆ ಮೊದಲ ಗುರಿ, ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವಲ್ಲಿ ಒಟ್ಟಾಗಿ ಹೋಗಲು ಸಜ್ಜಾಗುತ್ತಿದ್ದೇವೆ, ಕೊಟ್ಟಿರುವ ದೊಡ್ಡ ಜವಾಬ್ದಾರಿ ನಿರ್ವಹಿಸಲು ಹಿರಿಯರು…

ನಾಗಾಪುರ ಹಾಡಿಯಿಂದ ಆ.23ಕ್ಕೆ ದಸರಾ ಗಜಪಯಣ
ಮೈಸೂರು

ನಾಗಾಪುರ ಹಾಡಿಯಿಂದ ಆ.23ಕ್ಕೆ ದಸರಾ ಗಜಪಯಣ

August 7, 2018

ಮೊದಲ ತಂಡದಲ್ಲಿ ಅರ್ಜುನ ಸೇರಿ ಆರು ಆನೆ ಜಿಲ್ಲಾಡಳಿತದಿಂದ ಆನೆಗಳಿಗೆ ಪೂಜೆಗೆ ಸಿದ್ಧತೆ ಮೈಸೂರು:  ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ 12 ಆನೆಗಳಲ್ಲಿ ಗಜಪಡೆಯ ನಾಯಕ ಅರ್ಜುನ ಸೇರಿದಂತೆ ಆರು ಆನೆಗಳ ಮೊದಲ ತಂಡ ಆ.23ರಂದು ಹುಣಸೂರು ತಾಲೂಕಿನ ನಾಗಾಪುರ ಹಾಡಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪಯಣ ಆರಂಭಿಸಲಿವೆ. ಪ್ರತಿ ವರ್ಷದಂತೆ ಈ ಬಾರಿಯೂ ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ನಾಗಾಪುರ ಹಾಡಿ ಬಳಿಯ ಗಿರಿಜನ ಆಶ್ರಮ ಶಾಲೆಯ ಆವರಣದಲ್ಲಿ ಆ.23ರಂದು ಬೆಳಿಗ್ಗೆ 11ಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ…

ವೈದಿಕ ಧರ್ಮ ವಿರೋಧಿಸಿದ್ದರಿಂದ ಬಸವಣ್ಣ, ವಿವೇಕಾನಂದರ ಹತ್ಯೆ ಮಾಡಲಾಗಿದೆ
ಮೈಸೂರು

ವೈದಿಕ ಧರ್ಮ ವಿರೋಧಿಸಿದ್ದರಿಂದ ಬಸವಣ್ಣ, ವಿವೇಕಾನಂದರ ಹತ್ಯೆ ಮಾಡಲಾಗಿದೆ

August 7, 2018

ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಸ್ಫೋಟಕ ಹೇಳಿಕೆ ಸಂಶೋಧನೆಯಿಂದ ಸತ್ಯಾಸತ್ಯತೆ ಬಯಲು ಮಾಡಬಹುದು ಮೈಸೂರು:  ವೈದಿಕ ಧರ್ಮ ವಿರೋಧಿಸಿದ ಕಾರಣಕ್ಕೆ ಬಸವಣ್ಣ ಹಾಗೂ ಸ್ವಾಮಿ ವಿವೇಕಾನಂದರನ್ನು ಹತ್ಯೆ ಮಾಡಲಾಗಿದ್ದು, ಸಂಶೋಧನೆಗಳ ಮೂಲಕ ಇದರ ಸತ್ಯಾಸತ್ಯತೆ ಬಯಲು ಮಾಡುವ ಅಗತ್ಯವಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಪ್ರತಿಪಾದಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಹಿಷಾ ದಸರಾ ಪ್ರತಿಷ್ಠಾನ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ಐಕ್ಯವಾದರು ಎಂಬುದು ಕೇವಲ ಕಟ್ಟುಕಥೆ….

ಹಾರಂಗಿ ನಾಲೆಗೆ ಮಾರುತಿ ವ್ಯಾನ್ ಉರುಳಿ ಒಂದೇ ಕುಟುಂಬದ ನಾಲ್ವರ ಜಲಸಮಾದಿ ಪಿರಿಯಾಪಟ್ಟಣದ ಬಳಿ ದುರಂತ
ಮೈಸೂರು

ಹಾರಂಗಿ ನಾಲೆಗೆ ಮಾರುತಿ ವ್ಯಾನ್ ಉರುಳಿ ಒಂದೇ ಕುಟುಂಬದ ನಾಲ್ವರ ಜಲಸಮಾದಿ ಪಿರಿಯಾಪಟ್ಟಣದ ಬಳಿ ದುರಂತ

August 7, 2018

ಪಿರಿಯಾಪಟ್ಟಣ: ತುಂಬಿ ಹರಿಯುತ್ತಿದ್ದ ನಾಲೆಗೆ ಮಾರುತಿ ವ್ಯಾನ್ ಉರುಳಿ ಬಿದ್ದು, ಒಂದೇ ಕುಟುಂಬದ ನಾಲ್ವರು ಜಲಸಮಾಧಿಯಾದ ದುರ್ಘಟನೆ ಇಂದು ಬೆಳಿಗ್ಗೆ ಪಿರಿಯಾಪಟ್ಟಣ ತಾಲೂಕು ದೊಡ್ಡಕಮರಹಳ್ಳಿ ಬಳಿ ಹಾರಂಗಿ ನಾಲೆಯಲ್ಲಿ ಸಂಭವಿಸಿದೆ. ಈ ದುರಂತದಲ್ಲಿ ಕೊಡಗು ಜಿಲ್ಲೆ ನಾಪೋಕ್ಲು ಗ್ರಾಮದ ಪಳನಿಸ್ವಾಮಿ(50), ಪತ್ನಿ ಸಂಜು(40) ಪುತ್ರ ನಿಖಿತ್(12) ಹಾಗೂ ಪುತ್ರಿ ಪೂರ್ಣಿಮಾ(14) ಅಸುನೀಗಿದ್ದಾರೆ. ಈ ಕುಟುಂಬ ಪಿರಿಯಾಪಟ್ಟಣ ತಾಲೂಕು ಲಕ್ಷ್ಮೀಪುರ ಬಳಿ ಕೃಷಿ ಭೂಮಿ ಖರೀದಿಸಿ, ಬೇಸಾಯದಲ್ಲಿ ತೊಡಗಿತ್ತು ಎಂದು ಹೇಳಲಾಗಿದೆ. ಇಂದು ಬೆಳಿಗ್ಗೆ 10.45ರ ಸಂದರ್ಭ ಅಂಗವಿಕಲ…

ಕರುಣಾನಿಧಿ ಆರೋಗ್ಯ ಗಂಭೀರ
ಮೈಸೂರು

ಕರುಣಾನಿಧಿ ಆರೋಗ್ಯ ಗಂಭೀರ

August 7, 2018

ಚೆನ್ನೈ: ಡಿಎಂಕೆ ಪಕ್ಷದ ಅಧಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಆರೋಗ್ಯ ಗಂಭೀರವಾಗಿದೆ ಎಂದು ಮೂಲ ಗಳು ತಿಳಿಸಿವೆ. ಜ್ವರ, ಮೂತ್ರ ನಾಳ ಸೋಂಕಿ ನಿಂದ ಬಳಲಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿರುವ ಎಂ.ಕರುಣಾನಿಧಿ ಅವರ ಆರೋಗ್ಯದಲ್ಲಿ ‘ಗಂಭೀರ ವ್ಯತ್ಯಯ’ವಾಗಿದೆ ಎಂದು ಕಾವೇರಿ ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಅಲ್ಲದೆ ಕರುಣಾನಿಧಿ ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮುಂದುವರೆಸಲಾಗಿದ್ದು, ಅವರು ಮತ್ತೊಂದಷ್ಟು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ ಎಂದು ಹೇಳಿದೆ. ಅಂತೆಯೇ ಅವರ…

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನಕ್ಕೆ ಕನಿಷ್ಠ 82 ಮಂದಿ ಬಲಿ
ಮೈಸೂರು

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನಕ್ಕೆ ಕನಿಷ್ಠ 82 ಮಂದಿ ಬಲಿ

August 7, 2018

ಜಕಾರ್ತ: ಇಂಡೋನೇಷ್ಯಾ ದಲ್ಲಿ ಪ್ರಬಲ ಭೂಕಂಪನ ಸಂಭವಿ ಸದ್ದು, ಘಟನೆಯಲ್ಲಿ ಕನಿಷ್ಠ 82 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆಗ್ನೇಯ ಏಷ್ಯಾದ ಪ್ರಮುಖ ಪ್ರವಾಸಿ ತಾಣ ಇಂಡೋನೇಷ್ಯಾದ ಪ್ರಮುಖ ಕರಾವಳಿ ದ್ವೀಪ ಬಾಲಿಯಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0ರಷ್ಟು ತೀವ್ರತೆ ದಾಖಲಾಗಿದೆ. ಭೂ ಕಂಪನದ ತೀವ್ರತೆಗೆ ಬಾಲಿ ಸೇರಿದಂತೆ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿನ ಬಹುಮಹಡಿ ಕಟ್ಟಡಗಳು ನೆಲಕ್ಕುರು ಳಿದ್ದು, ಈ ವೇಳೆ ಕನಿಷ್ಠ 82 ಮಂದಿ ಸಾವನ್ನಪ್ಪಿ, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಂತೆಯೇ ನೂರಾರು…

`ಆರ್‍ಟಿಐ ಕಾರ್ಯಕರ್ತ’ ಎಂದು ಹೇಳಿ ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಪಡೆಯಲು ಅವಕಾಶವಿಲ್ಲ
ಮೈಸೂರು

`ಆರ್‍ಟಿಐ ಕಾರ್ಯಕರ್ತ’ ಎಂದು ಹೇಳಿ ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಪಡೆಯಲು ಅವಕಾಶವಿಲ್ಲ

August 7, 2018

ಮೈಸೂರು: ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ಮಾಹಿತಿ ಪಡೆಯುವ ನಾಗರಿ ಕರು `ಆರ್‍ಟಿಐ ಕಾರ್ಯಕರ್ತ’ ಎಂಬ ಪದನಾಮದಿಂದ ಸರ್ಕಾರಿ ಕಚೇರಿಗಳಲ್ಲಿ ಪರಿಚಯಿಸಿಕೊಳ್ಳಲು ಹಾಗೂ ಮಾಹಿತಿ ಪಡೆಯಲು ಅವಕಾಶವಿಲ್ಲ ಎಂದು ಮಾಹಿತಿ ಆಯೋಗದ ಮುಖ್ಯ ಆಯುಕ್ತ ಡಾ. ಸುಚೇತನ ಸ್ವರೂಪ್ ಸ್ಪಷ್ಟಪಡಿಸಿದರು. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿ ಗಳೊಂದಿಗೆ ಸಂವಾದ ನಡೆಸಿ, ಮಾತನಾಡಿ ದರು. ಇತ್ತೀಚೆಗೆ `ಆರ್‍ಟಿಐ ಕಾರ್ಯ ಕರ್ತ’ ಪದನಾಮದೊಂದಿಗೆ ಸರ್ಕಾರಿ ಕಚೇರಿಗಳಿಗೆ ಖಾಸಗಿ ವ್ಯಕ್ತಿಗಳು ಬಂದು ಪರಿಚಯ…

ರದ್ದಿ ಹೆಸರಿನಲ್ಲಿ ಶಾಲಾ ಪುಸ್ತಕ ಸಾಗಿಸುತ್ತಿದ್ದ  ವಾಹನಗಳ ಪರಿಶೀಲಿಸಿದ ಅಧಿಕಾರಿಗಳು ಇನ್ನೆರಡು ದಿನಗಳಲ್ಲಿ ವರದಿ
ಮೈಸೂರು

ರದ್ದಿ ಹೆಸರಿನಲ್ಲಿ ಶಾಲಾ ಪುಸ್ತಕ ಸಾಗಿಸುತ್ತಿದ್ದ  ವಾಹನಗಳ ಪರಿಶೀಲಿಸಿದ ಅಧಿಕಾರಿಗಳು ಇನ್ನೆರಡು ದಿನಗಳಲ್ಲಿ ವರದಿ

August 7, 2018

ಮೈಸೂರು: ಮೈಸೂರು ಸರ್ಕಾರಿ ಮುದ್ರಣಾಲಯದಿಂದ ರದ್ದಿ ಸಾಗಿಸುವ ನೆಪದಲ್ಲಿ ಸರ್ಕಾರಿ ಶಾಲಾ ಮಕ್ಕಳ ಪುಸ್ತಕಗಳನ್ನು ಸಾಗಿಸುತ್ತಿದ್ದ 3 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬೆಂಗಳೂರು ಬನಶಂಕರಿಯ ರಾಜ್ಯ ಶಿಕ್ಷಣ ಪರಿಶೋಧನೆ ಮತ್ತು ತರಬೇತಿ ಇಲಾಖೆಯ ಉಪನಿರ್ದೇಶಕ ವಿಶ್ವನಾಥ್, ಮೈವಿವಿ ಪ್ರಸಾರಾಂಗ ಮತ್ತು ಮುದ್ರಣಾಲಯ ನಿರ್ದೇಶಕ ಸತೀಶ್, ಮೈಸೂರು ದಕ್ಷಿಣ ವಲಯ ಬಿಇಓ ನಾಗೇಶ್, ಡಯಟ್‍ನ ಪ್ರಾಂಶುಪಾಲರಾದ ಮಹದೇವಪ್ಪ, ಅಧ್ಯಾ ಪಕರಾದ ಮಂಜುನಾಥ್, ಅಮಿತ್, ರಾಜು, ತ್ರಿವೇಣಿ, ಶಿವಮ್ಮ ಅವರು…

1 1,444 1,445 1,446 1,447 1,448 1,611
Translate »