ಕನ್ನಡ ಚಳುವಳಿಗಾರರ ಸಂಘದಿಂದ ಅಣಕು ಪ್ರತಿಭಟನೆ
ಮೈಸೂರು

ಕನ್ನಡ ಚಳುವಳಿಗಾರರ ಸಂಘದಿಂದ ಅಣಕು ಪ್ರತಿಭಟನೆ

August 3, 2018

ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಖಂಡಿಸಿ, ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ಕಾರ್ಯಕರ್ತರು ಗುರುವಾರ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದರು.

ಬಿ.ಎಸ್.ಯಡಿಯೂರಪ್ಪ ಮತ್ತು ಬೆಂಬಲಿಗರು ತಮ್ಮ ಸ್ವಾರ್ಥ ಸಾಧನೆಗಾಗಿ ಅಮಾಯಕ ಉತ್ತರ ಕರ್ನಾಟಕದ ಜನರನ್ನು ಎತ್ತಿಕಟ್ಟಿ ಪ್ರತ್ಯೇಕ ರಾಜ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಪ್ರತಿ ಭಟನಾಕಾರರು ಖಂಡಿಸಿದರು.

ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಜನರು ಮಹದಾಯಿ ಯೋಜನೆಯ ಕುಡಿಯುವ ನೀರಿಗಾಗಿ 3 ವರ್ಷಗಳಿಂದ ನಿರಂ ರವಾಗಿ ಹೋರಾಟ ನಡೆಸುತ್ತಿದ್ದರೂ, ಬಿ.ಎಸ್.ಯಡಿಯೂರಪ್ಪ ಪ್ರಧಾನಮಂತ್ರಿ ಳ ಮಧ್ಯಸ್ತಿಕೆಯಲ್ಲಿ ಆ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬಿಎಸ್‍ವೈ ಮತ್ತು ಅವರ ಬೆಂಬಲಿಗರು ಕೇವಲ ಉತ್ತರ ಕರ್ನಾಟಕದ ಬಗ್ಗೆ ಬೂಟಾಟಿಕೆಯ ಮಾತುಗಳನ್ನು ಆಡು ತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯವನ್ನು ಪ್ರತ್ಯೇಕಿಸುವ ಮನೋ ಭಾವ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರಿಗೆ ಇಲ್ಲ. ಅಖಂಡ ಕರ್ನಾಟಕ ಅವರ ಬಯಕೆ, ಪ್ರಧಾನ ಮಂತ್ರಿಯಾಗಿ ದ್ದಾಗ ಕೃಷ್ಣ ಮೇಲ್ದಂಡೆ ಕಾಮಗಾರಿಗೆ ಸುಮಾರು 1435 ಕೋಟಿ ರೂ. ಘಟಪ್ರಭ 3ನೇ ಹಂತ, ಕಾರಂಜಿ ಯೋಜನೆ, ಬಳ್ಳಾರಿ, ಬೆಳಗಾವಿ, ವಿಜಯಪುರ, ಧಾರ ವಾಡ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆ ಗಳನ್ನು ಸ್ಥಾಪಿಸಿ, ಹಣ ನೀಡಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ ಅವರು ಉತ್ತರ ಕರ್ನಾ ಟಕದ ಜನರ ಬಹುದಿನದ ಕನಸಾಗಿದ್ದ ಸುವರ್ಣಸೌಧವನ್ನು ಆಡಳಿತಾತ್ಮಕವಾಗಿ ಬೆಳಗಾವಿಯಲ್ಲಿ ಸ್ಥಾಪಿಸಿದ್ದಾರೆ. ಹೀಗಿರು ವಾಗ ಯಡಿಯೂರಪ್ಪನವರು ಅನಗತ್ಯವಾಗಿ ಪ್ರತ್ಯೇಕ ರಾಜ್ಯದ ವಿಚಾರ ಮುಂದಿಟ್ಟು ಕೊಂಡು ಹುಯಿಲೆಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯೇಕ ರಾಜ್ಯಕ್ಕೆ ಕುಮ್ಮಕ್ಕು ನೀಡುತ್ತಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತ ವರ ಬೆಂಬಲಿಗರನ್ನು ಚೇಳು, ಮೊಸಳೆ, ಹೆಬ್ಬಾವು, ಬಕಪಕ್ಷಿಗಳಂತೆ ಬಿಂಬಿಸುವ ಹಾಗೂ ಪ್ರತ್ಯೇಕತಾವಾದಿಗಳನ್ನು ವಿಷ ಜಂತುಗಳಿಗೆ ಹೋಲಿಸುವ ಅಣಕು ಪ್ರದರ್ಶನ ನಡೆಸಿ ದರು. ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್, ಮುಖಂಡರಾದ ಕೆ.ರಘುರಾಂ ವಾಜಪೇಯಿ, ಎಸ್.ಗುರುಶಂಕರ್, ಸೋಗಳ್ಳಿ ತುಂಗ, ದೂರ ಸುರೇಶ್, ನಂಜನಗೂಡು ಜಯಕುಮಾರ್, ಬಸವರಾಜು, ರಂಗನಾಥ ರಾಜೇ ಅರಸ್, ಅಮಿತ್ ಇನ್ನಿತರರು ಇದ್ದರು.

Translate »