ಮೈಸೂರು: ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಡಪದ ಅಪ್ಪಣ್ಣ ಜಯಂತ್ಯೋತ್ಸವ ಸಮಿತಿ ವತಿಯಿಂದ ಜು.27ರಂದು ಬೆಳಿಗ್ಗೆ 11.30 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮುಡುಕನಪುರ ಹಲವಾರು ಮಠದ ಶ್ರೀ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವರು. ವಿಧಾನಸಭಾ ಸದಸ್ಯ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು….
ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಿ ಕಾರ್ಗಿಲ್ ದಿವಸ್ ಆಚರಣೆ
July 27, 2018ಮೈಸೂರು: 19ನೇ ಕಾರ್ಗಿಲ್ ದಿವಸ್ ಅಂಗವಾಗಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮೈಸೂರಿನ ಮಹಾರಾಜ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಹಿರಿಯ ಮುಖಂಡ ಕೆ.ರಘುರಾಂ ವಾಜಪೇಯಿ ಅವರು ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಬಳಿಕ ಮಾತನಾಡಿ, ಯೋಧರಲ್ಲಿರುವ ಶಿಸ್ತು, ರಾಷ್ಟ್ರೀಯತೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ದೇಶವನ್ನು ರಕ್ಷಿಸುವ ಯೋಧರ ಬಗೆಗಷ್ಟೇ ಅಲ್ಲದೆ ನಾಡು- ನುಡಿ ವಿಚಾರದಲ್ಲೂ ಆತ್ಮಗೌರವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಉಪಕುಲಸಚಿವ…
ಧರ್ಮಸ್ಥಳ ಸಂಸ್ಥೆಯಿಂದ ಕೊಡಗು ಮಾಡೆಲ್ ಸ್ಕೂಲ್‍ಗೆ ಲಕ್ಷ ರೂ. ನೆರವು
July 27, 2018ಮೈಸೂರು: ಮೈಸೂರಿನ ಸಾತಗಳ್ಳಿಯ ವಿದ್ಯಾಶಂಕರನಗರದಲ್ಲಿರುವ ಕೊಡಗು ಮಾಡೆಲ್ ಸ್ಕೂಲ್‍ನ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ (ಎಸ್‍ಕೆಡಿಆರ್‍ಡಿಪಿ) 1 ಲಕ್ಷ ರೂ. ಅನುದಾನವನ್ನು ಗುರುವಾರ ನೀಡಲಾಯಿತು. ಶ್ರೀ ಕಾವೇರಿ ಕೊಡವ ಅಸೋಸಿಯೇಷನ್ ಮೈಸೂರು ಈಸ್ಟ್‍ನ ಆಶ್ರಯದಲ್ಲಿ ನಡೆಯುತ್ತಿರುವ ಕೊಡಗು ಮಾಡೆಲ್ ಸ್ಕೂಲ್‍ನ ಆವರಣದಲ್ಲಿ ಎಸ್‍ಕೆಡಿಆರ್‍ಡಿಪಿ ಮೈಸೂರು ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್ ಅವರು 1 ಲಕ್ಷ ರೂ. ಮೊತ್ತದ ಚೆಕ್ ಅನ್ನು ಅಸೋಸಿಯೇಷನ್ ಅಧ್ಯಕ್ಷ ಕೆ.ಕೆ.ಅಯ್ಯಪ್ಪ ಅವರಿಗೆ ಹಸ್ತಾಂತರ ಮಾಡಿದರು. ಇದೇ ವೇಳೆ ಮಾತನಾಡಿದ ವಿಜಯಕುಮಾರ್…
ಊಟದ ನಂತರ ಅಸ್ವಸ್ಥರಾಗಿದ್ಧ ಆರ್‌ಐಇ ಹಾಸ್ಟೆಲ್ ವಿದ್ಯಾರ್ಥಿನಿಯರು
July 27, 2018ಮೈಸೂರು: ಬುಧವಾರ ರಾತ್ರಿ ಊಟ ಮಾಡಿದ ಬಳಿಕೆ ಮೈಸೂರಿನ ಮಾನಸಗಂಗೋತ್ರಿ ಬಳಿಯ ರೀಜಿನಲ್ ಇನ್‍ಸ್ಟಿಟ್ಯೂಟ್ ಆಫ್ ಎಜುಕೇಷನ್(ಆರ್‌ಐಇ) ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ಧರು. ಅಂದು ರಾತ್ರಿ 8 ಗಂಟೆ ವೇಳೆ ಊಟ ಮಾಡಿದ ನಂತರ ರಾತ್ರಿ ಸುಮಾರು 8.45 ಗಂಟೆ ವೇಳೆ 250 ಮಂದಿ ವಿದ್ಯಾರ್ಥಿನಿಯರ ಪೈಕಿ ಗಂಗಾ ಹಾಸ್ಟೆಲ್‍ನ 22 ಮಂದಿಗೆ ವಾಂತಿ ಆರಂಭವಾಯಿತು. ಅಸ್ವಸ್ಥರಾದಂತೆ ಕಂಡ ಅವರನ್ನು ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿ 17 ಮಂದಿ ಚೇತರಿಸಿಕೊಂಡು ಹಾಸ್ಟೆಲ್‍ಗೆ ಹಿಂದಿರುಗಿದರು. ಅಸ್ವಸ್ಥರಾಗಿದ್ದ ತೇಜಸ್ವಿನಿ,…
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
July 27, 2018ಮೈಸೂರು: ಕರ್ನಾಟಕ ರಾಜ್ಯ ಒಕ್ಕಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘವು 2018-19ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ಒಕ್ಕಲಿಗ ಜನಾಂಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಆ.5ರಂದು ಬೆಳಿಗ್ಗೆ 10.30 ಗಂಟೆಗೆ ಪ್ರತಿಭಾ ಪುರ ಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಅಂಕಪಟ್ಟಿಯ ನಕಲು, ಆದಾಯ ಪ್ರಮಾಣ ಪತ್ರದೊಂದಿಗೆ ಜು.29ರೊಳಗೆ ನೇಗಿಲಯೋಗಿ ಮರುಳೇಶ್ವರ ಸೇವಾ ಭವನ, ಆದಿಚುಂಚನಗಿರಿ ರಸ್ತೆ, 3ನೇ ಎಡ ತಿರುವು, ಹೊಸ ಕೋರ್ಟ್ ಎದುರು, ಜಯನಗರ ಇಲ್ಲಿ ಬೆಳಿಗ್ಗೆ 11ರಿಂದ ಸಂಜೆ…
ಶಿವಾನುಭವ ದಾಸೋಹ ಉಪನ್ಯಾಸ
July 27, 2018ಮೈಸೂರು: ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಆಶ್ರಯದಲ್ಲಿ ಶಿವಾನುಭವ ದಾಸೋಹ ಮಾಲಿಕೆಯ 249ನೇ ಕಾರ್ಯಕ್ರಮದಲ್ಲಿ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಸಿ.ಜಿ. ಉಷಾದೇವಿ ಅವರು ಜು. 28 ರಂದು ಸಂಜೆ 6 ಗಂಟೆಗೆ `ಅಮುಗೆ ರಾಯಮ್ಮನ ವಚನಗಳಲ್ಲಿ ಅರಿವು’ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮವು ನಂ. 811, ಜೆಎಸ್‍ಎಸ್ ಬಡಾವಣೆ, 2ನೇ ಹಂತ ಇಲ್ಲಿ ನಡೆಯಲಿದೆ. ಮೈಸೂರು ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಶಿವರಾತ್ರೀಶ್ವರ ಭಜನಾ…
ತನಿಷ್ಕ್‍ದಿಂದ ವಜ್ರಾಭರಣಗಳ ಭಾರಿ ಮಾರಾಟ
July 27, 2018ಮೈಸೂರು: ತನಿಷ್ಕ್ ಭಾರತದ ಅತೀ ದೊಡ್ಡ ವಿಶ್ವಾಸಾರ್ಹವಾದ ಬ್ರಾಂಡ್ ಆಗಿದ್ದು, ಈಗ ದಿ ಗ್ರೇಟ್ ಡೈಮಂಡ್ ಸೇಲ್ ಹೆಸರಿನಲ್ಲಿ ವಜ್ರಾಭರಣಗಳ ಭಾರೀ ಮಾರಾಟ ಅತೀ ದೊಡ್ಡ ಶಾಪಿಂಗ್ ಕಾರ್ಯಕ್ರಮ ಆಯೋಜಿಸಿದೆ. ಅ ಅವಧಿಯಲ್ಲಿ ತನಿಷ್ಕ್ ಡೈಮಂಡ್ ಆಭರಣಗಳ ಮೇಲೆ ಶೇ. 20 ರವರೆಗೂ ರಿಯಾಯಿತಿ ಲಭ್ಯವಾಗಲಿದೆ. ಮಾರಾಟವು ಜುಲೈ 26 ರಿಂದ ಆರಂಭವಾಗಲಿದ್ದು, ಸೀಮಿತ ಅವಧಿಯವರೆಗೂ ಇರುತ್ತದೆ. ವಜ್ರಖಚಿತ ಕಿವಿಯೋಲೆ, ಉಂಗುರಗಳು ಆರಂಭಿಕ ರೂ. 25,000 ದಿಂದ ಲಭ್ಯವಿದೆ ಎಂದು ಉಪಾಧ್ಯಕ್ಷ ದೀಪಿಕಾ ಸಭರವಾಲ್ ತಿವಾರಿ ಪ್ರಕಟಣೆಯಲ್ಲಿ…
ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಗೆ 260 ಮಂದಿ ಆಯ್ಕೆ
July 27, 2018ಮೈಸೂರು: ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ ಯಡಿ ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಾಲ ಸೌಲಭ್ಯಕ್ಕೆ 260 ಮಂದಿ ಫಲಾನುಭವಿಗಳು ಆಯ್ಕೆಯಾಗಿದ್ದಾರೆ ಎಂದು ಮೈಸೂರಿನ ಜಿಲ್ಲಾ ಕೈಗಾರಿಕಾ ಕೇಂದ್ರ(DIC)ದ ಜಂಟಿ ನಿರ್ದೇಶಕ ಲಿಂಗರಾಜು ಅವರು ತಿಳಿಸಿದ್ದಾರೆ. ಈ ಯೋಜನೆಗೆ 400ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ ಕೇಂದ್ರದಲ್ಲಿ ಇಂದು ಸಂದರ್ಶನ ನಡೆಸಿ 260ಕ್ಕೂ ಹೆಚ್ಚು ಮಂದಿಯನ್ನು ಆಯ್ಕೆ ಮಾಡಿ ಸಾಲ ಸೌಲಭ್ಯ ನೀಡಲು ಆಯಾ ಬ್ಯಾಂಕುಗಳಿಗೆ ಕಳುಹಿಸಿಕೊಡಲಾಗಿದೆ ಎಂದರು. ಸಣ್ಣ ಪ್ರಮಾಣದ ಕೈಗಾರಿಕೆ ಆರಂಭಿಸುವವರಿಗೆ 10…
ನರಸೀಪುರ ಆಸ್ಪತ್ರೆಗೆ ಶಾಸಕದ್ವಯರ ಭೇಟಿ, ಪರಿಶೀಲನೆ
July 27, 2018ತಿ.ನರಸೀಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಹಾಗೂ ತಿ.ನರಸೀಪುರ ಕ್ಷೇತ್ರದ ಶಾಸಕ ಎಂ.ಅಶ್ವಿನ್ ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಔಷದ ಉಗ್ರಾಣ, ಡಯಾಲಿ ಸಿಸ್ ಘಟಕ, ವಾರ್ಡ್‍ಗಳು, ಹೆರಿಗೆ ಕೊಠಡಿ ಹಾಗೂ ಶೌಚಗೃಹ ಸೇರಿದಂತೆ ಆಸ್ಪತ್ರೆಯ ಒಳ ಹಾಗೂ ಹೊರಾಂಗಣವನ್ನು ಜಂಟಿ ಯಾಗಿ ಪರಿಶೀಲನೆ ನಡೆಸಿದ ಶಾಸಕರು ರೋಗಿಗಳಿಂದ ಮಾಹಿತಿ ಪಡೆದುಕೊಂಡರು. ತ್ವರಿತಗತಿಯಲ್ಲಿ ಆರೋಗ್ಯ ಕಾರ್ಡ್ ವಿತರಣೆ ಮಾಡುತ್ತಿಲ್ಲ ಎಂಬ ಸಾರ್ವಜನಿಕರ ದೂರಿನನ್ವಯ ಕಾರ್ಡ್ ವಿತರಣೆ ಕೊಠಡಿಗೆ ಭೇಟಿ…
ಅಂತರಸಂತೆ ಕ್ರೀಡಾಕೂಟದಲ್ಲಿ ಅವ್ಯವಸ್ಥೆ
July 27, 2018ಅಂತರಸಂತೆ: ಸಾರ್ವ ಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಮೈಸೂರು, ಹೆಚ್.ಡಿ.ಕೋಟೆ ತಾಲ್ಲೂಕು ಪಂಚಾಯ್ತಿ ಹಾಗೂ ಸ. ಹಿ. ಪ್ರಾಥಮಿಕ ಶಾಲೆ ಅಂತರಸಂತೆ ಇವರ ಸಂಯುಕ್ತಾಶ್ರ ಯದಲ್ಲಿ ಹೋಬಳಿ ಮಟ್ಟದ ಕ್ರೀಡಾ ಕೂಟ ನಡೆಯಿತು. ಕ್ರೀಡಾಕೂಟದಲ್ಲಿ ಅವ್ಯವಸ್ಥೆಯದ್ದೇ ಕಾರು ಬಾರು ಎನ್ನುವಂತಾಗಿತ್ತು. ಕಾರ್ಯಕ್ರಮ ರೂಪಿಸುವಲ್ಲಿ ಎಡವಿದ ಕಾರ್ಯಕ್ರಮ ಆಯೋಜಕರು ಸ್ವಾಗತ ಭಾಷಣವನ್ನು ಸುದೀರ್ಘವಾಗಿ ಮಾಡಿದ್ದರಿಂದ ಜನಪ್ರತಿ ನಿಧಿಗಳು ಸೇರಿದಂತೆ ನೆರೆದಿದ್ದವರಲ್ಲಿ ಬೇಸರವನ್ನುಂಟು ಮಾಡಿತು. ಕ್ರೀಡಾ ಕೂಟಕ್ಕೆ ದಾನಿಗಳು ಎಲ್ಲಾ ರೀತಿ ಸಹಕಾರ ನೀಡಿ ದರೂ ಕುಡಿಯುವ ನೀರು…