ಮೈಸೂರು

ನಾಳೆ ಮೈಸೂರಿನಲ್ಲಿ ಜಲ್‍ಸಾ-ಇ-ಯಾದ್-ತಾಜುಲ್ ಷರಿಯಾ ಆಚರಣೆ
ಮೈಸೂರು

ನಾಳೆ ಮೈಸೂರಿನಲ್ಲಿ ಜಲ್‍ಸಾ-ಇ-ಯಾದ್-ತಾಜುಲ್ ಷರಿಯಾ ಆಚರಣೆ

August 3, 2018

ಮೈಸೂರು: ಇತ್ತೀಚೆಗೆ ನಿಧನರಾದ ಅಂತರರಾಷ್ಟ್ರೀಯ ಇಸ್ಲಾಮಿಕ್ ವಿದ್ವಾಂಸ ಹಾಗೂ ಉತ್ತರಪ್ರದೇಶ ಬರೇಲಿಯ ದಾರುಲ್-ಉಲ್-ಖಾಜಾ ಇಂಡಿಯಾದ ಪ್ರಧಾನ ಖಾಜಿ ಮೌಲಾನಾ ಮುಫ್ತಿ ಮೊಹಮ್ಮದ್ ಅಕ್ತರ್ ರಜಾಖಾನ್ ಅಜಾರಿ ಮಿಯಾನ್ ತಾಜುಲ್ ಷರಿಯಾ ಅವರ ಸ್ಮರಣೆ ಹಾಗೂ ಸಂತಾಪ ಸೂಚಕ ಸಭೆ ಅಂಗವಾಗಿ, ಮೈಸೂರಿನ ಲಷ್ಕರ್ ಮೊಹಲ್ಲಾ ಅಶೋಕ ರಸ್ತೆಯಲ್ಲಿರುವ ಆಜಮ್ ಮರ್ಕಾಜ್ ಅಹಲೆ ಸುನ್ನತೋ ಮಸೀದಿಯಲ್ಲಿ, ಇದೇ ಆಗಸ್ಟ್ 4, ರಾತ್ರಿ 8.30 ಗಂಟೆಗೆ ಜಲ್-ಇ-ಯಾದ್-ತಾಜುಲ್ ಷರಿಯಾ ಆಚರಿಸಲಾಗುವುದು. ಮೈಸೂರಿನ ಸರ್‍ಖಾಜಿಯವರಾದ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್…

ಅಮೆರಿಕದ ಮಿಚಿಗನ್ ಸ್ಟೇಟ್‍ನಲ್ಲಿ ಕನ್ನಡದ ಕಂಪು
ಮೈಸೂರು

ಅಮೆರಿಕದ ಮಿಚಿಗನ್ ಸ್ಟೇಟ್‍ನಲ್ಲಿ ಕನ್ನಡದ ಕಂಪು

August 3, 2018

ಬೆಟ್ಟದಪುರ: ಅಮೇರಿಕಾದ ಕನ್ನಡಿಗರ ಪಂಪಾ ಕನ್ನಡ ಕೂಟ ಕರ್ನಾಟಕದ ಸಾಹಿತ್ಯ ಹಾಗೂ ಗ್ರಾಮೀಣ ಕ್ರೀಡೆಗಳನ್ನು, ಗ್ರಾಮೀಣ ಆಹಾರ ಖಾದ್ಯಗಳಾದ ರೊಟ್ಟಿ, ಟೊಮೇಟೋ ಬಾತ್, ರಾಗಿಮುದ್ದೆ ಸೇರಿದಂತೆ ಹಲ ವಾರು ಬಗೆಯ ಕರ್ನಾಟಕದ ಆಹಾರ ಗಳನ್ನು ತಯಾರಿಸಿ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಅಲ್ಲದೆ, ಗ್ರಾಮೀಣ ಕ್ರೀಡೆಗಳಾದ ಹಗ್ಗಜಗಾಟ, ಚೀಲದ ಓಟ, ಚೌಕಾಬಾರ, ರಂಗೋಲಿ ಸ್ಪರ್ಧೆ ಏರ್ಪಡಿಸಿ ಕನ್ನಡ ಗ್ರಾಮೀಣ ಸೊಗಡನ್ನು ಮೆರೆದಿದ್ದಾರೆ. ಅಮೇರಿಕಾದ ಮಿಚಿಗನ್ ಸ್ಟೇಟ್‍ನಲ್ಲಿ ಬರುವ ಫೈರ್‍ಫೈಟರ್ಸ್ ಪಾರ್ಕ್ ಟ್ರಾಯ್ ನಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ….

ಆದಿವಾಸಿಗಳಿಗೆ ಮನೆ ಬಾಗಿಲಲ್ಲಿ ಉಚಿತ ಆರೋಗ್ಯ ಸೇವೆ
ಮೈಸೂರು

ಆದಿವಾಸಿಗಳಿಗೆ ಮನೆ ಬಾಗಿಲಲ್ಲಿ ಉಚಿತ ಆರೋಗ್ಯ ಸೇವೆ

August 2, 2018

 ಯೋಜನೆಗೆ ಚಾಲನೆ ನೀಡಿದ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್  8 ಕೋಟಿ ವೆಚ್ಚದಲ್ಲಿ 16 ವಾಹನಗಳ ವ್ಯವಸ್ಥೆ ಮೈಸೂರು, ಕೊಡಗು, ಚಾ.ನಗರ ಸೇರಿ 8 ಜಿಲ್ಲೆ ಅರಣ್ಯ ವ್ಯಾಪ್ತಿ ಆದಿವಾಸಿಗಳಿಗೆ ಸೇವೆ ಲಭ್ಯ ಬೆಂಗಳೂರು: ಅರಣ್ಯದಲ್ಲಿನ ಆದಿವಾಸಿಗಳ ಮನೆ ಬಾಗಿಲಲ್ಲಿ ಉಚಿತ ಆರೋಗ್ಯ ಸೇವೆ ಕಲ್ಪಿಸುವ ನೂತನ ಯೋಜನೆಗೆ ರಾಜ್ಯ ಸರ್ಕಾರ ಇಂದಿಲ್ಲಿ ಚಾಲನೆ ನೀಡಿದೆ. ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ, ಬೆಳಗಾವಿ ಸಹಯೋಗದಲ್ಲಿ ಈ ಆರೋಗ್ಯ ಸೇವೆ ಕಾರ್ಯ ಕ್ರಮ ಅನುಷ್ಠಾನಗೊಂಡಿದ್ದು, ಮೊದಲ ಹಂತ ದಲ್ಲಿ…

ಕುತೂಹಲ ಕೆರಳಿಸಿರುವ ಸಿದ್ದರಾಮಯ್ಯ ಔತಣಕೂಟ
ಮೈಸೂರು

ಕುತೂಹಲ ಕೆರಳಿಸಿರುವ ಸಿದ್ದರಾಮಯ್ಯ ಔತಣಕೂಟ

August 2, 2018

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‍ನ ಸಚಿವರಿಗೆ ಔತಣಕೂಟ ಏರ್ಪಡಿಸಿ ತಮ್ಮ ರಾಜಕೀಯದಾಳ ಉರುಳಿಸಲು ಆರಂಭಿಸಿದ್ದಾರೆ. ಸಿದ್ದರಾಮಯ್ಯ ಅವರು ವಿಧಾನಸಭೆ ಅಧಿವೇಶನ ನಡೆಯುವ ವೇಳೆ ಶಾಸಕರಿಗೆ ಔತಣ ಕೂಟ ಏರ್ಪಡಿಸುವುದು ಸಾಮಾನ್ಯವಾಗಿ ನಡೆದು ಬಂದಿದೆ. ಆದರೆ ಈ ಬಾರಿ ಅವರು ಎಐಸಿಸಿ ಕಾರ್ಯಕಾರಿಗೆ ನೇಮಕವಾದ ಹಿನ್ನೆಲೆಯಲ್ಲಿ ಔತಣಕೂಟ ಏರ್ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಕೇವಲ ಸಚಿವರನ್ನು ಮಾತ್ರ ಆಹ್ವಾನಿಸಿ ರುವುದು ಹಲವಾರು ಊಹಾಪೋಹಗಳಿಗೆ ಎಡೆ…

ಅಕ್ರಮ ಬ್ಯೂಟಿ ಪಾರ್ಲರ್‍ಗಳ ಮುಚ್ಚಿಸಲು ಅಧಿಕೃತ ಬ್ಯೂಟಿ ಪಾರ್ಲರ್ ಮಾಲೀಕರ ಆಗ್ರಹ
ಮೈಸೂರು

ಅಕ್ರಮ ಬ್ಯೂಟಿ ಪಾರ್ಲರ್‍ಗಳ ಮುಚ್ಚಿಸಲು ಅಧಿಕೃತ ಬ್ಯೂಟಿ ಪಾರ್ಲರ್ ಮಾಲೀಕರ ಆಗ್ರಹ

August 2, 2018

ಮೈಸೂರು:ಮೈಸೂರು ನಗರದಲ್ಲಿ ನಾಯಿಕೊಡೆ ಗಳಂತೆ ತಲೆ ಎತ್ತಿರುವ ಅನಧಿಕೃತ ಬ್ಯೂಟಿ ಪಾರ್ಲರ್‌ಗಳ ಮುಚ್ಚಿಸುವಂತೆ ಮೈಸೂರು ಜಿಲ್ಲಾ ಬ್ಯೂಟಿಷಿಯನ್ ಮತ್ತು ಬ್ಯೂಟಿ ಪಾರ್ಲರ್ ಮಾಲೀಕರ ಸಂಘದ ಕಾರ್ಯ ಕರ್ತರು ಆಗ್ರಹಿಸಿದ್ದು, ಅನುಮತಿ ಪಡೆದು ನಡೆಯುತ್ತಿರುವ ಬ್ಯೂಟಿ ಪಾರ್ಲರ್‌ಗಳಲ್ಲಿ ಯಾವುದೇ ಅನೈತಿಕ ಚಟುವಟಿಕೆ ನಡೆಯು ತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಬ್ಯೂಟಿಷಿಯನ್ ಮತ್ತು ಬ್ಯೂಟಿ ಪಾರ್ಲರ್ ಮಾಲೀಕರ ಸಂಘದ ಅಧ್ಯಕ್ಷೆ ಸುಜಾತ ಸಿಂಗ್, ಮಾಜಿ ಅಧ್ಯಕ್ಷೆ…

ಖಾಸಗಿ ಸಹಭಾಗಿತ್ವದಲ್ಲಿ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಪ್ರಾರಂಭ
ಮೈಸೂರು

ಖಾಸಗಿ ಸಹಭಾಗಿತ್ವದಲ್ಲಿ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಪ್ರಾರಂಭ

August 2, 2018

ಮೈಸೂರು: ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವ ದಲ್ಲಿ ಪ್ರಾರಂಭಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀರ್ಮಾನಿಸಿದ್ದಾರೆ. ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಚುಂಚನ ಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಸಂಬಂಧಿಸಿದಂತೆ ಈ ಭಾಗದ ಹಾಗೂ ಸಂಬಂಧಿಸಿದ ಸಚಿವರು, ಶಾಸಕರು ಹಾಗೂ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಅವರು, ಕಾರ್ಖಾನೆ ಪ್ರಾರಂಭಿಸುವ ಪ್ರಕ್ರಿಯೆಗೆ ಮುನ್ನವೇ ನೌಕರರ ಬಾಕಿ ವೇತನ ಪಾವತಿಸಲು ಆದೇಶಿಸಿದರು. ಕಾರ್ಮಿಕರ ವೇತನ ಬಾಕಿ 14.70 ಕೋಟಿ ರೂ.ಗಳಲ್ಲಿ ಈಗಾಗಲೇ ಅರ್ಧದಷ್ಟು ವೇತನ ಪಾವತಿಸಲು…

ಪ್ರಸ್ತುತ ಗೊಂದಲ, ಅವ್ಯವಸ್ಥೆಯ ಶಿಕ್ಷಣದ ನಡುವೆ ಮಕ್ಕಳ ಭವಿಷ್ಯ ರೂಪಿಸುವುದಾದರೂ ಹೇಗೆ?
ಮೈಸೂರು

ಪ್ರಸ್ತುತ ಗೊಂದಲ, ಅವ್ಯವಸ್ಥೆಯ ಶಿಕ್ಷಣದ ನಡುವೆ ಮಕ್ಕಳ ಭವಿಷ್ಯ ರೂಪಿಸುವುದಾದರೂ ಹೇಗೆ?

August 2, 2018

ಮೈಸೂರು: ಗೊಂದಲ ಮತ್ತು ಅವ್ಯವಸ್ಥೆಯ ಗೂಡಾ ಗಿರುವ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯ ನಡುವೆ ಭವ್ಯ ಭಾರತದ ಭವಿಷ್ಯದ ಮಕ್ಕಳನ್ನು ಉತ್ತಮ ಶಿಕ್ಷಣವಂತರಾಗಿ ಬೆಳೆಸುವುದಾದರು ಹೇಗೆ ಎಂಬುದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ರೀಸರ್ಚ್‍ನ ಗೌರವ ಅಧ್ಯಕ್ಷ, ಭಾರತ ರತ್ನ ಪ್ರೊ.ಸಿ.ಎನ್.ಆರ್. ರಾವ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ 56ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ಅವರು ಸರ್ದಾರ್ ಫಣಿಕ್ಕರ್ ಸ್ಮಾರಕ ಉಪನ್ಯಾಸ…

ರೈನ್ ರೈನ್ ಗೋ ಅವೆ.. ಅಲ್ಲ,  ನಮ್ಮದು ಉಯ್ಯೋ ಉಯ್ಯೋ ಮಳೆರಾಯ… ಸಂಸ್ಕೃತಿ
ಮೈಸೂರು

ರೈನ್ ರೈನ್ ಗೋ ಅವೆ.. ಅಲ್ಲ,  ನಮ್ಮದು ಉಯ್ಯೋ ಉಯ್ಯೋ ಮಳೆರಾಯ… ಸಂಸ್ಕೃತಿ

August 2, 2018

ಮೈಸೂರು: `ಉಯ್ಯೋ.. ಉಯ್ಯೋ ಮಳೆರಾಯ.. ಹೂವಿನ ತೋಟಕ್ಕೆ ನೀರಿಲ್ಲ…’ ಎಂಬುದು ನಮ್ಮ ಸಂಸ್ಕøತಿ. ಆದರೆ, ನಮ್ಮ ಮಕ್ಕಳಿಗೆ `ರೈನ್ ರೈನ್ ಗೋ ಅವೆ…’ ಎಂಬ ಪಾಶ್ಚಾತ್ಯ ಸಂಸ್ಕೃತಿಯನ್ನು ಕಲಿಸಲಾಗುತ್ತಿರುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯ ಕ್ಷರೂ ಆದ ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ ಬೇಸರ ವ್ಯಕ್ತ ಪಡಿಸಿದರು. ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ 56ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಚಿಕ್ಕ ಮಕ್ಕಳಿಗೆ ಶಾಲೆಗಳಲ್ಲಿ ರೈನ್ ರೈನ್ ಗೋ…

ಜಲಾಶಯ ಭರ್ತಿ ಹಿನ್ನೆಲೆ ಜೂನ್, ಜುಲೈನಲ್ಲಿ ಕೆ.ಆರ್.ಎಸ್.  ಪ್ರವೇಶದಿಂದ 1,00,52,000 ರೂ. ಆದಾಯ
ಮೈಸೂರು

ಜಲಾಶಯ ಭರ್ತಿ ಹಿನ್ನೆಲೆ ಜೂನ್, ಜುಲೈನಲ್ಲಿ ಕೆ.ಆರ್.ಎಸ್.  ಪ್ರವೇಶದಿಂದ 1,00,52,000 ರೂ. ಆದಾಯ

August 2, 2018

ಮೈಸೂರು: ಕಾವೇರಿ ಕಣಿವೆಯಲ್ಲಿ ಅಧಿಕ ಮಳೆಯಾದ ಪರಿಣಾಮ ಕೃಷ್ಣರಾಜಸಾಗರ ಅಣೆಕಟ್ಟೆ ಅತೀ ಬೇಗ ತುಂಬಿದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಅಧಿಕವಾಗಿದೆ. ಕಳೆದ ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿ ಕೆಆರ್‍ಎಸ್ ಜಲಾಶಯ ಮೈದುಂಬಿದ ಹಿನ್ನೆಲೆಯಲ್ಲಿ ನೈಸರ್ಗಿಕ ಸೌಂದರ್ಯ ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರ ದಂಡೇ ಧಾವಿಸಿದ್ದು, ಅಣೆಕಟ್ಟೆಯಲ್ಲಿ ನೀರು ಗರಿಷ್ಟ ಮಟ್ಟ ತಲುಪಿದ ನಂತರ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಟ್ಟು ನಂತರವಂತೂ ಬೋರ್ಗರೆಯುವ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಕೆಆರ್‍ಎಸ್‍ನತ್ತ ಮುಗಿಬಿದ್ದಿದ್ದರು. ಕ್ರಸ್ಟ್…

ಟಿ.ಕೆ.ಲೇಔಟ್, ಶಾರದಾದೇವಿ ನಗರದಲ್ಲಿ ಶಾಸಕ ರಾಮ್‍ದಾಸ್ ಪಾದಯಾತ್ರೆ
ಮೈಸೂರು

ಟಿ.ಕೆ.ಲೇಔಟ್, ಶಾರದಾದೇವಿ ನಗರದಲ್ಲಿ ಶಾಸಕ ರಾಮ್‍ದಾಸ್ ಪಾದಯಾತ್ರೆ

August 2, 2018

ಮಳೆ ನೀರು ಚರಂಡಿ ಮೇಲೆ ನಿರ್ಮಿಸಿರುವ ಅನಧಿಕೃತ ಮನೆಗಳ ತೆರವಿಗೆ ಸೂಚನೆ ಮೈಸೂರು: ಮೈಸೂರಿನ ಟಿ.ಕೆ.ಲೇಔಟ್‍ನಲ್ಲಿ ಮಳೆ ನೀರು ಚರಂಡಿ ಮೇಲೆ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳು ಹಾಗೂ ಮೀನಿನ ಕಬಾಬ್ ಅಂಗಡಿಯನ್ನು ತಕ್ಷಣ ತೆರವುಗೊಳಿಸಬೇಕೆಂದು ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ಬೆಳಿಗ್ಗೆ ಮೈಸೂರಿನ ಹಿಂದಿನ 23ನೇ ವಾರ್ಡ್(ಹಾಲಿ 43ನೇ ವಾರ್ಡ್)ನಲ್ಲಿ ಪಾದಯಾತ್ರೆ ನಡೆಸಿದ ವೇಳೆ ಟಿ.ಕೆ.ಲೇಔಟ್‍ನ ಮಳೆ ನೀರು ಚರಂಡಿಯನ್ನು ಮುಚ್ಚಿಹಾಕಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿರುವುದು ಕಂಡು ಬಂತು. ಅಲ್ಲದೆ, ಶಾಸಕರು…

1 1,452 1,453 1,454 1,455 1,456 1,611
Translate »