ಮೈಸೂರಲ್ಲಿ ಕ್ವಾರಂಟೈನ್ ಸಂಖ್ಯೆ ಇಳಿಮುಖ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್
ಮೈಸೂರು

ಮೈಸೂರಲ್ಲಿ ಕ್ವಾರಂಟೈನ್ ಸಂಖ್ಯೆ ಇಳಿಮುಖ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್

April 27, 2020

ಮೈಸೂರು,ಏ.26(ಆರ್‍ಕೆಬಿ)- ಮೈಸೂರಿನಲ್ಲಿ ಕ್ವಾರಂಟೈನ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. 28 ದಿನಗಳ ಅವಧಿಯ ಕ್ವಾರಂಟೈನ್ ಪ್ರಕರಣಗಳಲ್ಲಿ ನಮ್ಮಲ್ಲಿ ಸದ್ಯ ಒಟ್ಟು 830 ಜನ ಇದ್ದಾರೆ. ಶನಿವಾರ ಬಂದಿರುವ ಮಹಿಳೆಯೊಬ್ಬರ ಪಾಸಿಟಿವ್ ಪ್ರಕರಣದಲ್ಲಿ ಮಹಿಳೆ ಸಂಪರ್ಕ ಕೂಡ ಕಡಿಮೆ ಇದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಇಂದಿಲ್ಲಿ ತಿಳಿಸಿದರು.

ಮೈಸೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು, ಜಿಲ್ಲೆಯಲ್ಲಿ 300ಕ್ಕೂ ಅಧಿಕ `ಎಸ್‍ಎ ಆರ್‍ಐ’ (Severe Acute Respiratory Illness) ಪ್ರಕರಣಗಳು ಪತ್ತೆಯಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸ ಲಾಗಿದೆ. ಅದರಲ್ಲಿ 2 ಮಾತ್ರ ಪಾಸಿಟಿವ್ ಬಂದಿದೆ ಎಂದು ಹೇಳಿದರು.

ಕೋವಿಡ್-19 ಸೋಂಕು ಇಲ್ಲದಿದ್ದರೂ `ಎಸ್‍ಎಆರ್‍ಐ’ ಸಮಸ್ಯೆ ಬರುತ್ತದೆ. ಏಕೆಂದರೆ, ಉಸಿರಾಟದ ಸಮಸ್ಯೆ ಸಾಮಾನ್ಯವಾದದ್ದು. ನ್ಯುಮೋನಿಯಾ, ಆಸ್ತಮಾ ಕಾಯಿಲೆಗಳಲ್ಲಿ ಇದೇ ಸಮಸ್ಯೆ ಇರುತ್ತದೆ. ಹಾಗಾಗಿ ಎಸ್‍ಎಆರ್‍ಐ ಪ್ರಕರಣ ಕಾಣ ಬರುತ್ತಲೇ ಇರುತ್ತವೆ. ಈಗ ಕೋವಿಡ್-19 ಸಮಸ್ಯೆ ಇರುವುದರಿಂದ ಆ ವಿಚಾರದತ್ತ ನಾವು ಹೆಚ್ಚು ಗಮನ ನೀಡುತ್ತಿದ್ದೇವೆ. ಎಸ್‍ಎಆರ್‍ಐ ಸಮಸ್ಯೆಯಿಂದ ಆಸ್ಪತ್ರೆಗೆ ಬಂದವರೆಲ್ಲರೂ ಗುಣವಾಗುತ್ತಾರೆ. ಆದರೆ ಕೆಲವರು ಮಾತ್ರವೇ ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಮರಣ ಹೊಂದುತ್ತಾರೆ. ಅಂಥವರನ್ನು ನಾವು ಕೋವಿಡ್-19 ಸಂದರ್ಭದಲ್ಲಿ ವಿಶೇಷ ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ ಎಂದರು.

ಪಿಪಿಇ ಕಿಟ್ ಕೊರತೆ ಇಲ್ಲ: ಮೈಸೂರಿನಲ್ಲಿ ವೈದ್ಯಕೀಯ ಸಿಬ್ಬಂದಿ ಧರಿಸಬೇಕಾದ `ಪಿಪಿಇ’ (ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‍ಮೆಂಟ್ಸ್) ಕಿಟ್ ಮತ್ತು ಎನ್-95 ಮಾಸ್ಕ್‍ಗಳ ಕೊರತೆ ಇಲ್ಲ. ಈ ವೈದ್ಯಕೀಯ ಸುರಕ್ಷಾ ಸಾಧನಗಳ ಗುಣಮಟ್ಟ ವಿಚಾರದಲ್ಲೂ ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.

Translate »