ಮೈಸೂರು

ಇನ್ನು 15 ದಿನದಲ್ಲಿ ಬಾಕಿ ಮನೆಗಳಿಗೆ ಜಸ್ಕೋ ನೀರಿನ ಸಂಪರ್ಕ ಕಲ್ಪಿಸಲು ಶಾಸಕ ರಾಮದಾಸ್ ತಾಕೀತು
ಮೈಸೂರು

ಇನ್ನು 15 ದಿನದಲ್ಲಿ ಬಾಕಿ ಮನೆಗಳಿಗೆ ಜಸ್ಕೋ ನೀರಿನ ಸಂಪರ್ಕ ಕಲ್ಪಿಸಲು ಶಾಸಕ ರಾಮದಾಸ್ ತಾಕೀತು

August 4, 2018

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಮರುವಿಂಗಡಿತ 55ನೇ ವಾರ್ಡ್‍ನಲ್ಲಿ ಪಾದಯಾತ್ರೆ ನಡೆಸಿ, ಸಮಸ್ಯೆ ಆಲಿಸಿದ ಶಾಸಕ ಎಸ್.ಎ.ರಾಮದಾಸ್ ಅವರು, ಇನ್ನು 15 ದಿನಗಳಲ್ಲಿ ಜಸ್ಕೋ ಬಾಕಿ ಉಳಿಸಿರುವ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವುದರೊಂದಿಗೆ, ಪೈಪ್‍ಲೈನ್‍ಗಾಗಿ ಅಗೆದಿರುವ ರಸ್ತೆಗಳಿಗೆ ಡಾಂಬರು ಹಾಕಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ನರ್ಮ್ ಯೋಜನೆಯಡಿ 24×7 ಕುಡಿಯುವ ನೀರು ಸರಬರಾಜು ಕಾಮಗಾರಿ ನಡೆಸಿದ ಜಸ್ಕೋ ಸಂಸ್ಥೆ, ಅನೇಕ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಎಲ್ಲಾ ಮನೆಗಳಿಗೂ ಸಂಪರ್ಕ ಕಲ್ಪಿಸಬೇಕು. ಅಲ್ಲದೆ…

ಮೈಸೂರಲ್ಲಿ ಸಂಭ್ರಮದ ಚಾಮುಂಡೇಶ್ವರಿ ವರ್ಧಂತಿ ಉತ್ಸವ: ದೇವಿಗೆ ಪೂಜೆ ಸಲ್ಲಿಸಿ ವಿವಿಧ ರೀತಿಯ ಪ್ರಸಾದ ವಿನಿಯೋಗ
ಮೈಸೂರು

ಮೈಸೂರಲ್ಲಿ ಸಂಭ್ರಮದ ಚಾಮುಂಡೇಶ್ವರಿ ವರ್ಧಂತಿ ಉತ್ಸವ: ದೇವಿಗೆ ಪೂಜೆ ಸಲ್ಲಿಸಿ ವಿವಿಧ ರೀತಿಯ ಪ್ರಸಾದ ವಿನಿಯೋಗ

August 4, 2018

ಮೈಸೂರು:  ಮೈಸೂರಿನಲ್ಲಿ ಇಂದು ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಸಂಭ್ರಮ ಮನೆಮಾಡಿತ್ತು. ನಗರದ ವಿವಿಧೆಡೆ ದೇವಾಲಯಗಳು, ರಸ್ತೆ, ವೃತ್ತಗಳು ಮತ್ತು ಆಟೋ ನಿಲ್ದಾಣಗಳಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ವರ್ಧಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ವಿವಿಧ ಆಟೋ ಚಾಲಕರ ಸಂಘಗಳು, ಸೇವಾ ಸಂಸ್ಥೆಗಳು ನಗರದ ಪ್ರಮುಖ ವೃತ್ತಗಳಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನರಿಗೆ ಪೂಜೆ ಸಲ್ಲಿಸಿ, ಪಲಾವ್, ಕೇಸರಿಬಾತ್, ಲಡ್ಡು, ಜಹಾಂಗೀರ್ ಮತ್ತಿತರೆ ತಿಂಡಿಗಳನ್ನು ಭಕ್ತರಿಗೆ ವಿತರಿಸುವ ಮೂಲಕ ವರ್ಧಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಈ ವೇಳೆ…

ಮಹಾರಾಜ ಕಾಲೇಜು ಮೈದಾನದಲ್ಲಿ 10 ದಿನಗಳ ಗೃಹೋಪಯೋಗಿ ವಸ್ತುಗಳ ಪ್ರದರ್ಶನ, ಮಾರಾಟ
ಮೈಸೂರು

ಮಹಾರಾಜ ಕಾಲೇಜು ಮೈದಾನದಲ್ಲಿ 10 ದಿನಗಳ ಗೃಹೋಪಯೋಗಿ ವಸ್ತುಗಳ ಪ್ರದರ್ಶನ, ಮಾರಾಟ

August 4, 2018

ಮೈಸೂರು:  ಮಹಾರಾಜ ಕಾಲೇಜು ಮೈದಾನದಲ್ಲಿ ಇಂದಿನಿಂದ 10 ದಿನಗಳ ಕಾಲ ಆಯೋಜಿಸಿರುವ ಗೃಹಶೋಭೆಗೆ ಶುಕ್ರವಾರ ಚಾಲನೆ ನೀಡಲಾಯಿತು. ಶಾಸಕ ಎಲ್.ನಾಗೇಂದ್ರ ಅವರು ಗೃಹಶೋಭೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, 10 ದಿನಗಳ ಕಾಲ ಗೃಹಶೋಭೆ ಆಯೋಜಿಸಿದ್ದು, ಫರ್ನೀಚರ್ಸ್, ಗೃಹೋಪಯೋಗಿ ವಸ್ತುಗಳು, ಸೋಲಾರ್ ಪದಾರ್ಥ, ಬಟ್ಟೆಗಳು ಸೇರಿದಂತೆ ಮತ್ತಿತರೆ ವಸ್ತುಗಳು ಒಂದೇ ಸೂರಿನಡಿ ಲಭ್ಯವಿದ್ದು, ದೊಡ್ಡ ಮಹಲ್‍ಗಳಲ್ಲಿನ ದರಕ್ಕಿಂತ ಕಡಿಮೆ ದರದಲ್ಲಿ ದೊರೆಯಲಿವೆ. ಹಾಗಾಗಿ ಮೈಸೂರು ಸುತ್ತಮುತ್ತಲಿನ ನಿವಾಸಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಏನೇನಿದೆ:…

ಆ.9ರಂದು ಬೆಂಗಳೂರಲ್ಲಿ ರಾಜ್ಯ ಮಟ್ಟದ ವಿಶ್ವ ಆದಿವಾಸಿ ದಿನಾಚರಣೆ
ಮೈಸೂರು

ಆ.9ರಂದು ಬೆಂಗಳೂರಲ್ಲಿ ರಾಜ್ಯ ಮಟ್ಟದ ವಿಶ್ವ ಆದಿವಾಸಿ ದಿನಾಚರಣೆ

August 4, 2018

ಮೈಸೂರು: ಕರ್ನಾಟಕ ಆದಿವಾಸಿ ರಕ್ಷಣ ಪರಿಷತ್ತು, ಕರ್ನಾಟಕದ ಅಲೆಮಾರಿ ಹಾಗೂ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಆಶ್ರಯದಲ್ಲಿ ಆ.9ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ವಸಂತನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ಧಾಣದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಟ್ಟದ 24ನೇ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ಅಲೆಮಾರಿ ಆದಿವಾಸಿಗಳ ಕಲಾಮೇಳ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಎಂ.ಕೃಷ್ಣಯ್ಯ ತಿಳಿಸಿದರು. ಅಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಸಚಿವರಾದ ಪ್ರಿಯಾಂಕ ಖರ್ಗೆ, ಬಂಡೆಪ್ಪ…

ಕಂಡ ಕಂಡಲ್ಲಿ ಕಸ ಸುರಿಯುತ್ತಿದ್ದ 7 ವಾಹನ ವಶ: 15 ಸಾವಿರ ದಂಡ
ಮೈಸೂರು

ಕಂಡ ಕಂಡಲ್ಲಿ ಕಸ ಸುರಿಯುತ್ತಿದ್ದ 7 ವಾಹನ ವಶ: 15 ಸಾವಿರ ದಂಡ

August 3, 2018

ಮೈಸೂರು: ಎಲ್ಲೆಂದರಲ್ಲಿ ಕಸ ಸುರಿದು ಮೈಸೂರಿನ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಹಾಳು ಮಾಡುತ್ತಿದ್ದ ಕಿಡಿಗೇಡಿಗಳ ವಿರುದ್ದ ಮೈಸೂರು ನಗರ ಪಾಲಿಕೆ ಸಮರ ಸಾರಿದ್ದು, ಕಳೆದ 15 ದಿನದಲ್ಲಿ 7 ವಾಹನ ವಶಪಡಿಸಿಕೊಂಡು, 15 ಸಾವಿರ ರೂ ದಂಡ ವಿಧಿಸಿದೆ. ರಿಂಗ್ ರಸ್ತೆ, ಥಂಡಿ ಸಡಕ್ ರಸ್ತೆ ಸೇರಿದಂತೆ ನಗರ ವ್ಯಾಪ್ತಿಯ ಖಾಲಿ ಸ್ಥಳಗಳಲ್ಲಿ ಕಟ್ಟಡದ ತ್ಯಾಜ್ಯ, ಗ್ಯಾರೇಜ್‍ಗಳ ತ್ಯಾಜ್ಯ ಸೇರಿದಂತೆ ವಿವಿಧ ಬಗೆಯ ಕಸವನ್ನು ತಂದು ಸುರಿದು ಪರಾರಿಯಾಗುತ್ತಿರುವ ಪ್ರಕರಣ ಹೆಚ್ಚಾಗಿದ್ದು, ಇದರಿಂದ ಮೈಸೂರಿನ ಸೌಂದರ್ಯಕ್ಕೆ ಧಕ್ಕೆಯಾಗುತ್ತಿತ್ತು….

ಆ.29ಕ್ಕೆ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ
ಮೈಸೂರು

ಆ.29ಕ್ಕೆ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ

August 3, 2018

ಬೆಂಗಳೂರು: ರಾಜ್ಯದ 208 ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2 ಹಂತಗಳಲ್ಲಿ ಜರುಗಲಿದೆ. ಮೊದಲ ಹಂತದಲ್ಲಿ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್ 29ರಂದು ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಸೆ.18ರವರೆಗೂ ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಯಲ್ಲಿ ಜಾರಿಯಲ್ಲಿರುತ್ತದೆ ಎಂದರು. ಆಗಸ್ಟ್ 10ರಂದು ಈ ಸ್ಥಳೀಯ ಸಂಸ್ಥೆ ಗಳಿಗೆ ಅಧಿಸೂಚನೆ ಹೊರ ಬೀಳಲಿದ್ದು,…

ಶಿಮ್ಲಾದಿಂದ ಮಾನಸಿಕ ಸಂತ್ರಸ್ತೆ  ಸುರಕ್ಷಿತವಾಗಿ ಮೈಸೂರಿಗೆ ವಾಪಸ್
ಮೈಸೂರು

ಶಿಮ್ಲಾದಿಂದ ಮಾನಸಿಕ ಸಂತ್ರಸ್ತೆ  ಸುರಕ್ಷಿತವಾಗಿ ಮೈಸೂರಿಗೆ ವಾಪಸ್

August 3, 2018

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಭ ಕೋರಿಕೆ ಮೈಸೂರು ವಿಜಯನಗರ ಮಹಿಳಾ ನಿಲಯದಲ್ಲಿ ಆಶ್ರಯ ಮೈಸೂರು: ಮಾನಸಿಕ ಅಸ್ವಸ್ಥತೆ ಯಿಂದ ಕಳೆದ 2 ವರ್ಷಗಳ ಹಿಂದೆ ಶಿಮ್ಲಾ ಸೇರಿದ್ದ ಪಿರಿಯಾಪಟ್ಟಣ ತಾಲೂಕು ಕಂಪಲಾಪುರ ಸಮೀಪದ ಮೂಕನ ಹಳ್ಳಿ ಪಾಳ್ಯದ ಸರಸ್ವತಿ ಅಲಿಯಾಸ್ ಪದ್ಮ ಅವರನ್ನು ಜಿಲ್ಲಾಡಳಿತವು ಇಂದು ರಾತ್ರಿ ಮೈಸೂರಿಗೆ ಕರೆ ತಂದಿದೆ. ಈಕೆಯನ್ನು ತವರಿಗೆ ಕರೆತರುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ಪಾಟೀಲ್, ಜಿಲ್ಲಾ ಮಾನಸಿಕ ಆರೋಗ್ಯ…

ಮಾನಸಿಕ ಖಿನ್ನತೆಯಲ್ಲಿ ಭಾರತಕ್ಕೆ  ಮೊದಲ ಸ್ಥಾನ: ಶಾಸಕ ರಾಮದಾಸ್ ವಿಷಾದ
ಮೈಸೂರು

ಮಾನಸಿಕ ಖಿನ್ನತೆಯಲ್ಲಿ ಭಾರತಕ್ಕೆ  ಮೊದಲ ಸ್ಥಾನ: ಶಾಸಕ ರಾಮದಾಸ್ ವಿಷಾದ

August 3, 2018

ಮೈಸೂರು:  ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ವಿಷಾದಿಸಿದರು. ನಗರದ ಬೋಗಾದಿ ವರ್ತುಲ ರಸ್ತೆಯಲ್ಲಿರುವ ಜಿಎಲ್‍ಎನ್ ಕಲ್ಯಾಣ ಮಂಟಪದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಮೈಸೂರು ಜಯಚಾಮರಾಜ ವಲಯದ ವತಿಯಿಂದ ಇಂದಿನಿಂದ ಆ.5ರವರೆಗೆ ಆಯೋಜಿಸಿರುವ ‘ಯೋಗ ಜೀವನ ದರ್ಶನ 2018’ರ ಪ್ರಾಥಮಿಕ ಯೋಗ ಪ್ರಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೆಮ್ಮದಿ, ಆರೋಗ್ಯಕರ ಜೀವನ ನಡೆಸಲು ಯೋಗ ಅವಶ್ಯಕ ಎಂದರು. ನಾನು ಶಾಲೆಗಳಿಗೆ ಭೇಟಿ ನೀಡಿದ ವೇಳೆ ಶಾಲೆ ಬಿಟ್ಟ…

ಚಾಮುಂಡಿವಿಹಾರ ಕ್ರೀಡಾಂಗಣ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ. ಮಂಜೂರು
ಮೈಸೂರು

ಚಾಮುಂಡಿವಿಹಾರ ಕ್ರೀಡಾಂಗಣ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ. ಮಂಜೂರು

August 3, 2018

ಮೈಸೂರು: ಡೈರಿ ವೃತ್ತದಿಂದ ಎಸ್.ಪಿ.ಕಛೇರಿ ವೃತ್ತದವರೆ ಗಿನ ಚಾಮುಂಡಿವಿಹಾರ ಕ್ರೀಡಾಂಗಣ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ. ಮಂಜೂ ರಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸು ವುದಾಗಿ ಶಾಸಕ ಎಲ್.ನಾಗೇಂದ್ರ ತಿಳಿಸಿದರು. ಇಂದು ವಾರ್ಡ್ ನಂ.64ರಲ್ಲಿ ಅಧಿಕಾರಿಗಳೊಂದಿಗೆ ಪಾದಯಾತ್ರೆ ನಡೆಸಿ ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿದರು. ಈ ವೇಳೆ ಆರ್.ಒ.ಪ್ಲಾಂಟ್ ನಿರ್ಮಾಣವಾಗಿ ಪೂರ್ಣಗೊಂಡಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ, 8 ವರ್ಷಗಳಿಂದ ಸಮುದಾಯ ಭವನ ಕಾಮಗಾರಿ ಪೂರ್ಣಗೊಂಡಿಲ್ಲ. ಮೈಸೂರು ಒನ್ ಅವ್ಯವಸ್ಥೆಯಿಂದ ಕೂಡಿದ್ದು, ಅಲ್ಲಲ್ಲಿ ಕಸಕಡ್ಡಿ, ತ್ಯಾಜ್ಯಗಳು ಬಿದ್ದಿವೆ. ಜತೆಗೆ…

ಮೈಸೂರು ಜಿಲ್ಲೆ 8 ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮೀಸಲಾತಿ ಪ್ರಕಟ
ಮೈಸೂರು

ಮೈಸೂರು ಜಿಲ್ಲೆ 8 ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮೀಸಲಾತಿ ಪ್ರಕಟ

August 3, 2018

ಮೈಸೂರು:  ನಗರ ಸ್ಥಳೀಯ ಸಂಸ್ಥೆಗಳ 2018ರ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೈಸೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಅಂತಿಮ ಮೀಸಲಾತಿ ಪ್ರಕಟಿಸಿದೆ. ಮೈಸೂರು ನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ನಂಜನಗೂಡು ಹಾಗೂ ಹುಣಸೂರು ನಗರಸಭೆ, ತಿ.ನರಸೀಪುರ, ಬನ್ನೂರು, ಕೆಆರ್ ನಗರ, ಪಿರಿಯಾಪಟ್ಟಣ ಮತ್ತು ಹೆಚ್‍ಡಿ ಕೋಟೆ ಪುರಸಭೆಗಳಿಗೆ ವಾರ್ಡ್‍ವಾರು ಅಂತಿಮ ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿ, ಅಧಿಸೂಚನೆ ಹೊರಡಿಸಿದೆ. ಈ ನಡುವೆ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್‍ವಾರು ಮೀಸಲಾತಿ ಪ್ರಕಟಿಸಿದ್ದರೂ…

1 1,449 1,450 1,451 1,452 1,453 1,611
Translate »