ಮೈಸೂರು

ಸಾಲ ಮನ್ನಾಕ್ಕೆ ವಾರ ಕಾಯುತ್ತೇವೆ: ಬಿಎಸ್‍ವೈ
ಮೈಸೂರು

ಸಾಲ ಮನ್ನಾಕ್ಕೆ ವಾರ ಕಾಯುತ್ತೇವೆ: ಬಿಎಸ್‍ವೈ

May 29, 2018

ಬೆಂಗಳೂರು:  ರೈತರ ಸಾಲ ಮನ್ನಾಕ್ಕೆ ಇನ್ನೂ ಒಂದು ವಾರ ಕಾಯುತ್ತೇವೆ. ಮನ್ನಾ ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಇಂದು ಕರೆ ನೀಡಲಾಗಿದ್ದ ಸ್ವಯಂ ಕರ್ನಾಟಕ ಬಂದ್ ವೇಳೆ ಬಲ ಪ್ರಯೋಗ ಮಾಡಿ ಹತ್ತಿಕ್ಕುವ ಯತ್ನ ನಡೆದಿದೆ. ಇದರ ನಡುವೆಯೂ ಬಂದ್ ಯಶಸ್ವಿಯಾಗಿದೆ. ಇನ್ನೊಂದು ವಾರ ಕಾಯುತ್ತೇವೆ. ಸಾಲ ಮನ್ನಾ ಮಾಡದಿದ್ದಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಪತ್ರಿಕಾ ‘ಸಂವಾದ’:  ಶೈಕ್ಷಣ ಕ ಕ್ಷೇತ್ರದ ಅಭಿವೃದ್ಧಿಗೆ ಇದು ನನ್ನ ಆದ್ಯತೆ
ಮೈಸೂರು

ದಕ್ಷಿಣ ಶಿಕ್ಷಕರ ಕ್ಷೇತ್ರದ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಪತ್ರಿಕಾ ‘ಸಂವಾದ’: ಶೈಕ್ಷಣ ಕ ಕ್ಷೇತ್ರದ ಅಭಿವೃದ್ಧಿಗೆ ಇದು ನನ್ನ ಆದ್ಯತೆ

May 29, 2018

ಮೈಸೂರು: ಮುಂಬರುವ ಜೂ.8 ರಂದು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ನಮಗೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಕ ಮತದಾರರಲ್ಲಿ ಮನವಿ ಮಾಡಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ‘ಸಂವಾದ’ ದಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಜೆಡಿಎಸ್ ಅಭ್ಯರ್ಥಿ ಮರಿತಿಬ್ಬೇಗೌಡ, ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಬಿಜೆಪಿ ಅಭ್ಯರ್ಥಿ ಬಿ.ನಿರಂಜನಮೂರ್ತಿ, ಶಿಕ್ಷಕರ ಸಮಸ್ಯೆಗಳ ಬಗ್ಗೆ ನಮಗೇ ಸಂಪೂರ್ಣ ಅರಿವಿದ್ದು,…

ಸಾಕಷ್ಟು ಕೆಲಸ ಮಾಡಿದ್ದರೂ ಮತದಾರರು ನನ್ನನ್ನು ಏಕೆ ಸೋಲಿಸಿದರೋ ಗೊತ್ತಿಲ್ಲ
ಮೈಸೂರು

ಸಾಕಷ್ಟು ಕೆಲಸ ಮಾಡಿದ್ದರೂ ಮತದಾರರು ನನ್ನನ್ನು ಏಕೆ ಸೋಲಿಸಿದರೋ ಗೊತ್ತಿಲ್ಲ

May 29, 2018

ಮೈಸೂರು:  ನಾನು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಕ್ಷೇತ್ರದ ಜನತೆ ನನ್ನನ್ನು ಏಕೆ ಸೋಲಿಸಿದರೋ ಗೊತ್ತಿಲ್ಲ. ಆದರೂ ಮತದಾರರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಸೋಲು ಗೆಲುವು ಸಹಜ. ಹಾಗೆಂದು ಎದೆಗುಂದದೆ ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿ, ಜನರಿಗಾಗಿ ಹೋರಾಟ ಮುಂದುವರಿಸುತ್ತೇನೆ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಶಾಸಕ ಅವಧಿಯಲ್ಲಿ ತಾವು ರಸ್ತೆ, ಒಳಚರಂಡಿ, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ಶೇ.90ರಷ್ಟು ಅಭಿವೃದ್ಧಿಪರ ಕೆಲಸಗಳನ್ನು…

ಲಲಿತಕಲೆಗಳಲ್ಲಿ ಪದವಿ ಪಡೆಯಲು ಯುವಜನರ ಹಿಂದೇಟು
ಮೈಸೂರು

ಲಲಿತಕಲೆಗಳಲ್ಲಿ ಪದವಿ ಪಡೆಯಲು ಯುವಜನರ ಹಿಂದೇಟು

May 29, 2018

ಮೈಸೂರು: ಲಲಿತಕಲೆಗಳಲ್ಲಿ ಶೈಕ್ಷಣ ಕ ಅರ್ಹತೆ ಪಡೆದವರಿಗೆ ಸೂಕ್ತ ಉದ್ಯೋಗಾವಕಾಶಗಳ ಕೊರತೆ ಇರುವುದರಿಂದಾಗಿ ಯುವಜನರು ಲಲಿತಕಲೆಗಳಲ್ಲಿ ಪದವಿ ಪಡೆಯಲು ಹಿಂದೇಟು ಹಾಕುವಂತಾಗಿದೆ. ಹಾಗಾಗಿಯೇ ಸಂದೇಶದಂಥ ಲಲಿತಕಲಾ ಕಾಲೇಜುಗಳು ಮುಚ್ಚಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ಅರೆಭಾಷೆ ಸಾಹಿತ್ಯ ಹಾಗೂ ಸಂಸ್ಕೃತಿ ಅಕಾಡೆಮಿ ಸದಸ್ಯೆ ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು. ಮೈಸೂರಿನ ಸಂದೇಶ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಲಲಿತಕಲೆಗಳಲ್ಲಿ ಪದವಿ…

ಜೈಲು ಸೇರಿದ ಪತ್ನಿ, ಪುತ್ರಿ ಕೊಂದ ಟೆಕ್ಕಿ
ಮೈಸೂರು

ಜೈಲು ಸೇರಿದ ಪತ್ನಿ, ಪುತ್ರಿ ಕೊಂದ ಟೆಕ್ಕಿ

May 29, 2018

ಮೈಸೂರು: ಪತ್ನಿ ಹಾಗೂ ಪುತ್ರಿಯನ್ನು ಬರ್ಬರವಾಗಿ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಟೆಕ್ಕಿ ಪ್ರಜ್ವಲ್‍ನನ್ನು ಬಂಧಿಸಿ ವಿಜಯನಗರ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ. ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜೋಡಿ ಕೊಲೆ ಆರೋಪಿ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಇನ್ಸ್‍ಪೆಕ್ಟರ್ ಅನಿಲ್‍ಕುಮಾರ್ ಇಂದು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ಎನ್.ಆರ್. ಉಪ ವಿಭಾಗದ ಎಸಿಪಿ ಸಿ. ಗೋಪಾಲ್ ತಿಳಿಸಿದ್ದಾರೆ. ಮೈಸೂರಿನ ವಿಜಯನಗರ 4ನೇ ಹಂತದ ನಿವಾಸಿಯಾದ ಆರ್. ಪ್ರಜ್ವಲ್ ಮೇ 23…

ಬೈಕುಗಳ ನಡುವೆ ಡಿಕ್ಕಿ: ಓರ್ವ ಸಾವು, ಮತ್ತೋರ್ವನಿಗೆ ಗಾಯ
ಮೈಸೂರು

ಬೈಕುಗಳ ನಡುವೆ ಡಿಕ್ಕಿ: ಓರ್ವ ಸಾವು, ಮತ್ತೋರ್ವನಿಗೆ ಗಾಯ

May 29, 2018

ಮೈಸೂರು: ಎರಡು ಬೈಕುಗಳ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ನಗರ ತಾಲೂಕು, ಕಲ್ಯಾಣಪುರ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ. ಗ್ರಾಮದ ಸತೀಶ್ ನಾಯಕ(32) ಸಾವನ್ನಪ್ಪಿದವರಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಉದಯ್ ಅವರನ್ನು ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಸನ-ಮೈಸೂರು ಹೆದ್ದಾರಿಯ ಕಲ್ಯಾಣಪುರ ಬಳಿ ಎರಡು ಬೈಕುಗಳು ಡಿಕ್ಕಿ ಹೊಡೆದ ಪರಿಣಾಮ ಸತೀಶ್ ನಾಯಕ ತಲೆಗೆ ತೀವ್ರ ಗಾಯಗಳಾಗಿ ರಕ್ತಸ್ರಾವವಾದ ಕಾರಣ ಅವರು ಸ್ಥಳದಲ್ಲೇ ಅಸುನೀಗಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ…

ವಿಧಾನ ಪರಿಷತ್‍ಗೆ ಪೌರ ಕಾರ್ಮಿಕರ ಪ್ರತಿನಿಧಿ ನಾಮ ನಿರ್ದೇಶನಕ್ಕೆ ಆಗ್ರಹ
ಮೈಸೂರು

ವಿಧಾನ ಪರಿಷತ್‍ಗೆ ಪೌರ ಕಾರ್ಮಿಕರ ಪ್ರತಿನಿಧಿ ನಾಮ ನಿರ್ದೇಶನಕ್ಕೆ ಆಗ್ರಹ

May 29, 2018

ಮೈಸೂರು:  ರಾಜ್ಯ ವಿಧಾನಪರಿಷತ್‍ಗೆ ಪೌರ ಕಾರ್ಮಿಕರ ಪ್ರತಿನಿಧಿಯೊಬ್ಬರನ್ನು ನಾಮ ನಿರ್ದೇಶನ ಮಾಡುವ ಮೂಲಕ ಪೌರ ಕಾರ್ಮಿಕರಿಗೂ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಮಾಜಿ ಅಧ್ಯಕ್ಷ, ಕರ್ನಾಟಕ ಪೌರ ಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ಇಂದಿಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ವಿಧಾನ ಪರಿಷತ್‍ಗೆ ಕನಿಷ್ಟ ಒಬ್ಬ ಪೌರ ಕಾರ್ಮಿಕ ಸದಸ್ಯರನ್ನು ನೇಮಕಗೊಳಿಸಿ, ಸಾಮಾಜಿಕ ನ್ಯಾಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಚಿಂತಿಸಿ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ…

ಪರಿಸರ ಅಧ್ಯಯನ ಶಿಬಿರ:ವಿದ್ಯಾರ್ಥಿಗಳಿಗೆ ವನ್ಯ ಸಂಪತ್ತಿನ ಸಂರಕ್ಷಣೆ ಮಹತ್ವದ ವಿವರಣೆ
ಮೈಸೂರು

ಪರಿಸರ ಅಧ್ಯಯನ ಶಿಬಿರ:ವಿದ್ಯಾರ್ಥಿಗಳಿಗೆ ವನ್ಯ ಸಂಪತ್ತಿನ ಸಂರಕ್ಷಣೆ ಮಹತ್ವದ ವಿವರಣೆ

May 29, 2018

ಮೈಸೂರು:  ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಬಂಡೀಪುರದ ಮಂಗಲ ಗ್ರಾಮದಲ್ಲಿ ನಡೆದ ಎರಡು ದಿನಗಳ ಪರಿಸರ ಅಧ್ಯಯನ ಶಿಬಿರದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಗಂಗೋತ್ರಿ ಘಟಕದ ವಿದ್ಯಾರ್ಥಿಗಳಿಗಾಗಿ ವನ್ಯಸಂಪತ್ತಿನ ಸಂರಕ್ಷಣೆಯ ಮಹತ್ವವನ್ನು ಅರಿತುಕೊಂಡರು. ವೈಲ್ಡ್‍ಲೈಫ್ ಕನ್ರ್ಸರ್ವೇಷನ್ ಫೌಂಡೇಷನ್(ಡಬ್ಲ್ಯುಸಿಎಫ್) ವತಿಯಿಂದ ನಡೆದ ಅಧ್ಯಯನ ಶಿಬಿರದಲ್ಲಿ ಯೂತ್ ಹಾಸ್ಟೆಲ್ ಗಂಗೋತ್ರಿ ಘಟಕದ 25 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎರಡು ದಿನಗಳ ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಡಬ್ಲ್ಯುಸಿಎಫ್ ಸಂಸ್ಥೆಯ ಮುಖ್ಯಸ್ಥ ಡಿ.ರಾಜಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ನಾಗೇಂದ್ರ ಪ್ರಸಾದ್ ಸೇರಿದಂತೆ ಇನ್ನಿತರರು…

ಮಳೆಗೆ ಬಾಯ್ತೆರೆದ ಗುಂಡಿಗಳು: ವಾಹನ ಸವಾರರ ಪೇಚಾಟ
ಮೈಸೂರು

ಮಳೆಗೆ ಬಾಯ್ತೆರೆದ ಗುಂಡಿಗಳು: ವಾಹನ ಸವಾರರ ಪೇಚಾಟ

May 29, 2018

ಮೈಸೂರು: ಮೈಸೂರಿನಲ್ಲಿ ನಿರಂತರವಾಗಿ ಸುರಿ ಯುತ್ತಿರುವ ಮಳೆಯ ನಡುವೆ, ಈ ಹಿಂದೆ ತೇಪೆ ಹಾಕಿ ಮುಚ್ಚಿದ್ದ ಗುಂಡಿಗಳು ಬಾಯ್ತೆರೆದು, ವಾಹನ ಸಂಚಾರಕ್ಕೆ ಅಪಾಯ ಕಾರಿಯಾಗಿ ಪರಿಣಮಿಸುತ್ತಿವೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೈಸೂರಿನಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಗರಿಗೆದರಿತ್ತು. ಕೆಲ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಿದರೆ ಮತ್ತಷ್ಟು ರಸ್ತೆಗಳಲ್ಲಿ ಗುಂಡಿಗಳನ್ನು ಮಾತ್ರ ಮುಚ್ಚಿ ತೇಪೆ ಹಾಕಲಾಗಿತ್ತು. ಈ ರೀತಿಯ ತರಾ ತುರಿ ಕಾಮಗಾರಿಯೂ ಸಂಪೂರ್ಣ ವಾಗದ ಕಾರಣ ಹಲವಾರು ಗುಂಡಿಗಳಿಗೆ ಡಾಂಬರು ಬದಲಾಗಿ ಮಣ್ಣು ಮುಚ್ಚ ಲಾಗಿದೆ. ವಾರದಿಂದ ನಿರಂತರವಾಗಿ…

100 ವರ್ಷವಾದರೂ ಜೆಡಿಎಸ್‍ಗೆ ಬಹುಮತ ಬರಲ್ಲ: ಶ್ರೀರಾಮುಲು
ಮೈಸೂರು

100 ವರ್ಷವಾದರೂ ಜೆಡಿಎಸ್‍ಗೆ ಬಹುಮತ ಬರಲ್ಲ: ಶ್ರೀರಾಮುಲು

May 29, 2018

ಕೊಪ್ಪಳ: ಜಾತ್ಯಾತೀತ ಜನತಾ ದಳಕ್ಕೆ 100 ವರ್ಷ ಆದರೂ ಬಹು ಮತ ಬರಲ್ಲ. ಬೇಕಾದರೆ ಇದನ್ನು ಬರೆದಿಟ್ಟುಕೊಳ್ಳಿ ಎಂದು ಬಿಜೆಪಿ ಮುಖಂಡ ಹಾಗೂ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಮಾಧ್ಯಮದವರಿಗೆ ತಿಳಿಸಿದ್ದಾರೆ. ಅಧಿಕಾರ ಇದೆ ಎಂದು ಪೊಲೀಸರನ್ನು ಬಳಸಿ ಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಸರ್ಕಾರ ಬಹಳ ದಿನ ಇರಲ್ಲ. ಸದ್ಯದಲ್ಲೇ ಬಿದ್ದುಹೋಗುತ್ತದೆ. ಬಿ.ಎಸ್.ಯಡಿಯೂರಪ್ಪ ಅವರು ಸದ್ಯದಲ್ಲೇ ಮುಖ್ಯಮಂತ್ರಿ ಯಾಗುವುದು ಶತಸಿದ್ಧ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟರು.

1 1,450 1,451 1,452 1,453 1,454 1,478
Translate »