ಆಗಸ್ಟ್ 10ರಿಂದ ಯಕ್ಷೋತ್ಸವ
ಮೈಸೂರು

ಆಗಸ್ಟ್ 10ರಿಂದ ಯಕ್ಷೋತ್ಸವ

August 3, 2018

ಮೈಸೂರು: ಮೈಸೂರಿನ ಇನೋ ವೇಟಿವ್ ಸಂಸ್ಥೆ ಕನ್ನಡ ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಆಗಸ್ಟ್ 10ರಿಂದ 3 ದಿನಗಳ ಯಕ್ಷೋತ್ಸವ ಹಮ್ಮಿಕೊಂಡಿದೆ.

ಆ.10ರಂದು ಸಂಜೆ 6 ಗಂಟೆಗೆ ಕೆರೆ ಮನೆ ಶ್ರೀಧರ ಹೆಗಡೆ ಅವರಿಂದ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನವಿದೆ. ಸಂಜೆ 7.30ಕ್ಕೆ ಪದ್ಮಶ್ರೀ ಚಿಟ್ಟಾಣಿ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಲಾಗಿದೆ. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಯಕ್ಷಗಾನ ಕಲಾವಿದ ಸಂಘಟಕ ಎಸ್.ಎನ್. ಪಂಜಾಜೆಯವರಿಗೆ ಚಿಟ್ಟಾಣಿ ಪ್ರಶಸ್ತಿಯನ್ನು ಚಾಮರಾಜನಗರದ ಉದ್ಯಮಿ ಜಿ.ಎಮ್.ಹೆಗಡೆ ಪ್ರದಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಪಾರ್ತಿ ಸುಬ್ಬ ಪ್ರಶಸ್ತಿ ಪುರಸ್ಕೃತ ಜೆ.ಎಸ್.ಭಟ್ಟ ವಹಿಸಲಿ ದ್ದಾರೆ. ಇದೇ ವೇಳೆ ‘ಕಾಲಯವನ’ ಯಕ್ಷಗಾನ ಪ್ರದರ್ಶನವಿದೆ. ಆ.11ರಂದು ಸಂಜೆ 6ರಿಂದ ಶ್ರೀರಾಮಾಂಜನೇಯ ಯಕ್ಷಗಾನ ಪ್ರದರ್ಶನ ವಿದೆ. ಆ.12, ಭಾನುವಾರ ಬೆಳಿಗ್ಗೆ 10 ಗಂಟೆಗೆ ಸುರುಚಿ ರಂಗಮನೆಯಲ್ಲಿ ಯಕ್ಷಗಾನ ಶಕಪುರುಷ, ಶೇಣಿ ಗೋಪಾಲಕೃಷ್ಣ ಭಟ್ಟರ ನೂರರ ನೆನಪು, ವಿಚಾರಸಂಕಿರಣ ಏರ್ಪಡಿಸಲಾಗಿದೆ. ಹಿರಿಯ ಸಹಕಾರಿ ಧುರೀಣ ರಘುರಾಮ್ ವಾಜಪೇಯಿ ಉದ್ಘಾಟಿಸುವರು. ಶೇಣಿಯವರ ಜೀವನ ಸಾಧನೆ ಕುರಿತಂತೆ ಡಾ.ಶ್ರೀಧರ ಹೆಗಡೆ ಮಡಿಕೇರಿ, ಡಾ.ಕಬ್ಬಿನಾಲೆ ವಸಂತ ಭಾರ ದ್ವಾಜ ಮತ್ತು ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ.ನಾ.ಚಂಬಲಿಮಾರ್ ಉಪನ್ಯಾಸ ನೀಡಲಿದ್ದಾರೆ. ಇನೋವೇಟಿವ್ ಅಧ್ಯಕ್ಷ ಜಿ.ಎಸ್.ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕ ಯಕ್ಷ ಗಾನ ಅಕಾಡೆಮಿ ಪ್ರಾಯೋಜಿಸಿದೆ. ಪಾರ್ಥಸಾರಥ್ಯ ಯಕ್ಷಗಾನ, ತಾಳ ಮದ್ದಳೆ ಏರ್ಪಡಿಸಲಾಗಿದೆ.

ಭಾಗವತರಾಗಿ ಬೆಂಗಳೂರಿನ  ಯು. ವಿಶ್ವನಾಥ ಶೆಟ್ಟಿ, ಅರ್ಥಧಾರಿಗಳಾಗಿ ಪ್ರೊ. ಎಸ್.ಡಿ.ಹೆಗಡೆ, ಹೊನ್ನಾವರ, ಡಾ.ಕಬ್ಬಿ ನಾಲೆ ವಸಂತ ಭಾರದ್ವಾಜ ಮತ್ತು ವಿದ್ವಾನ್ ಕೆ.ವೈ.ಕೃಷ್ಣಕುಮಾರಾಚಾರ್ಯ ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಇದನ್ನು ಖ್ಯಾತ ಉದ್ಯಮಿ ಡಾ.ಎಮ್. ಜಗನ್ನಾಥ ಶೆಣೈ ಪ್ರಾಯೋಜಿಸಿದ್ದಾರೆ. 3 ದಿನಗಳ ಯಕ್ಷಗಾನವನ್ನು ಕೆರೆಮನೆ ಶಿವಾನಂದ ಹೆಗಡೆ ಸಂಯೋ ಜಿಸಿ, ನಿರ್ದೇಶಿಸಿದ್ದಾರೆ. ಶ್ರೀ ಇಡಗುಂಜಿ ಮಹಾ ಗಣಪತಿ ಯಕ್ಷಗಾನ ಮಂಡಳಿ ಕಲಾವಿ ದರು ಯಕ್ಷಗಾನ ಪ್ರದರ್ಶನ ನೀಡಲಿ ದ್ದಾರೆ. 3 ದಿನಗಳ ಯಕ್ಷಗಾನ ಪ್ರದರ್ಶನ ಮೈಸೂರಿನ ಕಲಾಮಂದಿರದಲ್ಲಿ ಏರ್ಪಡಿ ಸಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ. ಹೆಚ್ಚಿನ ಮಾಹಿತಿಗೆ ದೂ.9448354541 ಸಂಪರ್ಕಿಸಿ

Translate »