ಮೈಸೂರು: ಮನುಷ್ಯನಿಗೆ ವಿದ್ಯೆ, ಅಧಿಕಾರ ಹೆಚ್ಚಾಗುತ್ತಿದ್ದು, ಆರೋಗ್ಯ, ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್‍ಚಂದ್ರ ಗುರು ಅಭಿಪ್ರಾಯಪಟ್ಟರು. ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ತನುಮನ ಸಂಸ್ಥೆ ಆಯೋಜಿಸಿದ್ದ `ಜಗ ನಡೆಯಲಿ ಬುದ್ಧನ ಕಡೆ’ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಧರ್ಮಗಳು ನೀವೂ ಒಳ್ಳೆಯವರಾಗಿ ಮತ್ತೊಬ್ಬರಿಗೂ ಒಳ್ಳೆಯದನ್ನೇ ಮಾಡಿ ಎಂಬ ಸಂದೇಶವನ್ನು ಸಾರುತ್ತವೆ. ಆದರೆ ಮನುಷ್ಯನಿಗೆ ಅಹಂಕಾರ ಹೆಚ್ಚಾಗಿದೆ. ನಮಗೆ ಯಾರು ಶತ್ರುಗಳಿಲ್ಲ ಬದಲಾಗಿ ನಮಗೆ ನಾವೇ ಶತ್ರುಗಳಾಗಿದ್ದೇವೆ ಎಂದರು. ಬುದ್ಧ,…
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಹರೀಶ್‍ಗೌಡರನ್ನು ಜೆಡಿಎಸ್‍ನಿಂದ ಕಣಕ್ಕಿಳಿಸಲು ಆಗ್ರಹ
July 29, 2018ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜೆಡಿಎಸ್ ಯುವ ಮುಖಂಡ ಜಿ.ಡಿ.ಹರೀಶ್‍ಗೌಡರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ಮೈಸೂರು ಜಿಲ್ಲಾ ಜೆಡಿಎಸ್ ವಕ್ತಾರ ದೂರ ಮಂಜುನಾಥ್ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅವಿರತ ಶ್ರಮಿಸಿರುವ ಜಿ.ಡಿ.ಹರೀಶ್ ಗೌಡ ಅವರು ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಿಂದ…
ಗಂಗೋತ್ರಿ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ
July 29, 2018ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗಿನ ತಂಪಾದ ವಾತಾವರಣದಲ್ಲಿ ಭಕ್ತಿಭಾವದ ಗುರುಪೂರ್ಣಿಮೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಶಾಲಾ ಕಾಲೇಜಿನ ಆವರಣದಲ್ಲಿ ಶ್ರೀ ಆದಿಗುರು ಶಂಕರಾಚಾರ್ಯರಿಗೆ ಪೂಜೆ ಸಲ್ಲಿಸುತ್ತಾ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ಮೊದಲಿಗೆ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಸುರವಿ ತನ್ನ ಸುಮಧುರವಾದ ಕಂಠದಿಂದ ಪ್ರಾರ್ಥನೆ ಮಾಡಿದರು. ಆಂಗ್ಲ ಪ್ರಾಧ್ಯಾಪಕರಾದ ಲಕ್ಷ್ಮಿ ಚೌಧರಿರವರ ರಚನೆಯ ಗುರುಭಕ್ತಿಯನ್ನು ಬಿಂಬಿಸುವ ಗೀತೆಯನ್ನು ಕಾಲೇಜಿನ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಹಾಡಿದರು….
ಸಂಸದ ಪ್ರತಾಪ್ ಸಿಂಹರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
July 29, 2018ಮೈಸೂರು: ಸಂಸದ ಪ್ರತಾಪ್ ಸಿಂಹ ಅವರು ಇಂದು ಮೈಸೂರಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ವಿಜಯನಗರ 2ನೇ ಹಂತದ ಹೈಟೆನ್ಷನ್ ರಸ್ತೆಯಲ್ಲಿರುವ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಕೃಷ್ಣದೇವರಾಯ ಸರ್ಕಲ್ ಬಳಿ ಪ್ರತಾಪ್ ಸಿಂಹ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಅಮೃತ ಯೋಜನೆಯ 1 ಕೋಟಿ ರೂ. ಅನುದಾನದಲ್ಲಿ ಮೈಸೂರು ಮಹಾನಗರ ಪಾಲಿಕೆ ಕೈಗೊಂಡಿರುವ ಕಾಮಗಾರಿಗೆ ಕೇಂದ್ರ ಸರ್ಕಾರದ ಶೇ. 50 ರಷ್ಟು ಅನುದಾನ ರಾಜ್ಯ ಸರ್ಕಾರ ಶೇ. 25 ಮತ್ತು ಪಾಲಿಕೆಯು ಶೇ. 25 ರಷ್ಟು…
ಆದಿಜಾಂಬವ ಶಾಸಕರು, ಸಾಹಿತಿಗಳ ಸನ್ಮಾನ ಸಮಾರಂಭಕ್ಕೆ ಮೈಸೂರು ಭಾಗದ ಮುಖಂಡರ ಕಡೆಗಣನೆ ಆರೋಪ
July 29, 2018ಮೈಸೂರು: ಬೆಂಗಳೂರಿನಲ್ಲಿ ಆದಿಜಾಂಬವ ಸಮುದಾಯದ ಶಾಸಕರು, ಸಾಹಿತಿಗಳು ಹಾಗೂ ಕಲಾವಿದರಿಗೆ ಜು.29ರಂದು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಆದರೆ ಮೈಸೂರು ಭಾಗದ ಸಮುದಾಯದ ಮುಖಂಡರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲೂ ಹಾಕಿಸದೇ ಕಡೆಗಣಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಮಂಡ್ಯ ಜಿಲ್ಲಾ ಸಮಿತಿ ಆರೋಪಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ನಂಜುಂಡ ಮೌರ್ಯ ಮಾತನಾಡಿ, ಬೆಂಗಳೂರಿನ ಭಾವರೂಪಕ ಪ್ರತಿಷ್ಠಾನ ಟ್ರಸ್ಟ್ ಹಾಗೂ ಆದಿಜಾಂಬವ ಜಾಗೃತ ವೇದಿಕೆ ಜಂಟಿ ಆಶ್ರಯದಲ್ಲಿ…
ಕಸಾಯಿಖಾನೆಗೆ ಸಾಗಿಸುತ್ತಿದ್ದ 23 ಎಮ್ಮೆಗಳ ರಕ್ಷಣೆ
July 29, 2018ಮೈಸೂರು: ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ 23 ಎಮ್ಮೆಗಳನ್ನು ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ರಕ್ಷಿಸಿದ್ದಾರೆ. ಸಾರ್ವಜನಿಕರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಡಕೊಳ ಬಳಿ ನಂಜನಗೂಡು ರಸ್ತೆಯಲ್ಲಿ ಲಾರಿಯೊಂದರಲ್ಲಿ ಎಮ್ಮೆಗಳನ್ನು ಸಾಗಿಸುತ್ತಿದ್ದುದು ಕಂಡು ಬಂದಿತು. ಲಾರಿ ಚಾಲಕ ಅಬ್ದುಲ್ ವಾಜಿದ್‍ನನ್ನು ಬಂಧಿಸಿ ವಿಚಾರಣೆ ನಡೆಸಿ ದಾಗ ಕೇರಳದ ಕಸಾಯಿಖಾನೆಗೆ ಎಮ್ಮೆಗಳನ್ನು ಸಾಗಿಸುತ್ತಿರುವುದಾಗಿ ತಿಳಿಸಿದೆ. ರಕ್ಷಿಸಿದ ಎಮ್ಮೆಗಳನ್ನು ಪಿಂಜರಾಪೋಲ್ ವಶಕ್ಕೊಪ್ಪಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಿರಿಯಾಪಟ್ಟಣದಲ್ಲಿ ಕಾರ್ಗಿಲ್ ವಿಜಯೋತ್ಸವ
July 29, 2018ಪಿರಿಯಾಪಟ್ಟಣ: ಯೋಧರ ಬಲಿದಾನದ ಸಂಕೇತವಾಗಿ ಕಾರ್ಗಿಲ್ ಸಂಭ್ರಮಾಚರಣೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನು ಆಚರಿಸಬೇಕಾದುದು ಎಲ್ಲರ ಕರ್ತವ್ಯ ಎಂದು ಪಟ್ಟಣದ N.A.ಟಿ.ವಿ.ಎಸ್. ಶೋರೂಂ ಮಾಲೀಕರಾದ ಅನ್ಸರ್ ಷರೀಫ್ ಹೇಳಿದರು. ಅವರು ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದರು 1998_1999ರಲ್ಲಿ ಗಡಿ ದಾಟಿ ಶತ್ರು ರಾಷ್ಟ್ರದ ಸೈನಿಕರು ಭಾರತವನ್ನು ಆಕ್ರಮಿಸಿದಾಗ ಭಾರತದ ಸೈನಿಕರು ಆಪರೇಷನ್ ವಿಜಯ್ ಹೆಸರಿನಲ್ಲಿ ಅರವತ್ತಕ್ಕೂ ಹೆಚ್ಚು ದಿನಗಳ ಕಾಲ ಪಾಕಿಸ್ತಾನಿ ಸೈನಿಕರ ವಿರುದ್ಧ ಹೋರಾಟ ನಡೆಸಿದರು. ಐದು ನೂರಕ್ಕೂ ಹೆಚ್ಚು…
ಸಾಲಗಾರರ ಕಾಟ: ವ್ಯಕ್ತಿ ಆತ್ಮಹತ್ಯೆ ಪತ್ನಿಯಿಂದ ಪೊಲೀಸರಿಗೆ ದೂರು
July 29, 2018ಮೈಸೂರು: ಸಾಲಗಾರರ ಕಾಟದಿಂದ ಮನನೊಂದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದವಗಿರಿಯಲ್ಲಿ ನಡೆದಿದೆ. ಇಲ್ಲಿನ ಜೆರೇನಿಯಂ ಬ್ಲಾಕ್‍ನ ಸಂಕಲ್ಪ ಅಪಾರ್ಟ್‍ಮೆಂಟ್ ನಿವಾಸಿ ಓಂಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡವರು. ಇವರು, ಜು.17ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರದಲ್ಲಿ ಓಂಪ್ರಕಾಶ್‍ರವರ ಪತ್ನಿ ವರ್ಷರವರು ಪತಿಯ ಮೊಬೈಲ್ ಪರಿಶೀಲಿಸಿದಾಗ ಓಂಪ್ರಕಾಶ್, ಆತ್ಮಹತ್ಯೆಗೂ ಮುನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿದ್ದು, ಅದರಲ್ಲಿ ಲೇವಾದೇವಿದಾರರಾದ ರಾಜೇಶ್ ಸೇರಿದಂತೆ ಮತ್ತಿತರರಿಂದ…
ಸ್ಮಾರ್ಟ್ ಮೀಟರ್‌ನಿಂದ ಬಹುಪಯೋಗ: ಎಲ್ ಅಂಡ್ ಟಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡಾ.ಶ್ಯಾಮ್ ಪ್ರಭು ಅಭಿಮತ
July 29, 2018ಮೈಸೂರು: ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ವಿದ್ಯುತ್‍ನ್ನು ಅವಶ್ಯಕತೆಗೆ ತಕ್ಕಂತೆ ಬಳಸಬಹುದು ಎಂದು ಲಾರ್ಸನ್ ಅಂಡ್ ಟಬ್ರೋ ಸಂಸ್ಥೆಯ ಡಿಸೈನ್ ಅಂಡ್ ಡೆವಲಪ್‍ಮೆಂಟ್ ವಿಭಾಗದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡಾ.ಶ್ಯಾಮ್ ಪ್ರಭು ತಿಳಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ದಿ ಇನ್ಸ್‍ಟಿಟೂಷನ್ ಆಫ್ ಇಂಜಿನಿಯರಿಂಗ್(ಇಂಡಿಯಾ) ಸಂಸ್ಥೆ ವತಿಯಿಂದ ಎಸ್.ಪಿ.ಭಟ್ ಸಭಾಂಗಣದಲ್ಲಿ ನಡೆದ ‘ಸೋಷಿಯೋ ಇಕನಾಮಿಕ್ ಸ್ಮಾರ್ಟ್ ಗ್ರಿಡ್ ಅಂಡ್ ಸ್ಮಾರ್ಟ್ ಮೀಟರ್’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಸ್ಮಾರ್ಟ್ ಮೀಟರ್ ಬಳಕೆಯಿಂದ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವೇಳೆಯಲ್ಲಿ…
ನಿರಾಶ್ರಿತ 15 ಮಂದಿ ವೃದ್ಧೆಯರಿಗೆ ಆಶ್ರಯ ಅವಕಾಶ
July 29, 2018ಮೈಸೂರು: ಮೈಸೂರಿನ ರಾಮಕೃಷ್ಣನಗರದಲ್ಲಿ ಕುಂಡಲಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆಸಲ್ಪಡುತ್ತಿರುವ ಮಹಿಳಾ ವೃದ್ಧಾಶ್ರಮದಲ್ಲಿ ಈಗಾಗಲೇ 21 ಮಂದಿಗೆ ಉಚಿತವಾಗಿ ಆಶ್ರಯ ನೀಡಲಾಗಿದೆ. ಇನ್ನು 15 ಮಂದಿಗೆ ಆಶ್ರಯ ನೀಡಲು ವ್ಯವಸ್ಥೆ ಇದೆ. ನಿರಾಶ್ರಿತ ವೃದ್ಧೆಯರು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಟ್ರಸ್ಟ್ ಅಧ್ಯಕ್ಷೆ ಸುಮಿತ್ರಾ ರಮೇಶ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಮೈಸೂರಿನ ರಾಮಕೃಷ್ಣನಗರದ ಸಾಯಿಬಾಬಾ ದೇವಸ್ಥಾನದ ಸಮೀಪ ಟ್ರಸ್ಟ್‍ನಡಿ ವೃದ್ಧಾಶ್ರಮ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ 21…