ಹಿಂದುತ್ವ ಕೇವಲ ಧರ್ಮವಲ್ಲ, ಅದು ಜೀವನದ ಮಾರ್ಗ
ಮೈಸೂರು

ಹಿಂದುತ್ವ ಕೇವಲ ಧರ್ಮವಲ್ಲ, ಅದು ಜೀವನದ ಮಾರ್ಗ

August 13, 2018

ಮಾಜಿ ರಾಯಭಾರಿ, ಶ್ರೇಷ್ಠ ಬರಹಗಾರ ಪವನ್ ವರ್ಮಾ ಪ್ರತಿಪಾದನೆ
ಮೈಸೂರು:  ಹಿಂದುತ್ವವೂ ಕೇವಲ ಧರ್ಮವಲ್ಲ, ಅದು ಜೀವನದ ಮಾರ್ಗ ಎಂಬುದನ್ನು ಮಾಜಿ ರಾಯಭಾರಿ ಹಾಗೂ ಶ್ರೇಷ್ಠ ಬರಹಗಾರ ಪವನ್ ವರ್ಮಾ ಅವರು ಅರ್ಥಗರ್ಭಿತವಾಗಿ ವಿವರಿಸಿದರು.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ರುವ ಸೆನೆಟ್ ಭವನದಲ್ಲಿ ಮೈಸೂರು ಲಿಟರರಿ ಅಸೋಸಿಯೇಷನ್ ಇಂದು ಏರ್ಪ ಡಿಸಿದ್ದ ‘ಮೈಸೂರು ಲಿಟರರಿ ಫೆಸ್ಟ್-2018’ ರಲ್ಲಿ ಭಾಗವಹಿಸಿ, ‘ಹಿಂದೂ ತತ್ವಶಾಸ್ತ್ರದಲ್ಲಿ ಆದಿ ಶಂಕರಾಚಾರ್ಯರು ಪ್ರಸ್ತಾಪಿಸಿದ ಅದ್ಭುತ ನಿರೂಪಣೆ’ ಕುರಿತು ವಿಚಾರ ಮಂಡಿಸಿದ ಅವರು, ಶಿಕ್ಷಣದಲ್ಲಿ ಪುರಾತನ ಕಾಲದ ಗುರುಕುಲ ಪದ್ಧತಿ ಹೇಗಿತ್ತು ಎಂಬುದರ ಬಗ್ಗೆ ಬೆಳಕು ಚೆಲ್ಲಿ ದರು. ಅಂದಿನ ಗುರುಗಳು ದೇವರ ಬಗ್ಗೆ ಉಲ್ಲೇಖಿಸದೆಯೇ ಜೀವನವು ಹೇಗೆ ಕೇವಲ ಸತ್ಯಮಾರ್ಗದಿಂದ ಕೂಡಿದೆ ಎಂಬು ದನ್ನು ಪವನ್ ವರ್ಮಾ ಪ್ರತಿಪಾದಿಸಿದರು.

ವಿಜ್ಞಾನದ ಪ್ರಸ್ತುತತೆ ಹಾಗೂ ತಮ್ಮ ಬರಹಗಳಲ್ಲಿರುವ ವಿಜ್ಞಾನದ ಅಂಶ ಗಳನ್ನೂ ಸಹ ಅವರು ಇದೇ ಸಂದರ್ಭ ವಿವರಿಸಿದರು. ನಂತರ ಸಂವಾದದಲ್ಲಿ ಪಾಲ್ಗೊಂಡ ಪವನ್ ವರ್ಮಾ ಅವರು ಸಭಿಕರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.
ಲಿಟರರಿ ಕ್ರಿಟಿಕ್ ಜಿ.ಎಸ್.ದೇವಿ, ಚೆನ್ನೈನ ಎಂಐಡಿಎಸ್ ಮಾಜಿ ನಿರ್ದೇಶಕ ಪ್ರೊ.ವಿ.ಕೆ.ನಟರಾಜ್ ಅವರೂ ಸಹ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತ ನಾಡಿದರು. ಮಾಜಿ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್ ಸೇರಿದಂತೆ ಹಲವು ಸಾಹಿತಿಗಳ, ಚಿಂತಕರು, ಶಿಕ್ಷಣ ತಜ್ಞರು ಹಾಗೂ ಮೈಸೂರು ಲಿಟರರಿ ಅಸೋಸಿ ಯೇಷನ್ ಸದಸ್ಯರು, ಸೆಂಟ್ ಜೋಸೆಫ್ ಮತ್ತು ಮಹಾಜನ ಕಾಲೇಜಿನ ವಿದ್ಯಾರ್ಥಿ ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »