ಮೈಸೂರು

ಹೋಟೆಲ್ ಉದ್ಯಮಿಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಮೈಸೂರು

ಹೋಟೆಲ್ ಉದ್ಯಮಿಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

August 2, 2018

ಮೈಸೂರು:ಎಸ್‍ಎಸ್‍ಎಲ್‍ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 17 ಮಂದಿ ವಿದ್ಯಾರ್ಥಿಗಳಿಗೆ ಹೋಟೆಲ್ ಮಾಲೀಕರ ಸಂಘ ಹಾಗೂ ಧರ್ಮದತ್ತಿ ಸಂಘದ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು. ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಹೋಟೆಲ್ ದಿ ಪ್ರೆಸಿಡೆಂಟ್ ಸಭಾಂಗಣದಲ್ಲಿ ಹೋಟೆಲ್ ಮಾಲೀಕರ ಸಂಘ ಹಾಗೂ ಧರ್ಮದತ್ತಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹಾಗೂ ಧರ್ಮದತ್ತಿ ಸಂಘದ ಅಧ್ಯಕ್ಷ ರವಿಶಾಸ್ತ್ರಿ ಸನ್ಮಾನಿಸಿದರು. ನಂತರ ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಹೋಟೆಲ್ ಉದ್ಯಮಿಗಳ ಮಕ್ಕಳು…

ಇಬ್ಬರು ಖದೀಮರ ಬಂಧನ: ಮೂರು ದ್ವಿಚಕ್ರ ವಾಹನ ವಶ
ಮೈಸೂರು

ಇಬ್ಬರು ಖದೀಮರ ಬಂಧನ: ಮೂರು ದ್ವಿಚಕ್ರ ವಾಹನ ವಶ

August 2, 2018

ಮೈಸೂರು: ಇಬ್ಬರು ಖದೀಮರನ್ನು ಬಂಧಿಸಿರುವ ಮೈಸೂರಿನ ಮೇಟಗಳ್ಳಿ ಪೊಲೀಸರು 3 ಲಕ್ಷ ರೂ. ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಂಡಿ ದ್ದಾರೆ. ಮೈಸೂರು ತಾಲೂಕು ಶ್ಯಾದನಹಳ್ಳಿ ಗ್ರಾಮದವನಾಗಿದ್ದು, ಹಾಲಿ ಬೆಂಗಳೂರಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ವಾಸವಿದ್ದ ಎಂ.ಗಿರೀಶ್ ಅಲಿಯಾಸ್ ಪುಟ್ಟ (22) ಮತ್ತು ಬೆಂಗಳೂರಿನ ದೊಡ್ಡಗೊಲ್ಲರಹಟ್ಟಿಯ ಮುನೇಶ್ವರ ಬಡಾವಣೆ ನಿವಾಸಿ ಜಿ.ಗಿರೀಶ್ (19) ಬಂಧಿತ ಖದೀಮರಾಗಿದ್ದು, ರಿಂಗ್ ರಸ್ತೆಯ ಅಕ್ಷಯ ಪ್ಯಾಲೆಸ್ ಹೋಟೆಲ್ ಬಳಿ 2 ದ್ವಿಚಕ್ರ ವಾಹನಗಳೊಂದಿಗೆ ಅನುಮಾನಾಸ್ಪದವಾಗಿ ನಿಂತಿದ್ದ ಇವರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಇವರು ಮೈಸೂರಿನ…

ಗರುಡಾ ಮಾಲ್‍ನಲ್ಲಿ ಪಿವಿಆರ್ ಪ್ರಾರಂಭ
ಮೈಸೂರು

ಗರುಡಾ ಮಾಲ್‍ನಲ್ಲಿ ಪಿವಿಆರ್ ಪ್ರಾರಂಭ

August 2, 2018

ಮೈಸೂರು:  ದೇಶದ ಅತಿದೊಡ್ಡ ಚಿತ್ರಮಂದಿರ ಜಾಲವಾದ ಪಿವಿಆರ್ ಸಿನಿಮಾಸ್ ತನ್ನ ಮೊದಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಕೆ.ಆರ್. ಸರ್ಕಲ್ ಸಮೀಪವಿರುವ ಗರುಡಾಮಾಲ್‍ನಲ್ಲಿ ಸೋಮವಾರ ಪ್ರಾರಂಭಿಸಿದೆ. ಪಿವಿಆರ್ ಸಿನಿಮಾಸ್ ವ್ಯವಸ್ಥಾಪಕ ರಘುನಾಥ್ ಅವರು ನಾಲ್ಕು ಪರದೆಗಳನ್ನೊಳಗೊಂಡ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಉದ್ಘಾಟಿಸಿ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ನಾಲ್ಕು ಆಡಿಟೋರಿಯಂಗಳು 911 ಆಸನಗಳ ಸಾಮಥ್ರ್ಯವನ್ನು ಹೊಂದಿದ್ದು ವಿಶ್ವ ದರ್ಜೆಯ ಸಿನಿಮಾ ಫೀಚರ್‍ಗಳಾದ 4ಕೆ ಪ್ರೊಜೆಕ್ಷನ್, ಡಾಲ್ಬಿ 7.1 ಸರೌಂಡ್ ಸೌಂಡ್ ಹಾಗೂ ಮುಂದಿನ ಪೀಳಿಗೆಯ 3ಅಡಿ ತಂತ್ರಜ್ಞಾನದೊಂದಿಗೆ ಉತ್ಕøಷ್ಟ ದೃಶ್ಯ ಮತ್ತು…

ಸ್ವಂತ ಕಟ್ಟಡ ಭಾಗ್ಯವಿಲ್ಲದ ಸರ್ಕಾರಿ ಶಾಲೆಗಳಿಗೆ ರೈಲ್ವೆ ಕಾರ್ಯಾಗಾರದ ಆಸರೆ
ಮೈಸೂರು

ಸ್ವಂತ ಕಟ್ಟಡ ಭಾಗ್ಯವಿಲ್ಲದ ಸರ್ಕಾರಿ ಶಾಲೆಗಳಿಗೆ ರೈಲ್ವೆ ಕಾರ್ಯಾಗಾರದ ಆಸರೆ

August 2, 2018

ಮೈಸೂರು:  ಈ ಸರ್ಕಾರಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲ. ಆದರೆ ಆಶ್ರಯ ನೀಡಿದವರು ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ನಡೆಯಲು ಅಗತ್ಯ ಸಹಕಾರ ನೀಡಿದ್ದರ ಫಲವಾಗಿ ಯಾವುದೇ ಅಡೆತಡೆ ಇಲ್ಲದೆ ಬಡ ಮಕ್ಕಳ ವಿದ್ಯಾಭ್ಯಾಸ ಸಾಗಿದೆ. ಹೌದು, ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ರೈಲ್ವೆ ಕಾರ್ಯಾಗಾರ ಕಟ್ಟಡಗಳಲ್ಲಿ ಈ ಶಾಲೆಗಳು ಆಶ್ರಯ ಪಡೆದಿವೆ. ಈ ಸರ್ಕಾರಿ ಶಾಲೆಗಳಿಗೆ ಕಟ್ಟಡ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯವನ್ನು ರೈಲ್ವೆ ಇಲಾಖೆ ಕಲ್ಪಿಸಿಕೊಡುತ್ತಿದೆ. ರೈಲ್ವೆ ಕಾರ್ಯಾಗಾರದ ಕಟ್ಟಡದಲ್ಲಿ ಸರ್ಕಾರಿ ಹಿರಿಯ…

ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಮೈಸೂರು ನಗರ ಪುರ ಪ್ರವೇಶ
ಮೈಸೂರು

ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಮೈಸೂರು ನಗರ ಪುರ ಪ್ರವೇಶ

August 2, 2018

ಮೈಸೂರು:  ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತ್ರಿಧಾಮ ಕ್ಷೇತ್ರ ಶ್ರೀ ಮಹಾಕಾಳಿ ಚಕ್ರೇಶ್ವರಿ ಪೀಠದ ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಅವರು ಬುಧವಾರ ಸಂಜೆ ಮೈಸೂರು ನಗರ ಪುರ ಪ್ರವೇಶ ಮಾಡಿದರು. ಆ.1ರಿಂದ ನ.24ರವರೆಗೆ ಸುಮಾರು 65 ದಿನ ಗಳ ಕಾಲ ನಡೆಯುವ ಚಾತುರ್ಮಾಸ್ಯದಲ್ಲಿ ಭಾಗ ವಹಿಸಲು ಬುಧವಾರ ಸಂಜೆ ಮೈಸೂರಿಗೆ ಆಗಮಿಸಿದ ಶ್ರೀ ವಿದ್ಯಾಹಂಸ ಭಾರತೀ ಸ್ವಾಮೀಜಿ ಅವರನ್ನು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ಇತರೆ ವಿಪ್ರ ಮುಖಂಡರು…

ನಾಳೆ ಮೈಸೂರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಆಷಾಢ ನಂತರ ಜಲದರ್ಶಿನಿಯಲ್ಲಿ ಕಚೇರಿ ಉದ್ಘಾಟನೆ ಸಾಧ್ಯತೆ
ಮೈಸೂರು

ನಾಳೆ ಮೈಸೂರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿಡಿ ಆಷಾಢ ನಂತರ ಜಲದರ್ಶಿನಿಯಲ್ಲಿ ಕಚೇರಿ ಉದ್ಘಾಟನೆ ಸಾಧ್ಯತೆ

August 2, 2018

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಶುಕ್ರವಾರ ರಾತ್ರಿ (ಆಗಸ್ಟ್ 3) ಮೈಸೂರಿಗೆ ಆಗಮಿಸುವರು. ಗುರುವಾರ ಮತ್ತು ಶುಕ್ರವಾರ ಬೆಂಗಳೂರಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಅಧಿಕಾರಗಳ ಸಭೆ ನಿಗದಿಯಾಗಿರುವುದ ರಿಂದ ಶುಕ್ರವಾರ ರಾತ್ರಿ ಸಚಿವ ಜಿ.ಟಿ.ದೇವೇಗೌಡರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮೊದಲ ಬಾರಿಗೆ ಮೈಸೂರಿಗೆ ಆಗಮಿಸುವರು ಎಂದು ಆಪ್ತ ಮೂಲಗಳು ತಿಳಿಸಿವೆ. ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಮೈಸೂರು ನಗರ ಮತ್ತು ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳು,…

ದಾನ, ಧರ್ಮದಿಂದ ದುಃಖ ಮರೆಯಲು ಸಾಧ್ಯ
ಮೈಸೂರು

ದಾನ, ಧರ್ಮದಿಂದ ದುಃಖ ಮರೆಯಲು ಸಾಧ್ಯ

August 2, 2018

ಮೈಸೂರು: ನಾನು ಈ ಪದಗ್ರಹಣದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ. ಲಯನ್ಸ್ ಸಂಸ್ಥೆ ಸಮಾಜ ಸೇವೆಗೆ ಹೆಸರುವಾಸಿ ಎಂದು ಮೈಸೂರಿನ ಶ್ರೀ ರಾಮಕೃಷ್ಣಆಶ್ರಮದ ಮಹೇಶಾತ್ಮಾನಂದ ಮಹಾರಾಜ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕ್ಲಬ್ ಆಫ್ ಮೈಸೂರು ಚಂದನ, ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ, ವಲಯ-1ರ ನೂತನ ಅಧ್ಯಕ್ಷ ಲಯನ್ ಜಿ.ಚಂದ್ರಶೇಖರ್ ಹಾಗೂ ಪದಾಧಿಕಾರಿಗಳ ಪದಗ್ರಹಣವನ್ನು ಉದ್ಘಾಟಿಸಿ ಮಾತನಾಡಿದರು. ಚೆಂದದ ಹೆಸರು ‘ಚಂದನ’, ವಿವೇಕಾನಂದರ ವಾಣಿಯಂತೆ ಒಳ್ಳೆಯದನ್ನು ಮಾಡು, ಒಳ್ಳೆಯವನಾಗು. ಮನಸ್ಸಿನಲ್ಲಿ ಒಳ್ಳೆಯದನ್ನು ಮಾಡುತ್ತೇನೆ ಎಂದು…

ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲು ನಾಲ್ಕು ದಿನ ಸಂಚರಿಸಲಿದೆ `ಕಾನೂನು ಸಾಕ್ಷರತಾ ರಥ’: ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಅವರಿಂದ ಚಾಲನೆ
ಮೈಸೂರು

ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲು ನಾಲ್ಕು ದಿನ ಸಂಚರಿಸಲಿದೆ `ಕಾನೂನು ಸಾಕ್ಷರತಾ ರಥ’: ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ಅವರಿಂದ ಚಾಲನೆ

August 2, 2018

ಮೈಸೂರು: ಮೈಸೂರು ನಗರದಲ್ಲಿ ನಾಲ್ಕು ದಿನಗಳ ಕಾಲ `ಕಾನೂನು ಸಾಕ್ಷರತಾ ರಥ’ ಸಂಚರಿಸಲಿದ್ದು, ಆ ಮೂಲಕ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಲಿದೆ. ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿರುವ ಕಾನೂನು ಸಾಕ್ಷರತಾ ರಥ ಸಂಚಾರ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯದ ಪ್ರಧಾನ ನ್ಯಾಯಾದೀಶರೂ ಆದ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ವಂಟಿಗೋಡಿ ಬುಧವಾರ ಚಾಲನೆ ನೀಡಿದರು. ಕಾನೂನು ಅರಿವಿನಿಂದ ನಾಗರಿಕ ಸಮಾಜ: ರಥದ…

ದರ ಕಡಿತದ ನಂತರ ಶತಾಬ್ಧಿ ರೈಲು  ಪ್ರಯಾಣಿಕರ ಸಂಖ್ಯೆ, ಆದಾಯ ಹೆಚ್ಚಳ
ಮೈಸೂರು

ದರ ಕಡಿತದ ನಂತರ ಶತಾಬ್ಧಿ ರೈಲು  ಪ್ರಯಾಣಿಕರ ಸಂಖ್ಯೆ, ಆದಾಯ ಹೆಚ್ಚಳ

August 2, 2018

ಮೈಸೂರು: ರಿಯಾಯಿತಿ ದರ ಜಾರಿಗೆ ಬಂದ ನಂತರ ಮೈಸೂರು-ಚೆನ್ನೈ ನಡುವೆ ಸಂಚರಿಸುವ ಶತಾಬ್ಧಿ ಎಕ್ಸ್‍ಪ್ರೆಸ್‍ನ ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಆದಾ ಯವೂ ಅಧಿಕವಾಗಿದೆ. ಮೈಸೂರು-ಬೆಂಗಳೂರು ನಡುವಿನ ದರ ಕಡಿಮೆ ಮಾಡಿ ದ್ದರ ಪರಿಣಾಮ 2017ರಲ್ಲಿ ಶತಾಬ್ಧಿ ರೈಲಿನ ಆದಾಯ ಅದರ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. 2016ರ ಅಕ್ಟೋಬರ್‍ನಲ್ಲಿ ಎಸಿ-3 (ಚೇರ್‍ಕಾರ್) ಮೈಸೂರು- ಬೆಂಗಳೂರು ನಡುವೆ ಪ್ರಯಾಣ ದರವನ್ನು 490ರೂ. ಗಳಿಂದ 260ರೂಗಳಿಗೆ ಇಳಿಸಲಾಗಿತ್ತು. ನಂತರ ಪ್ರಯಾಣಿಕರ ಸಂಖ್ಯೆ…

ಪ್ರತ್ಯೇಕ ರಾಜ್ಯ ದನಿ ಅಕ್ಷಮ್ಯ  ಅಪರಾಧ: ವಿ.ಎಸ್.ಉಗ್ರಪ್ಪ
ಮೈಸೂರು

ಪ್ರತ್ಯೇಕ ರಾಜ್ಯ ದನಿ ಅಕ್ಷಮ್ಯ  ಅಪರಾಧ: ವಿ.ಎಸ್.ಉಗ್ರಪ್ಪ

August 2, 2018

ಮೈಸೂರು: ಅಖಂಡ ಕರ್ನಾಟಕದ ಅರಿವಿಲ್ಲದ ಕೆಲವರು ರಾಜಕೀಯ ಕ್ಕೋಸ್ಕರ ಪ್ರತ್ಯೇಕ ರಾಜ್ಯಕ್ಕಾಗಿ ದನಿ ಎತ್ತುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧ. ರಾಜಕಾರಣಕ್ಕಾಗಿ ರಾಜ್ಯ ವನ್ನು ಇಬ್ಭಾಗಿಸುವ ಕೆಲಸ ಮಾಡಬಾರದು ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಅಖಂಡ ಕರ್ನಾಟಕ ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಅದನ್ನು ಕಟ್ಟುವಲ್ಲಿ ಅನೇಕರ ಪರಿಶ್ರಮ, ತ್ಯಾಗ ಬಲಿದಾನಗಳಿವೆ. ಅಖಂಡ ಕರ್ನಾಟಕದ ಅರಿವಿಲ್ಲದ ಕೆಲವರು ರಾಜಕಾರಣಕ್ಕೋಸ್ಕರ ಪ್ರತ್ಯೇಕ ರಾಜ್ಯಕ್ಕಾಗಿ ಕೂಗು ಎತ್ತುತ್ತಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧ. ಹೀಗಾಗಿ ಯಾರೂ…

1 1,453 1,454 1,455 1,456 1,457 1,611
Translate »