ಕೆ.ಜಿ.ಕೊಪ್ಪಲಿನಲ್ಲಿ ಶ್ರೀಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ
ಮೈಸೂರು

ಕೆ.ಜಿ.ಕೊಪ್ಪಲಿನಲ್ಲಿ ಶ್ರೀಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ

August 4, 2018

ಮೈಸೂರು: ಮೈಸೂರಿನ ಕನ್ನೇಗೌಡನಕೊಪ್ಪಲಿನಲ್ಲಿ ಆ. 7 ರಂದು ನಡೆಯುವ ಗ್ರಾಮದೇವತೆ ಶ್ರೀಚಾಮುಂಡೇಶ್ವರಿ ಹಬ್ಬದ ಪ್ರಯುಕ್ತ ಕನ್ನೇಗೌಡ ಪೈ. ಬಸವಯ್ಯ ಕುಸ್ತಿ ಸಮಿತಿ ವತಿಯಿಂದ ಆ. 5 ರಂದು 5ನೇ ವರ್ಷದ ರಾಷ್ಟ್ರ ಮತ್ತು ರಾಜ್ಯ ಮಟ್ಟದ 45 ಜೊತೆ ಕಾಟಾ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿದೆ.

ಪಂಜಾಬಿನ ಪೈ. ಪ್ರಿನ್ಸಿಪಾಲ್ ಸಿಂಗ್ ವರ್ಸಸ್ ಹರಿಯಾಣ ಪೈ. ಹಿತೇಶ್ ಕಾಳ ಹಾಗೂ ಕೊಲ್ಲಾಪುರದ ಪೈ. ಸಂತೋಷ್ ದರೋಡ್ ವರ್ಸಸ್ ಪೈ. ಹರಿಯಾಣ ಪೈ. ಸುನೀಲ್ ಚೋಟಿಯಾಲ ಇವರು ಕುಸ್ತಿ ಸೋಲು ಗೆಲುವಿನ ತನಕ ಸೆಣಸಾಟ ನಡೆಸಲಿದ್ದಾರೆ.

ದಾವಣಗೆರೆ ಹೆಸರಾಂತ ಕುಸ್ತಿ ಪಟು ಪೈ. ಕಾರ್ತಿಕ್ ಕಾಟೆ ವರ್ಸಸ್ ಪೈ. ಪ್ರವೀಣ್ ಬೋಲಾ ಅವರ ಕುಸ್ತಿ 1 ಗಂಟೆಗಳ ಕಾಲ ಹಾಗೂ ಇನ್ನು ಅನೇಕ ಮೈಸೂರಿನ ಹಾಗೂ ರಾಜ್ಯದಿಂದ ಹೆಸರಾಂತ ಕುಸ್ತಿ ಪಟುಗಳು ಭಾಗವಹಿಸುವರು ಎಂದು ಸಮಿತಿ ಕಾರ್ಯದರ್ಶಿ ಕೆ.ದೇವರಾಜ್ ತಿಳಿಸಿದ್ದಾರೆ.

ಪಂದ್ಯಾವಳಿಯಲ್ಲಿ ಗೆದ್ದ ಕುಸ್ತಿ ಪಟುಗಳಿಗೆ ಕನ್ನೇಗೌಡ ಪ್ರಶಸ್ತಿ, ಪೈಲ್ವಾನ್ ಬಸವಯ್ಯ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಾಗುವುದು.

ಪಂದ್ಯಾವಳಿಯನ್ನು ಶಾಸಕ ಎಲ್. ನಾಗೇಂದ್ರ ಉದ್ಘಾಟಿಸುವರು. ಶ್ರೀಆದಿಚುಂಚನಗಿರಿ ಮಠಾಧಿಪತಿ ಶ್ರೀ ನಿರ್ಮಲಾನಂದ ಸ್ವಾಮೀಜಿ, ಶಾಖಾ ಮಠದ ಸ್ವಾಮೀಜಿ ಶ್ರೀ ಸೋಮನಾಥ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಶಾಸಕ ಎಸ್.ಎ. ರಾಮದಾಸ್, ಪಾಲಿಕೆ ಸದಸ್ಯರಾದ ಎಸ್. ಬಾಲು, ಚೆನ್ನಪ್ಪ, ಆರ್. ಲಿಂಗಪ್ಪ, ಕೆಂಪಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕನ್ನೇಗೌಡನಕೊಪ್ಪಲಿನ ಹಿರಿಯರಾದ ಪೈ. ಮರೀಗೌಡರು ಜ್ಯೋತಿ ಬೆಳಗಿಸಿ ಪ್ರಮುಖ ರಸ್ತೆಗಳಲ್ಲಿ ಅಂಬಾತಾಯಿ ಮೆರವಣಿಗೆಯನ್ನು ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »