ಪ್ರಧಾನಿ ಅಭ್ಯರ್ಥಿಯಾಗುವ ಶಕ್ತಿ ಹೆಚ್.ಡಿ. ದೇವೇಗೌಡರಿಗಿದೆ
ಮೈಸೂರು

ಪ್ರಧಾನಿ ಅಭ್ಯರ್ಥಿಯಾಗುವ ಶಕ್ತಿ ಹೆಚ್.ಡಿ. ದೇವೇಗೌಡರಿಗಿದೆ

August 13, 2018

ಮೈಸೂರು:  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರಿಗೆ ಸರಿನಾಟಿಯಾಗಿ ನಿಲ್ಲಬಹುದಾದ ಪ್ರಬಲ ನಾಯಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರೇ ಆಗಬಹುದು. ಅವರಿಗೆ ಆ ಶಕ್ತಿಯಿದೆ ಎಂದು ಮಾಜಿ ಸಚಿವರೂ ಆದ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್ ಹೇಳಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಂಬರುವ ಲೋಕಸಭಾ ಚುನಾವಣೆ ಯ ಬಿಜೆಪಿ ಪ್ರಧಾನಿ ಅಭ್ಯರ್ಥಿಯೂ ಆದ ಹಾಲಿ ಪ್ರಧಾನಿ ನರೇಂದ್ರ ಮೋದಿ ಎದುರು ಪ್ರಬಲ ನಾಯಕರಾಗುವ ಶಕ್ತಿ ಹೆಚ್.ಡಿ.ದೇವೇಗೌಡರಿಗೆ ಇದೆ. ಮಾಜಿ ಪ್ರಧಾನಿಯಾಗಿ ಅವರಿಗೆ ಆ ಸಾಮಥ್ರ್ಯ ಹೊಂದಿದ್ದಾರೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗೆ ಜೆಡಿಎಸ್ ಸಜ್ಜಾಗುತ್ತಿದೆ. ಭಾರತದ ರಾಜಕೀಯ ಇತಿಹಾಸದಲ್ಲಿ ದೊಡ್ಡ ಬದಲಾವಣೆ ತರಲು ಪ್ರಾಂತೀಯ ಪಕ್ಷಗಳು ಒಟ್ಟಾಗಲಿವೆ. ಆ ಮೂಲಕ ಪ್ರಾಂತೀಯ ಪಕ್ಷಗಳೇ ಈ ದೇಶದ ನಾಯಕತ್ವ ವಹಿಸಲಿವೆ. ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾ ಗಲೇ ಮಾಜಿ ಪ್ರಧಾನಿ ದೇವೇಗೌಡರು, ಮಾಯಾವತಿ, ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿ ದಂತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಭಾರತದ ರಾಜಕಾರಣದಲ್ಲಿ ಪ್ರಾಂತೀಯ ಪಕ್ಷಗಳತ್ತ ಹೆಚ್ಚು ಒಲವು ವ್ಯಕ್ತವಾಗುತ್ತಿದೆ. ದಕ್ಷಿಣ ಭಾರತ ಮಾತ್ರವಲ್ಲದೆ, ಉತ್ತರ ಭಾರತದಲ್ಲೂ ಪ್ರಾದೇಶಿಕ ಪಕ್ಷಗಳು ಆಯಾಯ ರಾಜ್ಯ ರಾಜಕಾರಣದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವುದನ್ನು ಕಾಣಬಹುದು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸಲು ಅನೇಕ ಪ್ರಯತ್ನ ನಡೆದವು. ಆದರೆ ಮಾಜಿ ಪ್ರಧಾನಿ ದೇವೇಗೌಡ ಅವರು ದೂರದೃಷ್ಟಿತ್ವದೊಂದಿಗೆ ಪ್ರಾದೇಶಿಕ ಸಮಸ್ಯೆಗಳಿಗೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಜನಮಾನಸದಲ್ಲಿ ಉಳಿಯಲು ಸಾಧ್ಯವಾಯಿತು. ರಾಜ್ಯದ ಈ ಹಿಂದಿನ ಸಿಎಂ ಸಿದ್ದರಾಮಯ್ಯ ಕಾವೇರಿ ಸಮಸ್ಯೆ ಜಟಿಲಗೊಂಡಾಗ ಪ್ರಾದೇಶಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ದೇವೇ ಗೌಡರ ಮನೆಗೆ ಬರಬೇಕಾಯಿತು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿ ಯನ್ನು ಅರಿಯಬೇಕಿದೆ ಎಂದರು.

ಮೋದಿ ಸರ್ವಾಧಿಕಾರಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಮಾತಿನ ಸರ್ಕಾರವಾಗಿ ಕಾಲ ಕಳೆಯುತ್ತಿದೆ. ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇವರು ಕೇವಲ ದೂರದರ್ಶನ ಮತ್ತು ಆಕಾಶವಾಣಿಯ ಮನ್ ಕೀ ಬಾತ್‍ನಲ್ಲಿ ಮಾತನಾಡಿಕೊಂಡು ಕುಳಿತ್ತಿದ್ದಾರೆ. ಮೋದಿ ಅವರದು ಏಕಚಕ್ರಾ ದಿಪತ್ಯ ನಡೆಯಾಗಿದ್ದು, ಇದು ಭಾರತದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅರುಣ್‍ಶೌರಿ ಪ್ರತಿಪಾದಿಸಿದ್ದು, ಇದು ಸರಿಯಾಗಿಯೇ ಇದೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಏನಾಯಿತು ಎಂದು ನೋಡುವುದಾದರೆ, ಕಳೆದ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಬಿಜಾಪುರ ದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದವು. ಅಂದಿನ ನೀರಾವರಿ ಮಂತ್ರಿ ಗೆಲ್ಲಿಸಲು ಈ ರೀತಿಯ ತಂತ್ರಗಾರಿಕೆ ನಡೆಸಲಾಯಿತು. ಆಗ ಬಿಜಾಪುರದ ಬಿಜೆಪಿ ಜಿಲ್ಲಾಧ್ಯಕ್ಷರನ್ನು ರಾತ್ರೋರಾತ್ರಿ ಕಾಂಗ್ರೆಸ್‍ಗೆ ಸೇರಿಸಿಕೊಳ್ಳ ಲಾಯಿತು ಎಂದು ಟೀಕಿಸಿದ ಅವರು, ಡಾ.ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಸರ್ವಕಾಲಿಕ ಸಂವಿಧಾನ ನೀಡಿದ್ದಾರೆ. ಆದರೆ ಬಿಜೆಪಿಯ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಪದೇ ಪದೆ ಸಂವಿಧಾನ ಬಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿದರು.

ಲೋಕಲ್‍ಬಾಡಿಗೂ ಜೆಡಿಎಸ್ ಸಜ್ಜು: ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಜೆಡಿಎಸ್ ಸಜ್ಜಾಗಿದೆ. ಮಹಾನಗರ ಪಾಲಿಕೆ ಚುನಾ ವಣೆಯ ಆಕಾಂಕ್ಷಿಗಳಿಗೆ ನಾಳೆಯಿಂದಲೇ ಅರ್ಜಿ ವಿತರಣೆ ಮಾಡಲಾಗುವುದು ಎಂದ ಅವರು, ಲೋಕಲ್‍ಬಾಡಿ ಎಲೆಕ್ಷನ್ ಅಭ್ಯರ್ಥಿ ಆಧಾರದಲ್ಲಿ ನಡೆಯುತ್ತದೆ. ಲೋಕಲ್ ಹಾಗೂ ಲೋಕಸಭೆ ಚುನಾವಣೆಯನ್ನು ಸಮೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಮಾಜಿ ಮೇಯರ್ ಆರ್. ಲಿಂಗಪ್ಪ, ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಆರ್.ಸೋಮಸುಂದರ್ ಮತ್ತಿತರರರು ಗೋಷ್ಠಿಯಲ್ಲಿದ್ದರು.

Translate »