ದಸರಾಗೆ ಅಧಿಕ ಪ್ರವಾಸಿಗರ ಸೆಳೆಯಲು ಈ ಬಾರಿ ಆಕರ್ಷಕ ಕಾರ್ಯಕ್ರಮ ಆಯೋಜನೆ
ಮೈಸೂರು

ದಸರಾಗೆ ಅಧಿಕ ಪ್ರವಾಸಿಗರ ಸೆಳೆಯಲು ಈ ಬಾರಿ ಆಕರ್ಷಕ ಕಾರ್ಯಕ್ರಮ ಆಯೋಜನೆ

August 8, 2018

ಮೈಸೂರು: ಈ ಭಾರಿ ಅಧಿಕ ಪ್ರವಾಸಿಗರನ್ನು ಸೆಳೆಯಲು ಹೆಚ್ಚು ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇಂದು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಈ ಬಾರಿ ಏರ್‌ಷೋನಲ್ಲಿ ಮಿಲಿಟರಿ ಹಾಗೂ ವಾಯುದಳದ ಹೆಚ್ಚು ವಿಮಾನಗಳ ಪ್ರದರ್ಶನಕ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶೀಘ್ರದಲ್ಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದಸರಾ ಉನ್ನತ ಮಟ್ಟದ ಸಮಿತಿಯ ಸಭೆ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಯಾವ ಯಾವ ಕಾರ್ಯಕ್ರಮ ಆಯೋಜಿಸಬಹುದೆಂಬುದರ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ದೇಶ-ವಿದೇಶಗಳಿಂದ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಯತ್ನಿಸಲಾಗುತ್ತಿದೆ ಎಂದರು.

ಗಜಪಯಣದ ಬಗ್ಗೆ ಉನ್ನತ ಸಮಿತಿ ಸಭೆಯಲ್ಲಿ ದಿನಾಂಕ ನಿಗದಿಪಡಿಸಲಾ ಗುತ್ತದೆ. ಆಗಸ್ಟ್ 23 ಅಥವಾ 24ರಂದು ಕಾರ್ಯಕ್ರಮ ನಡೆಸಬಹುದೆಂದು ಸಲಹೆ ನೀಡಲಾಗಿದೆ. ದಸರಾ ಸಂಬಂಧ ರಸ್ತೆಗುಂಡಿ ಮುಚ್ಚುವುದು, ಡಾಂಬರೀ ಕರಣ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಮುಂಚಿತವಾಗಿಯೇ ಪೂರ್ಣ ಗೊಳಿಸಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ದಸರಾ ಉಪಸಮಿತಿ ರಚನೆ, ಕಾರ್ಯಕ್ರಮಗಳ ಆಯೋಜನೆ, ದಸರಾ ಉದ್ಘಾಟನೆ ಇನ್ನಿತರ ವಿಷಯಗಳೂ ಉನ್ನತಮಟ್ಟದ ಸಭೆ ಬಳಿಕವಷ್ಟೇ ತಿಳಿಯುತ್ತದೆ. ಅದಕ್ಕೆ ನಾವು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದರು.

ಹಸಿರು ಕರ್ನಾಟಕ ಯೋಜನೆ: ಆಗಸ್ಟ್ 15ರಿಂದ ರಾಜ್ಯಾದ್ಯಂತ ಗಿಡ ನೆಡುವ ಮೂಲಕ ‘ಹಸಿರು ಕರ್ನಾಟಕ’ ವಿನೂತನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ಮೈಸೂರು ಜಿಲ್ಲೆಯಲ್ಲೂ ಸರ್ಕಾರಿ ಶಾಲಾ-ಕಾಲೇಜು, ಸರ್ಕಾರಿ ಕಚೇರಿ ಆವರಣ, ರಸ್ತೆ ಬದಿ, ಪಾರ್ಕ್‍ಗಳಲ್ಲಿ 40 ಬಗೆಯ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

ರಾಜ್ಯ ಮಟ್ಟದ ಉದ್ಯೋಗ ಮೇಳ: ಯುವಕ-ಯುವತಿಯರಿಗೆ ಉದ್ಯೋಗಾ ವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಉದ್ಯೋಗ ಮೇಳ ಆಯೋಜಿಸುವಂತೆ ನಿರ್ದೇಶನ ನೀಡಿದೆ. ಮೈಸೂರಲ್ಲಿ ಹೊರ ರಾಜ್ಯಗಳ ಕಂಪನಿಗಳನ್ನು ಕರೆಸಿ ಬೃಹತ್ ಉದ್ಯೋಗ ಮೇಳ ಏರ್ಪಡಿಸಲು ಈಗಾಗಲೇ ಎಲ್ಲಾ ಪೂರ್ವಸಿದ್ಧತೆ ಮಾಡಿಕೊಳ್ಳ ಲಾಗುತ್ತಿದೆ ಎಂದು ಅಭಿರಾಮ್ ಜಿ.ಶಂಕರ್ ನುಡಿದರು. ಕೈಗಾರಿಕಾ ಇಲಾಖೆ ಉದ್ಯೋಗ ಮತ್ತು ತರಬೇತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಉದ್ಯೋಗ ಮೇಳದಲ್ಲಿ ಮೂಲಸೌಕರ್ಯ ಕಲ್ಪಿಸಿ ಹೆಚ್ಚು ಮಂದಿಗೆ ಉದ್ಯೋಗ ಒದಗಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

Translate »