ಅಂತರಸಂತೆ: ಸಾರ್ವ ಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಮೈಸೂರು, ಹೆಚ್.ಡಿ.ಕೋಟೆ ತಾಲ್ಲೂಕು ಪಂಚಾಯ್ತಿ ಹಾಗೂ ಸ. ಹಿ. ಪ್ರಾಥಮಿಕ ಶಾಲೆ ಅಂತರಸಂತೆ ಇವರ ಸಂಯುಕ್ತಾಶ್ರ ಯದಲ್ಲಿ ಹೋಬಳಿ ಮಟ್ಟದ ಕ್ರೀಡಾ ಕೂಟ ನಡೆಯಿತು.
ಕ್ರೀಡಾಕೂಟದಲ್ಲಿ ಅವ್ಯವಸ್ಥೆಯದ್ದೇ ಕಾರು ಬಾರು ಎನ್ನುವಂತಾಗಿತ್ತು. ಕಾರ್ಯಕ್ರಮ ರೂಪಿಸುವಲ್ಲಿ ಎಡವಿದ ಕಾರ್ಯಕ್ರಮ ಆಯೋಜಕರು ಸ್ವಾಗತ ಭಾಷಣವನ್ನು ಸುದೀರ್ಘವಾಗಿ ಮಾಡಿದ್ದರಿಂದ ಜನಪ್ರತಿ ನಿಧಿಗಳು ಸೇರಿದಂತೆ ನೆರೆದಿದ್ದವರಲ್ಲಿ ಬೇಸರವನ್ನುಂಟು ಮಾಡಿತು. ಕ್ರೀಡಾ ಕೂಟಕ್ಕೆ ದಾನಿಗಳು ಎಲ್ಲಾ ರೀತಿ ಸಹಕಾರ ನೀಡಿ ದರೂ ಕುಡಿಯುವ ನೀರು ಪೂರೈ ಸಲು ವಿಫಲವಾಗಿದ್ದರಿಂದ ಪರದಾಡ ಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಸಂಸದ ಆರ್.ಧೃವನಾರಾಯಣ್ ಹಾಗೂ ಸ್ಥಳೀಯ ಶಾಸಕ ಅನಿಲ್‍ಚಿಕ್ಕಮಾದು ಕಾರ್ಯ ಕ್ರಮಕ್ಕೆ ಗೈರಾಗಿದ್ದರು.
ಕ್ರೀಡಾಕೂಟವನ್ನು ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀಮತಿ ಪರಿಮಳ ಶ್ಯಾಂಸುಂದರ್‍ರವರು ಕ್ರೀಡಾ ಚಟುವಟಿಕೆಗೆ ಅನುಕೂಲವಾಗುವ ಪರಿಕರಗಳನ್ನು ಎಲ್ಲಾ ಶಾಲೆಗಳಿಗೂ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪಂಚಾ ಯಿತಿ ಸಭೆಯಲ್ಲಿ ಪ್ರಸ್ತಾಪಿಸಿ ಬಗೆಹರಿಸಲು ಪ್ರಯತ್ನಿಸುತ್ತೇನೆ. ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಡಿ.ಸುಂದರ್‍ದಾಸ್ ಧ್ವಜಾರೋಹಣ ನಡೆಸಿದರು. ತಾ.ಪಂ ಸದಸ್ಯ ಎಂ.ರಾಜಣ್ಣ ಕ್ರೀಡಾಜ್ಯೋತಿ ಬೆಳಗಿದರು. ಗ್ರಾಪಂ ಅಧ್ಯಕ್ಷೆ ಭಾಗ್ಯರವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕಲೀಂ ಪಾಷ, ಸೋಮಸುಂದರ್ ತಾಪಂ ಸದಸ್ಯರಾದ ಎಂ.ರಾಜಣ್ಣ, ಸುಧಾ ಬಸವರಾಜು, ಎಸ್‍ಡಿಎಂಸಿ ಅಧ್ಯಕ್ಷ ಪ್ರಕಾಶ, ಸತೀಶ, ವಾಸುದೇವ, ಅಭಿವೃದ್ದಿ ಅಧಿಕಾರಿ ಬಿ.ಕೆ.ಮನು, ಗ್ರಾ.ಪಂ ಸದಸ್ಯ ಕೃಷ್ಣ, ನಂಜಪ್ಪ, ಎಲ್ಲಾ ಶಾಲೆಯ ಶಿಕ್ಷಕರುಗಳು ಭಾಗವಹಿಸಿದ್ದರು.