ಮೈಸೂರು,ಏ.26(ಆರ್‍ಕೆಬಿ)- ಮೈಸೂರಿನಲ್ಲಿ ಕ್ವಾರಂಟೈನ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. 28 ದಿನಗಳ ಅವಧಿಯ ಕ್ವಾರಂಟೈನ್ ಪ್ರಕರಣಗಳಲ್ಲಿ ನಮ್ಮಲ್ಲಿ ಸದ್ಯ ಒಟ್ಟು 830 ಜನ ಇದ್ದಾರೆ. ಶನಿವಾರ ಬಂದಿರುವ ಮಹಿಳೆಯೊಬ್ಬರ ಪಾಸಿಟಿವ್ ಪ್ರಕರಣದಲ್ಲಿ ಮಹಿಳೆ ಸಂಪರ್ಕ ಕೂಡ ಕಡಿಮೆ ಇದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಇಂದಿಲ್ಲಿ ತಿಳಿಸಿದರು. ಮೈಸೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು, ಜಿಲ್ಲೆಯಲ್ಲಿ 300ಕ್ಕೂ ಅಧಿಕ `ಎಸ್‍ಎ ಆರ್‍ಐ’ (Severe Acute Respiratory Illness) ಪ್ರಕರಣಗಳು ಪತ್ತೆಯಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸ ಲಾಗಿದೆ….
ನಂಜನಗೂಡನ್ನು ಕ್ಲಸ್ಟರ್ ಕೇಸ್ ಆಗಿ ಪರಿಗಣಿಸಲಾಗಿದೆ: ಡಿಸಿ
March 30, 2020ವದಂತಿ, ಭಯ ಹುಟ್ಟಿಸುವವರ ವಿರುದ್ದ ಕ್ರಮ ಜಿಲ್ಲೆಯಲ್ಲಿ 1702 ಮಂದಿ ಕ್ವಾರಂಟೇನ್ ನಲ್ಲಿದ್ದು, 766 ಮಂದಿ ಪೂರ್ಣಗೊಳಿಸಿದ್ದಾರೆ ಮೈಸೂರು,ಮಾ.29( MTY) – ಒಂದೇ ಸ್ಥಳದಲ್ಲಿ ಆರು ಮಂದಿಗೆ ನೊವೆಲ್ ಕೊರೊನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಕೇಂದ್ರದ ಕಂಟೇನ್ಮೆಂಟ್ ಪ್ಲಾನ್ ನಿಯಮಾನುಸಾರ ನಂಜನಗೂಡನ್ನು ಕ್ಲಸ್ಟರ್ ಕೇಸ್ ಆಗಿ ಪರಿಗಣಿಸಿ, ತೀವ್ರ ಕಟ್ಟೆಚ್ಚರವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿಯಲ್ಲಿ ಕೊರೊನಾ…
ಕುಕ್ಕರಹಳ್ಳಿ ಕೆರೆ ಪ್ರವಾಸಿ ತಾಣವಾಗಿಸಲು ಸಚಿವ ಸಾರಾ ನಿರ್ಧಾರ
November 23, 2018ಮೈಸೂರು: ತಾಂತ್ರಿಕ ತಜ್ಞರ ಕಮಿಟಿ ವರದಿಯಂತೆ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಯೋಜನೆಯ ಬಾಕಿ ಉಳಿದಿರುವ ಕಾಮಗಾರಿಯನ್ನು ಮುಂದುವರೆಸಿ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮೈಸೂರು ವಿಶ್ವವಿದ್ಯಾನಿಲಯದ ಇಂಜಿನಿಯರ್‌ಗಳಿಗೆ ಇಂದಿಲ್ಲಿ ನಿರ್ದೇಶನ ನೀಡಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ 2009-10ನೇ ಸಾಲಿನಲ್ಲಿ ಮಂಜೂರಾ ಗಿದ್ಧ 2 ಕೋಟಿ ರೂ. ಅನುದಾನದಲ್ಲಿ ಕುಕ್ಕರಹಳ್ಳಿ ಕೆರೆ ಆವರಣವನ್ನು ಮೂಲ ಸೌಲಭ್ಯ ಕಲ್ಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ವಿಶ್ವವಿದ್ಯಾನಿಲಯವು ಪೂರೈಸಿದೆ. ಅದನ್ನು ಪರಿಶೀಲನೆ ನಡೆಸಿದ ಸಚಿವರು. ಈಗಾಗಲೇ 1.5 ಕೋಟಿ ರೂಗಳನ್ನು ಖರ್ಚು ಮಾಡಿ…
ದಸರಾಗೆ ಅಧಿಕ ಪ್ರವಾಸಿಗರ ಸೆಳೆಯಲು ಈ ಬಾರಿ ಆಕರ್ಷಕ ಕಾರ್ಯಕ್ರಮ ಆಯೋಜನೆ
August 8, 2018ಮೈಸೂರು: ಈ ಭಾರಿ ಅಧಿಕ ಪ್ರವಾಸಿಗರನ್ನು ಸೆಳೆಯಲು ಹೆಚ್ಚು ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇಂದು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಈ ಬಾರಿ ಏರ್‌ಷೋನಲ್ಲಿ ಮಿಲಿಟರಿ ಹಾಗೂ ವಾಯುದಳದ ಹೆಚ್ಚು ವಿಮಾನಗಳ ಪ್ರದರ್ಶನಕ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಶೀಘ್ರದಲ್ಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದಸರಾ ಉನ್ನತ ಮಟ್ಟದ ಸಮಿತಿಯ ಸಭೆ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಯಾವ ಯಾವ ಕಾರ್ಯಕ್ರಮ ಆಯೋಜಿಸಬಹುದೆಂಬುದರ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ….
ಕೆ.ಆರ್.ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್‍ಗೆ 2 ದಿನದಲ್ಲಿ ಸೂಕ್ತ ಭದ್ರತೆ
July 25, 2018ಮೈಸೂರು: ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ಹಾಸ್ಟೆಲ್‍ಗೆ ಇನ್ನೂ 2 ದಿನಗಳಲ್ಲಿ ಸೂಕ್ತ ಭದ್ರತೆ ಒದಗಿಸುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ವಿದ್ಯಾರ್ಥಿನಿಯ ರಿಗೆ ಭರವಸೆ ನೀಡಿದರು. ಕಳೆದ ಮೂರ್ನಾಲ್ಕು ದಿನಗಳಿಂದ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿರುವ ನರ್ಸಿಂಗ್ ಹಾಸ್ಟೆಲ್‍ಗೆ ವಿಕೃತ ಕಾಮಿಯೊಬ್ಬ ನುಗ್ಗಿ ದಾಂಧಲೆ ನಡೆಸಿದ್ದು, ನಿನ್ನೆ ರಾತ್ರಿಯೂ ಹಾಸ್ಟೆಲ್ ಕಟ್ಟಡದ ಮೇಲೆ ಆಗಂತುಕನೊಬ್ಬ ಕಲ್ಲು ತೂರಾಟ ನಡೆಸಿ ಕಿಟಕಿ ಗಾಜು ಒಡೆದು ಹಾಕಿದ್ದು, ವಿದ್ಯಾರ್ಥಿನಿಯರು ಹಾಸ್ಟೆಲ್ ನಲ್ಲಿರಲು ಭಯಪಡುತ್ತಿದ್ದಾರೆ. ಅಲ್ಲದೆ ಪ್ರತಿಭಟನೆ ನಡೆಸಿ, ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್…
ಸರ್ವಿಸ್ ರಸ್ತೆಯಲ್ಲೇ ಅನಧಿಕೃತ ಮಳಿಗೆ ನಿರ್ಮಾಣ
July 24, 2018ಮೈಸೂರು: ಮೈಸೂರು ವಿವಿಯಿಂದ, ಕುದುರೆಮಾಳ, ಸರಸ್ವತಿಪುರಂ, ಶ್ರೀರಾಂಪುರ 2ನೇ ಹಂತದ ಮೂಲಕ ಮುಂದಕ್ಕೆ ಸಾಗುವ ಬೃಹತ್ ರಾಜಕಾಲುವೆಯ ಮಾರ್ಗದ ಮಧ್ಯದ ಕಿರಿದಾದ ಕಾಲುವೆಯನ್ನು ದುರಸ್ತಿ (ಕೃಷ್ಣಧಾಮದಿಂದ 353/ಎ ನಂಬರಿನ ಮನೆಯವರೆಗೆ) ಮಾಡಬೇಕೆಂದು ವಲಯ ಕಚೇರಿ-3ರ ಸಹಾಯಕ ಇಂಜಿನಿಯರ್ ನೀಡಿದ್ದ ವರದಿಯನ್ನು ತಿದ್ದಿದವರು ಯಾರು ಎಂದು ಸ್ಥಳೀಯ ನಿವಾಸಿಗಳು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಮೈಸೂರಿನ ಸಾಹುಕಾರ್ ಚನ್ನಯ್ಯ ರಸ್ತೆ, ಸರಸ್ವತಿಪುರಂ ಕೃಷ್ಣಧಾಮ ಮಂದಿರದ ಎದುರಿನ ಎಸ್‍ಬಿಐ ಪ್ರಾದೇಶಿಕ ಕಚೇರಿ ಪಕ್ಕದಲ್ಲಿನ ಸರ್ವಿಸ್ ರಸ್ತೆ ಮತ್ತೆ ಸಾರ್ವಜನಿಕರ ಕೈ ತಪ್ಪುವಂತಿದೆ….
ಪಂಜಿನ ಕವಾಯತಿನಲ್ಲಿ ವಿದ್ಯುನ್ಮಾನ ಬಾಣ-ಬಿರುಸು ಪ್ರದರ್ಶನಕ್ಕೆ ಚಿಂತನೆ
July 23, 2018ಮೈಸೂರು: ನಾಡಹಬ್ಬ ದಸರಾ ಮಹೋತ್ಸವವನ್ನು ಈ ಬಾರಿ ಹೆಚ್ಚು ಆಕರ್ಷಕವಾಗಿ ಆಚರಿಸುವುದಕ್ಕೆ ಮುಖ್ಯಮಂತ್ರಿಗಳು ಸೂಚಿಸಿದ್ದು, ಬನ್ನಿಮಂಟಪದ ಕವಾಯತ್ ಮೈದಾನದಲ್ಲಿ ನಡೆಯಲಿರುವ ಪಂಜಿನ ಕವಾಯತು ಪ್ರದರ್ಶನದಲ್ಲಿ ಜೂಡೋ, ಮಾರ್ಷಲ್ ಆಟ್ರ್ಸ್ ನೊಂದಿಗೆ ಹೊಗೆ ರಹಿತ ಪರಿಸರ ಸ್ನೇಹಿ ವಿದ್ಯುನ್ಮಾನ ಬಾಣ-ಬಿರುಸು ಪ್ರದರ್ಶಿಸಲು ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಲೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ದಸರಾ ಮಹೋತ್ಸವದ ಆಕರ್ಷಣೆಗೆ ಹೊಸ ಆಲೋಚನೆಗಳೊಂದಿಗೆ ಅಗತ್ಯ ಸಿದ್ಧತೆ…
ರೈಲ್ವೆ ಗೂಡ್ಸ್‍ಶೆಡ್‍ನಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಆಗ್ರಹ ಮುಷ್ಕರ
July 22, 2018ಮೈಸೂರು: ಮೈಸೂರಿನ ರೈಲ್ವೆ ಗೂಡ್ಸ್‍ಶೆಡ್‍ನಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಲು ಅನುಮತಿ ನೀಡುವವರೆವಿಗೂ ಮುಷ್ಕರ ಕೈಬಿಡುವುದಿಲ್ಲವೆಂದು ರೈಲ್ವೆ ಗೂಡ್ಸ್‍ಶೆಡ್ ಲಾರಿ ಮಾಲೀಕರ ಸಂಘ ಇಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರಿಗೆ ಸ್ಪಷ್ಟಪಡಿಸಿದೆ. ಲಾರಿ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಇಂದು ಲಾರಿ ಮಾಲೀಕರ ಸಂಘಟನೆಗಳ ಸಭೆ ಕರೆದಿದ್ದರು. ಈ ಸಭೆಯಲ್ಲಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೋದಂಡರಾಮು, ಚಾಮರಾಜನಗರ-ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಎವಿಆರ್ ವೆಂಕಟೇಶ್, ರೈಲ್ವೆ ಗೂಡ್ಸ್‍ಶೆಡ್ ಲಾರಿ ಮಾಲೀಕರ…
ಮೈಸೂರಲ್ಲಿ ಮಳೆ ಅವಾಂತರ: ಜಿಲ್ಲಾಧಿಕಾರಿಗಳಿಂದ ಪರಿಶೀಲನೆ
June 1, 2018ಮೈಸೂರು: ಮಳೆಯಿಂದ ಅವಾಂತರ ಉಂಟಾಗಿದ್ದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ ಅವರು ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೈಸೂರಿನ ಕನಕಗಿರಿ, ಗುಂಡೂರಾವ್‍ನಗರ, ಮುನೇಶ್ವರ ಹಾಗೂ ಶ್ರೀರಾಂಪುರ ಬಡಾವಣೆಗಳಲ್ಲಿ ಪರಿಶೀಲನೆ ನಡೆಸಿದ ಅವರು, ಮಳೆಯಿಂದ ನೀರು ನುಗ್ಗಿ ತೀವ್ರ ಸಮಸ್ಯೆಯಾಗಿದೆ. ಸ್ಥಳದಲ್ಲಿ ಚರಂಡಿ ತೆರವುಗೊಳಿಸುವುದು, ಕಿರು ಸೇತುವೆಗಳ ನಿರ್ಮಾಣ, ಡೀ ಶೆಲ್ಟಿಂಗ್ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆ ಹಾಗೂ ಮುಡಾ ಅಧಿಕಾರಿಗಳಿಗೆ ಸೂಚಿಸಿದರು. ಗಣಪತಿ ಆಶ್ರಮದ ಹಿಂಭಾಗದ ತಗ್ಗು ಪ್ರದೇಶದಲ್ಲಿ ಚರಂಡಿ ನೀರು ಸರಾಗವಾಗಿ…
ಪರಿಸರ ದಿನಾಚರಣೆ ಪೂರ್ವಭಾವಿ ಸಭೆ: ಪ್ಲಾಸ್ಟಿಕ್ ಬಳಕೆ ನಿಷೇಧ, ಪರಿಸರ ಸಂರಕ್ಷಣೆ ಇಂದಿನ ತುರ್ತು ಅನಿವಾರ್ಯ
May 31, 2018ಮೈಸೂರು: ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತಂತೆ ಜನಜಾಗೃತಿ ಮೂಡಿಸುವುದು ಅಗತ್ಯವಿದ್ದು, ಈ ಬಗ್ಗೆ ಜೂನ್ ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಪರಿಸರ ದಿನಾಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳ ಮೂಲಕ ಪರಿಸರ ಜಾಗೃತಿಗೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಸೂಚನೆ ನೀಡಿದರು. ಶಾಲಾ ಕಾಲೇಜುಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಪರಿಸರ ಸಂರಕ್ಷಣೆಯ ಅಗತ್ಯತೆ ಬಗ್ಗೆ ವಿದ್ಯಾರ್ಥಿಗಳ ಮೂಲಕ…