ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ
ಮೈಸೂರು

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ

August 8, 2018

ತಿ.ನರಸೀಪುರ: ಪಟ್ಟಣದ ಪುರಸಭೆ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ಹಿಡಿಯುವ ನಿಟ್ಟಿನಲ್ಲಿ ಕಾರ್ಯಕರ್ತರು ಅಧಿಕೃತ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಜಿಪಂ ಮಾಜಿ ಅಧ್ಯಕ್ಷ ಹಾಗೂ ಮೈಮುಲ್ ರಾಜ್ಯ ನಿರ್ದೇಶಕ ಕೆ.ಸಿ.ಬಲರಾಂ ಹೇಳಿದರು.

ಪಟ್ಟಣದ ಮಹದೇಶ್ವರ(ವಜ್ರೇಗೌಡ) ಕಲ್ಯಾಣ ಮಂಟಪದಲ್ಲಿ ಪುರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿ ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಆರ್.ಧ್ರುವನಾರಾಯಣ್‍ರವರ ಪರಿಶ್ರಮದಿಂದಾಗಿ ಇದೇ ಮೊದಲ ಬಾರಿಗೆ ಬೈರಾಪುರ, ಆಲಗೂಡು ಸೇರಿ ಪುರಸಭೆಯಾಗಿ ಪರಿವರ್ತಿತಗೊಂಡಿದ್ದು, ಈ ಬಾರಿ ಪಕ್ಷದಿಂದ ಸ್ಪರ್ಧಿಸುವ ಅಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.

ಈ ನಿಟ್ಟಿನಲ್ಲಿ ಪಕ್ಷದಿಂದ ಅಧಿಕೃತವಾಗಿ ಸ್ಪರ್ಧಿಸುವ ಅಭ್ಯರ್ಥಿ ಗೆಲುವಿಗೆ ಶ್ರಮಿಸುವ ಮೂಲಕ ಕಾರ್ಯಕರ್ತರು ಪುರಸಭೆ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಕೆಲಸ ನಿರ್ವಹಿಸ ಬೇಕೆಂದರು. ಈಗ ಕಾಂಗ್ರೆಸ್ ಪಕ್ಷದಿಂದ ಅಕ್ಷಾಂಕ್ಷಿಗಳ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಸ್ವೀಕೃತಗೊಂಡ ಅರ್ಜಿಯನ್ನು ವರಿಷ್ಠರಿಗೆ ತಲುಪಿಸಿ ನಂತರ ಅಧಿಕೃತ ಅಭ್ಯರ್ಥಿ ಯನ್ನು ಪ್ರಕಟಿಸಲಾಗುವುದೆಂದರು.

ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಮಾತನಾಡಿ, ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟಾವಂತ ಕಾರ್ಯಕರ್ತ ನಾಗಿ ದುಡಿದಿದ್ದು, ಈ ಬಾರಿ ಮೀಸಲಾತಿ ಬದಲಾವಣೆ ಹಿನ್ನೆಲೆಯಲ್ಲಿ ತಮ್ಮ ಪತ್ನಿ ಪ್ರೇಮಮರಯ್ಯ ಅವರನ್ನು 3ನೇ ವಾರ್ಡ್ ನಿಂದ ಸ್ಪರ್ಧೆಗಿಳಿಸುತ್ತಿದ್ದು, ಕಾಂಗ್ರೆಸ್ ಪಕ್ಷದ ವರಿಷ್ಠರು ತಮಗೆ ಪಕ್ಷದ ಬಿ.ಫಾರಂ ದೊರಕಿಸಿಕೊಡುವಂತೆ ಮನವಿ ಮಾಡಿದರು.
ಪಿ ಕಾರ್ಡ್ ಮಾಜಿ ಅಧ್ಯಕ್ಷ ಕೆ.ವಜ್ರೇ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇ ಗೌಡ, ಪಿ ಕಾರ್ಡ್ ನಿರ್ದೇಶಕ ಕೆಂಪಯ್ಯನ ಹುಂಡಿ ಮಹದೇವಣ್ಣ, ಬೈರಾಪುರ ಗ್ರಾ ಪಂ ಮಾಜಿ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ, ಎ.ಜೆ.ವೆಂಕಟೇಶ್, ಮಾಜಿ ಸದಸ್ಯ ದಿವಾಕರ್, ಡಿ.ಆರ್.ಮೂರ್ತಿ, ವಿಷಕಂಠ, ಮುಖಂಡ ರಾದ ಪಿ.ಸ್ವಾಮಿನಾಥ್‍ಗೌಡ, ಪಿ.ಪುಟ್ಟರಾಜು, ಎನ್.ಮಹದೇವಸ್ವಾಮಿ, ಬಿ.ಮಹದೇವು, ಸಾಮಿಲ್‍ರಾಜಣ್ಣ, ಅಮ್ಜದ್‍ಖಾನ್, ಎಚ್.ಬಿ. ಚಿಕ್ಕನಂಜಯ್ಯ, ಲತಾಜಗದೀಶ್, ಆಲ ಗೂಡು ನಾಗರಾಜು, ಪುರಸಭೆ ಅಧ್ಯಕ್ಷ ಕನಕಪಾಪು, ಮಂಜು(ಬಾದಾಮಿ), ಎಂ.ಕೆ. ಸಹದೇವ, ರಮೇಶ್, ಪುಟ್ಟು, ಗೋವಿಂದ ರಾಜು, ಮಹದೇವಮ್ಮ, ಇತರರು ಇದ್ದರು.

Translate »