ದಾನ, ಧರ್ಮದಿಂದ ದುಃಖ ಮರೆಯಲು ಸಾಧ್ಯ
ಮೈಸೂರು

ದಾನ, ಧರ್ಮದಿಂದ ದುಃಖ ಮರೆಯಲು ಸಾಧ್ಯ

August 2, 2018

ಮೈಸೂರು: ನಾನು ಈ ಪದಗ್ರಹಣದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ. ಲಯನ್ಸ್ ಸಂಸ್ಥೆ ಸಮಾಜ ಸೇವೆಗೆ ಹೆಸರುವಾಸಿ ಎಂದು ಮೈಸೂರಿನ ಶ್ರೀ ರಾಮಕೃಷ್ಣಆಶ್ರಮದ ಮಹೇಶಾತ್ಮಾನಂದ ಮಹಾರಾಜ್ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕ್ಲಬ್ ಆಫ್ ಮೈಸೂರು ಚಂದನ, ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ, ವಲಯ-1ರ ನೂತನ ಅಧ್ಯಕ್ಷ ಲಯನ್ ಜಿ.ಚಂದ್ರಶೇಖರ್ ಹಾಗೂ ಪದಾಧಿಕಾರಿಗಳ ಪದಗ್ರಹಣವನ್ನು ಉದ್ಘಾಟಿಸಿ ಮಾತನಾಡಿದರು.

ಚೆಂದದ ಹೆಸರು ‘ಚಂದನ’, ವಿವೇಕಾನಂದರ ವಾಣಿಯಂತೆ ಒಳ್ಳೆಯದನ್ನು ಮಾಡು, ಒಳ್ಳೆಯವನಾಗು. ಮನಸ್ಸಿನಲ್ಲಿ ಒಳ್ಳೆಯದನ್ನು ಮಾಡುತ್ತೇನೆ ಎಂದು ಆಲೋಚನೆ ಬಂದರೆ ನಮಗೆ ಸಿಂಹ ಬಲ ಬಂದಂತಾಗುತ್ತದೆ. ನೀವು ಫುಟ್‍ಬಾಲ್ ಆಟ ಆಡಿ ನಿಮ್ಮ ದೇಹ, ಮನಸ್ಸು ಸದೃಢವಾದಾಗ ಭಗವದ್ಗೀತೆ ಓದಬೇಕು. ಧರ್ಮಕ್ಷೇತ್ರೇ ಕುರುಕ್ಷೇತ್ರೇ ಯಾವುದೇ ಕ್ಷೇತ್ರಕ್ಕೆ ಹೋಗುತ್ತೀರೋ ಅಲ್ಲಿ ಧರ್ಮ ಮಾಡಬೇಕು ಎಂದು ಸ್ವಾಮೀಜಿ ತಿಳಿಸಿದರು.

ಪದಗ್ರಹಣ ನೆರವೇರಿಸಿದ ಒಂದನೇ ಉಪ ಜಿಲ್ಲಾ ರಾಜ್ಯಪಾಲ ಲಯನ್ ನಾಗರಾಜ್ ವಿ.ಬೈರಿ ಮಾತನಾಡಿ, ನಾನು ಕಳೆದ ನಾಲ್ಕು ವರ್ಷದಿಂದ ಈ ಕ್ಲಬ್ಬಿನೊಡನೆ ನಿಕಟ ಸಂಪರ್ಕ ಹೊಂದಿದ್ದೇನೆ. ಯಾವುದೇ ಸಂಸ್ಥೆಯಲ್ಲಿ ವೈವಿಧ್ಯತೆ ಇಲ್ಲದಿದ್ದರೆ ಅಲ್ಲಿ ಯಶಸ್ಸು ಕಾಣಲಾಗುವುದಿಲ್ಲ. ದಾನ, ಧರ್ಮ, ಸಂಸ್ಕøತಿಯಲ್ಲಿ ಭಾರತ ಮುಂದಿದೆ ಎಂದರು.

ನೂತನಅಧ್ಯಕ್ಷ ಲಯನ್‍ಜಿ.ಚಂದ್ರಶೇಖರ್ ನಾನು ಈ ಪದವಿಯನ್ನು ಸೇವಾ ಮನೋಭಾವದಿಂದ ಸ್ವೀಕರಿಸುತ್ತಿದ್ದೇನೆ. ನಾನು ಆದಷ್ಟು ಈ ಒಂದು ವರ್ಷದ ಅವಧಿಯಲ್ಲಿ ಶಕ್ತಿ ಮೀರಿ ಸೇವಾ ಚಟುವಟಿಕೆಗಳನ್ನು ಮಾಡಲು ಇಚ್ಛಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮದ ಮಕ್ಕಳಿಗೆ ಹೊದಿಕೆಗಳನ್ನು ವಿತರಿಸಲಾಯಿತು.

ನಿಕಟಪೂರ್ವಅಧ್ಯಕ್ಷ ಲಯನ್‍ರವಿ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ರಾಜಣ್ಣ, ಲಯನ್‍ಜಯರಾಮಣ್ಣ, ಲಯನ್ ಸುರೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

Translate »