ಮೈಸೂರು

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು
ಮೈಸೂರು

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

August 1, 2018

ಸಾಲಿಗ್ರಾಮ:  ಬೈಕ್‍ಗೆ ಹಿಂದಿನಿಂದ ಬರುತ್ತಿದ್ದ ಬೈಕೊಂದು ಡಿಕ್ಕಿ ಹೊಡೆದು ತೀವ್ರವಾಗಿ ಪೆಟ್ಟು ಬಿದ್ದ ಪರಿಣಾಮ ಮೈಸೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಕೆ.ಆರ್.ನಗರ ದೊಡ್ಡಕೊಪ್ಪಲು ಗ್ರಾಮದ ವೆಂಕಟಯ್ಯ ಅವರ ಮಗ ಚಂದ್ರಶೇಖರ್(26) ಮೃತಪಟ್ಟ ವ್ಯಕ್ತಿ. ಚಂದ್ರಶೇಖರ್ ಸಾಲಿಗ್ರಾಮದ ನಾಡಕಚೇರಿ ವ್ಯಾಪ್ತಿಯಲ್ಲಿ ಗ್ರಾಮ ಸೇವಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೋಮವಾರ ತಾಲೂಕು ಕಚೇರಿ ಕೆಲಸದ ಮೇಲೆ ತಮ್ಮ ಬೈಕ್‍ನಲ್ಲಿ ಕೆ.ಆರ್.ನಗರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಬೈಕೊಂದು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ…

ಯಾಚೇನಹಳ್ಳಿಯಲ್ಲಿ ವಿಜೃಂಭಣೆಯ ಕಾವೇರಿ ಸಂಭ್ರಮ
ಮೈಸೂರು

ಯಾಚೇನಹಳ್ಳಿಯಲ್ಲಿ ವಿಜೃಂಭಣೆಯ ಕಾವೇರಿ ಸಂಭ್ರಮ

August 1, 2018

ತಿ.ನರಸೀಪುರ: ವರುಣದ ಕೃಪೆಯಿಂದ ಧರೆಗಿಳಿದು ಹಚ್ಚ ಹಸುರಿನಲ್ಲಿ ಮೈತಳೆದ ಜೀವಗಂಗೆ ಕಾವೇರಿ ಮಾತೆಯನ್ನು ಪೂಜಿಸಿ ಗೌರವಿಸುವ ಕಾವೇರಿ ಸಂಭ್ರಮ ಎಂಬ ವಿಶಿಷ್ಟವಾದ ವಿನೂತನ ಕಾರ್ಯಕ್ರಮ ತಾಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು. ನೆರೆಯ ಮಂಡ್ಯ ಜಿಲ್ಲೆಯ ಗಡಿ ಭಾಗದಲ್ಲಿರುವಂತಹ ತಾಲ್ಲೂಕಿನ ಯಾಚೇನಹಳ್ಳಿ ಗ್ರಾಮ ಸೋಮವಾರ ಸಂಜೆ ಮಿನಿ ದಸರಾ ಮಾದರಿಯಲ್ಲಿ ನಡೆದಂತಹ ಕಾವೇರಿ ಸಂಭ್ರಮ ಸಡಗರದ ಹಬ್ಬಕ್ಕೆ ಸಾಕ್ಷಿಯಾಗಿತ್ತು. ಬೆಳ್ಳಿ ರಥದಲ್ಲಿ ವೀರಾಜಮಾನಳಾಗಿದ್ದ ಕಾವೇರಿ ಮಾತೆಯ ಉತ್ಸವದ ಮೆರವಣಿಗೆಗೆ ಸಾಂಸ್ಕೃತಿಕ ಕಲಾ ತಂಡಗಳು ಮೆರ ನೀಡಿದರೆ, ಹಳ್ಳಿ…

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕರ್ಮ ಭೂಮಿ ಕಲ್ಲಹಳ್ಳಿಯ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಶಾಸಕ ವಿಶ್ವನಾಥ್
ಮೈಸೂರು

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕರ್ಮ ಭೂಮಿ ಕಲ್ಲಹಳ್ಳಿಯ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಶಾಸಕ ವಿಶ್ವನಾಥ್

August 1, 2018

ಹುಣಸೂರು, ಜು.31- ಮಾಜಿ ಮುಖ್ಯ ಮಂತ್ರಿ ದಿವಂಗತ ಡಿ.ದೇವರಾಜ ಅರಸರ ಕರ್ಮಭೂಮಿ ಕಲ್ಲಳ್ಳಿ ಗ್ರಾಮ ರಾಷ್ಟ್ರೀಯ ಹೆದ್ದಾರಿ 175ಕ್ಕೆ ಹೊಂದಿಕೊಂಡಿದ್ದು, ಇದರ ಪಕ್ಕದಲ್ಲಿರುವ 2 ಎಕರೆ ಸರ್ಕಾರಿ ಭೂಮಿಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಅರಸರ ಪ್ರತಿಮೆ, ಕಾಂಪ್ಲೆಕ್ಸ್, ಮ್ಯೂಸಿಯಂ ಹಾಗೂ ಸ್ಟಡಿ ಸೆಂಟರ್ ನಿರ್ಮಾಣ ಮಾಡಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಹೆಚ್. ವಿಶ್ವನಾಥ್ ತಿಳಿಸಿದರು. ಅಧಿಕಾರಿಗಳೊಂದಿಗೆ ಕಲ್ಲಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಅರಸರ ಶತಮಾನೋತ್ಸವ ಅಂಗವಾಗಿ…

ನಮ್ಮ ಸರ್ಕಾರ ಸುಭದ್ರ, ಅಭಿವೃದ್ಧಿಗೆ ಆದ್ಯತೆ ನೀಡಿ
ಮೈಸೂರು

ನಮ್ಮ ಸರ್ಕಾರ ಸುಭದ್ರ, ಅಭಿವೃದ್ಧಿಗೆ ಆದ್ಯತೆ ನೀಡಿ

July 31, 2018

ಜಿಲ್ಲಾಧಿಕಾರಿಗಳು, ಜಿಪಂ ಸಿಇಓಗಳಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ಮಾಧ್ಯಮಗಳ ವರದಿಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಮೈತ್ರಿ ಸರ್ಕಾರ ಕುರಿತು ಏನೇನೊ ವರದಿಗಳು ಬರುತ್ತಿವೆ. ಅವರ ವರದಿ ನೋಡಿ, ಅಧಿಕಾರಿಗಳು ದಾರಿ ತಪ್ಪಬಾರದು. ಮಾಧ್ಯಮಗಳಿಗೆ ಪಾಪ, ಬೇರೆ ಸುದ್ದಿಗಳು ಸಿಕ್ತಿಲ್ಲವೇನೋ, ನಾನು ನಾಲ್ಕು ಜಿಲ್ಲೆಗಳ ಮುಖ್ಯಮಂತ್ರಿ ಅಂತ ವರದಿ ಮಾಡುತ್ತಾರೆ. 2.18 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‍ನಲ್ಲಿ…

ಕಾಂಗ್ರೆಸ್ ವೀರಶೈವ-ಲಿಂಗಾಯತರ ಒಡೆಯಲೆತ್ನಿಸಿದರೆ ಜೆಡಿಎಸ್ ರಾಜ್ಯವನ್ನೇ ಒಡೆಯಲು ಹೊರಟಿದೆ
ಮೈಸೂರು

ಕಾಂಗ್ರೆಸ್ ವೀರಶೈವ-ಲಿಂಗಾಯತರ ಒಡೆಯಲೆತ್ನಿಸಿದರೆ ಜೆಡಿಎಸ್ ರಾಜ್ಯವನ್ನೇ ಒಡೆಯಲು ಹೊರಟಿದೆ

July 31, 2018

ಬೆಂಗಳೂರು:  ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ವೀರಶೈವ-ಲಿಂಗಾಯತ ರನ್ನು ಒಡೆಯಲು ಪ್ರಯತ್ನಿಸಿದರೆ, ಜೆಡಿಎಸ್ ರಾಜ್ಯವನ್ನು ಒಡೆಯಲು ಹೊರಟಿದ್ದು, ಇದನ್ನು ರಾಜ್ಯದ ಜನತೆ ಒಪ್ಪುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಅವರು, ಅಖಂಡ ಕರ್ನಾಟಕ ನಿರ್ಮಾಣಕ್ಕೆ ಹಿರಿಯರೆಲ್ಲ ಸೇರಿ ರಕ್ತ ಹರಿಸಿದ್ದಾರೆ. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತರ ನಡೆಸಿ ದಂತಿದೆ ಎಂದಿದ್ದಾರೆ. ರಾಜ್ಯದ ಜನತೆ 104 ಶಾಸಕರನ್ನು…

ಮುಂಬೈನಲ್ಲಿ ಮನೆ ಕೆಲಸಕ್ಕೆ ಸೇರಿ ಮಾಲೀಕರ ಚಿನ್ನಾಭರಣ ಕದ್ದ ಹೆಚ್.ಡಿ.ಕೋಟೆ ಕಳ್ಳಿ
ಮೈಸೂರು

ಮುಂಬೈನಲ್ಲಿ ಮನೆ ಕೆಲಸಕ್ಕೆ ಸೇರಿ ಮಾಲೀಕರ ಚಿನ್ನಾಭರಣ ಕದ್ದ ಹೆಚ್.ಡಿ.ಕೋಟೆ ಕಳ್ಳಿ

July 31, 2018

ಸ್ಥಳೀಯ ಪೊಲೀಸರ ನೆರವಿನಿಂದ ಮುಂಬೈ ಪೊಲೀಸರ ವಶಕ್ಕೆ ಹ್ಯಾಂಡ್‍ಪೋಸ್ಟ್‍ನಲ್ಲಿ ಗಿರವಿ ಇಟ್ಟಿದ್ದ ಬಹುತೇಕ ಚಿನ್ನಾಭರಣಗಳ ಜಪ್ತಿ 30 ಲಕ್ಷದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಖತರ್ನಾಕ್ ಮಹಿಳೆ ಮೈಸೂರು:  ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಮನೆಯಲ್ಲೇ ಲಕ್ಷಾಂತರ ರೂ. ಮೌಲ್ಯದ ವಜ್ರ ಹಾಗೂ ಚಿನ್ನದ ಆಭರಣಗಳನ್ನು ದೋಚಿಕೊಂಡು ಬಂದಿದ್ದ ಹೆಚ್.ಡಿ.ಕೋಟೆ ಮೂಲದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ತಾಲೂಕಿನ ಹಾದನೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕಳ್ಳಿ ತುಳಸಿ(30)ಯನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಳಿಕ ವಿಚಾರಣೆಗೊಳಪಡಿಸಿ,…

ಪ್ಲಾಸ್ಟರ್ ಆಫ್ ಪ್ಯಾರಿಸ್, ರಟ್ಟಿನ ಗಣಪನ ಮಾರಾಟ ನಿಷೇಧ
ಮೈಸೂರು

ಪ್ಲಾಸ್ಟರ್ ಆಫ್ ಪ್ಯಾರಿಸ್, ರಟ್ಟಿನ ಗಣಪನ ಮಾರಾಟ ನಿಷೇಧ

July 31, 2018

ಪರಿಸರ ಸ್ನೇಹಿ ಮಣ್ಣಿನ ಗಣಪನ ತಯಾರಿಕೆ, ಬಳಕೆಗೆ ಅವಕಾಶ  4 ಅಡಿಗಿಂತ ಹೆಚ್ಚಿನ ಎತ್ತರದ ಗಣಪನ ಪ್ರತಿಷ್ಠಾಪನೆಗೆ ಅನುಮತಿ ನಕಾರ ರಸ್ತೆ ಬದಿ ಮಾರಾಟ ನಿಷೇಧ, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ಮೈಸೂರು: ಮೈಸೂರು ನಗರದಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಪೇಪರ್ ಮೋಲ್ಡ್‍ನಿಂದ ತಯಾರಿಸಿರುವ ಬಣ್ಣದ ಗಣಪತಿ ಮೂರ್ತಿಯ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ನಾಲ್ಕು ಅಡಿಗಿಂತ ಅಧಿಕ ಎತ್ತರದ ಗಣಪತಿ ಮೂರ್ತಿ ತಯಾರಿಸದಂತೆ ಮೈಸೂರು ನಗರ ಪಾಲಿಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ….

ಶಿಕ್ಷಕರಿಗೆ ಚುನಾವಣಾ ಕಾರ್ಯದಿಂದ  ಮುಕ್ತಿ ನೀಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ
ಮೈಸೂರು

ಶಿಕ್ಷಕರಿಗೆ ಚುನಾವಣಾ ಕಾರ್ಯದಿಂದ  ಮುಕ್ತಿ ನೀಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

July 31, 2018

ಮೈಸೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಮತದಾರರ ಪಟ್ಟಿ ಪರಿಷ್ಕರಿಣೆ ಹಾಗೂ ಇತರೆ ಚುನಾವಣೆ ಕರ್ತವ್ಯ(ಬಿಎಲ್‍ಓ)ಕ್ಕೆ ನೇಮಿಸದಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೈಸೂರು ಘಟಕದ ಜಿಲ್ಲಾಧ್ಯಕ್ಷ ಹೆಚ್.ಬಿ.ಬಸವರಾಜು ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಪದೇಪದೆ ಚುನಾವಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಗೆ ಬಿಎಲ್‍ಓ ಆಗಿ ಕರ್ತವ್ಯ ನಿರ್ವಹಿಸುವಂತೆ…

ಮೈಸೂರು ಕೋರ್ಟ್ ಹಿಂಭಾಗದ ಅಕ್ರಮ  ಮನೆ ತೆರವಿಗೆ ಶಾಸಕ ರಾಮದಾಸ್ ಸೂಚನೆ
ಮೈಸೂರು

ಮೈಸೂರು ಕೋರ್ಟ್ ಹಿಂಭಾಗದ ಅಕ್ರಮ  ಮನೆ ತೆರವಿಗೆ ಶಾಸಕ ರಾಮದಾಸ್ ಸೂಚನೆ

July 31, 2018

ಮೈಸೂರು: ಮೈಸೂರು ನ್ಯಾಯಾಲಯದ ಹಿಂಭಾಗದ ಸರ್ಕಾರದ ಖರಾಬು ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ತೆರವುಗೊಳಿಸುವಂತೆ ಶಾಸಕ ಎಸ್.ಎ.ರಾಮದಾಸ್ ಅಧಿಕಾರಿಗಳಿಗೆ ಸೂಚಿಸಿದರು. ಸೋಮವಾರ ಬೆಳಿಗ್ಗೆ ವಾರ್ಡ್ ನಂ 48ನೇ ವಾರ್ಡಿನ ಜಯನಗರ ಮತ್ತಿತರೆ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದ ಅವರು, ನ್ಯಾಯಾಲಯದ ಹಿಂಭಾಗದಲ್ಲಿ ಸರ್ಕಾರದ ಖರಾಬು ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿರುವುದು, ದನಕರುಗಳನ್ನು ಕಟ್ಟಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸರ್ಕಾರಿ ಜಾಗದಲ್ಲಿ ಯಾವುದೇ ಕಟ್ಟಡವಿದ್ದರೆ ಅದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ…

ಡಿಸಿ, ಸಿಇಓಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಹತ್ವದ ಸೂಚನೆ
ಮೈಸೂರು

ಡಿಸಿ, ಸಿಇಓಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಹತ್ವದ ಸೂಚನೆ

July 31, 2018

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸೋಮವಾರ ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ, ನೀಡಿದ ಮಹತ್ವದ ಸೂಚನೆಗಳಿವು. ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಎನ್‍ಡಿಆರ್‍ಎಫ್ ಮಾರ್ಗಸೂಚಿಗಳನ್ವಯ ಪರಿಹಾರ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿಗೆ ಸಮಸ್ಯೆ ಇರುವ ಸ್ಥಳಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗಾಗಿ ಪರ್ಯಾಯ ಯೋಜನೆ ಬಗ್ಗೆ ಪರಿಶೀಲಿಸಿ, ಪ್ರಸ್ತಾವನೆ ಸಲ್ಲಿಸಬೇಕು. ರಾಜ್ಯದ 12 ಮಳೆ ಕೊರತೆ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಎದುರಾದರೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳಿಗೆ ಯೋಜನೆ ರೂಪಿಸಬೇಕು. ಸರ್ಕಾರ ರೈತ ಪರವಾಗಿದ್ದರೂ ಆತ್ಮಹತ್ಯೆ…

1 1,456 1,457 1,458 1,459 1,460 1,611
Translate »