ಮೈಸೂರಿಂದ ಬಸ್ ಸಂಚಾರ ಸ್ಥಗಿತ
ಮೈಸೂರು

ಮೈಸೂರಿಂದ ಬಸ್ ಸಂಚಾರ ಸ್ಥಗಿತ

August 8, 2018

ಮೈಸೂರು: ಎಂ.ಕರುಣಾನಿಧಿ ಅವರ ನಿಧನದ ಹಿನ್ನೆಲೆ ಮೈಸೂರಿಂದ ತಮಿಳುನಾಡಿಗೆ ತೆರಳುತ್ತಿದ್ದ ಸುಮಾರು 70 ಬಸ್‍ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ಅಧಿಕಾರಿ ಎಂ.ವಾಸು ತಿಳಿಸಿದ್ದಾರೆ. ತಮಿಳುನಾಡು ಸಾರಿಗೆ ಇಲಾಖೆ ಮಾಹಿತಿ ಮೇರೆಗೆ ಇಂದು ಸಂಜೆ 6.30 ರಿಂದಲೇ ಬಸ್ ಸಂಚಾರ ಬಂದ್ ಮಾಡಲಾಗಿದ್ದು, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಸಂಚಾರವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕದ ವಿವಿಧ ಭಾಗಗಳಿಂದ ತಮಿಳುನಾಡಿಗೆ ಸಂಚರಿಸುವ ಎಲ್ಲಾ ಕೆಎಸ್ಆರ್‌ಟಿಸಿ ಬಸ್‍ಗಳ ಸಂಚಾರವನ್ನು ಇಂದು ಸಂಜೆಯಿಂದ ರದ್ದುಗೊಳಿಸ ಲಾಗಿದೆ. ತಮಿಳುನಾಡಿನ ಬಸ್ ನಿಲ್ದಾಣಗಳಲ್ಲಿ ನಿಲುಗಡೆಗೊಳಿಸಿ ರಾತ್ರಿ ವೇಳೆಗೆ ಅಲ್ಲಿಂದ ಹೊರಡಬೇಕಾದ ಎಲ್ಲಾ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಇಂದು ಸಂಜೆಯೇ ವಾಪಸ್ ಕರೆಸಿಕೊಳ್ಳಲಾಗಿದೆ.

Translate »