ಕಸಾಯಿಖಾನೆಗೆ ಸಾಗಿಸುತ್ತಿದ್ದ 23 ಎಮ್ಮೆಗಳ ರಕ್ಷಣೆ
ಮೈಸೂರು

ಕಸಾಯಿಖಾನೆಗೆ ಸಾಗಿಸುತ್ತಿದ್ದ 23 ಎಮ್ಮೆಗಳ ರಕ್ಷಣೆ

July 29, 2018

ಮೈಸೂರು: ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ 23 ಎಮ್ಮೆಗಳನ್ನು ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ರಕ್ಷಿಸಿದ್ದಾರೆ.

ಸಾರ್ವಜನಿಕರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಡಕೊಳ ಬಳಿ ನಂಜನಗೂಡು ರಸ್ತೆಯಲ್ಲಿ ಲಾರಿಯೊಂದರಲ್ಲಿ ಎಮ್ಮೆಗಳನ್ನು ಸಾಗಿಸುತ್ತಿದ್ದುದು ಕಂಡು ಬಂದಿತು. ಲಾರಿ ಚಾಲಕ ಅಬ್ದುಲ್ ವಾಜಿದ್‍ನನ್ನು ಬಂಧಿಸಿ ವಿಚಾರಣೆ ನಡೆಸಿ ದಾಗ ಕೇರಳದ ಕಸಾಯಿಖಾನೆಗೆ ಎಮ್ಮೆಗಳನ್ನು ಸಾಗಿಸುತ್ತಿರುವುದಾಗಿ ತಿಳಿಸಿದೆ. ರಕ್ಷಿಸಿದ ಎಮ್ಮೆಗಳನ್ನು ಪಿಂಜರಾಪೋಲ್ ವಶಕ್ಕೊಪ್ಪಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Translate »