ಮೈಸೂರು

ಇಂದಿನಿಂದ ನಾಲ್ಕು ದಿನ  `ಯೋಗ ಜೀವನ ದರ್ಶನ’
ಮೈಸೂರು

ಇಂದಿನಿಂದ ನಾಲ್ಕು ದಿನ  `ಯೋಗ ಜೀವನ ದರ್ಶನ’

August 2, 2018

ಮೈಸೂರು: ಮೈಸೂರಿನ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಆ.2ರಿಂದ 4 ದಿನಗಳ `ಯೋಗ ಜೀವನ ದರ್ಶನ’ ಶಿಬಿರ ಆಯೋಜಿಸಿದೆ. ಮೈಸೂರಿನ ಬೋಗಾದಿ ಜಂಕ್ಷನ್ ಜಿಎಲ್‍ಎನ್ ಕಲ್ಯಾಣ ಮಂಟಪದಲ್ಲಿ ನಡೆಯುವ ಶಿಬಿರದಲ್ಲಿ ಪ್ರಾಥಮಿಕ, ಯುವ ಪ್ರಾಥಮಿಕ, ಮಾತೆಯರ ಪ್ರಾಥ ಮಿಕ ಹಾಗೂ ಹಿರಿಯ ನಾಗರಿಕರ ಪ್ರಾಥ ಮಿಕ ಹೀಗೆ 4ವಿಭಾಗಗಳಲ್ಲಿ ಜಿಲ್ಲಾ ಮಟ್ಟದ ಯೋಗ ಪ್ರಶಿಕ್ಷಣ ಶಿಬಿರಗಳು ನಡೆಯಲಿವೆ ಎಂದು ಪ್ರಚಾರ ಪ್ರಮುಖ ಎನ್.ಎಸ್.ಸತ್ಯನಾರಾಯಣ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆ.2ರಂದು ಸಂಜೆ 6 ಗಂಟೆಗೆ ಶಿಬಿರ…

ವೇಶ್ಯಾವಾಟಿಕೆ ನಡೆಸುತ್ತಿದ್ದ ಬ್ಯೂಟಿ ಪಾರ್ಲರ್‌ಗೆ ಕಲ್ಲು ತೂರಾಟ
ಮೈಸೂರು

ವೇಶ್ಯಾವಾಟಿಕೆ ನಡೆಸುತ್ತಿದ್ದ ಬ್ಯೂಟಿ ಪಾರ್ಲರ್‌ಗೆ ಕಲ್ಲು ತೂರಾಟ

August 2, 2018

ಮೈಸೂರು: ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತೆಂಬ ಆರೋಪದ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದ ಮೈಸೂರಿನ ಹೂಟಗಳ್ಳಿಯಲ್ಲಿರುವ ಬ್ಯೂಟಿ ಪಾರ್ಲರ್‌ಗೆ ರೊಚ್ಚಿಗೆದ್ದ ಸಾರ್ವಜನಿಕರು ಮಂಗಳವಾರ ರಾತ್ರಿ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ವೇಶ್ಯಾ ವಾಟಿಕೆ ನಡೆಸಿ ಸಿಕ್ಕಿಬಿದ್ದು, ಬಡಾವಣೆಗೆ ಕಳಂಕ ತರಲಾಗಿದೆ ಎಂದು ಆರೋಪಿಸಿದ ಕೆಲವರು ಅಲ್ಲಿನ ಐಶ್ವರ್ಯ ಬ್ಯೂಟಿ ಸಲೂನ್ ಗಾಜುಗಳನ್ನು ಹೊಡೆದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿಜಯನಗರ ಠಾಣೆ ಗರುಡ ಪೊಲೀಸರು…

ಪ್ರೊ. ಶಿವರಾಮು ಕಾಡನಕುಪ್ಪೆ ಅವರಿಗೆ ಹಿತೈಷಿಗಳ ನುಡಿನಮನ
ಮೈಸೂರು

ಪ್ರೊ. ಶಿವರಾಮು ಕಾಡನಕುಪ್ಪೆ ಅವರಿಗೆ ಹಿತೈಷಿಗಳ ನುಡಿನಮನ

August 2, 2018

ಮೈಸೂರು: ಇತ್ತೀಚೆಗೆ ನಿಧನರಾದ ಸಾಹಿತಿ ಪ್ರೊ. ಶಿವರಾಮು ಕಾಡನಕುಪ್ಪೆ ಅವರಿಗೆ ‘ನುಡಿ ನಮನ’ ಕಾರ್ಯಕ್ರಮ ಮಂಗಳವಾರ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಶಿವರಾಮು ಕಾಡನಕುಪ್ಪೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಮೂರ್ತಿ. ಕಾಡನಕುಪ್ಪೆಯವರ ಜೀವನ ಶೈಲಿ ವೈಚಾರಿಕತೆಗೆ ಹಾಸು ಹೊಕ್ಕಾಗಿತ್ತು. ಹೋರಾಟದ ಬದುಕು ಸಾಗಿಸಿಕೊಂಡು ಬಂದ ಶಿಕಾಕು, ಅವರೊಬ್ಬ ವಿಚಾರವೀರ. ಸಾಮಾಜಿಕ ಅನಿಷ್ಠದ ವಿರುದ್ಧ ಜೀವನಪೂರ್ತಿ ಹೋರಾಟ…

ನಾಲ್ಕು ಕುರಿಗಳ ಕಳವು
ಮೈಸೂರು

ನಾಲ್ಕು ಕುರಿಗಳ ಕಳವು

August 2, 2018

ಮೈಸೂರು:  ಶೆಡ್‍ನಲ್ಲಿ ಕಟ್ಟಿದ್ದ ನಾಲ್ಕು ಕುರಿಗಳನ್ನು ಕಳವು ಮಾಡಿರುವ ಘಟನೆ ಶ್ರೀರಾಂಪುರ 2ನೇ ಹಂತದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮಹದೇವಪುರ ನಿವಾಸಿ ರಾಮ್‍ಕುಮಾರ್ ಎಂಬುವರು ಸೋಮವಾರ ರಾತ್ರಿ ಹಳೆ ಮಾನಂದವಾಡಿ ರಸ್ತೆಯ ಶ್ರೀರಾಂಪುರದ ತಮ್ಮ ಶೆಡ್‍ನಲ್ಲಿ ಹಸು ಮತ್ತು ನಾಲ್ಕು ಕುರಿಗಳನ್ನು ಕಟ್ಟಿ, ಮಹದೇವಪುರದ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಬಂದು ಶೆಡ್ ತೆರೆದಾಗ ಕಟ್ಟಿದ್ದ ಕುರಿಗಳನ್ನು ಅಪರಿಚಿತರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಶೋಕಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

ದೋಷಪೂರಿತ ಮೀಟರ್: 24 ಆಟೋಗಳಿಗೆ ದಂಡ
ಮೈಸೂರು

ದೋಷಪೂರಿತ ಮೀಟರ್: 24 ಆಟೋಗಳಿಗೆ ದಂಡ

August 2, 2018

ಮೈಸೂರು: ದೇವರಾಜ ಸಂಚಾರ ಪೊಲೀಸ್ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಜಂಟಿಯಾಗಿ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ, ದೋಷಪೂರಿತ ಮೀಟರ್ ಅಳವಡಿಸಿ ವಂಚಿಸು ತ್ತಿದ್ದ 24 ಆಟೋ ರಿಕ್ಷಾಗಳ ವಿರುದ್ಧ ಪ್ರಕರಣ ದಾಖಲಿಸಿ 12 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ ಆಟೋ ತಪಾಸಣೆ ನಡೆಸುತ್ತಿದ್ದ ವೇಳೆ ದೋಷಪೂರಿತ ಮತ್ತು ನವೀಕರಣ ಮಾಡದ ಮೀಟರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆಟೋ ರಿಕ್ಷಾಗಳ ಚಾಲಕರಿಗೆ 500 ರೂ. ದಂಡ ವಿಧಿಸಲಾಯಿತು. ಮಕ್ಕಾಜಿ ಚೌಕ, ಗಾಂಧೀ…

ನಟರಾಜ ಪ್ರಥಮ ದರ್ಜೆ ಕಾಲೇಜಲ್ಲಿ  ಪರಿಯೋಜನೆಗಳ ಪ್ರದರ್ಶನ ಕಾರ್ಯಕ್ರಮ
ಮೈಸೂರು

ನಟರಾಜ ಪ್ರಥಮ ದರ್ಜೆ ಕಾಲೇಜಲ್ಲಿ  ಪರಿಯೋಜನೆಗಳ ಪ್ರದರ್ಶನ ಕಾರ್ಯಕ್ರಮ

August 2, 2018

ಮೈಸೂರು: ಮೈಸೂರಿನ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ “ಭಾರತದ ಗ್ರಾಮೀಣ ಆರ್ಥಿಕ ವ್ಯವಸ್ಥೆ” ವಿಷಯ ಕುರಿತು ತಯಾರಿಸಲಾದ ಮಾದರಿ ಮತ್ತು ಪರಿಯೋಜನೆಗಳ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ನಟರಾಜ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲರಾದ ಶ್ರೀಮತಿ ಸತ್ಯಸುಲೋಚನಾ ಉದ್ಘಾಟಿಸಿ ಮಾತನಾಡಿ, ಕಾಲೇಜು ಶಿಕ್ಷಣದಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದು ವಿದ್ಯಾರ್ಥಿನಿಯರನ್ನು ಅಭಿನಂದಿಸಿದರು. ವಿದ್ಯಾರ್ಥಿನಿಯರ ಉದ್ಯೋಗಕ್ಕಾಗಿ ಸಿದ್ಧತೆ, ಸ್ವ-ಉದೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದಾದ ವಿಧಾನ, ಬ್ಯಾಂಕಿನಿಂದ ಸಹಾಯ ಧನದ ರೂಪದಲ್ಲಿ ಸಾಲಗಳನ್ನು ಪಡೆಯುವ…

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ

August 1, 2018

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ನಾಲ್ವರು ಸಚಿವರುಗಳಿಗೆ ತಲಾ ಎರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ನಿರೀಕ್ಷೆಯಂತೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ಮೈಸೂರು ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಹಾಸನ ಜಿಲ್ಲೆಗೆ ಹೆಚ್.ಡಿ.ರೇವಣ್ಣ, ಮಂಡ್ಯಕ್ಕೆ ಸಿ.ಎಸ್.ಪುಟ್ಟರಾಜು, ಚಾಮರಾಜನಗರಕ್ಕೆ ಸಿ.ಪುಟ್ಟರಂಗಶೆಟ್ಟಿ, ಕೊಡಗಿಗೆ ಸಾ.ರಾ.ಮಹೇಶ್ ಅವರನ್ನು ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ. ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ ಬೆಂಗಳೂರು ನಗರ ಮತ್ತು ತುಮಕೂರು, ಆರ್.ವಿ.ದೇಶಪಾಂಡೆ ಅವರಿಗೆ ಉತ್ತರ ಕನ್ನಡ…

ಸುವರ್ಣಸೌಧ ಎದುರು ಮಠಾಧೀಶರ ಧರಣಿ
ಮೈಸೂರು

ಸುವರ್ಣಸೌಧ ಎದುರು ಮಠಾಧೀಶರ ಧರಣಿ

August 1, 2018

ಬೆಳಗಾವಿ: ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಹಾಗೂ ಸುವರ್ಣಸೌಧಕ್ಕೆ ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಮಠಾಧೀಶರ ನೇತೃತ್ವದಲ್ಲಿ ಸುವರ್ಣಸೌಧದ ಎದುರು ಇಂದು ಧರಣಿ ನಡೆಯಿತು. ಧರಣಿ ವೇಳೆ ಕೆಲ ಕಿಡಿಗೇಡಿಗಳು ಪ್ರತ್ಯೇಕ ಧ್ವಜ ಹಾರಿಸುವುದರ ಜತೆಗೆ ಘೋಷಣೆ ಸಹ ಕೂಗಿದರು. ಪೊಲೀಸರು ಪ್ರತ್ಯೇಕ ಧ್ವಜ ವಶಪಡಿಸಿಕೊಂಡು, ಕಿಡಿಗೇಡಿಗಳನ್ನು ಬಂಧಿಸಿದರು. ಅಲ್ಲದೆ ವೇದಿಕೆ ಮೇಲೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ. ಗದ್ದಲ ಎಬ್ಬಿಸಿದರೆ ವೇದಿಕೆಯಿಂದ ನಿರ್ಗಮಿಸುವುದಾಗಿ ಸ್ವಾಮೀಜಿಗಳು ಹೇಳುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು….

ವಿದ್ಯಾವಂತ ಅಂಗವಿಕಲರಿಗೆ ಜಿಲ್ಲಾ ಮಟ್ಟದಲ್ಲೇ ಉದ್ಯೋಗ ಕಲ್ಪಿಸಿ
ಮೈಸೂರು

ವಿದ್ಯಾವಂತ ಅಂಗವಿಕಲರಿಗೆ ಜಿಲ್ಲಾ ಮಟ್ಟದಲ್ಲೇ ಉದ್ಯೋಗ ಕಲ್ಪಿಸಿ

August 1, 2018

ಬೆಂಗಳೂರು: ಮಾನವೀಯತೆ ದೃಷ್ಟಿಯಿಂದ ವಿದ್ಯಾ ವಂತ ಅಂಗವಿಕಲರಿಗೆ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ದೊರಕಿಸಿ ಕೊಡುವ ಪ್ರಯತ್ನ ಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಿಗೆ ಸೂಚಿಸಿದರು. ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಇಂದು ಮುಂದುವರೆದ ಸಭೆಯಲ್ಲಿ ಮಾತನಾಡಿದ ಅವರು, ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಸ್ವೀಕರಿಸುವ ದೂರುಗಳನ್ನು ಜಿಲ್ಲಾಧಿಕಾರಿಗಳಿಗೆ ರವಾನಿ ಸಿದ ಸಂದರ್ಭದಲ್ಲಿ ಹಿಂಬರಹ ನೀಡಿದರೆ ಮಾತ್ರ ಪ್ರಕರಣ ಮುಕ್ತಾಯವಾಗಿದೆ ಎಂದು ಪರಿಗಣಿಸಲಾಗುವುದು. ಜಿಲ್ಲಾಧಿಕಾರಿಗಳ ಹಂತದಲ್ಲಿಯೇ…

ಹೆಚ್.ಡಿ.ಕೋಟೆ ಕಳ್ಳಿ ಮುಂಬೈನಲ್ಲಿ ಚಿನ್ನಾಭರಣ ಕದ್ದಿದ್ದು ಬಾಲಿವುಡ್ ನಟ ದಿವಂಗತ ಅಮರಿಶ್‍ಪುರಿ ಸಂಬಂಧಿ ಮನೆಯಲ್ಲಿ!
ಮೈಸೂರು

ಹೆಚ್.ಡಿ.ಕೋಟೆ ಕಳ್ಳಿ ಮುಂಬೈನಲ್ಲಿ ಚಿನ್ನಾಭರಣ ಕದ್ದಿದ್ದು ಬಾಲಿವುಡ್ ನಟ ದಿವಂಗತ ಅಮರಿಶ್‍ಪುರಿ ಸಂಬಂಧಿ ಮನೆಯಲ್ಲಿ!

August 1, 2018

ಮೈಸೂರು: ಚಿನ್ನಾಭರಣ ಕದ್ದ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ ಹೆಚ್.ಡಿ.ಕೋಟೆ ಮೂಲದ ಮಹಿಳೆ ಕಳವು ಮಾಡಿದ್ದು ಬಾಲಿವುಡ್‍ನ ಹೆಸರಾಂತ ಖಳನಟ ಅಮರಿಶ್ ಪುರಿ ಅವರ ಸೋದರ ಸಂಬಂಧಿ ನಿವೃತ್ತ ಕರ್ನಲ್ ಕೆ.ಕೆ.ಪುರಿ ಅವರ ಮಗಳ ಮನೆಯಲ್ಲಿ. ಮುಂಬೈನ ಕೊಲಬಾ ನಿವಾಸಿಯಾಗಿ ರುವ ನಿವೃತ್ತ ಕರ್ನಲ್ ಕೆ.ಕೆ.ಪುರಿ ಅವರ ಪುತ್ರಿ ಕಾಂಚನ್ ಪುರಿ, ಮನೆಯಲ್ಲಿ ಕಳೆದ ಎರಡು ತಿಂಗಳಿಂದ ಪಾರ್ಟ್‍ಟೈಮ್‍ನಲ್ಲಿ ಮನೆ ಕೆಲಸ ಮಾಡುತ್ತಿದ್ದ ತುಳಸಿ, ಈ ವೇಳೆ ಸನ್ನಡತೆ ತೋರಿದ್ದಳು. ತುಳಸಿಯನ್ನು ನಂಬಿದ್ದ ಮನೆ ಮಾಲೀಕರು ಖಾಯಂ…

1 1,454 1,455 1,456 1,457 1,458 1,611
Translate »