ಬೈಲಕುಪ್ಪೆಯಲ್ಲಿ ಭಾರೀ ಗಾತ್ರದ ಮರ ತೆರವು
ಮೈಸೂರು

ಬೈಲಕುಪ್ಪೆಯಲ್ಲಿ ಭಾರೀ ಗಾತ್ರದ ಮರ ತೆರವು

July 27, 2018

ಬೈಲಕುಪ್ಪೆ: ಬಿ.ಎಂ. ರಸ್ತೆ ಬದಿಯಲ್ಲಿ ಭಾರೀ ಗಾತ್ರದ ಮರ ವೊಂದನ್ನು ಅರಣ್ಯ ಇಲಾಖೆಯವರು ಗುರುವಾರ ತೆರವುಗೊಳಿಸಿದರು.ಪಿರಿಯಾಪಟ್ಟಣ ತಾಲೂಕು ಕೊಪ್ಪ ಬಿ.ಎಂ.ರಸ್ತೆ ಬದಿಯಲ್ಲಿ ಕೆಲ ತಿಂಗಳಿಂದ ಕಾಡು ಜಾತಿ ಮರವೊಂದು ಅಪಾಯದ ಅಂಚಿನಲ್ಲಿತ್ತು, ಇದರ ಪಕ್ಕದಲ್ಲೇ ವಿದ್ಯುತ್ ತಂತಿ ಹಾದು ಹೋಗಿದ್ದು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿತ್ತು.

ಇದನ್ನು ಗಮನಿಸಿದ ಜಿ.ಪಂ ಸದಸ್ಯ ವಿ.ರಾಜೇಂದ್ರ ಮರ ಕಡಿಸುವಂತೆ ಒತ್ತಾಯಿಸಿದ್ದರು. ನಿಯಮಾನುಸಾರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮರವನ್ನು ಹರಾಜು ಮಾಡಲಾಗಿತ್ತು. ಮಳೆ ಕಾರಣ ಒಡ್ಡಿ ಮರವನ್ನು ಕಡಿಯಲು ವಿಳಂಬ ಮಾಡಿ ದ್ದರಿಂದ ಅರಣ್ಯ ಇಲಾಖೆ ಹಾಗೂ ಸೆಸ್ಕಾಂ ಅಧಿಕಾರಿಗಳು ಬೈಲಕುಪ್ಪೆ ಪೊಲೀಸ್ ಠಾಣಾ ಧಿಕಾರಿ ಸಹಕಾರದಿಂದ ಮರ ತೆರವುಗೊಳಿಸಿ ದರು. ಈ ಸಂದರ್ಭದಲ್ಲಿ ಅರ್ಧ ಗಂಟೆ ಕಾಲ ವಾಹನ ಸಂಚಾರಕ್ಕೆ ತಡೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಕೊಪ್ಪ ಉಪವಲ ಯಾರಣ್ಯಾಧಿಕಾರಿ ರವೀಂದ್ರ, ಸೆಸ್ಕಾಂ ಅಧಿಕಾರಿ ಸುರೇಶ, ಬೈಲಕುಪ್ಪೆ ಪೊಲೀಸ್ ಠಾಣಾಧಿಕಾರಿ ಪಿ.ಲೊಕೇಶ್, ಎಎಸ್‍ಐ ಶಿವರಾಜ್ ಸಿಬ್ಬಂದಿಗಳಾದ ಸೋಮ ಶೇಖರ್, ರವಿಕುಮಾರ್, ಅರಣ್ಯ ಸಿಬ್ಬಂದಿ ಕೊಟ್ರೇಶ್, ಸೆಸ್ಕಂ ಸಿಬ್ಬಂದಿ ಮಂಜು, ಕಾಡಪ್ಪ, ಸಾರ್ವಜನಿಕರು ಹಾಜರಿದ್ದರು.

Translate »