ಮೈಸೂರು

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಬೇಡ
ಮೈಸೂರು

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಬೇಡ

August 4, 2018

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿ ಕೊಂಡು ಕಣಕ್ಕಿಳಿಯುವುದು ಬೇಡ, ಅಗತ್ಯ ಬಿದ್ದ ಕಡೆಗಳಲ್ಲಿ ಸ್ಥಳೀಯವಾಗಿ ಹೊಂದಾಣಿಕೆಗೆ ಅಲ್ಲಿನ ನಾಯಕರ ನಿರ್ಧಾರಕ್ಕೆ ಬಿಡಲು ಕಾಂಗ್ರೆಸ್ ಮುಂದಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ಧತೆ ಹಾಗೂ ಮೈತ್ರಿಗೆ ಸಂಬಂಧಿಸಿದಂತೆ ಅಭಿಪ್ರಾಯ ಪಡೆಯಲು ಕೆಪಿಸಿಸಿ ಕಚೇರಿಯಲ್ಲಿಂದು ಕರೆಯಲಾಗಿದ್ದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಆದರೆ ರಾಜ್ಯ ಘಟಕದ ನಿರ್ಧಾರವನ್ನು ಕೇಂದ್ರ ವರಿಷ್ಠರಿಗೆ ತಿಳಿಸಲಾಗುವುದು. ಅವರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ. ಲೋಕಸಭೆ…

ತುಂತುರು ಮಳೆ ನಡುವೆ ಬೆಟ್ಟದ ತಾಯಿಯ ವೈಭವದ ವರ್ಧಂತಿ ಉತ್ಸವ
ಮೈಸೂರು

ತುಂತುರು ಮಳೆ ನಡುವೆ ಬೆಟ್ಟದ ತಾಯಿಯ ವೈಭವದ ವರ್ಧಂತಿ ಉತ್ಸವ

August 4, 2018

ಮೈಸೂರು: ಮೋಡ ಕವಿದ ವಾತಾವರಣ, ಕೆಲ ಕ್ಷಣ ತುಂತುರು ಮಳೆ, ನಾನಾ ರೀತಿಯ ಪುಷ್ಪಗಳ ಸುವಾಸನೆ ಭಕ್ತಿ ಪರಾಕಾಷ್ಠತೆಗೆ ಸಾಕ್ಷಿಯಾಗಿದ್ದವು. ನೆರೆದವರು ಯಾವಾಗ ತಾಯಿ ಕಣ್ತುಂಬಿಕೊಳ್ಳುತ್ತೇವೋ ಎಂಬ ತವಕ, ನೂಕು ನುಗ್ಗಲು, ದೇವಿ ಸ್ಮರಣೆ ಇವೆಲ್ಲ ಕಂಡು ಬಂದಿದ್ದು ನಾಡದೇವಿಯ ನೆಲೆಯಾದ ಚಾಮುಂಡಿಬೆಟ್ಟದಲ್ಲಿ. ಪೂರ್ವ ನಿಗದಿಯಂತೆ ನಾಡದೇವಿ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ವಿರಾಜಮಾನಳಾಗಿದ್ದ ಬೆಟ್ಟದ ತಾಯಿಯನ್ನು ಅಪಾರ  ಸಂಖ್ಯೆ ಭಕ್ತರು ಕಣ್ತುಂಬಿಕೊಂಡು, ಜೈಕಾರ ಕೂಗಿ ಸಂಭ್ರಮಿಸಿದರು. ಆಷಾಢ ಮಾಸದ…

ಬಂಡಿಪುರ ಅಭಯಾರಣ್ಯದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಹಿಂಪಡೆಯುವ ಪ್ರಶ್ನೆ ಇಲ್ಲ
ಮೈಸೂರು

ಬಂಡಿಪುರ ಅಭಯಾರಣ್ಯದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಹಿಂಪಡೆಯುವ ಪ್ರಶ್ನೆ ಇಲ್ಲ

August 4, 2018

ಮೈಸೂರು: ಬಂಡಿಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವಾಹನಗಳ ಸಂಚಾರ ನಿಷೇಧವನ್ನು ಹಿಂಪಡೆಯುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದೆ ಇಲ್ಲ. ಕೇರಳ ಸರ್ಕಾರ ಮಾಡಿರುವ ಮೇಲ್ಸೇತುವೆ ನಿರ್ಮಾಣ ಹಾಗೂ ರಾತ್ರಿ ಸಂಚಾರ ನಿರ್ಬಂಧ ಸಡಿಲಿಕೆ ಮನವಿಯನ್ನು ತಿರಸ್ಕರಿಸಿ, ವನ್ಯಜೀವಿಗಳ ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಆರ್.ಶಂಕರ್ ಸ್ಪಷ್ಟಪಡಿಸಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶುಕ್ರವಾರ ಮೈಸೂರಿಗೆ ಆಗಮಿಸಿದ್ದ ಅವರು, ಮೈಸೂರಿನ ಸರ್ಕಾರಿ ಅತಿಥಿ ಗೃಹ ಹಾಗೂ ಚಾಮುಂಡಿಬೆಟ್ಟ ದಲ್ಲಿ ಪತ್ರಕರ್ತರೊಂದಿಗೆ…

ಕೆ.ಆರ್.ಪೇಟೆ ತಹಸೀಲ್ದಾರ್  ಅಪಹರಣ: ಸುರಕ್ಷಿತ ಬಿಡುಗಡೆ
ಮಂಡ್ಯ, ಮೈಸೂರು

ಕೆ.ಆರ್.ಪೇಟೆ ತಹಸೀಲ್ದಾರ್  ಅಪಹರಣ: ಸುರಕ್ಷಿತ ಬಿಡುಗಡೆ

August 4, 2018

ಭೇರ್ಯ: ಕೆ.ಆರ್.ಪೇಟೆ ತಾಲೂಕು ತಹಸೀಲ್ದಾರ್ ಕೆ.ಮಹೇಶ್ ಚಂದ್ರ ಅವರನ್ನು ಕಳೆದ ರಾತ್ರಿ ಅಪಹರಿಸಿದ್ದ ದುಷ್ಕರ್ಮಿಗಳು, ಇಂದು ಸಂಜೆ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ. ಕೆ.ಆರ್.ಪೇಟೆಯಿಂದ ಕಳೆದ ರಾತ್ರಿ ಸುಮಾರು 10.30ರಲ್ಲಿ ಹೊರಟು ತಮ್ಮ ಮಾರುತಿ ಒಮ್ನಿ (ಕೆಎ 41 ಹೆಚ್ 1581) ಯಲ್ಲಿ ಕೆ.ಆರ್.ನಗರಕ್ಕೆ ಬರುತ್ತಿದ್ದ ತಹಶೀಲ್ದಾರ್‍ರನ್ನು ಇಲ್ಲಿಗೆ ಸಮೀಪದ ಚಿಕ್ಕವಡ್ಡರ ಗುಡಿ ಬಳಿ ದುಷ್ಕರ್ಮಿಗಳು ಅಪಹರಿಸಿ, ಇಂದು ಸಂಜೆ ಕೆ.ಆರ್. ಪೇಟೆ ಸಮೀಪದ ತೆಂಡೆಕೆರೆ ಗ್ರಾಮದ ಬಳಿ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ. ಅಪಹರಣಕಾರರಿಂದ ಬಿಡುಗಡೆ ಹೊಂದಿದ ತಹಸೀಲ್ದಾರ್‌ರರು…

ಚಾಮರಾಜ ಕ್ಷೇತ್ರ ವ್ಯಾಪ್ತಿ ಅಕ್ರಮ ಗುಡಿಸಲು ತೆರವಿಗೆ ಶಾಸಕ ನಾಗೇಂದ್ರ ಸೂಚನೆ
ಮೈಸೂರು

ಚಾಮರಾಜ ಕ್ಷೇತ್ರ ವ್ಯಾಪ್ತಿ ಅಕ್ರಮ ಗುಡಿಸಲು ತೆರವಿಗೆ ಶಾಸಕ ನಾಗೇಂದ್ರ ಸೂಚನೆ

August 4, 2018

ಮೈಸೂರು:  ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಗುಡಿಸಲುಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಲ್.ನಾಗೇಂದ್ರ, ಅಧಿಕಾರಿಗಳಿಗೆ ಸೂಚಿಸಿದರು. ಶುಕ್ರವಾರ ಮರುವಿಂಗಡಿತ 4ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಲೋಕನಾಯಕನಗರ, ಸೂರ್ಯಬೇಕರಿ, ಕುಂಬಾರಕೊಪ್ಪಲು ಇನ್ನಿತರ ಬಡಾವಣೆಗಳಲ್ಲಿ ಪಾದಯಾತ್ರೆ ನಡೆಸಿ, ಸಮಸ್ಯೆ ಆಲಿಸಿದ ಅವರು, ಲಿಂಗಯ್ಯನ ಕೆರೆ ಭಾಗದಲ್ಲಿ ತಲೆಎತ್ತಿರುವ ಗುಡಿಸಲುಗಳನ್ನು ಕಂಡು, ಚಾಮರಾಜ ಕ್ಷೇತ್ರವನ್ನು ಗುಡಿಸಲು ಮುಕ್ತವಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಕ್ರಿಯರಾಗಬೇಕು. ಎಲ್ಲೆಂದರಲ್ಲಿ ನಿರ್ಮಿಸಿಕೊಂಡಿರುವ ಗುಡಿಸಲು, ಜೋಪಡಿಗಳನ್ನು ತೆರವುಗೊಳಿಸಬೇಕೆಂದು ಎಚ್ಚರಿಕೆ ನೀಡಿದರಲ್ಲದೆ, ಗಣಪತಿ ದೇವಸ್ಥಾನದ ಬಳಿ ಮ್ಯಾನ್‍ಹೋಲ್ ದುರಸ್ಥಿಯನ್ನು…

ಕೆ.ಜಿ.ಕೊಪ್ಪಲಿನಲ್ಲಿ ಶ್ರೀಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ
ಮೈಸೂರು

ಕೆ.ಜಿ.ಕೊಪ್ಪಲಿನಲ್ಲಿ ಶ್ರೀಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ

August 4, 2018

ಮೈಸೂರು: ಮೈಸೂರಿನ ಕನ್ನೇಗೌಡನಕೊಪ್ಪಲಿನಲ್ಲಿ ಆ. 7 ರಂದು ನಡೆಯುವ ಗ್ರಾಮದೇವತೆ ಶ್ರೀಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ಕನ್ನೇಗೌಡ ಪೈ. ಬಸವಯ್ಯ ಕುಸ್ತಿ ಸಮಿತಿ ವತಿಯಿಂದ ಆ. 5 ರಂದು 5ನೇ ವರ್ಷದ ರಾಷ್ಟ್ರ ಮತ್ತು ರಾಜ್ಯ ಮಟ್ಟದ 45 ಜೊತೆ ಕಾಟಾ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಪಂಜಾಬಿನ ಪೈ. ಪ್ರಿನ್ಸಿಪಾಲ್ ಸಿಂಗ್ ವರ್ಸಸ್ ಹರಿಯಾಣ ಪೈ. ಹಿತೇಶ್ ಕಾಳ ಹಾಗೂ ಕೊಲ್ಲಾಪುರದ ಪೈ. ಸಂತೋಷ್ ದರೋಡ್ ವರ್ಸಸ್ ಪೈ. ಹರಿಯಾಣ ಪೈ. ಸುನೀಲ್ ಚೋಟಿಯಾಲ ಇವರು ಕುಸ್ತಿ ಸೋಲು…

ಶಿಕ್ಷಕರ ವೇತನ ಬಡ್ತಿ  ಕಡಿತ ನಿರ್ಧಾರಕ್ಕೆ ಖಂಡನೆ
ಮೈಸೂರು

ಶಿಕ್ಷಕರ ವೇತನ ಬಡ್ತಿ  ಕಡಿತ ನಿರ್ಧಾರಕ್ಕೆ ಖಂಡನೆ

August 4, 2018

ಮೈಸೂರು: ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜಿನ ಉಪನ್ಯಾಸಕರು, ಪ್ರಾಂಶುಪಾಲರು ಸೇರಿದಂತೆ ಒಟ್ಟು 2.50 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ 2016 ಮತ್ತು 2018ರಲ್ಲಿ ಸೇರ್ಪಡೆ ಮಾಡಿದ್ದ 2 ವೇತನ ಬಡ್ತಿಯನ್ನು ಹಣಕಾಸು ಇಲಾಖೆ ಏಕಾಏಕಿ ಪ್ರತ್ಯೇಕಗೊಳಿಸಲು ಮುಂದಾಗಿರುವುದನ್ನು ದಕ್ಷಿಣ ಶಿಕ್ಷಕರ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಬಿ. ನಿರಂಜನಮೂರ್ತಿ ಇಂದಿಲ್ಲಿ ಖಂಡಿಸಿದರು. ತಾನು ಮಾಡಿರುವ ತಪ್ಪನ್ನು ಶಿಕ್ಷಕರ ವೇತನಕ್ಕೆ ಸರ್ಜರಿ ಮಾಡುವ ಮೂಲಕ ಸರಿಪಡಿಸಲು ಮುಂದಾಗಿರುವ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು….

ನಾಳೆ ಗಾಣಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಮೈಸೂರು

ನಾಳೆ ಗಾಣಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

August 4, 2018

ಮೈಸೂರು:  ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಸಚಿವ, ಶಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾ ಗಾಣಿಗ ಸಂಘದಿಂದ ಆ.5ರಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಉಮೇಶ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಚಿವ ಸಾ.ರಾ.ಮಹೇಶ್, ಎಂಎಲ್‍ಸಿ ಮರಿತಿಬ್ಬೇಗೌಡ ಅವರು ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ….

ಆ.6ರಂದು ಬೆಂಗಳೂರಿನಲ್ಲಿ ದಲಿತ ಹಕ್ಕುಗಳ ರಕ್ಷಣಾ ರ‍್ಯಾಲಿ
ಮೈಸೂರು

ಆ.6ರಂದು ಬೆಂಗಳೂರಿನಲ್ಲಿ ದಲಿತ ಹಕ್ಕುಗಳ ರಕ್ಷಣಾ ರ‍್ಯಾಲಿ

August 4, 2018

ಮೈಸೂರು: ಬೆಂಗಳೂರಿನಲ್ಲಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆ.6ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿರುವ ದಲಿತ ಹಕ್ಕುಗಳ ರಕ್ಷಣ ಮಹಾ ರ‍್ಯಾಲಿಯಲ್ಲಿ ಮೈಸೂರು ಜಿಲ್ಲೆಯಿಂದ 2 ಸಾವಿರಕ್ಕೂ ಹೆಚ್ಚು ದಲಿತರು ಪಾಲ್ಗೊಳ್ಳಲಿರುವುದಾಗಿ ಸಮಿತಿಯ ಮೈಸೂರು ಜಿಲ್ಲಾ ಪ್ರಧಾನ ಸಂಚಾಲಕ ನಿಂಗರಾಜ್ ಮಲ್ಲಾಡಿ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧದ ನೆಪದಲ್ಲಿ ಬಹುಸಂಖ್ಯಾತ ದಲಿತರ ಆಹಾರದ ಹಕ್ಕನ್ನು ಕಿತ್ತುಕೊಂಡು ಅಪಮಾನ, ದೌರ್ಜನ್ಯ, ಕೊಲೆ ಬಹಿರಂಗವಾಗಿ ನಡೆಯುತ್ತಿದೆ….

ಆ.14ರಂದು ಬಿಜೆಪಿ ಯುವ ಮೋರ್ಚಾದಿಂದ ಮಿಡ್‍ನೈಟ್ ಫ್ರೀಡಂ ರನ್
ಮೈಸೂರು

ಆ.14ರಂದು ಬಿಜೆಪಿ ಯುವ ಮೋರ್ಚಾದಿಂದ ಮಿಡ್‍ನೈಟ್ ಫ್ರೀಡಂ ರನ್

August 4, 2018

ಮೈಸೂರು: ದೇಶದ ರಕ್ಷಣೆ ಹಾಗೂ ರಾಷ್ಟ್ರಾಭಿಮಾನದ ಸಂಕೇತ ವಾಗಿ ಆಗಸ್ಟ್ 14ರಂದು ರಾತ್ರಿ ಮೈಸೂರಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ `ಮಿಡ್‍ನೈಟ್ ಫ್ರೀಡಂ ರನ್’ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದನ್ನು ಯಶಸ್ವಿಗೊಳಿಸಬೇಕೆಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಭವನದಲ್ಲಿ ಇಂದು ಏರ್ಪಡಿಸಿದ್ದ ಮಿಡ್‍ನೈಟ್ ಫ್ರೀಡಂ ರನ್ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ನನಗೆ ರಾಜಕೀಯ ಜನ್ಮ ನೀಡಿದ ಮೈಸೂರಲ್ಲಿ ಸ್ವಾತಂತ್ರ್ಯ ದಿನಾಚರಣೆಯ…

1 1,448 1,449 1,450 1,451 1,452 1,611
Translate »