ಚಾಮುಂಡಿವಿಹಾರ ಕ್ರೀಡಾಂಗಣ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ. ಮಂಜೂರು
ಮೈಸೂರು

ಚಾಮುಂಡಿವಿಹಾರ ಕ್ರೀಡಾಂಗಣ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ. ಮಂಜೂರು

August 3, 2018

ಮೈಸೂರು: ಡೈರಿ ವೃತ್ತದಿಂದ ಎಸ್.ಪಿ.ಕಛೇರಿ ವೃತ್ತದವರೆ ಗಿನ ಚಾಮುಂಡಿವಿಹಾರ ಕ್ರೀಡಾಂಗಣ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ. ಮಂಜೂ ರಾಗಿದ್ದು, ಕೂಡಲೇ ಕಾಮಗಾರಿ ಆರಂಭಿಸು ವುದಾಗಿ ಶಾಸಕ ಎಲ್.ನಾಗೇಂದ್ರ ತಿಳಿಸಿದರು.

ಇಂದು ವಾರ್ಡ್ ನಂ.64ರಲ್ಲಿ ಅಧಿಕಾರಿಗಳೊಂದಿಗೆ ಪಾದಯಾತ್ರೆ ನಡೆಸಿ ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿದರು. ಈ ವೇಳೆ ಆರ್.ಒ.ಪ್ಲಾಂಟ್ ನಿರ್ಮಾಣವಾಗಿ ಪೂರ್ಣಗೊಂಡಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ, 8 ವರ್ಷಗಳಿಂದ ಸಮುದಾಯ ಭವನ ಕಾಮಗಾರಿ ಪೂರ್ಣಗೊಂಡಿಲ್ಲ. ಮೈಸೂರು ಒನ್ ಅವ್ಯವಸ್ಥೆಯಿಂದ ಕೂಡಿದ್ದು, ಅಲ್ಲಲ್ಲಿ ಕಸಕಡ್ಡಿ, ತ್ಯಾಜ್ಯಗಳು ಬಿದ್ದಿವೆ. ಜತೆಗೆ ಮಕ್ಕಳ ಆಟಿಕೆಗಳಿದ್ದರೂ ಉಪಯೋಗವಾಗುತ್ತಿಲ್ಲ. ಅಲ್ಲಲ್ಲಿ ಹುಲ್ಲುಗಳು ಬೆಳೆದಿದ್ದು, ವಿಷಜಂತುಗಳ ಆವಾಸಸ್ಥಾನ ಇದಾಗಿದೆ. ವಾರ್ಡ್‍ನಲ್ಲಿ ಚರಂಡಿಗಳಿಲ್ಲದಿದ್ದರಿಂದ ರಸ್ತೆ ಮೇಲೆಯೇ ಕೊಳಚೆ ನೀರು ಹರಿಯುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಿದೆ ಎಂಬಿತ್ಯಾದಿ ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡರು.

ಈ ವೇಳೆ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಈ ಭಾಗದಲ್ಲಿ “ಹೌಸ್ ಫಾರ್ ಆಲ್” ಯೋಜನೆಯಡಿ 226 ಮನೆಗಳು ನಿರ್ಮಾಣವಾಗುತ್ತಿದ್ದು, ಕೇಂದ್ರದಿಂದ 1.5, ರಾಜ್ಯದಿಂದ 1.2 ಹಾಗೂ ಪಾಲಿಕೆ ಯಿಂದ 1.8 ಲಕ್ಷ ರೂ. ಒಟ್ಟು 4.8ಲಕ್ಷ ರೂಗಳನ್ನು ನೀಡಲಾಗುತ್ತದೆ. ಜತೆಗೆ, ಶಾಲಿವಾಹನ, ಐದರುಗುಂಟೆ ರಸ್ತೆ ಮರು ಡಾಂಬರೀಕರಣಕ್ಕೆ 20ಲಕ್ಷ ರೂ. ಮಂಜೂರಾಗಿದ್ದು, ಸದ್ಯದಲ್ಲೇ ಆರಂಭಿಸಲಾಗುವುದು ಎಂದರು.

ಐದರ ಗುಂಟೆ ರಸ್ತೆಯಲ್ಲಿನ ಉದ್ಯಾನ ವನದ ಅಭಿವೃದ್ಧಿಗೆ 15 ಲಕ್ಷ ರೂ. ಮಂಜೂ ರಾಗಿದ್ದು, ನಾಳೆಯಿಂದಲೇ ಕೆಲಸ ಪ್ರಾರಂಭಿಸಲಾಗುವುದು. ಜತೆಗೆ ಸಾರ್ವಜನಿಕರಿಗೆ ವಾಕಿಂಗ್ ಪಾತ್ ನಿರ್ಮಿಸಲಾಗುವುದು. ಜತೆಗೆ 5 ಲಕ್ಷ ರೂ. ವೆಚ್ಚದಲ್ಲಿ ಮುಖ್ಯ ರಸ್ತೆಗಳಲ್ಲಿರುವ ಟ್ಯೂಬ್‍ಲೈಟ್‍ಗಳನ್ನು ತೆಗೆದು ಎಲ್‍ಇಡಿ ದೀಪಗಳನ್ನು ಅಳವಡಿಸ ಲಾಗುವುದು ಎಂದು ತಿಳಿಸಿದರು.

ಎಲ್ಲಾ ಚರಂಡಿಗಳನ್ನು ಸ್ವಚ್ಛ ಮಾಡ ಬೇಕು. ಎಲ್ಲೆಂದರಲ್ಲಿ ಕಸ ಸುರಿಯುವ ವರಿಗೆ ದಂಡ ವಿಧಿಸಬೇಕು, ಪಾರ್ಕ್‍ಗಳಲ್ಲಿ ಡಬ್ರೀಸ್ ಹಾಕಿರುವ ಕಟ್ಟಡ ಮಾಲೀಕರಿಗೆ ನೋಟೀಸ್ ನೀಡಬೇಕು ಹಾಗೂ ಪಾಲಿಕೆಯ ಕಛೇರಿ ಇರುವ ಪಾರ್ಕ್‍ನಲ್ಲಿ ಎರಡು ಈ ಟಾಯ್ಲೆಟ್ ನಿರ್ಮಾಣ, ಫಾಗ್ ಹೊಡೆಸುವುದು, ಡಿಡಿಟಿ ಸಿಂಪಡಿಸುವಂತೆ ಸಂಬಂಧ ಅಧಿಕಾರಿಗಳಿಗೆ ಸೂಚಿಸಿದರು.

ಸಮಸ್ಯೆಗಳ ಅನಾವರಣ: ಪಾದಯಾತ್ರೆ ವೇಳೆ ಕಸದ ತೊಟ್ಟಿಗಳು, ಚರಂಡಿಗಳಲ್ಲಿ ಕೊಳಚೆ ನೀರು ಹರಿಯುತ್ತಿರುವುದು, ಪಾರ್ಕ್ ಗಳ ನಿರ್ವಹಣೆ ಇಲ್ಲದಿರುವುದು, ನೀರು ಮತ್ತು ಒಳಚರಂಡಿ ಸಮಸ್ಯೆ, ಮ್ಯಾನ್ ಹೋಲ್ ಕುಸಿದಿರುವುದು ಕಂಡುಬಂದವು.
ಈ ಪಾದಯಾತ್ರೆಯಲ್ಲಿ ನಗರ ಪಾಲಿಕೆಯ ಸದಸ್ಯರು, ವಲಯ ಆಯುಕ್ತರಾದ ಮಹೇಶ್, ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಆರೋ ಗ್ಯಾಧಿಕಾರಿ ಡಾ.ನಾಗರಾಜ್, ಸೋಮ ಶೇಖರ ರಾಜು, ಮೋಹನ್, ಜೆಸಿಬಿ ರವಿ, ವಾರ್ಡ್ ಅಧ್ಯಕ್ಷ ರಾಜು, ಚಿಕ್ಕವೆಂಕಟ, ವಾಣಿಶ್ ಮತ್ತಿತರರು ಭಾಗವಹಿಸಿದ್ದರು.

Translate »