ಪಿರಿಯಾಪಟ್ಟಣದಲ್ಲಿ ಕಾರ್ಗಿಲ್ ವಿಜಯೋತ್ಸವ
ಮೈಸೂರು

ಪಿರಿಯಾಪಟ್ಟಣದಲ್ಲಿ ಕಾರ್ಗಿಲ್ ವಿಜಯೋತ್ಸವ

July 29, 2018

ಪಿರಿಯಾಪಟ್ಟಣ:  ಯೋಧರ ಬಲಿದಾನದ ಸಂಕೇತವಾಗಿ ಕಾರ್ಗಿಲ್ ಸಂಭ್ರಮಾಚರಣೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನು ಆಚರಿಸಬೇಕಾದುದು ಎಲ್ಲರ ಕರ್ತವ್ಯ ಎಂದು ಪಟ್ಟಣದ N.A.ಟಿ.ವಿ.ಎಸ್. ಶೋರೂಂ ಮಾಲೀಕರಾದ ಅನ್ಸರ್ ಷರೀಫ್ ಹೇಳಿದರು.

ಅವರು ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದರು 1998_1999ರಲ್ಲಿ ಗಡಿ ದಾಟಿ ಶತ್ರು ರಾಷ್ಟ್ರದ ಸೈನಿಕರು ಭಾರತವನ್ನು ಆಕ್ರಮಿಸಿದಾಗ ಭಾರತದ ಸೈನಿಕರು ಆಪರೇಷನ್ ವಿಜಯ್ ಹೆಸರಿನಲ್ಲಿ ಅರವತ್ತಕ್ಕೂ ಹೆಚ್ಚು ದಿನಗಳ ಕಾಲ ಪಾಕಿಸ್ತಾನಿ ಸೈನಿಕರ ವಿರುದ್ಧ ಹೋರಾಟ ನಡೆಸಿದರು.

ಐದು ನೂರಕ್ಕೂ ಹೆಚ್ಚು ಸೈನಿಕರು ಈ ಹೋರಾಟದಲ್ಲಿ ಹುತಾತ್ಮರಾದರು. ಜುಲೈ 26ರಂದು ಕಾರ್ಗಿಲ್ ಎಂಬ ಪ್ರದೇಶದಲ್ಲಿ ವಿಜಯ ಸಾಧಿಸಿ ಯುದ್ದ ಅಂತ್ಯವಾಯಿತು. ದೇಶಾದ್ಯಂತ ವಿಜಯದ ಸಂಕೇತವಾಗಿ ಕಾರ್ಗಿಲ್ ವಿಜಯ ಸಂಭ್ರಮಾಚರಣೆಯನ್ನು ಆಚರಿಸಲಾಗುತ್ತಿದ್ದು ದೇಶದ ಪ್ರತಿಯೊಬ್ಬ ನಾಗರಿಕನು ಈ ದಿವಸವನ್ನು ದೇಶಕ್ಕೆ ಹುತಾತ್ಮರಾದ ಯೋಧರನ್ನು ನೆನಪಿಸುವುದರೊಂದಿಗೆ ವಿಜಯೋತ್ಸವ ಆಚರಿಸಬೇಕೆಂದು ಅವರು ಕರೆ ನೀಡಿದರು.

ಈ ವಿಜಯವನ್ನು ಸಂತೋಷದಿಂದ ಹಂಚಿಕೊಳ್ಳುವ ಕರ್ತವ್ಯವಾಗಿದ್ದು ಎಲ್ಲರೂ ಸಂಭ್ರಮಾಚರಣೆಯಿಂದ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು ಇದೇ ಸಂದರ್ಭದಲ್ಲಿ ತಾಲ್ಲೂಕಿನ ನಿವೃತ್ತ ಯೋಧರಾದ ಸ್ವಾಮಿ ಹಾಗೂ ಚಂದ್ರೇಗೌಡ ರವರನ್ನು ಎನ್‍ಎ.ಟಿ. ವಿ.ಎಸ್ .ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಎಲ್ಲರಿಗೂ ಸಿಹಿ ವಿತರಣೆಯನ್ನು ಮಾಡಲಾಯಿತು ನಂತರ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಂಸ್ಥೆಯ ಉದ್ಯೋಗಿಗಳು ಕಾರ್ಗಿಲ್ ಸಂಕೇತದ ವಿಜಯೋತ್ಸವದ ಬಾವುಟದ ಟಿ ಶರ್ಟ್ ದರಿಸಿ ಬೈಕ್ ಡಿಚಿಟಟಥಿ ಯಲ್ಲಿ ಪಟ್ಟಣದ ಪೊಲೀಸ್ ಠಾಣೆಯಿಂದ ಕನ್ನಂಬಾಡಿ ಅಮ್ಮನವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು.

Translate »