ಮೈಸೂರು

ರೈಲಿನಿಂದ ಆಯತಪ್ಪಿ ಬಿದ್ದು ಮಹಿಳೆ ಸಾವು
ಮೈಸೂರು

ರೈಲಿನಿಂದ ಆಯತಪ್ಪಿ ಬಿದ್ದು ಮಹಿಳೆ ಸಾವು

August 6, 2018

ಮೈಸೂರು: ಮೈಸೂರಿನ ಮಹಿಳೆಯೊಬ್ಬರು ರೈಲಿನಿಂದ ಆಯತಪ್ಪಿ ಬಿದ್ದು, ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ರೈಲು ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಮೈಸೂರಿನ ವಿಜಯನಗರ ಮೊದಲನೇ ಹಂತದ ನಿವಾಸಿ ಹೆನ್ರಿ ಅವರ ಪತ್ನಿ ಮೇರಿ ಫಾತಿಮಾ(63) ಸಾವನ್ನಪ್ಪಿದವರು. ಮೇರಿ ಅವರ ಪುತ್ರ ಮಾಲ್ಡೀವ್ಸ್‍ನಲ್ಲಿ ನೆಲೆಸಿದ್ದು, ಸಂಬಂಧಿಕರೊಬ್ಬರ ನಿಧನದ ಹಿನ್ನೆಲೆಯಲ್ಲಿ ಮೈಸೂರಿಗೆ ಬಂದಿದ್ದರು. ಇಂದು ಮಾಲ್ಡೀವ್ಸ್‍ಗೆ ವಾಪಸ್ಸಾಗುತ್ತಿದ್ದ ಪುತ್ರನನ್ನು ಬೀಳ್ಕೊಡಲೆಂದು ಮೇರಿ ಅವರು ಬೆಂಗಳೂರಿಗೆ ಜೊತೆಯಲ್ಲೇ ತೆರಳಿದ್ದರು. ಮಗ ವಿಮಾನವೇರಿದ ಬಳಿಕ ಬೆಂಗಳೂರಿನ ಶಾಂತಿನಗರದಲ್ಲಿರುವ ಪುತ್ರಿಯ ಮನೆಗೆ ಹೋಗಿದ್ದು,…

ಸರಕಾರಿ ಶಾಲೆ ಉಳಿಸುವ ಅಭಿಯಾನ: ಕೈಲಾಸಪುರಂ, ತಿಲಕ್‍ನಗರ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ
ಮೈಸೂರು

ಸರಕಾರಿ ಶಾಲೆ ಉಳಿಸುವ ಅಭಿಯಾನ: ಕೈಲಾಸಪುರಂ, ತಿಲಕ್‍ನಗರ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

August 6, 2018

ಮೈಸೂರು: ಸರಕಾರಿ ಶಾಲೆಗಳನ್ನು ಉಳಿಸುವ ಜೊತೆಗೆ ಪ್ರವೇಶಾತಿ ಹೆಚ್ಚಳ ಮಾಡುವ ಉದ್ದೇಶದಿಂದ `ಸರಕಾರಿ ಶಾಲೆ ಉಳಿಸುವ ಅಭಿಯಾನ’ದಡಿ ಎರಡು ಸರಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಜಾಮಿಟ್ರಿ ಬಾಕ್ಸ್ ವಿತರಣೆ ಮಾಡಲಾಯಿತು. ನಗರ ಪಾಲಿಕೆಯ ವಾರ್ಡ್ 25ರ ವ್ಯಾಪ್ತಿಗೆ ಬರುವ ಕೈಲಾಸಪುರಂ, ತಿಲಕ್‍ನಗರ ಸರಕಾರಿ ಶಾಲೆಯ ಮಕ್ಕಳಿಗೆ ತಾಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಪುಸ್ತಕ, ಜಾಮಿಟ್ರಿ ಬಾಕ್ಸ್‍ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರಿ ಶಾಲೆ ಉಳಿಸುವ ಅಭಿಯಾನದಡಿ ಕೈಲಾಸಪುರಂ, ತಿಲಕ್‍ನಗರ ಶಾಲೆಯ…

ಮೈಸೂರು ಅರಮನೆ ದರ್ಬಾರ್ ಹಾಲ್‍ನಲ್ಲಿ ನಟಿ ನಿಧಿ ಸುಬ್ಬಯ್ಯ ಫೋಟೋ ಶೂಟ್ ಪ್ರಕರಣ
ಮೈಸೂರು

ಮೈಸೂರು ಅರಮನೆ ದರ್ಬಾರ್ ಹಾಲ್‍ನಲ್ಲಿ ನಟಿ ನಿಧಿ ಸುಬ್ಬಯ್ಯ ಫೋಟೋ ಶೂಟ್ ಪ್ರಕರಣ

August 5, 2018

ಮೈಸೂರು: ಮೈಸೂರು ಅರಮನೆ ಮತ್ತೆ ಸುದ್ದಿಯಾಗಿದೆ. ಪ್ರತಿಷ್ಠಿತರಿಗಾಗಿ ಭದ್ರತಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ. ದರ್ಬಾರ್ ಹಾಲ್‍ನಲ್ಲಿ ಚಿತ್ರನಟಿ ನಿಧಿ ಸುಬ್ಬಯ್ಯ ಅವರು ತೆಗೆಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅರಮನೆಯ ದರ್ಬಾರ್ ಹಾಲ್‍ನಲ್ಲಿ ಫೋಟೊ ನಿಷೇಧವಾಗಿದ್ದರೂ ನಟಿ ನಿಧಿ ಸುಬ್ಬಯ್ಯ ಅವರಿಗೆ ಅಲ್ಲಿ ಫೋಟೋ ಶೂಟ್‍ಗೆ ಅನುಮತಿ ನೀಡಿದವರು ಯಾರು? ಎಂಬ ಪ್ರಶ್ನೆ ಕಾಡುತ್ತಿದ್ದು, ಸಾರ್ವಜನಿಕರಿಗೆ ಒಂದು ನಿಯಮ, ಗಣ್ಯರಿಗೆ ಒಂದು ನಿಯಮ ಅನುಸರಿಸುತ್ತಿ…

ಸೆಪ್ಟೆಂಬರ್‌ನಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿಗೆ ಸಿಎಂ ಚಾಲನೆ
ಮೈಸೂರು

ಸೆಪ್ಟೆಂಬರ್‌ನಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿಗೆ ಸಿಎಂ ಚಾಲನೆ

August 5, 2018

ಮೈಸೂರು: ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿಗೆ ಇದೇ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ಮೈಸೂರಿನ ಸುತ್ತೂರು ಮಠದ ಆವರಣದಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ಮೈಸೂರು-ಬೆಂಗಳೂರು ನಡುವೆ 10 ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಸೆಪ್ಟೆಂಬರ್‌ನಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವನಾಗಿ ಮೈಸೂರು ನಗರ ಹಾಗೂ ಜಿಲ್ಲೆಗೆ ಸಮರ್ಪಕ ಕುಡಿಯುವ…

ಶಿಕ್ಷಕರ ವರ್ಗಾವಣೆಗೆ ಬಂದಿರುವ ಅರ್ಜಿಗಳು ಬರೋಬ್ಬರಿ 60 ಸಾವಿರ!
ಮೈಸೂರು

ಶಿಕ್ಷಕರ ವರ್ಗಾವಣೆಗೆ ಬಂದಿರುವ ಅರ್ಜಿಗಳು ಬರೋಬ್ಬರಿ 60 ಸಾವಿರ!

August 5, 2018

ಮೈಸೂರು: ಶಾಲಾ ಶಿಕ್ಷಕರ ವರ್ಗಾವಣೆ ಕೋರಿ 60 ಸಾವಿರ ಅರ್ಜಿಗಳು ಬಂದಿವೆ. ಈ ಬಾರಿ ಸಂಪೂರ್ಣವಾಗಿ ಆನ್‍ಲೈನ್‍ನಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು. ಮೈಸೂರಿನ ಸುತ್ತೂರು ಮಠದ ಆವರಣದಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ 3 ರಿಂದ 4 ಲಕ್ಷ ಶಿಕ್ಷಕರಿದ್ದಾರೆ. ವರ್ಗಾವಣೆ ಪ್ರಕ್ರಿಯೆಗೆ ಮೂರು ವಲಯಗಳಾಗಿ ವಿಂಗಡಿಸಿದ್ದು, ಒಂದೇ ಕಡೆ ಹತ್ತು ವರ್ಷ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು….

ದ್ವಿಚಕ್ರ ವಾಹನ ಸವಾರರಿಗೆ ಬ್ರೇಕ್ ಹಾಕಿ, ವಿದ್ಯುತ್ ಸರಬರಾಜು ಸಮರ್ಪಕಗೊಳಿಸಿ: ಶಾಸಕ ರಾಮದಾಸರಲ್ಲಿ ಸಾರ್ವಜನಿಕರ ಮನವಿ
ಮೈಸೂರು

ದ್ವಿಚಕ್ರ ವಾಹನ ಸವಾರರಿಗೆ ಬ್ರೇಕ್ ಹಾಕಿ, ವಿದ್ಯುತ್ ಸರಬರಾಜು ಸಮರ್ಪಕಗೊಳಿಸಿ: ಶಾಸಕ ರಾಮದಾಸರಲ್ಲಿ ಸಾರ್ವಜನಿಕರ ಮನವಿ

August 5, 2018

ಮೈಸೂರು: ಮೈಸೂರು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಶನಿವಾರ ಕೆ.ಆರ್.ವನಂ, ಕೃಷ್ಣಮೂರ್ತಿಪುರಂ ಮತ್ತು ಅಶೋಕಪುರಂನಲ್ಲಿ ಪಾದಯಾತ್ರೆ ನಡೆಸಿ ಸ್ಥಳೀಯರಿಂದ ಆಹವಾಲು ಸ್ವೀಕರಿಸಿದರು. ಜೊತೆಗೆ ಅಧಿಕಾರಿಗಳಿಗೆ ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು. ನಗರ ಪಾಲಿಕೆಯ 56ನೇ ವಾರ್ಡ್(ಹಳೆಯ ವಾರ್ಡ್ ಸಂಖ್ಯೆ 7) ವ್ಯಾಪ್ತಿಯ ಬಡಾವಣೆಗಳಲ್ಲಿ ಪಾಲಿಕೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಇಂದು ಪಾದಯಾತ್ರೆ ಹಮ್ಮಿಕೊಂಡಿದ್ದ ರಾಮದಾಸ್, ಕೃಷ್ಣಮೂರ್ತಿಪುರಂನಲ್ಲಿರುವ ಅರಳೀಮರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಾರ್ವಜನಿಕರ ಸಮಸ್ಯೆ ಆಲಿಸಿದರು. ಪಾದಯಾತ್ರೆ ವೇಳೆ ಸ್ಥಳೀಯರು ಕೃಷ್ಣಮೂರ್ತಿಪುರಂನಲ್ಲಿ ದ್ವಿಚಕ್ರ ವಾಹನದಲ್ಲಿ…

ಅಮೆರಿಕಾದಲ್ಲಿ ಕೈಗಾರಿಕೆ ಸ್ಥಾಪಿಸಲು ಭಾರತೀಯರಿಗೆ ಉತ್ತಮ ಅವಕಾಶವಿದೆ
ಮೈಸೂರು

ಅಮೆರಿಕಾದಲ್ಲಿ ಕೈಗಾರಿಕೆ ಸ್ಥಾಪಿಸಲು ಭಾರತೀಯರಿಗೆ ಉತ್ತಮ ಅವಕಾಶವಿದೆ

August 5, 2018

ಮೈಸೂರು:  ಅಮೇರಿಕಾದಲ್ಲಿ ಭಾರತೀಯರು ಕೈಗಾರಿಕೆ ಸ್ಥಾಪ ನೆಗೆ ಉತ್ತಮ ವಾತಾವರಣವಿದೆ ಎಂದು ಇಂಡಿಯನ್-ಅಮೇರಿಕನ್ ಛೇಂಬರ್ಸ್ ಆಫ್ ಕಾಮರ್ಸ್ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಕೆ.ವಿ.ಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ಖಾಸಗಿ ಹೊಟೇಲ್‍ನಲ್ಲಿ ಶನಿವಾರ ಅನಿವಾಸಿ ಭಾರತೀಯರು (ಕನ್ನಡಿಗರು) `4ನೇ ನಾವಿಕೋತ್ಸವ’ ವಿಶ್ವ ಕನ್ನಡ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ `ಬಿಸಿನೆಸ್ ಫೋರಮ್’ನಲ್ಲಿ ಮಾತನಾ ಡಿದ ಅವರು, ಅಮೇರಿಕಾದಲ್ಲಿ ಪ್ರಸ್ತುತ ಚೀನಾದ ಉತ್ಪನ್ನಗಳ ಟ್ರೆಂಡ್ ಇದೆ. ಇದೀಗ ಚೀನಾವನ್ನು ಹಿಂದಿಕ್ಕುವ ಅವಕಾಶ ಒದಗಿ ಬಂದಿದೆ. ಭಾರತೀಯ ಕೈಗಾರಿಕೋದ್ಯಮಿಗಳು ಅಮೇರಿಕಾದಲ್ಲಿ ಉದ್ಯಮ ಆರಂಬಿಸಲು ಉತ್ತಮವಾದ…

ನಾಳೆ ವಿ.ಶ್ರೀನಿವಾಸಪ್ರಸಾದ್ ಹುಟ್ಟುಹಬ್ಬ
ಮೈಸೂರು

ನಾಳೆ ವಿ.ಶ್ರೀನಿವಾಸಪ್ರಸಾದ್ ಹುಟ್ಟುಹಬ್ಬ

August 5, 2018

ಮೈಸೂರು: ಹಿರಿಯ ರಾಜಕೀಯ ಮುತ್ಸದಿ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಹುಟ್ಟುಹಬ್ಬವನ್ನು ವಿವಿಧ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಅವರ ಅಭಿಮಾನಿಗಳ ಬಳಗವು ಆ.6ರಂದು ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯಲ್ಲಿ ಪ್ರಸಾದ್ ಅವರ 71ನೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. 10 ಗಂಟೆಗೆ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಆಯ್ದ 20 ಮೂತ್ರಪಿಂಡ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಮಾಡಿಸಲಾಗುತ್ತದೆ. 10.30ಕ್ಕೆ ಮೈಸೂರು ತಾಲೂಕು ಚಿಕ್ಕ ಹರದನಹಳ್ಳಿಯಲ್ಲಿರುವ ಛಾಯಾದೇವಿ ಅನಾಥಾಶ್ರಮದಲ್ಲಿ 11 ಗಂಟೆಗೆ ಅಶೋಕಪುರಂನ ಸರ್ಕಾರಿ ಬಾಲಕಿಯರ…

ಮಾಲೂರು ಶಾಲಾ ವಿದ್ಯಾರ್ಥಿನಿ ಹಂತಕನಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮೈಸೂರು ಮಹಾರಾಣಿ ವಿದ್ಯಾರ್ಥಿನಿಯರ ಪ್ರತಿಭಟನೆ
ಮೈಸೂರು

ಮಾಲೂರು ಶಾಲಾ ವಿದ್ಯಾರ್ಥಿನಿ ಹಂತಕನಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮೈಸೂರು ಮಹಾರಾಣಿ ವಿದ್ಯಾರ್ಥಿನಿಯರ ಪ್ರತಿಭಟನೆ

August 5, 2018

ಮೈಸೂರು: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆತ್ನಿಸಿ, ಕೊನೆಗೆ ಹತ್ಯೆಗೈಯ್ದ ದುಷ್ಕರ್ಮಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಶನಿವಾರ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಪೋಸ್ಟ್ ಕಾರ್ಡ್ ಚಳವಳಿ ನಡೆಸಿದರು. ಎಐಡಿಎಸ್‍ಓ ಹಾಗೂ ಎಐಎಂಎಸ್‍ಎಸ್ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಪೋಸ್ಟ್ ಕಾರ್ಡ್ ಚಳುವಳಿಯಲ್ಲಿ ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು ಪಾಲ್ಗೊಂಡು, ವಿದ್ಯಾರ್ಥಿನಿ ರಕ್ಷಿತಾಳ ಅತ್ಯಾಚಾರಕ್ಕೆತ್ನಿಸಿ, ಕೊನೆಗೆ ಆಕೆಯ ಹತ್ಯೆ ಮಾಡಿದ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ…

ತಿಂಗಳಿಗೊಂದು ಗ್ರಾಮದಲ್ಲಿ ವಾಸ್ತವ್ಯ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್
ಮೈಸೂರು

ತಿಂಗಳಿಗೊಂದು ಗ್ರಾಮದಲ್ಲಿ ವಾಸ್ತವ್ಯ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್

August 5, 2018

ಚುಂಚನಕಟ್ಟೆ:  ಅಭಿವೃದ್ದಿ ಕೆಲಸಗಳು ಮತ್ತು ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರತೀ ತಿಂಗಳು ಒಂದೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು. ತಾಲೂಕಿನ ಮಿರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯ ಮತ್ತು ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದ ಅಭಿವೃದ್ದಿ ಮತ್ತು ಜನತೆಯ ಕುಂದು ಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಇಲಾಖೆಯ…

1 1,446 1,447 1,448 1,449 1,450 1,611
Translate »