ಈಗ 999 ರೂ.ನಲ್ಲಿ ಮೈಸೂರು-ಚೆನ್ನೈ ಹಾರಾಟ
ಮೈಸೂರು

ಈಗ 999 ರೂ.ನಲ್ಲಿ ಮೈಸೂರು-ಚೆನ್ನೈ ಹಾರಾಟ

August 3, 2018

ಮೈಸೂರು: ಮೈಸೂರು-ಚೆನ್ನೈ ನಡುವೆ ವಿಮಾನದಲ್ಲಿ ಸಂಚರಿಸು ವವರಿಗೊಂದು ಸುವರ್ಣಾವಕಾಶ. ಕೇವಲ 999 ರೂ.ಗಳಿಗೆ ಮೈಸೂರಿನಿಂದ ಚೆನ್ನೈಗೆ ಟ್ರೂಜೆಟ್ ಬಂಪರ್ ಆಫರ್ ನೀಡಿದೆ.

ಆಗಸ್ಟ್ 4ರವರೆಗೆ ಟಿಕೆಟ್ ಬುಕಿಂಗ್ ಮಾಡಿಸುವವರಿಗೆ ಮಾತ್ರ ಈ ಅವಕಾಶ ಕಲ್ಪಿಸಲಾಗಿದ್ದು, ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳವರೆಗೆ ಪ್ರಯಾಣಿಸಲು ಅವಕಾಶವಿದ್ದು, ಆಗಸ್ಟ್ 4ರೊಳಗಾಗಿ ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಬೇಕು. ಈ ಅವಕಾಶ ಉಪಯೋಗಿಸಿಕೊಳ್ಳಲು ಜನರು ತೀವ್ರ ಉತ್ಸಾಹ ತೋರಿದ್ದಾರೆ ಎಂದು ಮೈಸೂರು ವಿಮಾನ ನಿಲ್ದಾಣದ ವ್ಯವಸ್ಥಾಪಕ ವಿ.ಎ.ಗುರು ನಾಥ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಕನಸಿನ ಉಡಾನ್(Ude Desh ka Aam Naagrik) ಯೋಜನೆಯಡಿ ಟ್ರೂಜೆಟ್ ವಿಮಾನ ಹಾರಾಟವನ್ನು ಮೈಸೂರು-ಚೆನ್ನೈ ನಡುವೆ ಆರಂಭಿಸಿ, 2,500 ರೂ. ಪ್ರಯಾಣ ದರ ನಿಗದಿಪಡಿಸಿದ್ದರು. ಇದೀಗ ಟ್ರೂಜೆಟ್ ಸಂಸ್ಥೆ ಭಾರೀ ಮಾನ್ಸೂನ್ ಅಫರ್ ನೀಡಿರುವುದರಿಂದ ಮೈಸೂರು-ಚೆನ್ನೈ ನಡುವೆ ಕೇವಲ 999ರೂ.ನಲ್ಲಿ ಪ್ರಯಾಣಿಸ ಬಹುದಾಗಿದೆ.

ಈ ಎರಡೂ ನಗರ ನಡುವಿನ ಶತಾಬ್ಧಿ ರೈಲಿನ ದರ 1,010 ರಿಂದ 1,860 ರೂ. ಇದ್ದು, ವಿಮಾನ ಪ್ರಯಾಣ ದರ ರೈಲಿಗಿಂತಲೂ ಕಡಿಮೆ ಇರುವುದು ವಿಶೇಷ.

Translate »