ಮೈಸೂರಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ
ಮೈಸೂರು

ಮೈಸೂರಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ

July 30, 2018

ಮೈಸೂರು:  ಸಂಗೀತ, ನಾಟಕ, ಚಿತ್ರಕಲೆ ಹಾಗೂ ಅಕ್ಷರ ಭ್ಯಾಸ ಹೇಳಿಕೊಡುವ ಗುರುಗಳನ್ನು ಮಾಧ್ಯಮಗಳಲ್ಲಿ ಬಹಳ ಕೆಟ್ಟದ್ದಾಗಿ ಬಿಂಬಿಸು ತ್ತಿರುವುದು ಬೇಸರ ಸಂಗತಿ ಎಂದು ವಿಜಯ ವಿಠಲ ಕಾಲೇಜಿನ ಪ್ರಾಂಶುಪಾಲ ಸತ್ಯ ಪ್ರಸಾದ್ ಅಭಿಪ್ರಾಯಪಟ್ಟರು.

ಸರಸ್ವತಿ ಪುರಂನಲ್ಲಿರುವ ವಿಜಯ ವಿಠಲ ಕಾಲೇಜು ಆವರಣದ ವಿಶ್ವೇಶ ತೀರ್ಥ ಮಂಟಪದಲ್ಲಿ ಕರಾವಳಿ ಯಕ್ಷಗಾನ ಕೇಂದ್ರ, ಬೆಂಗಳೂರಿನ ಕರ್ನಾಟಕ ಯಕ್ಷ ಗಾನ ಅಕಾಡೆಮಿ ಸಹಯೋಗದೊಂದಿಗೆ ಆಯೋಜಿಸಿದ್ದ `ಯಕ್ಷಗಾನ ಪ್ರಾತ್ಯಕ್ಷಿಕೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದರು. ಇತ್ತೀಚೆಗೆ ಮಕ್ಕಳಲ್ಲಿ, ಗುರುಗಳ ಬಗ್ಗೆ ತಾತ್ಸಾರ ಮನೋಭಾವ ಬೆಳೆಯುತ್ತಿದೆ ಎಂದರು.

ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿ ಯಾದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸುವುದು ಕಷ್ಟವಲ್ಲ. ಈ ವಿದ್ಯಾರ್ಥಿ ಗಳು ಮುಖ್ಯ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ, ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಕೆಲ ಘಟನೆಗಳನ್ನು ತಿಳಿಸಿದರು.

ಹತ್ತು ವರ್ಷದ ನನ್ನ ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಏಕಾಗ್ರತೆ, ಕ್ರಿಯಾಶೀಲತೆ ಹಾಗೂ ಓದಿನಲ್ಲಿ ವಿಶಿಷ್ಟ ಸಾಧನೆ ಮಾಡಬೇಕಾದರೆ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಸಾಕಷ್ಟು ಅನುಕೂಲಗಳಿವೆ. ಯಕ್ಷಗಾನ ಕಲೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ, ಪರೀಕ್ಷೆ ಎದುರಿಸುವುದು ಸುಲಭ. ಇದನ್ನು ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿದ್ದ ಸಮಯದಲ್ಲಿ ನನಗೆ ಅನುಭವ ಬಂತು.

ವೇದಿಕೆಯಲ್ಲಿ ವಿದ್ವಾನ್ ಕೃಷ್ಣ ಕುಮಾರಾ ಚಾರ್ಯ, ಬಿ.ಪುರುಷೋತ್ತಮ ಗೌಡ, ಯಕ್ಷಗಾನ ಕಲಾವಿದ ಸುಜಯೀಂದ್ರ ಹಂದೆ, ರಾಜ ಜಿ.ಕಾಂಚನ್, ಯು.ವಿ.ರಾಜೇಶ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

Translate »