ಪ್ರೇಕ್ಷಕರ ಮನಸೆಳೆದ ಯಕ್ಷಗಾನ
ಮೈಸೂರು

ಪ್ರೇಕ್ಷಕರ ಮನಸೆಳೆದ ಯಕ್ಷಗಾನ

August 13, 2018

ಮೈಸೂರು: ಮೈಸೂರಿನ ಕಲಾಮಂದಿರ ದಲ್ಲಿ ಇನೊವೇಟಿವ್ ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಕೆರೆಮನೆ ಶಿವಾನಂದ ಹೆಗಡೆ ಇವರ ನಿರ್ದೇಶನದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾವಿದ ರಿಂದ ‘ವಾಲಿ ಮೋಕ್ಷ’ ಯಕ್ಷ ಗಾನ ಪ್ರದರ್ಶನ ನಡೆಯಿತು. ಯಕ್ಷಗಾನ ಪ್ರದರ್ಶನದಲ್ಲಿ ಹಿರಿಯ ಕಲಾವಿದ ಅನಂತ ಕೆರೆಮನೆ ಶಿವಾನಂದ ಹೆಗಡೆ ರಾಮನ ಪಾತ್ರದಲ್ಲಿ ಮಿಂಚಿದರು. ಹಡಿನಬಾಳು ಶ್ರೀಪಾದ ಹೆಗಡೆ, ಈಶ್ವರ ಭಟ್ ಹಂಸಳ್ಳಿ, ವಿಘ್ನೇಶ್ವರ ಹಾವಗೋಡಿ ಮುಂತಾದವರು ಉತ್ತಮ ಕುಣಿತ ಮತ್ತು ಮಾತುಗಾರಿಕೆಯಿಂದ ರಂಜಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ, ಮೃದಂಗ ವಾದಕರಾಗಿ ಪರಮೇ ಶ್ವರ ಹೆಗಡೆ ತಾರೇಸರ, ಚಂಡೆ ವಾದಕ ರಾಗಿ ಕೃಷ್ಣ ಯಾಜಿ ಇಡಗುಂಜಿ ಉತ್ತಮ ವಾಗಿ ನಿರ್ವಹಿಸಿದರು.

ಯಕ್ಷಗಾನಕ್ಕೆ ಡಾ.ಎಂ.ಜಗನ್ನಾಥ ಶೆಣೈ ಪ್ರಾಯೋಜಕರಾಗಿದ್ದು, ಕೆರೆಮನೆ ಶಿವಾನಂದ ಸಂಯೋಜಿಸಿದ್ದರು. ಇನೊ ವೇಟಿವ್ ಮೈಸೂರು ಸಂಸ್ಥೆ ಅಧ್ಯಕ್ಷ ಜಿ.ಎಸ್.ಭಟ್ಟ, ಕಾರ್ಯದರ್ಶಿ ಹೇರಂಬ ಆರ್. ಭಟ್ಟ, ಕೋಶಾಧ್ಯಕ್ಷ ಡಾ.ಎಸ್.ಎನ್.ಹೆಗಡೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Translate »